ಅಂಕಣಪ್ರಚಲಿತ

ಈಗ ದೇಶ ಅಳ್ತಿರೋದು ಮನಮೋಹನ್ ಸಿಂಗ್ ಅಲ್ಲ ಕಣೋ ಫಾರುಖ್ ಅಬ್ದುಲ್ಲಾ 56 ಇಂಚಿನ ಗಂಡುಗಲಿ ಮೋದಿ ನೆನಪಿರಲಿ!

ಈ ದೇಶದಲ್ಲಿ ದೇಶಪ್ರೇಮಿಗಳು ಮಾತ್ರವಲ್ಲ, ದೇಶದ್ರೋಹಿಗಳೂ ಇದ್ದಾರೆ ಅನ್ನೋದಕ್ಕೆ ಹಲವಾರು ನಿದರ್ಶನಗಳು ನಮ್ಮ ಕಣ್ಣಮುಂದೆ ಇದೆ. ಯಾವುದೋ ಪಕ್ಷ ಅಥವಾ ಸಂಘಟನೆಯನ್ನು ಧ್ವೇಷಿಸುವ ಭರದಲ್ಲಿ ನಮ್ಮ ಭಾರತದ ಕೆಲವು ಸೋಕಾಲ್ಡ್ ರಾಜಕಾರಣಿಗಳು ದೇಶವನ್ನು ಧ್ವೇಷಿಸುವುದು ಮಾಮೂಲಾಗಿ ಬಿಟ್ಟಿದೆ. ಇದರಲ್ಲಿ ಪ್ರಮುಖವಾಗಿರುವ ರಾಷ್ಟ್ರದ್ರೋಹಿ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರುಕ್ ಅಬ್ದುಲ್ಲಾ.

ಭಾರತ ಎಂಬುವುದು ದೇಶಭಕ್ತರ ದೇಶ. ಈ ದೇಶದಲ್ಲಿ ಪ್ರತಿಯೊಂದು ಆಚರಣೆಯನ್ನೂ ದೇಶಭಕ್ತಿಗೆ ಸಮನಾಗಿಯೇ ಆಚರಿಸಲಾಗುತ್ತದೆ. ಭಾರತದ ನೆಲ, ಜಲ, ಪರಂಪರೆಯನ್ನು ವ್ಯಕ್ತಪಡಿಸುತ್ತಾ ನಮ್ಮ ದೇಶದ ಬಗ್ಗೆ ಹೆಮ್ಮೆ ಪಡುತ್ತಾ ಅದೆಷ್ಟೋ ಜನ ದೇಶಪ್ರೇಮವನ್ನು ಮೆರೆಯುತ್ತಾರೆ. ದೇಶಭಕ್ತರಲ್ಲಿ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಮೊಳಗಿರುತ್ತದೆ.

ಆದರೆ ದುರಾದೃಷ್ಟವೆಂದರೆ ಇಲ್ಲಿ ಹಲವಾರು ಮಂದಿ ದೇಶದ್ರೋಹಿಗಳೂ ಇದ್ದಾರೆ. ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ ಎಂಬುವುದನ್ನು ನಿರೂಪಿಸಲು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಇಲ್ಲಿನ ಕೆಲವು ದೇಶದ್ರೋಹಿಗಳು. ಕೆಲವರು “ರಾಷ್ಟ್ರಗೀತೆಗೆ ಎದ್ದುನಿಂತು ಗೌರವ ಕೊಡುವುದು ನಮ್ಮ ಹಕ್ಕು ಹಾಗೂ ಜವಬ್ಧಾರಿ” ಎಂದು ದೇಶಭಕ್ತಿ ಮೆರೆದರೆ, ಇನ್ನು ಕೆಲವರು “ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕೆಂದೇನಿಲ್ಲ. ಸಂವಿಧಾನದಲ್ಲಿ ಹಾಗೇನು ಹೇಳಿಲ್ಲ” ಎಂದು ದೇಶದ್ರೋಹವನ್ನು ಮೆರೆಯುತ್ತಾರೆ. ಇನ್ನೂ ಕೆಲವು ದೇಶದ ಅನ್ನ ತಿಂದು ದ್ರೋಹ ಬಗೆಯುವ ನೀಚ ರಾಜಕಾರಣಿಗಳು, “ಕುತ್ತಿಗೆಗೆ ಕತ್ತಿ ಇಟ್ಟರೂ ಭಾರತ್ ಮಾತಾ ಕೀ ಜೈ ಎಂದು ಹೇಳಲ್ಲಾ” ಎಂಬ ಅಹಂಕಾರವನ್ನು ಮೆರೆಯುತ್ತರೆ. ಇವೆಲ್ಲದಕ್ಕೂ ಕಾರಣ ಇಲ್ಲಿನ ಸ್ವಾತಂತ್ರ್ಯ ಮತ್ತು ಹಿಂದಿನಿಂದ ಅನುಸರಿಸಿಕೊಂಡು ಬಂದ ಜಾತ್ಯಾತೀತ ನೀತಿ.

ಫಾರೂಕ್ ಅಬ್ದುಲ್ಲಾ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ. ಈ ಮನುಷ್ಯನ ದೇಶದ್ರೋಹದ ನಡವಳಿಕೆಗಳು ನಿನ್ನೆ ಮೊನ್ನೆಯದಲ್ಲ. ಹಿಂದಿನಿಂದಲೂ ಈತ ಉಂಡ ಮನೆಗೆ ಎರಡು ಬಗೆವ ವ್ಯಕ್ತಿ. ತನ್ನ ಸ್ವಾರ್ಥ ಸಾಧನೆಗಾಗಿ, ಪಾಕಿಸ್ಥಾನದ ಓಲೈಕೆಗಾಗಿ ಪಾಕಿಸ್ಥಾನವನ್ನು ಹೊಗಳುತ್ತಾ, ಭಾರತವನ್ನು ತೆಗಳುತ್ತಾ ಬಂದಿರುವ ನಾಲಾಯಕ್ ನಾಯಕ. ಈ ಕಾರಣಕ್ಕಾಗಿಯೇ ಈ ಪಕ್ಷವನ್ನು ಅಲ್ಲಿನ ಜನರೆ ಮಣ್ಣು ಮುಕ್ಕಸಿಬಿಟ್ಟಿದ್ದಾರೆ.

ಈತ ಈಗ ಹೇಳಿರುವ ಹೇಳಿಕೆ ಕೇಳಿದರೆ ಎಂತ ಭಾರತೀಯನಿಗೂ ಕೋಪ ನೆತ್ತಿಗೇರದೆ ಇರದು. ಈ ದೇಶದ ಪರಮ ಶತ್ರು ರಾಷ್ಟ್ರ ಎಂದರೆ ಅದು ಪಾಕಿಸ್ಥಾನ. ಈ ನೆಲದಲ್ಲಿ ಹುಟ್ಟಿ ಅದ್ಯಾವ ದೇಶವನ್ನು ಹೊಗಳಿದರೂ ಅಷ್ಟೊಂದು ಕೆರಳದ ದೇಶ ಪ್ರೇಮಿಗಳು, ಪಾಕಿಸ್ಥಾನದ ವಿಷಯವೆತ್ತಿದರೆ ಸಾಕು ಕೆಂಡ ಕಾರುತ್ತಾರೆ. ಪಾಕಿಸ್ಥಾನವೆಂಬ ಉಗ್ರರನ್ನು ಸೃಷ್ಟಿಸುವ ರಾಷ್ಟ್ರವನ್ನು ಕಂಡರೆ ಭಾರತದ ಸಣ್ಣ ಮಗುವೂ ಥೂ ಎಂದು ಉಗಿಯುತ್ತಾನೆ. ಅಷ್ಟೊಂದು ವೈರತ್ವ ಪಾಕಿಸ್ಥಾನದ ಮೇಲೆ.

ಈತ ಮಾಡಿದ್ದೂ ಅದನ್ನೇ. ಈತ ನೀಡಿರುವ ಹೇಳಿಕೆ ಎಂತಹ ದೇಶಪ್ರೇಮಿಗಳನ್ನೂ ಕೋಪ ಬರಿಸದೇ ಇರದು. “ಪಾಕಿಸ್ಥಾನವನ್ನು ಪದೇ ಪದೇ ಕೆಣಕಬೇಡಿ. ಅದು ಬಳೆಯನ್ನು ತೊಟ್ಟು ಕುಳಿತಿಲ್ಲ. ಅದರ ಬಳಿ ಪರಮಾಣು ಇದೆ” ಎಂದು ಹೇಳಿಕೆ ಕೊಟ್ಟಿದ್ದಾನೆ ಫಾರೂಕ್ ಅಬ್ದುಲ್ಲಾ. ಇಂತಹ ದೇಶದ್ರೋಹಿಗಳು ನಮ್ಮ ದೇಶಕ್ಕೆ ಬೇಕಾ ಎಂಬ ಭಾವನೆಗಳೂ ದೇಶಭಕ್ತರ ಮನದಲ್ಲಿ ಬರಬಹುದು. ಆದರೆ ಭಾರತದಲ್ಲಿ ಏನೇ ಮಾತನಾಡಿದರೂ ಅದು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕೊಚ್ಚಿಕೊಳ್ಳುವ ಸೋಗಲಾಡಿಗಳು ಇರುವಾಗ ಏನು ಮಾಡೋಕೆ ಸಾಧ್ಯ.

ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ನಂತರ ಎಡಬಿಡಂಗಿಗಳಿಗೆ ಅದೇನೋ ಉರಿಯ ಅನುಭವ. ಸದಾ ಸರ್ಕಾರದ ಕಾರ್ಯ ವೈಖರಿಯನ್ನು ಟೀಕಿಸುತ್ತಲೇ ಕಾಲ ಕಳೆಯುತ್ತಾರೆ ಈ ನಾಯಕರು. ಅದರಲ್ಲಿ ಈ ಫಾರೂಕ್ ಅಬ್ದುಲ್ಲನೂ ಒಬ್ಬ. ಈತನಿಗೆ ಮೋದಿ ಸರ್ಕಾರ ಬರುವವರೆಗೂ ಕಾಣದ ಯಾವುದೇ ಅಭದ್ರತೆ, ಮೋದಿ ಸರ್ಕಾರ ಬಂದ ನಂತರ ಆರಂಭವಾಗಿದೆ. ನಿಜವಾಗಿಯೂ ಆತನಿಗೆ ಆರಂಭವಾಗಿದ್ದು ಅಭದ್ರತೆ ಅಲ್ಲ. ಬದಲಾಗಿ ಇಷ್ಟು ವರ್ಷ ಕಾಶ್ಮೀರದಲ್ಲಿ ಬೇಯಿಸುತ್ತಿದ್ದ ಬೇಳೆಯನ್ನು ಮೋದಿ ಸರ್ಕಾರ ಬಂದ ನಂತರ ಬೇಯಿಸಲು ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಆತಂಕ ಅಷ್ಟೇ.

ಇದು ಮೌನಮೋಹನನ ಅವಧಿ ಅಲ್ಲವಯ್ಯಾ ಅಬ್ದುಲ್ಲಾ…

ಈ ಫಾರೂಕ್ ಅಬ್ದುಲ್ಲಾನಿಗೆ ಪಾಕಿಸ್ಥಾನವನ್ನು ಒಲಿಸಿಕೊಳ್ಳುವುದು ಅದ್ಯಾಕೋ ಪಾಯಸ ತಿಂದ ಅನುಭವ ಎಂದು ಕಾಣುತ್ತದೆ. ಯಾವಾಗಲೂ ಪಾಕ್ ಪರ ಬ್ಯಾಟಿಂಗ್ ಮಾಡುತ್ತಾ, ತಾನಿರುವ ಜಾಗವನ್ನೂ ಮರೆತು ಬಿಡುತ್ತಾನೆ. ಆದರೆ ಈತ ನೆನಪಿಟ್ಟುಕೊಳ್ಳಬೇಕಾಗಿದೆ. ದೇಶದಲ್ಲಿ ಏನೇ ಆದರೂ ಬಾಯಿ ಬಿಡಲು ಮೇಡಂ ಅಪ್ಪಣೆಗೆ ಕಾಯುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಈಗ ಇಲ್ಲ. ಈಗ ದೇಶದಲ್ಲಿ ಅಧಿಕಾರ ನಡೆಸುತ್ತಿರುವುದು 56 ಎದೆ ಇಂಚಿನ ನರೇಂದ್ರ ಮೋದಿ ಸರ್ಕಾರ ಎಂದು. 60 ವರ್ಷಗಳಿಂದ ಈ ದೇಶದ್ರೋಹಿಗಳಿಗೆ ದೇಶದ್ರೋಹದ ಹೇಳಿಕೆಯನ್ನು ನೀಡುತ್ತಾ, ಪಾಕ್ ನೀಡುವ ಎಂಜಲು ಕಾಸಿಗೆ ಕೈಒಡ್ಡಿ ಅಭ್ಯಾಸವಾಗಿ ಹೋಗಿದೆ. ಆದರೆ ಈಗ ಹಾಗಲ್ಲ. ಮೋದಿ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳಿಕೊಂಡು ಬಾಯಿಗೆ ಬಂದ ಹಾಗೆ ಮಾತನಾಡಿದರೆ ಬಾಯಿಗೆ ಬೀಗ ಬೀಳುವುದು ಖಚಿತ.

ಕಾಶ್ಮೀರವನ್ನು ಪಾಕ್‍ಗೆ ಕೊಡಿ-ಇನ್ನೂ ಆರಿಲ್ಲ ಮಾತಿನ ಕಿಡಿ..!!!

ಈ ಫಾರೂಕ್ ಅಬ್ದುಲ್ಲಾ ಎನ್ನುವ ದೂರ್ತಕೇವಲ ದೇಶವನ್ನು ದೂರುವ ಕೆಲಸ ಮಾತ್ರ ಮಾಡುತ್ತಿಲ್ಲ. ಬದಲಾಗಿ ದೇಶದಲ್ಲಿ ಅದೆಷ್ಟೋ ಸೈನಿಕರ ಶ್ರಮದ ಫಲವಾಗಿ ಉಳಿದ ಭಾಗವನ್ನೂ ಪಾಕ್‍ಗೆ ನೀಡಬೇಕು ಎಂಬ ಉದ್ಧಟತನದ ಹೇಳಿಕೆಯನ್ನು ನೀಡಿದ್ದ ಈ ದೇಶದ್ರೋಹಿ. “ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವೇ ಅಲ್ಲ. ಅದು ಪಾಕಿಸ್ಥಾನಕ್ಕೆ ಸೇರಿದ್ದು” ಎನ್ನುವ ಹೇಳಿಕೆ ದೇಶದ್ರೋಹದ ಹೇಳಿಕೆ ಅಲ್ಲದೆ ಮತ್ತಿನ್ನೇನು? “ಪಾಕ್ ಆಕ್ರಮಿತ ಕಾಶ್ಮೀರ ನಮ್ಮ ಭೂಭಾಗ” ಎಂದು ಹೆಮ್ಮೆ ಪಡುವ ದೇಶಪ್ರೇಮಿಗಳ ಎದುರು, ಅದು ಪಾಕಿಸ್ಥಾನಕ್ಕೆ ಸೇರಬೇಕು ಎನ್ನುವ ಮೂರ್ಖ ಹೇಳಿಕೆ ಆತನ ಹತಾಶ ಮನೋಭಾವನೆಯನ್ನು ಬಿಂಬಿಸುತ್ತದೆ.

ಫಾರೂಕ್ ವಿರುದ್ಧ ದೂರು ದಾಖಲಿಸಿದ್ದು ಸ್ವತಃ ಮುಸಲ್ಮಾನನೇ..!!!

ಹೌದು. “ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ಥಾನಕ್ಕೆ ಸೇರಬೇಕು” ಎನ್ನುವ ಮೂರ್ಖತನದ ಮಾತನ್ನಾಡಿದ ಫಾರೂಕ್ ಅಬ್ದುಲ್ಲಾನ ವಿರುದ್ಧ ಓರ್ವ ವ್ಯಕ್ತಿ ದೂರು ದಾಖಲಿಸಿದ್ದಾನೆ. ವಿಶೇಷವೆಂದರೆ ಆ ದೂರು ಕೊಟ್ಟ ವ್ಯಕ್ತಿ ಬೇರಾರೂ ಅಲ್ಲ. ಯಾವ ದೇಶದ್ರೋಹಿ ಫಾರೂಕ್ ಅಬ್ದುಲ್ಲಾ ಒಂದು ಧರ್ಮವನ್ನು ಜೀವಿಸುತ್ತಿದ್ದಾನೋ, ಅದೇ ಮುಸಲ್ಮಾನ ಧರ್ಮದ ಹುಡುಗ. ಆ ಮುಸಲ್ಮಾನ ಯುವಕನೇ ಈ ದೇಶದ್ರೋಹಿ ಫಾರೂಕ್ ಅಬ್ದುಲ್ಲಾನ ವಿರುದ್ಧ ದೂರು ನೀಡಿದ್ದಾನೆ. ಆದರೆ ಇದಕ್ಕೆ ಪ್ರತಿಯಾಗಿ ಆ ದೂರ್ತ ಆಡಿದ ಮಾತುಗಳು ಭಾರತೀಯರನ್ನು ಮತ್ತಷ್ಟು ಕೆರಳಿಸುವಂತಿತ್ತು. “ನನ್ನ ವಿರುದ್ಧ ದೂರು ನೀಡಿದ್ದು ಒಬ್ಬ ಮುಸ್ಲಿಂ ಯುವಕ. ಆತನನ್ನು ದೇವರೇ ಕಾಪಾಡಲಿ. ಭಾರತವೇನಾದರೂ ಪಾಕ್ ಆಕ್ರಮಿತ ಕಾಶ್ಮೀರವನ್ನು ಕಸಿಯಲು ಹೋದರೆ ಪಾಕಿಸ್ಥಾನವೇನೂ ಸುಮ್ಮನಿರುವುದಿಲ್ಲ. ಅವರ ಹತ್ತಿರವೂ ಬಾಂಬ್‍ಗಳಿವೆ. ಅವರೇನೂ ಬಳೆ ತೊಟ್ಟಿಲ್ಲ” ಎಂದು ಹೇಳಿರುವ ಫಾರೂಕ್ ಅಬ್ದುಲ್ಲಾನ ಹೇಳಿಕೆ ದೇಶಪ್ರೇಮಿಗಳ ಆಕ್ರೋಷಕ್ಕೆ ಕಾರಣವಾಗಿದೆ.

ಬಂಡುಕೋರರನ್ನು ಪ್ರೋತ್ಸಾಹಿಸಿದ್ದ ಫಾರೂಕ್ ಅಬ್ದುಲ್ಲಾ…

ಈ ಹಿಂದೆ ದೇಶದಲ್ಲಿ ದುಷ್ಕøತ್ಯಗಳನ್ನು ಎಸಗಲು ಸಜ್ಜಾಗಿದ್ದ ಬಂಡುಕೋರರ ಪರವಾಗಿ ಈ ಫಾರೂಕ್ ಅಬ್ದುಲ್ಲಾ ಮಾತನಾಡಿದ್ದೂ ಕೂಡ ದೇಶವಾಸಿಗಳು ಸಿಟ್ಟಿಗೇರುವಂತೆ ಮಾಡಿತ್ತು. ಮಾತ್ರವಲ್ಲದೆ ಅನೇಕ ರಾಜಕೀಯ ಹಾಗೂ ಸಾಮಾಜಿಕ ಮುಖಂಡರಿಂದಲೂ ಛೀಮಾರಿ ಹಾಕಿಸಿಕೊಂಡಿದ್ದ ಆ ವ್ಯಕ್ತಿ.

ಫಾರೂಕ್ ತಲೆಗೆ 1 ಲಕ್ಷ ಘೋಷಿಸಿದ್ದ ಭಜರಂಗದಳ ಕಾರ್ಯಕರ್ತ..!!!

ಫಾರೂಕ್ ಅಬ್ದುಲ್ಲಾನ ಈ ರೀತಿಯ ಹುಚ್ಚುತನಕ್ಕೆ ಭಜರಂಗದಳ ತೀವ್ರ ಕೆಂಡ ಕಾರುತ್ತಿತ್ತು. ಭಜರಂಗದಳದ ಕಾರ್ಯಕರ್ತ ಗೋವಿಂದ ಪರಾಶರ್ ಎಂಬಾತ ಈತನ ತಲೆ ತಂದು ಕೊಟ್ಟವರಿಗೆ 1 ಲಕ್ಷ ಬಹುಮಾನ ನೀಡುತ್ತೇನೆ ಎಂದು ಬಹಿರಂಗವಾಗಿಯೇ ಘೋಷಿಸಿದ್ದರು. ಅಷ್ಟೊಂದು ಸಿಟ್ಟು ಆತನ ಮೇಲೆ ಇತ್ತು.
1965,71 ಮತ್ತು 99ರ ಯುದ್ಧಗಳಲ್ಲಿ ಪಾಕಿಸ್ಥಾನದ ದುಸ್ಸಾಹಸಗಳಿಗೆ ಭಾರತ ತಿರುಗೇಟು ನೀಡಿದೆ. ಇದು ಫಾರೂಕ್ ಅಬ್ದುಲ್ಲಾ ಮರೆತಿರುವಂತಿದೆ. ಹಿಂಸೆಯಿಂದ ಏನೂ ಪ್ರಯೋಜನವಿಲ್ಲ ಎಂಬುವುದನ್ನು ಕಾಶ್ಮೀರಿ ಯುವಜನರಿಗೆ ಮನವರಿಕೆ ಮಾಡಬೇಕು. ಕಾಶ್ಮೀರದ ಅಭಿವೃದ್ಧಿಗೆ ಇದುವರೆಗೆ ಕೇಂದ್ರ ಸರ್ಕಾರ ನೀಡಿದ ಸಹಾಯವನ್ನು ನೆನಪಿಸಿಕೊಳ್ಳಬೇಕು. ಆದರೆ ಸದಾ ಸುದ್ದಿಯಲ್ಲಿರಬೇಕು ಎನ್ನುವವರಿಗೆ ಇವೆಲ್ಲಾ ರುಚಿಸೋದಿಲ್ಲ. ಇನ್ನಾದರೂ ಫಾರೂಕ್ ಅಬ್ದುಲ್ಲಾ ತಾನು ಭಾರತದಲ್ಲಿ ಜೀವಿಸುತ್ತಿದ್ದೇನೆ ಎಂಬುದನ್ನು ಅರಿತು ಮಾತನಾಡಲಿ. ಇಲ್ಲವಾದರೆ ಪಾಕಿಸ್ಥಾನಕ್ಕೆ ಅಧಿಕೃತವಾಗಿ ತೆರಳಿ ಅಲ್ಲಿನ ಪ್ರಜೆಯಾಗಲಿ…

-ಸುನಿಲ್ ಪಣಪಿಲ

Tags

Related Articles

Close