ಪ್ರಚಲಿತ

ಈ ಕಾರಣಕ್ಕಾಗಿಯೇ ರಾಹುಲ್ ಗಾಂಧಿಯನ್ನು ಕಂಡರೆ ರಮ್ಯಾಗೆ ಇಷ್ಟ ಆಗೋದು…! ಮತ್ತೆ ರಮ್ಯಾ ಕೈ ಹಿಡಿದ್ರಾ ರಾಹುಲ್ ಗಾಂಧಿ..?!

ರಮ್ಯಾ. ಸ್ಯಾಂಡಲ್ ವುಡ್‍ನ ಮೋಹಕ ತಾರೆ. ಮಂಡ್ಯಾದ ಮಾಜಿ ಸಂಸದೆ. ಇತ್ತೀಚೆಗೆ ತನ್ನ ರಾಜಕೀಯ ಅಪ್ರಬುದ್ದತೆಯಿಂದಲೇ ಹೆಸರುವಾಸಿಯಾಗಿದ್ದವರು. ಅದೆಷ್ಟೋ ಬಾರಿ ಟೀಕೆಗಳಿಗೆ ಗುರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಕೃಪೆಯಿಂದ ಮೇಲೆದ್ದು ಬಂದವರು ಮಾಜಿ ಸಂಸದೆ ರಮ್ಯಾ.

ರಮ್ಯಾ ವಿರುದ್ಧ ಸಿಡಿದೆದ್ದಿದ್ದರು ಮಂಡ್ಯದ ಗಂಡುಗಳು..!!!

ಕನ್ನಡ ಚಿತ್ರದ ನಟಿಯಾಗಿದ್ದ ರಮ್ಯಾ ಕಾಂಗ್ರೆಸ್ ಕೃಪಾ ಕಟಾಕ್ಷದಿಂದ ರಾಜಕೀಯಕ್ಕೆ ಎಂಟ್ರಿಯಾಗಿದ್ದರು. ಎಂಟ್ರಿಯಾದವರೇ ಮಂಡ್ಯಾದ ಸಂಸದ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಮಂಡ್ಯಾದಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ನಟಿ ರಮ್ಯಾ ಭರ್ಜರಿಯಾಗಿ ರಾಜಕೀಯಕ್ಕೆ ಎಂಟ್ರಿ ನೀಡಿದ್ದರು. ಸಿನೆಮಾ ಲೋಕದಲ್ಲಿ ಮೋಹಕತೆಯನ್ನು ಪ್ರದರ್ಶಿಸಿ ಪಡ್ಡೆ ಹುಡುಗರ ಮನಸ್ಸನ್ನು ಗೆದ್ದಿದ್ದರು. ಆದರೆ ಮಂಡ್ಯಾದಲ್ಲಿ ತನ್ನ ಆಟ ಹೆಚ್ಚು ಕಾಲ ನಡೆಯಲೇ ಇಲ್ಲ. ರಮ್ಯಾ ಮಂಡ್ಯಾದ ಸಂಸದೆಯಾಗಿ ಹೆಚ್ಚೇನೂ ಕೆಲಸವೇ ಮಾಡದೆ ಕೇವಲ ಸಿನಿಮಾ ನಟಿಯಂತೆಯೇ ಕಾಣಿಸಿಕೊಂಡಿದ್ದರು. ಸರಿಯಾಗಿ ಭಾಷಣ ಮಾಡಲೂ ಯೋಗ್ಯರಾಗದ ರಮ್ಯಾ ವಿರುದ್ಧ ಮಂಡ್ಯಾದ ಜನತೆ ಸಿಡಿದೆದ್ದಿದ್ದರು. ನಟನೆಗೂ ರಾಜಕೀಯಕ್ಕೂ ಅಜಗಜಾಂತರವಿದೆ. ನಿಮ್ಮ ನಟನೆಯನ್ನು ನಮ್ಮಲ್ಲಿ ಪ್ರಧರ್ಶಿಸಬೇಡಿ ಎಂದು ತಪರಾಕಿ ನೀಡಿದ್ದರು. ಇದರಿಂದ ರಮ್ಯಾಗೆ ಮತ್ತೊಮ್ಮೆ ಮಂಡ್ಯಾದ ಮನಸ್ಸನ್ನ ಗೆಲ್ಲಲು ಸಾಧ್ಯವಾಗಿಲ್ಲ.

ಸ್ವಪಕ್ಷೀಯರ ಕೆಂಗಣ್ಣಿಗೇ ಗುರಿಯಾಗಿದ್ದರು ರಮ್ಯಾ…!

ಇನ್ನು ಮಂಡ್ಯಾದ ಮಾಜಿ ಸಂಸದೆ ರಮ್ಯಾ ಮೇಲೆ ಕೇವಲ ಮಂಡ್ಯಾ ಜನತೆಯ ಮೇಲೆ ಮಾತ್ರ ಕೆಂಗಣ್ಣು ಬೀರಿದ್ದಲ್ಲ. ಮಂಡ್ಯಾದ ಹಿರಿಯ ಕಾಂಗ್ರೆಸ್ ನಾಯಕರೂ ರಮ್ಯಾ ವಿರುದ್ಧ ತಿರುಗಿ ಬಿದ್ದಿದ್ದರು. ಈ ಕಾರಣದಿಂದಲೇ ರಮ್ಯಾ 2ನೇ ಬಾರಿಗೆ ,ಮಂಡ್ಯಾದಲ್ಲಿ ಸೋಲನ್ನು ಅನುಭವಿಸಿದ್ದರು. ರಮ್ಯಾ ಸಂಸದೆಯಾದ ನಂತರ ಮಂಡ್ಯಾದಲ್ಲಿ ಯಾವುದೇ ಸಾಧನೆ ಮಾಡಿಲ್ಲ. ಮಾತ್ರವಲ್ಲದೆ ಕಾಂಗ್ರೆಸ್‍ನ ಕಾರ್ಯಕರ್ತರನ್ನು ಸಂಪರ್ಕಿಸುವ ಗೋಜಿಗೇ ಹೋಗಲಿಲ್ಲ. ಕಾಂಗ್ರೆಸ್‍ನ ಹಿರಿಯ ಮುಖಂಡರನ್ನು ಯಾವುದೇ ವಿಷಯಗಳಲ್ಲಿ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ರಮ್ಯಾ ಬಗ್ಗೆ ನಮಗೆ ಆಸಕ್ತಿ ಇಲ್ಲ ಎಂದು ಬಹಿರಂಗವಾಗಿಯೇ ತಮ್ಮ ಅಸಮಧಾನವನ್ನು ತೋಡಿಕೊಂಡಿದ್ದರು.

ರಮ್ಯಾ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಅಂಬರೀಶ್ ಕೂಡಾ ರಮ್ಯಾ ವಿರುದ್ಧ ರೆಬೆಲ್ ಆಗಿದ್ದರು. ತಾವೇ ಬೆಳಸಿದ ರಾಜಕಾರಣಿ ಈಗ ನಮ್ಮ ಮಾತನ್ನೇ ಕೇಳೋದಿಲ್ಲ ಎಂಬ ಅಸಮಾಧವನ್ನು ತೋಡಿದ್ದರು. ಅಂಬರೀಶ್ ಮಾತ್ರವಲ್ಲದೆ ಹಲವಾರು ಕಾಂಗ್ರೆಸ್‍ನ ಹಿರಿಯ ಮುಖಂಡರು ರಮ್ಯಾ ಬಗ್ಗೆ ಆರೋಪಗಳ ಸುರಿಮಳೆಯನ್ನೇ ಗೈದಿದ್ದರು.

ರಮ್ಯಾ ಕೈಹಿಡಿದಿದ್ದರು ರಾಹುಲ್ ಗಾಂಧಿ..!

ಹೌದು. ಅಂದು ರಾಹುಲ್ ಗಾಂಧಿ ಇಲ್ಲದಿರುತ್ತಿದ್ದರೆ ರಮ್ಯಾ ರಾಜಕೀಯ ಭವಿಷ್ಯನೇ ಅಂತ್ಯವಾಗುತ್ತಿತ್ತು. ರಾಹುಲ್ ಗಾಂಧಿಯ ಸಲುಗೆಯೇ ರಮ್ಯಾ ರಾಜಕೀಯದಲ್ಲಿ ಮಿಂಚಲು ಸಾಧ್ಯವಾಯಿತು. ತನ್ನನ್ನು ರಾಜಕೀಯದಲ್ಲಿ ಮುಗಿಸಿಬಿಡುತ್ತಿದ್ದಾರೆ ಎಂಬ ದೂರನ್ನು ರಾಹುಲ್ ಗಾಂಧಿಯ ಮುಂದಿಟ್ಟ ರಮ್ಯಾ ರಾಷ್ಟ್ರ ಮಟ್ಟದ ಹುದ್ದೆಯೊಂದನ್ನು ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದರು. ರಮ್ಯಾಗೆ ಕಾಂಗ್ರೆಸ್‍ನ ರಾಷ್ಟ್ರೀಯ ಸಮಾಜಿಕ ಜಾಲತಾಣದ ಹುದ್ದೆಯನ್ನು ನೀಡಲಾಯಿತು.

ಯಾವಾಗ ಸಾಮಾಜಿಕ ಜಾಲತಾಣದ ರಾಷ್ಟ್ರೀಯ ಹುದ್ದೆಯನ್ನ ಕಾಂಗ್ರೆಸ್‍ನಿಂದ ರಮ್ಯಾ ಗಿಟ್ಟಿಸಿಕೊಂಡರೋ ಅಂದಿನಿಂದ ರಮ್ಯಾ ತಮ್ಮ ರಾಜಕೀಯ ಜೀವನವನ್ನೇ ಬದಲಾಯಿಸಿಕೊಂಡಿದ್ದರು. ರಾಹುಲ್ ಗಾಂಧಿಯ ಕೃಪಾ ಕಟಾಕ್ಷದಿಂದ ಸಾಮಾಜಿಕ ಜಾಲತಾಣದ ಹುದ್ದೆಯನ್ನು ಅಲಂಕರಿಸಿದ ರಮ್ಯಾ ರಾಷ್ಟ್ರ ಮಟ್ಟದಲ್ಲಿ ಶೈನಿಂಗ್ ಆಗಿದ್ದರು. ರಾಹುಲ್ ಗಾಂಧಿಯನ್ನು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದರು ರಮ್ಯಾ ಮೇಡಂ. ಆದರೆ ತಾನು ರಾಹುಲ್ ಗಾಂಧಿಯನ್ನು ಮೇಲಕ್ಕೆತ್ತಲು ಮಾಡಿದ್ದ ಸ್ಟಾಟರ್ಜಿ ನಕಲಿ ಎಂದು ಯಾವಾಗ ಬಯಲಾಯಿತೋ ಅಂದಿನಿಂದ ರಮ್ಯಾ ಲೆಕ್ಕಾಚಾರಗಳೇ ತಲೆಕೆಳಗಾಗಿ ಬಿಟ್ಟಿದ್ದರು. ರಾಹುಲ್ ಕೂಡಾ ರಮ್ಯಾ ಬಗ್ಗೆ ಮೃದು ಧೋರಣೆ ಅನುಸರಿಸಿದ್ದರು.

Image result for ramya with rahul

ನಂತರ ರಮ್ಯಾ ದೃಷ್ಟಿ ನೆಟ್ಟಿದ್ದು ರಾಜ್ಯ ವಿಧಾನ ಸಭಾ ಕ್ಷೇತ್ರದ ಮೇಲೆ. ರಮ್ಯಾ ಮುಂದಿನ ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದರು. ಮಂಡ್ಯಾದಲ್ಲಿ ರಮ್ಯಾ ಚುನಾವಣೆಗೆ ಸ್ಪರ್ಧಿಸಬೇಕೆಂದು ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಈ ವಿಷಯ ಅದ್ಯಾವಾಗ ಬಯಲಿಗೆ ಬಂದಿತ್ತೋ ಆವಾಗಲೇ ಕಾಂಗ್ರೆಸ್‍ನ ಮಂಡ್ಯಾ ನಾಯಕರು ಮತ್ತೊಮ್ಮೆ ರೆಬೆಲ್ ಆಗಿದ್ದರು. ಮತ್ತೊಮ್ಮೆ ಮಂಡ್ಯಾದಲ್ಲಿ ಸೀಟು ಕೇಳಿಕೊಂಡು ಬಂದರೆ ಹುಷಾರ್ ಎಂಬ ಅಕ್ಷೇಪಣೆಯನ್ನು ವ್ಯಕ್ತಪಡಿಸಿದ್ದರು. ಇದು ರಮ್ಯಾ ಮಂಡ್ಯಾದಲ್ಲಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವ ಕನಸಿಗೆ ತಣ್ಣೀರು ಬಂದು ಬೀಳುತ್ತೆ.

ಆದರೆ ಮತ್ತೊಮ್ಮೆ ರಾಹುಲ್ ಗಾಂಧಿಯಲ್ಲಿ ಮನವಿ ಮಾಡಿಕೊಂಡು ಮುಖ್ಯಮಂತ್ರಿಗಳ ಬಾಯಿಯಲ್ಲೇ ಹೇಳಿಕೆ ಬರುವಂತೆ ಮಾಡುತ್ತಾರೆ ರಮ್ಯಾ. ಮುಖ್ಯಮಂತ್ರಿಗಳು ರಮ್ಯಾ ಪರವಾಗಿ ಬ್ಯಾಟಿಂಗ್ ಮನಾಡುತ್ತಾರೆ. ರಮ್ಯಾಗೆ ಮುಂದಿನ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಯಾವುದಾದರೊಂದು ಕ್ಷೇತ್ರವನ್ನು ಕೊಡುತ್ತೇವೆ ಎಂದು ಹೇಳಿಕೆ ನೀಡಿದ್ದರು.

ಇದು ಮತ್ತೊಮ್ಮೆ ರಮ್ಯಾ ವಿರುದ್ಧ ಕೆಂಡ ಕಾರಲು ಕಾರಣವಾಗಿತ್ತು. ಕಾಂಗ್ರೆಸ್‍ನ ಬೆಂಗಳೂರಿನ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಮತ್ತೊಮ್ಮೆ ರಮ್ಯಾ ಪೇಚಿಗೆ ಸಿಲುಕುವಂತೆ ಮಾಡಿತ್ತು. ರಮ್ಯಾಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುವಂತೆ ಆಗಿತ್ತು. ತನ್ನ ಪಕ್ಷದವರೇ ತನಗೆ ಶಾಪವಾಗಿದ್ದರು ಎಂಬ ಚಿಂತೆ ರಮ್ಯಾಗೆ ಕಾಡಿತ್ತು.

ಈ ಬಾರಿ ರಮ್ಯಾ ವಿರುದ್ಧ ಕಾಂಗ್ರೆಸ್ ಸಿಡಿದೇಳಲು ಕಾರಣವೇನು..?

ರಮ್ಯಾ ಯಾವಾಗ ದೆಹಲಿಯ ಗದ್ದುಗೆ ಹಿಡಿದಿದ್ದರೋ ಅಂದೇ ರಮ್ಯಾ ವಿರುದ್ಧ ಕಾಂಗ್ರೆಸ್ ನಾಯಕರು ರಮ್ಯಾ ವಿರುದ್ಧ ದೂರು ನೀಡಲು ಆರಂಭಿಸಿದ್ದರು. ರಮ್ಯಾ ರಾಹುಲ್ ಗಾಂಧಿಯವರ ಬಳಿ ದೂರು ಹೇಳುತ್ತಾರೆ ಎಂಬ ಆರೋಪವನ್ನು ಹೊರಿಸುತ್ತಾರೆ. ಕಾಂಗ್ರೆಸ್‍ನ ಹಿರಿಯ ನಾಯಕರ ಬಗೆಗಿನ ದೂರುಗಳನ್ನು ರಮ್ಯಾ ಕಾಂಗ್ರೆಸ್ ಮಹಾರಾಜನ ಬಳಿ ಹೇಳಿ ತಮ್ಮ ಸ್ಥಾನಕ್ಕೆ ಕುತ್ತು ತರುತ್ತಿದ್ದಾರೆ ಎಂಬ ಆರೋಪವನ್ನು ಹೊರಿಸುತ್ತಾರೆ. ಇದು ರಮ್ಯಾ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇತ್ತ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೂ ರಮ್ಯಾ ವಿರುದ್ಧ ದೂರು ನೀಡಿದ್ದಾರಂತೆ ಕಾಂಗ್ರೆಸ್ ನಾಯಕರು.

ಮತ್ತೆ ಕೈ ಹಿಡಿದಿದ್ದರು ರಾಹುಲ್ ಗಾಂಧಿ…

ಆದರೆ ರಾಹುಲ್ ಗಾಂಧಿ ಮಾತ್ರ ರಮ್ಯಾ ಕೈ ಬಿಡಲೇ ಇಲ್ಲ. ರಮ್ಯಾ ಬಗೆಗಿನ ದೂರನ್ನು ರಾಹುಲ್ ಸ್ವೀಕಾರ ಮಾಡೇ ಇಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ಮುಖಂಡರು ಹೊರಿಸುತ್ತಿದ್ದಾರೆ. ನಮಗಿಂತ ರಮ್ಯಾನೇ ರಾಹುಲ್ ಗಾಂಧಿಗೆ ಮುಖ್ಯವಾದರು. ನಮಗಿಂತ ಮತ್ತೆ ಬಂದ ರಮ್ಯಾ ರಾಹುಲ್ ಗಾಂಧಿಗೆ ಮುಖ್ಯವಾದರು ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ತಮ್ಮ ಅಸಮದಾನವನ್ನು ತೋಡಿಕೊಂಡಿದ್ದರೆಂದು ಮೂಲಗಳು ತಿಳಿಸಿದೆ.

ಒಟ್ಟಿನಲ್ಲಿ ರಮ್ಯಾ ವಿಚಾರದಲ್ಲಿ ರಾಹುಲ್ ಗಾಂಧಿ ಯಾವಾಗಲೂ ಅವರ ಪರವಾಗಿ ಬ್ಯಾಟಿಂಗ್ ಮಾಡಿ ಅವರನ್ನು ಮೇಲಕ್ಕೆತ್ತುತ್ತಾರೆ ಎಂಬ ಸತ್ಯವನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close