ಪ್ರಚಲಿತ

ಎರಡನೇ ಜಾಗತಿಕ ಯುದ್ಧದಲ್ಲಿ ಬ್ರಿಟಿಷರು ಗೆದ್ದರೂ ಸಹ ಭಾರತಕ್ಕೆ ತಕ್ಷಣವೇ ಸ್ವತಂತ್ರ್ಯ ಕೊಟ್ಟಿದ್ಯಾಕೆ ಎಂಬುದನ್ನು ಬಹಿರಂಗ ಪಡಿಸಿದ ಅಜಿತ್ ದೋವಲ್!!

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾರ ಅಜಿತ್ ದೋವಲ್ ಪಾಕ್ ಆಕ್ರಮಿತ ಕಾಶ್ಮೀರ ದ ಮೇಲೆ ಸರ್ಜಿಕಲ್ ಸ್ಟ್ರೈಕ್ ಆದಾಗಿನಿಂದ ಭಾರತದ ಮನೆ ಮನೆಗೂ ಚಿರಪರಿಚಿತರಾಗಿ ಹೋಗಿದ್ದಾರೆ! ಒಬ್ಹ ಸಾಮಾನ್ಯನೂ ಸಹ ಅಜಿತ್ ದೋವಲ್ ರ ಬಗೆಗೆ ನಂಬಿಕೆ ಇಟ್ಟಿದ್ದಾನೆಂದರೆ ದೇಶದ ಭದ್ರತಾ ವ್ಯವಸ್ಥೆಯನ್ನು ಅದೆಷ್ಟು ಉತ್ತಮವಾಗಿ ನಿರ್ವಹಿಸಿರಬಹುದು ಹೇಳಿ?! ಒಂದಷ್ಟು ಪತ್ರಿಕೆಗಳು ಅಜಿತ್ ದೋವಲ್ ರನ್ನು ಭಾರತದ ಜೇಮ್ಸ್ ಬಾಂಡ್ ಎಂದೇ ಕರೆದು ಬಿರುದು ಕೊಟ್ಟಿದ್ದರು!

ಪಾಕಿಸ್ಥಾನದ ಹೆಡೆ ಮುರಿ ಕಟ್ಟಲು ಅಜಿತ್ ದೋವಲ್ಲೇ ಆಗಬೇಕು ಎಂಬುದು ಪ್ರತಿಯೊಬ್ಬ ಭಾರತೀಯನಿಗೂ ಅರಿವಿದೆ! ಅಂತೆಯೇ, ಪಾಕಿಸ್ಥಾನವೂ ಸಹ ದೋವಲ್ ಎಂದರೆ ಸಣ್ಣಗೆ ಬೆವರುತ್ತದೆ! ಎಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಸರ್ಜಿಕಲ್ ದಾಳಿಯಾಗಿ, ಅಜಿತ್ ದೋವಲ್ ಎಂಬ ಹೆಸರು ಜನರಿಗೆ ಕೇಳಿಸಿತೋ, ಅಜಿತ್ ದೋವಲ್ ರ ಬಗ್ಗೆ ತಿಳಿದುಕೊಳ್ಳಲು ಮುಗಿಬಿದ್ದರು. ದೋವಲ್ ಬರೆದ ಪುಸ್ತಕಗಳು, ಬ್ಲಾಗು, ಟ್ವಿಟ್ಟರ್ ಎಂದೆಲ್ಲ ನೋಡತೊಡಗಿದಾಗ, Youtube.com ನಲ್ಲಿ ಅಜಿತ್ ದೋವಲ್ ರ ಒಂದಷ್ಟು ಉಪನ್ಯಾಸಗಳೂ ಲಭ್ಯವಿದ್ದವು! ಕುತೂಹಲದಿಂದ ಒಂದೊಂದೇ ವೀಡಿಯೋ ನೋಡುತ್ತ ಹೋದ ಭಾರತೀಯರು ದಂಗು ಬಡಿದಿದ್ದರು! ಕಾಂಗ್್ರಸ್ ನ ನೆಹರೂವಿಯನ್ ಆಡಳಿತದಲ್ಲಿ ಭಾರತಕ್ಕಾದ ಮಹಾಮೋಸವೊಂದನ್ನು ಬಯಲಿಗೆಳೆದಿದ್ದರು ದೋವಲ್! 2014 ರಲ್ಲಿ ನೀಡಿದ್ದ ಉಪನ್ಯಾಸವೊಂದು ಅದೆಷ್ಟೋ ವರ್ಷಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು!!

ಉಪನ್ಯಾಸದಲ್ಲಿ, ಹೇಗೆ ಬ್ರಿಟಿಷರನ್ನು ಒತ್ತಾಯಪೂರ್ವಕವಾಗಿ ಒದ್ದು ಹೊರಗೆ ಹಾಕಲಾಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದ ದೋವಲ್, ಸುಭಾಷ್ ಚಂದ್ರ ಬೋಸ್ ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿ ಯಾವ ರೀತಿಯಲ್ಲಿ ಬ್ರಿಟಿಷರಿಗೆ ಬೆದರಿಕೆ ನೀಡಿತ್ತೆಂಬುದನ್ನೂ ಬಿಚ್ಚಿಟ್ಟಿದ್ದರು! ಅಷ್ಟೇ! ವೀಕ್ಷಕ ದಂಗು ಬಡಿದಿದ್ದ! ಕಾಂಗ್ರೆಸ್ ನಡುಗಿತ್ತು!

“ಮಹಾತ್ಮಾ ಗಾಂಧಿ ಭಾರತದ ಸ್ವತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಬಹುದು! ಆದರೆ, ಕಾಂಗ್ರೆಸ್ಸಿಗರು ಜೊತೆ ಗೂಡಿ ನಡೆಸಿದ ಕ್ವಿಟ್ ಇಂಡಿಯಾ ಚಳುವಳಿ ಯಾವ ಪರಿಣಾಮವನ್ನೂ ಬೀರಲೇ ಇಲ್ಲ! ಅದೊಂದು ಫ್ಲಾಪ್ ಶೋ ಆಗಿತ್ತಷ್ಟೇ! ಎಂದು ಹೇಳಿದ್ದರು ಅಜಿತ್ ದೋವಲ್!!

“1956 ರಲ್ಲಿ ಬ್ರಿಟಿಷ್ ಪ್ರಧಾನ ಮಂತ್ರಿ ಕ್ಲಿಮೆಂಟ್ ಅಟ್ಲೀ ಸ್ವತಃ ಒಪ್ಪಿಕೊಂಡಿದ್ದರು! ಸುಭಾಷ್ ಚಂದ್ರ ಬೋಸರು ಬ್ರಿಟಿಷ್ ಅಧಿಪತ್ಯದಲ್ಲಿದ್ದ ಭಾರತೀಯ ಸೇನೆಯಲ್ಲಿ ರಾಷ್ಟ್ರೀಯತೆಯ ಭಾವವನ್ನು ಜಾಗೃತಗೊಳಿಸಿದ್ದರ ಪರಿಣಾಮ, ಸೈನಿಕರು ಬ್ರಿಟಿಷರ ವಿರುದ್ಧವೇ ತಿರುಗಿ ಬಿದ್ದಿದ್ದರು! ಭಾರತೀಯ ಸೇನೆಯಲ್ಲಿಯೂ ಅಶಾಂತಿ ಹೊಗೆಯಾಡಿತು! ಚಾಣಾಕ್ಷದಿಂದ ಬ್ರಿಟಿಷರು ಭಾರತಕ್ಕೆ ಸ್ವತಂತ್ರ್ಯ ಕೊಡಲು ಮುಂದಾದರು! ಭಾರತೀಯ ಸೇನೆಯಿಂದ
ಮಾತ್ರವಲ್ಲದೇ, ಹೊರಗಡೆಯಿಂದಲೂ ಸಹ ಇಂಡಿಯನ್ ನ್ಯಾಷನಲ್ ಆರ್ಮಿ ಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಿತು! ನೇರ ಯುದ್ಧಕ್ಕಿಳಿಯುವಷ್ಟು ಇಂಡಿಯನ್ ಆರ್ಮಿ ಬಲಯುತವಾಗಿತ್ತು!”

” ಕ್ಲಿಮೆಂಟ್ ಅಟ್ಲೀ ಸುಭಾಷ್ ಚಂದ್ರ ಬೋಸರ ಹೋರಾಟವನ್ನು ಮುಖ್ಯವಾಗಿ ಪರಿಗಣಿಸಿಯೇ ಮಾತನಾಡುತ್ತಿದ್ದದ್ದು! ಅಲ್ಲದೇ, ಸುಭಾಷ್ ಚಂದ್ರ ಬೋಸರ ಹೋರಾಟ ಯಾವ ರೀತಿ ಭಾರತಕ್ಕೆ ಸ್ವಾತಂತ್ರ್ಯ ಕೊಡಲು ನೆರವಾಯಿತೆಂಬುದನ್ನೂ ಸಹ ಕಲ್ಕತ್ತಾ ಉಚ್ಛ ನ್ಯಾಯಲಯದ ಮುಖ್ಯ ನ್ಯಾಯಾಧೀಶರಾದ
ಫಣಿ ಭೂಷಣ್ ಚಕ್ರವರ್ತಿಯವರ ಎದುರು ಹೇಳಿದ್ದರು!’

“ಶಸ್ತ್ರಾಸ್ತ್ರಗಳನ್ನು ಹೊಂದಿದ ಸೇನೆಯನ್ನಿಟ್ಟೇ ಬೋಸರು ಸ್ವತಂತ್ರ್ಯ ಭಾರತಕ್ಕೆ ಅಡಿಪಾಯ ಹಾಕಲು ತೊಡಗಿದರು! ಆದರೆ, ಕಾಂಗ್ರೆಸ್ ಮತ್ತೆ ತನ್ನ ಕೊಳಕು ರಾಜಕೀಯ ಹಸ್ತಕ್ಷೇಪದಿಂದ ಸ್ವಾತಂತ್ರ್ಯದ ಯಾವ ಕ್ರೆಡಿಟ್ಟುಗಳೂ ಬೋಸರಿಗೆ ಸಿಗದಂತೆ , ಗಾಂಧಿ ಹಾಗೂ ನೆಹರೂವನ್ನೇ ಮುಖ್ಯವಾಗಿ ಪರಿಗಣಿಸಿ ಮುಂದಿನ ಪೀಳಿಗೆಗೆ ಸುಳ್ಳನ್ನೇ ಇತಿಹಾಸವನ್ನಾಗಿ ಮಾಡಿದರು!”

“ಸ್ವಾತಂತ್ರ್ಯ ಹೋರಾಟದಲ್ಲಿ 60,000 ಕ್ಕೂ ಹೆಚ್ಚು ನ್ಯಾಷನಲ್ ಆರ್ಮಿ ಸೈನಿಕರು ಪ್ರಾಣತ್ಯಾಗ ಮಾಡಿದ್ದಾರೆ! ಅವರ ತ್ಯಾಗಕ್ಕೆ ಯಾವ ಬೆಲೆಯೂ ಸಿಗಲಿಲ್ಲ! ಸ್ವಾತಂತ್ರ್ಯ ನಂತರ ನ್ಯಾಷನಲ್ ಆರ್ಮಿ ಸೈನಿಕರನ್ನು ಭಾರತೀಯ ಸೇನೆಗೆ ಸೇರಿಸಲೂ ಕಾಂಗ್ರೆಸ್ ಅವಕಾಶ ನೀಡಲಿಲ್ಲ. ಸ್ವತಂತ್ರ್ಯ ಪೂರ್ವದಲ್ಲಿ ಕೆಲವು INA ಯೋಧರನ್ನು ಬ್ರಿಟಿಷರು ಜೈಲಿಗಟ್ಟಿದ್ದರು! ಅಂತಹವರು, ಸ್ವತಂತ್ರ್ಯ ಸಿಕ್ಕ ನಂತರವೂ ಜೈಲಿನಲ್ಲಿಯೇ ಇರಬೇಕಾಯಿತು!”

ಇದು ಅಜಿತ್ ದೋವಲ್ ರ ಮಾತುಗಳು!

ಅಜಿತ್ ದೋವಲ್ ಅದೆಷ್ಟೋ ಬಾರಿ ಕಾಂಗ್ರೆಸ್ ನ ಮುಖವಾಡವನ್ನು ಕಳಚಿದ್ದಾರೆ! ಆದರೂ, ಯಾವುದೇ ಪಕ್ಷಗಳ ಏಜೆಂಟ್ ನೆಂದಾಗಲಿ, ಬಿಜೆಪಿಯವರೆಂದಾಗಲಿ, ಸಂಘಿಯೆಂದಾಗಲಿ ತಳುಕು ಹಾಕಲು ಕಾಂಗ್ರೆಸ್ ಗೆ ಸಾಧ್ಯವಾಗಲಿಲ್ಲ! ಯಾಕೆಂದರೆ, ಅಜಿತ್ ದೋವಲ್ ಕಾಂಗ್ರೆಸ್ ಆಡಳಿತಾವಧಿಯಲ್ಲಿಯೂ ಸಹ ಕರ್ತವ್ಯ ನಿರ್ವಹಿಸಿದ್ದವರೇ!

ಅಜಿತ್ ದೋವಲ್ ರ ಈ ಉಪನ್ಯಾಸವೊಂದು ಹೇಗೆ ಕಾಂಗ್ರೆಸ್ ಇತಿಹಾಸವನ್ನು ತಿರುಚಿ, ಕೇವಲ ಗಾಂಧಿ ನೆಹರೂ ವನ್ನೇ ವೈಭವೀಕರಿಸಿ, ಕಮ್ಯುನಿಸ್ಟ್ ಸಿದ್ಧಾಂತಗಳನ್ನೇ ಇಂದಿನ ಪೀಳಿಗೆಗೆ ಕೊಡಲು ಆಟವಾಡಿದ ಆಟ ನಯವಂಚಕತೆಯ ಪರಮಾವಧಿಯಷ್ಟೇ! ಇವತ್ತಿಗೂ ಸಹ, ಇದೇ ಮುಂದುವರೆದಿರುವುದು ಭಾರತೀಯರ ದುರಾದೃಷ್ಟಕ್ಕೆ ಹಿಡಿದ ಕನ್ನಡಿಯಷ್ಟೇ!

– ಅಜೇಯ ಶರ್ಮಾ

Tags

Related Articles

Close