ಪ್ರಚಲಿತ

ಮೂರನೇ ಅವಧಿಗೆ ಪ್ರಧಾನಿ ಮೋದಿ ಸರ್ಕಾರದ ಗ್ಯಾರಂಟಿ ಏನು ಗೊತ್ತಾ?: ಅಮಿತ್ ಶಾ ಏನಂದ್ರು?

ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಅನೇಕ ಮಹತ್ವದ ಭರವಸೆಗಳನ್ನು ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲ ಎನ್ನುವ ಹಾಗೆ ಜಾರಿಗೊಳಿಸಿದ್ದಾರೆ. ಆ ಮೂಲಕ ದೇಶಕ್ಕೆ, ದೇಶದ ಜನರಿಗೆ ನ್ಯಾಯ ಒದಗಿಸಿ ಕೊಟ್ಟ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಳೆದ ಎರಡು ಅವಧಿಯ ಅಧಿಕಾರದಲ್ಲಿ ಜಮ್ಮು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿದ್ದ ಆರ್ಟಿಕಲ್ 370 ರದ್ದತಿ, ತ್ರಿವಳಿ ತಲಾಖ್ ರದ್ದತಿ, ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಸೇರಿದಂತೆ ಹಲವಾರು ಭರವಸೆಗಳನ್ನು ಈಡೇರಿಸಿ ಜನರಿಗೆ ಮತ್ತಷ್ಟು ಭರವಸೆ ಹುಟ್ಟಿಸಿದೆ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ. ಇದೀಗ ಮೂರನೇ ಬಾರಿಯೂ ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಹಿಡಿಯುವ ಎಲ್ಲಾ ಲಕ್ಷಣಗಳೂ ಇದ್ದು, ಮೂರನೇ ಬಾರಿಗೆ ಅಧಿಕಾರ ಹಿಡಿದಲ್ಲಿ ಭಾರತಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಏನು ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ.

ದೇಶದಾದ್ಯಂತ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು ಬಿಜೆಪಿಯ ಭರವಸೆಯಾಗಿದ್ದು, ಈ ಭಭರವಸೆಯನ್ನು ಈಡೇರಿಸುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ದೇಶದ ಸಂಪನ್ಮೂಲಗಳಿಗೆ ಮುಸಲ್ಮಾನರೇ ಮೊದಲ ಹಕ್ಕದಾರರು ಎಂದು ಹೇಳುತ್ತದೆ. ಆದರೆ ನಮ್ಮ ಬಿಜೆಪಿ ಪಕ್ಷ ಈ ದೇಶದ ಬಡವರು, ದಲಿತರು ಮತ್ತು ಹಿಂದುಳಿದ ವರ್ಗದ ಜನರಿಗಾಗಿ ದೇಶದ ಸಂಪತ್ತು ಇರುವುದು ಎಂದು ಪ್ರತಿಪಾದಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳನ್ನು ಸರಿಯಾಗಿ ಗಮನಿಸಿ. ಅದರಲ್ಲಿ ಅವರು ವೈಯಕ್ತಿಕ ಕಾನೂನು, ಮುಸ್ಲಿಂ ವೈಯಕ್ತಿಕ ಕಾನೂನು, ತ್ರಿವಳಿ ತಲಾಖ್‌ಗಳನ್ನು ಮತ್ತೆ ಆರಂಭ ಮಾಡುವುದಾಗಿ ಹೇಳಿದೆ. ಭಾರತ ಷರಿಯಾ ಕಾನೂನಿನ ಮೂಲಕ ಮುನ್ನಡೆಯುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಶಾ, ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಪಕ್ಷ ತನಗೆ ತೋಚಿದ ಎಲ್ಲ ಭಾರತ ವೈಯಕ್ತಿಕ ಕಾನೂನುಗಳ ಮೇಲೆ ನಡೆಯುವುದಿಲ್ಲ. ಯುಸಿಸಿ ಮತ್ತು ಸಂವಿಧಾನದ ಅನ್ವಯ ನಡೆಯುತ್ತಿದೆ. ಉತ್ತರಾಖಂಡದಲ್ಲಿ ಈಗಾಗಲೇ ಯುಸಿಸಿ ಈಗಾಗಲೇ ಜಾರಿಯಾಗಿದ್ದು, ಇದು ಇಡೀ ದೇಶಕ್ಕೆ ಮಾದರಿಯಾಗಿದೆ‌‌.

ಭಾರತದಲ್ಲಿ ಯಸಿಸಿಯವ್ನು ಸಮರ್ಥವಾಗಿ ಜಾರಿಗೆ ತರುವ ಕೆಲಸ ನಮ್ಮ ಸರ್ಕಾರದ್ದು ಎಂದು ಅವರು ಭರವಸೆ ನೀಡಿದ್ದಾರೆ.

Tags

Related Articles

Close