ಪ್ರಚಲಿತ

ಕಟ್ಟರ್ ಮುಸ್ಲಿಂ ಮಹಿಳೆಯಾಗಿದ್ದ ಈಕೆ ಕೇಸರಿಯನ್ನು ಅಪ್ಪಿಕೊಂಡಿದ್ದರ ಹಿಂದೆ ಇದೆ ರೋಚಕ ಸತ್ಯ!!

ಪುರುಷ ಪ್ರಧಾನವಾದ ಸಮಾಜದಲ್ಲಿ ಮುಸ್ಲಿಂ ಮಹಿಳೆಯರು ಬೆಂದು ಹೋಗುತ್ತಿದ್ದು, ತ್ರಿವಳಿ ತಲಾಖ್ ಎನ್ನುವ ಪಿಡುಗುಗಳಿಗೆ ಅದೆಷ್ಟೋ ಹೆಣ್ಣು ಮಕ್ಕಳು ಬಲಿಯಾಗಿದ್ದರೋ ಗೊತ್ತಿಲ್ಲ… ಆದರೆ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದಂದಿನಿಂದಲೂ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆಯಲ್ಲದೇ ತನ್ನ ಸರ್ಕಾರದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನವನ್ನು ಕಲ್ಪಿಸಿ ಸಮಾನತೆಯನ್ನು ತೋರ್ಪಡಿಸಿದ ಹಿರಿಮೆ ಇವರದ್ದಾಗಿದೆ!!

ಆದರೆ, ಇದೀಗ ಮುಸ್ಲಿಂ ಮಹಿಳೆಯರ ಬಹುದಿನಗಳ ಬೇಡಿಕೆಯಾದ ತ್ರಿವಳಿ ತಲಾಖ್ ಪದ್ದತಿಯನ್ನು ನಿಷೇಧಿಸಿ ಮುಸಲ್ಮಾನ ಮಹಿಳೆಯರ ಮೊಗದಲ್ಲಿ ಸಂತಸ ಇಮ್ಮಡಿಯಾಗುವಂತೆ ಮಾಡಿದೆ. ಅಷ್ಟೇ ಅಲ್ಲದೇ, ತ್ರಿವಳಿ ತಲಾಖ್ ವಿರುದ್ದ ಹಲವಾರು ವರ್ಷಗಳಿಂದ ಹೋರಾಡುತ್ತಿದ್ದ ಇಶ್ರತ್ ಜಹಾನ್, ಮೋದಿ ಸರ್ಕಾರ ತ್ರಿವಳಿ ತಲಾಖ್ ಅಕ್ರಮ ಎಂದು ಘೋಷಿಸಿದ ನಂತರ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ ಎನ್ನುವ ಸುದ್ದಿ ಇದೀಗ ಹೊರಬಿದ್ದಿದ್ದು ಮೋದಿ ಸರ್ಕಾರದ ಹಿರಿಮೆ ಇನ್ನಷ್ಟು ಹೆಚ್ಚಿದಂತಾಗಿದೆ.

ಭಾರತೀಯ ಜನತಾ ಪಕ್ಷವನ್ನು ಇತ್ತೀಚೆಗೆ ಸೇರಿಕೊಂಡಿರುವ ಟ್ರಿಪಲ್ ತಲಾಕ್ ಅರ್ಜಿದಾರೆ ಇಶ್ರತ್ ಜಹಾನ್ ಮಹಿಳಾ ಹಕ್ಕಿಗಾಗಿ ದುಡಿಯವುದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, “ನಾನು ಟ್ರಿಪಲ್ ತಲಾಕ್ ನ ಸಂತ್ರಸ್ತೆ. ಈ ಬಗ್ಗೆ ಕೆಳ ನ್ಯಾಯಾಲಯದಿಂದ ಹಿಡಿದು ಉನ್ನತ ನ್ಯಾಯಾಲಯದವರೆಗೂ ಹೋಗಿದ್ದೆ. ಕೊನೆಗೂ ನನಗೆ ನ್ಯಾಯ ಸಿಕ್ಕಿದೆ. ಮೋದಿಯವರು ತ್ರಿವಳಿ ತಲಾಕ್ ಮಸೂದೆಯನ್ನು ಮಂಡಿಸಿರುವುದರಿಂದ ಸಂತೋಷವಾಗಿದೆ. ಅದಕ್ಕಾಗಿ ನಾನು ಬಿಜೆಪಿ ಸೇರಿಕೊಂಡಿದ್ದೇನೆ. ಆದರೆ, ನನ್ನ ತ್ರಿವಳಿ ತಲಾಕ್ ಹೋರಾಟದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯಿಂದ ಯಾವುದೇ ಸಹಾಯ ದೊರೆಯಲಿಲ್ಲ” ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಸ್ವಾತಂತ್ರ್ಯದ ನಂತರ ದೇಶವನ್ನಾಳುತ್ತಾ ಬಂದ ಕಾಂಗ್ರೆಸ್ಸಿಗರು ಜಾತ್ಯಾತೀತ ದೇಶ ಹಾಗೂ ಜಾತ್ಯಾತೀತ ಪಕ್ಷ ಎಂಬ ಸೋಗಿನಲ್ಲಿ ಮುಸಲ್ಮಾನರ ಓಲೈಕೆಗಾಗಿ ಅವರನ್ನು ವಂಚನೆ ಮಾಡುತ್ತಲೇ ಬಂದಿದ್ದರು. ಶಿಕ್ಷಣದಿಂದ ಹಿಡಿದು ಆರೋಗ್ಯ, ಧಾರ್ಮಿಕ ಕ್ಷೇತ್ರಗಳಲ್ಲಿ ಮುಸಲ್ಮಾನ ಮಹಿಳೆಯರಿಗೆ ಏಕ ಪಕ್ಷೀಯ ನಿರ್ಧಾರವನ್ನೇ ಕೈಗೊಂಡು ಕಾಂಗ್ರೆಸ್‍ನೊಂದಿಗೆ ಇರುವ ಮೂಲಭೂತವಾದಿ ಚಿಂತನೆಯುಳ್ಳ ಮುಸಲ್ಮಾನರ ಮಾತುಗಳನ್ನೇ ಆದೇಶವೆನಿಸಿಕೊಂಡು, ದೇಶದಲ್ಲಿ ಇತರ ಮಹಿಳೆಯರಿಗೆ ನೀಡುತ್ತಿದ್ದ ಸೌಲಭ್ಯಗಳಿಂದ ಮುಸಲ್ಮಾನರ ಮಹಿಳೆಯರು ವಂಚಿತರನ್ನಾಗಿ ಮಾಡುತ್ತಿದ್ದರು.

ಆದರೆ ಇದೀಗ ಮೋದಿ ಯುಗ…………!!

ತ್ರಿವಳಿ ತಲಾಖ್ ಪದ್ಧತಿಯನ್ನು ಶಾಶ್ವತವಾಗಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರವು ಇದಕ್ಕೊಂದು ಗತಿ ಕಾಣಿಸಿದ್ದು, ಕಾನೂನನ್ನು ಉಲ್ಲಂಘಿಸುವವರಿಗೆ ತಕ್ಕ ಶಿಕ್ಷೆಯನ್ನೇ ನಿಗದಿಗೊಳಿಸಿದೆ. ತಲಾಖ್ ಪದ್ಧತಿಯನ್ನು ವೈಯುಕ್ತಿಕ ಹಕ್ಕಿನ ಮೇರೆಗೆ ಮುಂದುವರೆಸಿದರೆ ಅಥವಾ ಕಾನೂನನ್ನು ಉಲ್ಲಂಘಿಸಿದರೆ, ಜಾಮೀನು ರಹಿತ ಬಂಧನ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ವಿಪರ್ಯಾಸವೆಂದರೆ, ಕಾಂಗ್ರೆಸ್ ಮಾತ್ರ ಇದಕ್ಕೆ ಸಂಪೂರ್ಣ ವಿರೋಧವನ್ನು ವ್ಯಕ್ತ ಪಡಿಸುತ್ತಿದ್ದು, ತ್ರಿವಳಿ ತಲಾಖ್ ನಿಷೇಧದ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಆದರೆ ನರೇಂದ್ರ ಮೋದಿ ಸರ್ಕಾರವು ಮುಸ್ಲಿಂ ಯುವತಿಯರಿಗೆ ನ್ಯಾಯ ಒದಗಿಸುವ ಮೂಲಕ ಬೃಹತ್ ಕಾರ್ಯವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ!!

ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣಾ ಕಾಯಿದೆ-2017ಕ್ಕೆ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, “ಸಂವಿಧಾನ ಪ್ರತೀಯೊಬ್ಬರಿಗೂ ಸಮಾನ ವೈಯಕ್ತಿಕ ಅಧಿಕಾರವನ್ನು ನೀಡಿದೆ. ಇಸ್ಲಾಂ ಪ್ರಕಾರ ತಲಾಖ್ ಎಂಬುದು ವೈಯಕ್ತಿಕ ವಿಚಾರ. ಅದನ್ನೆಲ್ಲ ಕಾನೂನು ಮಾಡುವುದು ಸರಿಯಲ್ಲ” ಎಂದು ಹೇಳಿದ್ದರು.

ಅಷ್ಟೇ ಅಲ್ಲದೇ, “ತ್ರಿವಳಿ ತಲಾಖ್ ಮಸೂದೆ ಮಂಡನೆಗೂ ಮೊದಲು ಕೇಂದ್ರ ಸರ್ಕಾರವು ರಾಜ್ಯದ ಅಭಿಪ್ರಾಯವನ್ನು ಕೇಳಿತ್ತು. ಆದರೆ, ನಾವು ಯಾವುದೇ ಅಭಿಪ್ರಾಯವನ್ನು ನೀಡಿರಲಿಲ್ಲ ಮತ್ತು ಪ್ರತಿಕ್ರಿಯೆ ನೀಡಿಲ್ಲ ಎಂದರೆ, ನಾವು ಅದಕ್ಕೆ ವಿರೋಧಿಸುತ್ತಿದ್ದೇವೆಂದು ಅರ್ಥ. ಈ ಬಗ್ಗೆ ಮತ್ತೆ ಸಭೆ ನಡೆಸುತ್ತೇನೆ. ಸಭೆಯಲ್ಲಿ ನಾಯಕರು ನೀಡಿದ ಪ್ರತಿಕ್ರಿಯೆ ಬಳಿಕ ಕೇಂದ್ರಕ್ಕೆ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆಂದು” ಹೇಳಿದ್ದರು!!

ಅದಲ್ಲದೆ, ಹಿಂದೂ ಮಹಿಳೆಯರ ತರಹ ದೇವಸ್ಥಾನಗಳಿಗೆ ಹೋಗುವ ಅಥವ ಕೆಲವು ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗುವ ಯಾವುದೇ ಅಧಿಕಾರ ಮುಸ್ಲಿಮ್ ಮಹಿಳೆಯರಿಗೆ ಇಲ್ಲಿಯವರೆಗೂ ದೊರಕಿಲ್ಲ. ಆದರೆ ನರೇಂದ್ರ ಮೋದಿಯವರ ನೇತೃತ್ವದಲ್ಲಿರುವ ಸರ್ಕಾರ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಮುಸ್ಲಿಂ ಮಹಿಳೆಯರಿಗೆ ತಲಾಖ್ ನಿಷೇಧದ ನಂತರ ಮತ್ತೊಂದು ದೊಡ್ಡ ಬಂಪರ್ ಬಹುಮಾನವನ್ನೂ ನೀಡಿದ್ದಾರೆ.

ಹೌದು… ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳವಾಗಿರುವ ಹಜ್ ಯಾತ್ರೆಗೆ ಇನ್ನು ಮುಂದೆ ಮಹಿಳೆಯರು ಪುರುಷರ ಸಹಾಯವಿಲ್ಲದೇ ಒಂಟಿಯಾಗಿ ಯಾತ್ರೆ ಕೈಗೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 39 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಪ್ರಕಾರ 45 ವಯಸ್ಸಿಗಿಂತ ಮೇಲ್ಪಟ್ಟ ಹಾಗೂ ಕನಿಷ್ಠ ನಾಲ್ವರು ಮಹಿಳೆಯರು ಗುಂಪು ಹಜ್ ಯಾತ್ರೆ ಮಾಡಬಹುದು, ಇವರುಗಳಿಗೆ ಯಾವುದೇ ಮಹ್ರಮ್ ಬೇಕಾಗಿಲ್ಲ ಎಂದು ಮೋದಿ ಹೇಳಿದ್ದಾರೆ.

ಅಷ್ಟೇ ಅಲ್ಲದೇ, “ಮೊದಲಿಗೆ ನಾನೂ ಈ ವಿಚಾರವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ, ಆದರೆ ಅದರ ಮಹತ್ವ ಅರಿಯಲು ಹೆಚ್ಚಿನ ಅಧ್ಯಯನ ನಡೆಸಿದ ಬಳಿಕವಷ್ಟೇ ನನಗನಿಸಿದ್ದು, ನಮಗೆ ಸ್ವಾತಂತ್ರ್ಯ ದೊರೆತು 70 ವರ್ಷ ಕಳೆದರೂ ಮುಸ್ಲಿಂ ಮಹಿಳೆಯರ ಮೇಲೆ ನಡೆದ ಅನ್ಯಾಯದ ಕುರಿತು ಯಾರೊಬ್ಬರೂ ದ್ವನಿ ಎತ್ತಲೇ ಇಲ್ಲ” ಎಂದು ತಮ್ಮ ರೇಡಿಯೋ ಸಂದೇಶದಲ್ಲಿ ನರೇಂದ್ರ ಮೋದಿ ಹೇಳಿದ್ದರು.

ಆದರೆ ಇದೀಗ, ಹಲವಾರು ವಿರೋಧಗಳ ನಡುವೆಯೂ ತ್ರಿವಳಿ ತಲಾಖ್ ಪದ್ದತಿಯ ವಿರುದ್ದವಾಗಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಕಾಯ್ದೆ ಅನುಮೋದಿಸಿರುವುದು ಹೆಮ್ಮೆಯ ವಿಚಾರ. ಅಷ್ಟೇ ಅಲ್ಲದೇ, ತ್ರಿವಳಿ ತಲಾಖ್ ನಿಷೇಧದ ಮೋದಿ ಸರ್ಕಾರದ ಅಂತಿಮ ನಿರ್ಣಯದ ನಂತರ ದೇಶದ ಸಾವಿರಾರು ಮುಸ್ಲಿಂ ಮಹಿಳೆಯರು ಬಹಿರಂಗವಾಗಿ ಸಂತಸ ವ್ಯಕ್ತಪಡಿಸಿದ್ದು ಬಿಜೆಪಿಗೆ ಸಂತಸ ತಂದಿದೆ.. ಅಷ್ಟೇ ಅಲ್ಲದೇ ತ್ರಿವಳಿ ತಲಾಖ್ ವಿರುದ್ಧ ಹೋರಾಡುತ್ತಿದ್ದ ಇಶ್ರಾತ್ ಜಹಾನ್ ಬಿಜೆಪಿಗೆ ಸೇರಿರುವುದು ಕೂಡ ಹೆಮ್ಮೆಯ ವಿಚಾರವಾಗಿದೆ.

ಇಶ್ರಾತ್ ಜಹಾನ್ ಅವರ ಪತಿ ದುಬೈನಲ್ಲಿ ನೆಲೆಸಿದ್ದು ಮೊಬೈಲ್ ಮೂಲಕ ಮೂರು ಬಾರಿ “ತಲಾಖ್” ಎಂದು ಹೇಳಿ ವಿಚ್ಛೇದನ ನೀಡಿದ್ದ. ಇದರಿಂದ ಕಂಗಲಾದ ಜಹಾನ್ ಈ ತಾರತಮ್ಯದ ಪದ್ದತಿಯ ವಿರುದ್ದ ಹೋರಾಟಕ್ಕೆ ಇಳಿದಿದ್ದರು. ಇದೀಗ ಮೋದಿ ಸರ್ಕಾರ ಅಂತಿಮವಾಗಿ ತ್ರಿವಳಿ ತಲಾಖ್ ಕಾನೂನು ಬಾಹಿರಗೊಳಿಸಿದ್ದು ಇಶ್ರಾತ್ ಜಹಾನ್ ಬಿಜೆಪಿಗೆ ಸೇರಿಕೊಂಡಿದ್ದಾರೆ!!

ಮುಸ್ಲಿಂ ಮಹಿಳೆಯರಿಗೆ ಮಾತ್ರ ಮೀಸಲಾಗಿದ್ದ ತಾರತಮ್ಯ ನೀತಿಯನ್ನು ರದ್ದುಗೊಳಿಸಿ, ಎಲ್ಲರಿಗೂ ಸಮಾನ ಸ್ಥಾನಮಾನ ಸಿಗಬೇಕೆಂಬ ಮಹತ್ತರವಾದ ಗುರಿಯನ್ನು ಹೊಂದಿರುವ ನರೇಂದ್ರ ಮೋದಿಯವರ ಕಾರ್ಯ ವೈಖರಿಯನ್ನು ಎಲ್ಲರೂ ಕೂಡ ಮೆಚ್ಚುವಂತಹದ್ದು. ಅಷ್ಟೇ ಅಲ್ಲದೇ, ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳವಾಗಿರುವ ಹಜ್ ಯಾತ್ರೆಗೆ ಮೋದಿ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಕೂಡ ಸಂತಸದ ವಿಚಾರವಾಗಿದೆ!!

– ಅಲೋಖಾ

Tags

Related Articles

Close