ಪ್ರಚಲಿತ

ಕನ್ನಡತಿಯೇ ಅಲ್ಲದ ಈ ಕೇಂದ್ರ ಸಚಿವೆ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಿದ ಪರಿ ಗೊತ್ತೇ?!

ಅದೆಷ್ಟೋ ಕನ್ನಡಿಗರು ಕನ್ನಡವನ್ನು ನಿರರ್ಗಳವಾಗಿ ಮಾತಾನಾಡುತ್ತಾರೋ ಗೊತ್ತಿಲ್ಲ. ಆದರೆ ಅನ್ಯ ರಾಜ್ಯದವರು ಅಥವ ಅನ್ಯ ದೇಶದವರು ಕನ್ನಡವನ್ನು ನಿರರ್ಗಳವಾಗಿ ಮಾತಾನಾಡುವಾಗ ಕನ್ನಡವೇ ಬಾರದ ಕನ್ನಡಿಗರಿಗೆ ಅವಮಾನವಾಗುವುದಂತೂ ಖಂಡಿತಾ!!

ಹೌದು… ಕನ್ನಡ ಗೊತ್ತಿದ್ದರು ಕೂಡ ಗೊತ್ತಿಲ್ಲದಂತೆ ನಟಿಸುವ ಅದೆಷ್ಟೋ ಮಂದಿ ಜನರ ಮುಂದೆ ಕನ್ನಡವೇ ಬಾರದ ಅದೆಷ್ಟೋ ಮಂದಿ ಕನ್ನಡವನ್ನು ನಿರರ್ಗಳವಾಗಿ ಮಾತಾನಾಡುವಾಗ ಅಂಥವರಿಗೆ ಅಚ್ಚರಿಯಾಗುವುದಂತೂ ಖಂಡಿತಾ!! ಯಾಕೆಂದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕನ್ನಡದಲ್ಲಿ ಮಾಡಿರುವ ಭಾಷಣವನ್ನು ಗುರುವಾರ ಟ್ವೀಟ್ ಮಾಡಿ ಕನ್ನಡಿಗರಲ್ಲಿ ಅಚ್ಚರಿಯನ್ನು ಮೂಡಿಸಿದ್ದಾರೆ.

ಈಗಾಗಲೇ ಕರ್ನಾಟಕಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಕನ್ನಡದಲ್ಲಿಯೇ ಮಾತಾನಾಡಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಲ್ಲದೇ ಇತ್ತೀಚೆಗೆ ನರೇಂದ್ರ ಮೋದಿಯವರು ಧರ್ಮಸ್ಥಳಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ, “ನಮೋ ಮಂಜುನಾಥ. ನನ್ನ ಬಂಧೂ-ಭಗಿನಿಯರೇ ನಿಮ್ಮೆಲ್ಲರಿಗೂ ನನ್ನ ಸಮಸ್ಕಾರಗಳು. ವಿಶೇಷವಾಗಿ ನನ್ನ ಸಹೋದರಿಯರಿಗೆ ಅಭಿನಂದನೆಗಳು” ಎಂದು ಕನ್ನಡದಲ್ಲಿ ಮಾತಾನಾಡುತ್ತಿದ್ದಂತೆ ನೆರೆದಿದ್ದ ಜನಸ್ತೋಮವೂ ಕನ್ನಡದಲ್ಲಿ ಮಾತಾನಾಡಿದ್ದಕ್ಕಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

ಇನ್ನು ಹಿಂದುತ್ವದ ಫೈರ್ ಬ್ರಾಂಡ್. ತನ್ನ ಉಗ್ರ ಭಾಷಣಗಳಿಂದಲೇ ಹೆಸರುವಾಸಿಯಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹುಬ್ಬಳ್ಳಿಯ ಪರಿವರ್ತನಾ ಯಾತ್ರೆಯಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ್ದಾರೆ. ಕರ್ನಾಟಕದ ಜನತೆ ನನ್ನನ್ನು ಆದರದಿಂದ ಸ್ವಾಗತಿಸಿದ್ದೀರಿ. ಉತ್ತರ ಕರ್ನಾಟಕದ ಜನತೆಗೆ ನನ್ನ ಆದರದ ಧನ್ಯವಾದಗಳು ಎಂದು ಕನ್ನಡದಲ್ಲೇ ಹೇಳಿ ಕನ್ನಡಿಗರಿಗೆ ಅಚ್ಚರಿಯನ್ನುಂಟು ಮಾಡಿದ್ದರು.

ವಿಪರ್ಯಾಸ ಎಂದರೆ, ಈ ಹಿಂದೆ ಎಐಸಿಸಿಯ ವಕ್ತಾರ ಹಾಗೂ ಹೈ. ಕ. ಭಾಗದ ಪಕ್ಷದ ಉಸ್ತುವಾರಿ ವೀಕ್ಷಕ ಡಾ.ಸಾ.ಕೆ. ಶೈಲಜಾನಾಥ, ತಮ್ಮ ಭಾಷಾ ಪ್ರೌಢಿಮೆ ತೋರಿಸಲು ಹೋಗಿ ಗಂಗಾವತಿಯ ಸ್ಲಂ ಪ್ರದೇಶದಲ್ಲಿ ಇಂಗ್ಲಿಷ್, ಹಿಂದಿ, ತೆಲುಗು ಹಾಗೂ ತೆಲುಗು ಮಿಶ್ರಿತ ಕನ್ನಡದಲ್ಲಿ ಭಾಷಣ ಮಾಡಿ ಜನರಿಂದ ನಗೆಪಾಟಲಿಗೀಡಾಗಿದ್ದಾರೆ. ಅಷ್ಟೇ ಅಲ್ಲದೇ, ಮನೆ ಮನೆಗೆ ಕಾಂಗ್ರೆಸ್ ಎಂಬ ಅಭಿಯಾನಕ್ಕೆ ಚಾಲನೆ ನೀಡಲು ಆಗಮಿಸಿರುವ ಅವರು, ಇಂಗ್ಲಿಷ್‍ನಲ್ಲಿ ಭಾಷಣ ಆರಂಭಿಸಿದರು. ಬಳಿಕ ವೇದಿಕೆ ಮೇಲಿದ್ದವರೊಬ್ಬರು ಸಾರ್ ಇಂಗ್ಲಿಷ್ ಜನರಿಗೆ ಅರ್ಥವಾಗಲ್ಲ ಎಂದಾಗ ಹಿಂದಿ, ತೆಲುಗು ಭಾಷೆಯಲ್ಲಿ ಆಗಾಗ ಅಲ್ಪಸ್ವಲ್ಪ ತೆಲುಗು ಮಿಶ್ರಿತ ಕನ್ನಡದಲ್ಲಿ ಭಾಷಣ ಮಾಡಿ ನಗೆ ಪಾಟಲಿಗೆ ಗುರಿಯಾಗಿದ್ದರು.

ಆದರೆ ಹರಿಯಾಣದವರಾದ ಸುಷ್ಮ ಸ್ವರಾಜ್ ಅವರು ಕನ್ನಡವನ್ನು ನಿರರ್ಗಳವಾಗಿ ಮಾತಾನಾಡುತ್ತಾರೆ ಎಂದರೆ ನಂಬಲಸಾಧ್ಯ!! ಆದರೆ ಅದನ್ನು ನಾವು ನಂಬಲೇ ಬೇಕು!! ಯಾಕೆಂದರೆ ಈಗಾಗಲೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕನ್ನಡದಲ್ಲಿ ಮಾಡಿರುವ ಭಾಷಣವನ್ನು ಟ್ವೀಟ್ ಮಾಡಿ ಕನ್ನಡಿಗರಲ್ಲಿ ಅಚ್ಚರಿ ಮೂಡಿಸಿದ್ದಲ್ಲದೇ, 1999ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ಪ್ರಚಾರ ರ್ಯಾಲಿಯಲ್ಲಿ ಮಾಡಿರುವ ಭಾಷಣ ಇದಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ ಅವರು, ಹಿಂದಿಯೇತರ ಭಾರತೀಯ ಭಾಷೆಗಳ ಬಗ್ಗೆಯೂ ನನಗೆ ಹೆಮ್ಮೆಯಿದೆ. ಕೆಲವು ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತೇನೆ ಎಂದು ಸಮರ್ಥಿಸಿಕೊಂಡು ಕನ್ನಡದಲ್ಲಿ ಮಾತನಾಡಿರುವ ವೀಡಿಯೊ ಸಮೇತ ಸುಷ್ಮಾ ಟ್ವೀಟ್ ಮಾಡಿದ್ದಾರೆ.

Image result for sushma swaraj

ಹೌದು…. ಹಿಂದಿಗೆ ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಒಂದು ಎಂಬ ಮಾನ್ಯತೆ ಪಡೆದುಕೊಳ್ಳುವುದಕ್ಕೆ 400 ಕೋಟಿ ವೆಚ್ಚವಾದರೂ ಭರಿಸಲು ಸರ್ಕಾರ ಸಿದ್ಧವಿದೆ. ಆದರೆ ವಿಶ್ವಸಂಸ್ಥೆಯ ನಿಯಮದಲ್ಲಿ ಅದಕ್ಕೆ ಅವಕಾಶ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಲೋಕಸಭೆಗೆ ತಿಳಿಸಿದ್ದರು. ಅಷ್ಟೇ ಅಲ್ಲದೇ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ 129 ಸದಸ್ಯರು (ಮೂರನೇ ಎರಡು) ಅಧಿಕೃತ ಭಾಷೆಯ ಮಾನ್ಯತೆಗೆ ಬೆಂಬಲ ನೀಡಬೇಕು. ಹಿಂದಿಯನ್ನು ಅಧಿಕೃತ ಭಾಷೆಯಾಗಿಸಲು ತಗಲುವ ಖರ್ಚನ್ನು ಈ ದೇಶಗಳೇ ಭರಿಸಬೇಕು ಎಂಬುದು ವಿಶ್ವಸಂಸ್ಥೆಯ ನಿಯಮ ಎಂದು ಸುಷ್ಮಾ ಮಾಹಿತಿ ನೀಡಿದ್ದರು.

ಆದರೆ, ಹಿಂದಿಗೆ ಅಧಿಕೃತ ಭಾಷೆಯ ಮಾನ್ಯತೆ ಪಡೆಯುವ ಪ್ರಯತ್ನಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ, ಹಿಂದಿ ಭಾರತದ ರಾಷ್ಟ್ರೀಯ ಭಾಷೆ ಅಲ್ಲ, ಇಲ್ಲಿನ ಹಲವು ಭಾಷೆಗಳಲ್ಲಿ ಒಂದು ಮಾತ್ರ ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಹಿಂದಿ ಅಧಿಕೃತ ಭಾಷೆಯಾದರೆ ತಮಿಳುನಾಡಿನವರು ಇಲ್ಲವೇ ಪಶ್ಚಿಮ ಬಂಗಾಳದವರು ಪ್ರಧಾನಿಗಳಾದಾಗ ಏನು ಮಾಡಬೇಕು ಎಂದೂ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿರುವ ಸುಷ್ಮಾ , ಎಲ್ಲಾ ಭಾರತೀಯ ಭಾಷೆಗಳ ಬಗ್ಗೆ ನನಗೆ ಹೆಮ್ಮ ಇದೆ. ಕೆಲವನ್ನು ನಾನು ಸುಲಲಿತವಾಗಿ ಮಾತನಾಡುತ್ತೇನೆ ಎಂದು ಹೇಳಿ, 1999ರಲ್ಲಿ ಬಳ್ಳಾರಿಯಲ್ಲಿ ಕನ್ನಡ ಮಾತನಾಡಿದ್ದ ವೀಡಿಯೊ ಕ್ಲಿಪ್ ನ್ನು ನೀಡಿ ಕನ್ನಡಿಗರಿಗೆ ಅಚ್ಚರಿಯನ್ನುಂಟು ಮಾಡಿದ್ದಾರೆ.

– ಅಲೋಖಾ

Tags

Related Articles

Close