ಪ್ರಚಲಿತ

ಕಾಂಗ್ರೆಸ್ ಕೈವಾಡವನ್ನು ಬಯಲಿಗೆಳೆದ ಸುಬ್ರಹ್ಮಣಿಯನ್ ಸ್ವಾಮಿ! 2G ಹಗರಣದ ಆರೋಪಿಗಳ ಖುಲಾಸೆಯಲ್ಲಿ ಕಾಂಗ್ರೆಸ್ ನ ಸ್ಲೀಪರ್ ಸೆಲ್ ಗಳ ಪ್ರಭಾವ?!

ಇನ್ನು ಮೂರೇ ಮೂರು ತಿಂಗಳಲ್ಲಿ, ಪ್ರತಿಯೊಂದೂ ಉಲ್ಟಾ ಹೊಡೆಯುತ್ತದೆ! ಈಗ, ಬಿಡುಗಡೆಯಾಗಿದ್ದೇವೆ ಎಂದು ‘ಹಗರಣವನ್ನು ಸಂಭ್ರಮಿಸುತ್ತ’ ಬಿದ್ದಿರುವವರು ಜೈಲಿನ ಕಂಬ ಹಿಡಿದು ಕುಣಿಯ ಬೇಕಾಗುತ್ತದೆ! ಡಾ.ಸುಬ್ರಹ್ಮಣಿಯನ್ ಸ್ವಾಮಿ ಇವತ್ತು ನ್ಯಾಯಾಲಯದ ವಿರುದ್ಧ ಕಿಡಿಕಾರುವುದರ ಜೊತೆಗೆ, ‘ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ನಡೆದ ಹಗರಣಕ್ಕೆ ಸಾಕ್ಷಿಗಳನ್ನು ತರುವುದು ಸುಲಭವಲ್ಲವಾದರೂ, ಇದೇ ಕೈ ನಾಯಕರ ಮಧ್ಯಸ್ಥಿಕೆಯಿಂದ ತನಿಖೆಗೂ ತೊಂದರೆಯಾಗಿದೆ!’ ಎಂದು ಅಬ್ಬರಿಸಿದ್ದಾರೆ!

ಅಲ್ಲದೇ, ಪಿ.ಚಿದಂಬರಮ್ ಬಗೆಗೂ ಕಿಡಿಕಾರಿರುವ ಸ್ವಾಮಿ, ‘ಪಿ.ಚಿದಂಬರಮ್ ಬಂಟರು ಹಣಕಾಸು ಸಚಿವಾಲಯದೊಳ ಹೊಕ್ಕಿದ್ದರ ಪರಿಣಾಮ ಈಗ ಅಪರಾಧಿಗಳು ಸ್ವಚ್ಛಂಧವಾಗಿ ತಿರುಗುವಂತಾಗಿದೆ. ಎಲ್ಲಿಯ ತನಕ ದಕ್ಷ ಅಧಿಕಾರಿಗಳಿಗೆ ಕೊರತೆಯಿರುತ್ತದೆಯೋ, ಅಲ್ಲಿಯ ತನಕವೂ ಈ ಚಮಚಾಗಿರಿ ಮುಂದುವರೆಯುತ್ತವೆ! ಅದಷ್ಟನ್ನೂ ಸರ ಮಾಡುತ್ತೇವೆ! ಅದಾದ ಮೇಲೆ ದಾರಿ ಬಿಟ್ಟು ಹೋದವರಿಗೆಲ್ಲ ದಾರಿಗೆ ತರಿಸುತ್ತೇವೆ!” ಎಂದಿದ್ದಾರೆ.

ಸುಬ್ರಹ್ಮಣಿಯನ್ ಸ್ವಾಮಿ ಅಷ್ಟಕ್ಕೂ ಬಹಿರಂಗಗೊಳಿಸಿದ್ದೇನು ಗೊತ್ತಾ?!

1. ಇವತ್ತು ಎ-ಜಿ ಯಾದ ಮುಕುಲ್ ರೋಹ್ಟಗಿ ತೀರ್ಪನ್ನು ಸ್ವಾಗತಿಸಿದ್ದಾರೆ. ಯಾವಾಗ, ಅವರು ಆ ಸ್ಥಾನಕ್ಕೆ ನೇಮಕಗೊಂಡರೋ, ಅವತ್ತೇ ನಾನು ವಿರೋಧಿಸಿದ್ದೆ ಇಂತಹವರೆಲ್ಲ ಎ-ಜಿಯಂತಹ ಸ್ಥಾನಕ್ಕಿರಬಾರದು ಎಂದು!

2.ನ್ಯಾಯಾಲಯ ಸಂಪೂರ್ಣವಾಗಿ ಸಿಬಿಐ ಸಾಕ್ಷಿಯನ್ನು ತಿರಸ್ಕರಿಸಿದೆ.

3. ಭ್ರಷ್ಟಾಚಾರವೇ ನಮ್ಮ ಚುನಾವಣೆಗಳಲ್ಲಿ ಒಂದು ದೊಡ್ಡ ಸಮಸ್ಯೆ. ಪ್ರಧಾನಿ ಮೋದಿಗೆ 2019 ರ ಚುನಾವಣೆಯ ಸಲುವಾಗಿ ಪತ್ರ ಬರೆದಿದ್ದೆ, ಸಾರ್ವಜನಿಕರೇ ನಮ್ಮ ಕಾರ್ಯಕ್ಕೆ ಲೆಕ್ಕ ಇಡುವಂತಾಗಬೇಕೆಂದು.

4. ಈ ತೀರ್ಪು ನಿಜಕ್ಕೂ ಒಪ್ಪುವಂತಹದ್ದೂ ಅಲ್ಲ, ಮತ್ತು ಆಗಲೇ ಆಗಿರುವ ಮ್ಯಾಚ್ ಫಿಕ್ಸಿಂಗ್!

5. ಈ ಪ್ರಕರಣವನ್ನು ನಾವು ನಮ್ಮ ಸೋಲೆಂದು ಅಂದುಕೊಳ್ಳುವುದಿಲ್ಲ. ಬದಲಿಗೆ, ನಮ್ಮ ನ್ಯಾಯಾಲಯದ ವಕೀಲರು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಶಕ್ತರಾಗಿಲ್ಲ ಮತ್ತು ತಯಾರಿಲ್ಲ ಎಂಬುದಷ್ಟೇ ವಾಸ್ತವ. ಪ್ರಧಾನಿ ಮೋದಿ ಇಂತಹ ಭ್ರಷ್ಟಾಚಾರಿಗಳಿಗೆ ಪಾಠ ಕಲಿಸಲು ಇನ್ನೂ ಮುನ್ನಡೆಯಬೇಕಿದೆ!

6. ಹಣಕಾಸು ಸಚಿವಾಲಯದಲ್ಲಿ ಬಹಳಷ್ಡು ಮಂದಿ ಪಿ.ಚಿದಂಬರಮ್ ರವರ ನಿಷ್ಠರು! ಮೊದಲು, ಹಣಕಾಸು ಸಚಿವಾಲಯವದ ಈಗಿನ ಪರಿಸ್ಥಿತಿಯನ್ನು ಬದಲು ಮಾಡಬೇಕಿದೆ.

7. ಅರವಿಂದ್ ಸುಬ್ರಮನಿಯನ್ ಹಿಂದೆ ಮೋದಿಯವರನ್ನು ‘ಸಾಧಾರಣ ನಾಯಕ’ ಎಂದಿದ್ದರು! ಮತ್ತು, ಅವರೊಬ್ಬ ಮುಖ್ಯವಾದ ಆರ್ಥಿಕ ಸಲಹೆಗಾರರು!

8. ಅದೆಷ್ಟೋ ಅಧಿಕಾರಿಗಳು ಪಿ.ಚಿದಂಬರಮ್ ನನ್ನು ರಕ್ಷಿಸುತ್ತಿದ್ದಾರೆ. ದಕ್ಷ ಅಧಿಕಾರಿಗಳು ನಿಂದನೆಗೊಳಗಾಗುತ್ತಿದ್ದಾರೆ.

9. ಸುಪ್ರೀಮ್ ಕೋರ್ಟ್ ಇದೊಂದು ಅಪರಾಧ ಎನ್ನುತ್ತಿದೆ. ಅಪೀಲಿನಲ್ಲಿ ನಾವು ಗೆದ್ದರೆ ಏನಾಗಬಹುದು?! ಕಾಂಗ್ರೆಸ್ ಗೆ ಅದೆಷ್ಟೋ ದಿನಗಳ ನಂತರ ಒಂದಷ್ಟು ಕ್ಷಣಿಕ ಸುಖವೊಂದು ಸಿಕ್ಕಿದೆ. ಅದಕ್ಕೇ, ಅದನ್ನು ಹಿಡಿದು ಓಲಾಡುತ್ತಿದ್ದಾರೆ.

10. ದಕ್ಷ ಅಧಿಕಾರಿಗಳಿಂದ ಮಾಹಿತಿ ಪಡೆದು ಯುದ್ಧಕ್ಕಿಳಿದರೆ, ಮೂರು ತಿಂಗಳಿನಲ್ಲಿ ಈ ಪ್ರಕರಣವನ್ನು ತಿರುಗಿಸುತ್ತೇವೆ.

11. ನಾವೇನನ್ನೂ ಕಳೆದುಕೊಂಡಿಲ್ಲ. ಮಾಡಬೇಕಿರುವುದು ಇನ್ನು ಭವಿಷ್ಯದ ಕಾರ್ಯತಂತ್ರಗಳನ್ನು! ಈ ತೀರ್ಪು ತೀರಾ ಕೆಳಗಿನ ಮಟ್ಟದ ತೀರ್ಪು. ಸರ್ವೋಚ್ಛ ನ್ಯಾಯಾಲಯವೇ ಹೇಳಿದರೆ, ಅದು ಕಟ್ಟಕೊನೆಯ ತೀರ್ಪಾಗುತ್ತದೆ.

ಮೇಲಿಷ್ಟನ್ನೂ ನೋಡಿದರೆ, ಎ.ರಾಜಾನ ತಂಡ 1.70 ಲಕ್ಷ ಕೋಟಿಗಳನ್ನು ಕೊಳ್ಳೆ ಹೊಡೆದಿರುವುದರಲ್ಲಿ ಸಂಶಯವೇ ಇಲ್ಲ. ಆದರೆ, ಕಾಂಗ್ರೆಸ್ ಮಧ್ಯವಸ್ಥಿಕೆಯಿಂದ ತನಿಖೆಯಲ್ಲಿ ಸಮಸ್ಯೆಯಾಗಿದೆ! ದಕ್ಷ ಅಧಿಕಾರಿಗಳನ್ನು ಕಿತ್ತೊಗೆಯಲಾಗಿದೆ!

2011 ರಲ್ಲಿ ಸಿಬಿಐ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಆರೋಪಿಗಳನ್ನು ಬಂಧಿಸಿತು. ಕೊನೆಗೆ ಏಳು ವರ್ಷಗಳ ನಂತರ ತೀರ್ಪು ನೀಡಲಾಯಿತು. ಎಜಿಒ ವಿನೋದ್ ರೈ, 2g ಹಗರಣದಲ್ಲಿ ಅಕ್ರಮವಾಗಿ ತರಂಗಗಳನ್ನು ಮಾರಲಾಗಿದೆ ಎಂದೂ, 1.70 ಲಕ್ಷ ಕೋಟಿಗಳನ್ನು ದೋಚಿರುವುದಾಗಿಯೂ ಸಾಕ್ಷ್ಿ ಸಮೇತ ವರದಿ ನೀಡಿದ್ದಾರೆ.

ಪ್ರತೀಬಾರಿಯೂ, ಕಾಂಗ್ರೆಸ್ ನ ಮುಖವಾಡಗಳನ್ನು ಬಯಲಿಗೆಳೆತ್ತಿರುವ ಸುಬ್ರಹ್ಮಣಿಯನ್ ಸ್ವಾಮಿ ಈಗ ದೇಶದಲ್ಲಿಯೇ ಅತಿ ದೊಡ್ಡದಾದ ಹಗರಣವಾದ 2g ಯನ್ನು ಬಯಲಿಗೆಳೆಯುತ್ತಿದ್ದಾರೆ. ಇಷ್ಟಕ್ಜೇ, ಮತ್ತೆ ಉರಕೊಂಡಿರುವ ಕಾಂಗ್ರೆಸ್ಸಿಗರು ಇನ್ನೇನು ಮಾಡುತ್ತಾರೋ ನೋಡಬೇಕಿದೆ.

– ಪೃಥು ಅಗ್ನಿಹೋತ್ರಿ

Tags

Related Articles

Close