ಪ್ರಚಲಿತ

ಕಾರ್ಲ್ ಮಾರ್ಕ್ಸ್ ಮತ್ತು ಹಿಟ್ಲರ್ ಗಳೇ ಆವರಿಸಿಕೊಂಡಿದ್ದ ತ್ರಿಪುರಾದ ಪಠ್ಯಪುಸ್ತಕದಲ್ಲಿ ಇನ್ನು ಮುಂದೆ ಏನಿರಲಿದೆ ಗೊತ್ತೇ??

ಸುಮಾರು 25 ವರ್ಷಗಳ ಕಮ್ಯುನಿಸ್ಟರ್ ಆಡಳಿತದಿಂದ ಬೇಸತ್ತಿದ್ದ ತ್ರಿಪುರಾ ಜನರು ಬಿಜೆಪಿ ಗೆ ಭರ್ಜರಿ ಗೆಲುವು ದೊರಕಿಸಿ ಕೊಡುವ ಮೂಲಕ ಈಗಾಗಲೇ ನೂತನ ಇತಿಹಾಸವನ್ನೇ ಸೃಷ್ಟಿ ಮಾಡಿದ್ದರು!! ಎಡಪಂಥೀಯ ಚಿಂತನೆಗಳಿಗೆ ಬೇಸತ್ತಿದ್ದ ತ್ರಿಪುರಾದಲ್ಲಿ ಮೋದಿ ಅಲೆಗೆ ಎಡಪಕ್ಷದ ಭದ್ರಕೋಟೆ ಕುಸಿದಿದ್ದಲ್ಲದೇ, ದೇಶದ ಐಕ್ಯತೆ, ಭಾವೈಕ್ಯತೆ, ಸಂಸ್ಕೃತಿಯ ಪ್ರತಿಬಿಂಬವಾಗಿರುವ ರಾಷ್ಟ್ರಗೀತೆಯನ್ನು ತ್ರಿಪುರಾದ ವಿಧಾನಸಭೆಯಲ್ಲಿ ಮೊಳಗಿಸುವ ಮೂಲಕ ಬಿಜೆಪಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದ್ದರು!! ಆದರೆ ಇದೀಗ ಎಡಪಂಥೀಯ ವಿಚಾರಧಾರೆಗಳನ್ನೇ ಒಳಗೊಂಡ ತ್ರಿಪುರಾದ ಪಠ್ಯಪುಸ್ತಕಗಳಲ್ಲಿ ಬದಲಾವಣೆಯನ್ನು ತರಲು ಇದೀಗ ಮುಂದಾಗಿದೆ!!

ಹೌದು… ಚೀನಾ ಪ್ರೇರಿತ ಎಡ ಪಂಥೀಯ ಸರ್ಕಾರ ಭಾರತದ ತ್ರಿಪುರಾ ರಾಜ್ಯದಲ್ಲಿ ಕಮಾಲ್ ಮಾಡಿತ್ತಲ್ಲದೇ, ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನೇತೃತ್ವದ ಆಡಳಿತದಿಂದಾಗಿ ರಾಜ್ಯವು ಅಭಿವೃದ್ಧಿಯನ್ನೇ ಕಾಣದೆ ರೋಸಿ ಹೋಗಿದ್ದದಂತೂ ಅಕ್ಷರಶಃ ನಿಜ!! ಆದರೆ ಈ ಬಾರಿ ಭಾರತೀಯ ಜನತಾ ಪಕ್ಷ ಭರ್ಜರಿ ಭೇಟೆಯಾಡಿ ಕೆಂಪು ನಾಡಿನಲ್ಲಿ ಕೇಸರಿ ಪತಾಕೆಯನ್ನು ಹಾರಿಸಿದ್ದಲ್ಲದೇ ತ್ರಿಪುರಾ ರಾಜ್ಯದಲ್ಲಿ ಕಮಲ ಅರಳಿದ ನಂತರ ಕೇಂದ್ರ ಸರ್ಕಾರದಲ್ಲಿ ಆಗುವಂತಹ ಬದಲಾವಣೆಗಳು ರಾಜ್ಯದಲ್ಲೂ ನಡೆಯುತ್ತಿದ್ದು, ಅದಕ್ಕೆ ಸಾಕ್ಷಿ ಎನ್ನುವಂತೆ ಚಕ್ಮಾ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಸಚಿವ ಸ್ಥಾನವನ್ನು ಏರಿದ್ದು!!

ಹೌದು…. ಬುಡಕಟ್ಟು ಸಮುದಾಯದವರಿಗೂ ಉತ್ತಮ ಸ್ಥಾನಮಾನವನ್ನು ನೀಡುತ್ತಿರುವ ಮೋದಿ ಸರ್ಕಾರವೂ ಇದೀಗ ಬುಡಗಟ್ಟು ಜನಾಂಗದ ಮಹಿಳೆಯಾದ ಸಂತಾನಾ ಚಕ್ಮಾ ಅವರನ್ನೇ ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಈ ಮೂಲಕ ಸಂತಾನಾ ಚಕ್ಮಾ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸುವ ಮೂಲಕ ಚಕ್ಮಾ ಬುಡಕಟ್ಟು ಸಮುದಾಯದಲ್ಲಿ ಮಹಿಳೆಯೊಬ್ಬರು ಪ್ರಥಮ ಬಾರಿಗೆ ಸಚಿವರಾಗಿ ಆಯ್ಕೆಯಾದ ಇತಿಹಾಸವನ್ನು ಇವರು ಸೃಷ್ಟಿಸಿದ್ದಾರೆ. ಆದರೆ ಇದೀಗ ಎಡಪಂಥೀಯ ಪಠ್ಯ ಪುಸ್ತಕಗಳನ್ನು ಬದಲಾಯಿಸಲು ಚಿಂತನೆನಡೆಸಿರುವ ತ್ರಿಪುರಾದ ಬಿಪ್ಲಬ್ ಕುಮಾರ್ ದೇಬ್ ಸರ್ಕಾರವು ಹೊಸ ಬದಲಾವಣೆಯನ್ನು ತರಲಿದೆ!!

ಮಾಣಿಕ್ ಸರ್ಕಾರದ ವೇಳೆ ತ್ರಿಪುರಾದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಇತಿಹಾಸ ವಿಷಯದಲ್ಲಿ ಹೊಸ ಪಠ್ಯಕ್ರಮ ತರಲಾಗಿದ್ದು, ಅದರಲ್ಲಿ ಭಾರತದ ಇತಿಹಾಸದ ಬಗ್ಗೆ ಒಂದೇ ಒಂದು ಎಳೆಯೂ ಮಾಹಿತಿಯನ್ನೂ ನೀಡದೆ ಭಾರತದ ಇತಿಹಾಸವನ್ನೇ ಮರೆ ಮಾಚಿದ್ದರು. ಬದಲಾಗಿ ಮಕ್ಕಳಿಗೆ ಕಮ್ಯುನಿಷ್ಟ್ ನಾಯಕರ ಕುರಿತು ಬೋಧಿಸಲು ತ್ರಿಪುರಾದಲ್ಲಿ ಅಧಿಕಾರದಲ್ಲಿರುವ ಭಾರತೀಯ ಕಮ್ಯುನಿಷ್ಟ್ ಪಕ್ಷ (ಸಿಪಿಐ) ಮುಂದಾಗಿತ್ತು!!

ಈಶಾನ್ಯ ಭಾಗದ ಪುಟ್ಟ ರಾಜ್ಯವಾಗಿರೋ ತ್ರಿಪುರಾದ 9ನೇ ತರಗತಿಯ ಇತಿಹಾಸ ಪಠ್ಯಕ್ರಮದಲ್ಲಿ ಭಾರತದ ಇತಿಹಾಸದ ಮಹಾನ್ ನಾಯಕರ ಹೆಸರೇ ಇಲ್ಲ. ಮಹಾತ್ಮ ಗಾಂಧಿ ಹೆಸರನ್ನು ಒಮ್ಮೆ ಬಳಸಲಾಗಿದ್ದು, ಅಲ್ಲಿ ಕ್ರಿಕೆಟ್ ಬಗ್ಗೆ ಅವರಿಗಿದ್ದ ಅಭಿಪ್ರಾಯವನ್ನು ತಿಳಿಸಲಾಗಿದೆ ಎಂಬುದು ಬಿಟ್ಟರೆ ಮತ್ಯಾವ ಮಹತ್ವದ ವಿವರವನ್ನೂ ಕೊಟ್ಟಿಲ್ಲ. ಉಳಿದಂತೆ ಭಾರತ ಇತಿಹಾಸದ ಯಾವುದೇ ಐಕಾನ್ ಗಳ ಹೆಸರಿಲ್ಲ. ಅಷ್ಟೇ ಅಲ್ಲದೇ, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರ ಬಗ್ಗೆ ಪಠ್ಯಪುಸ್ತಕದಲ್ಲಿ ಸುಳಿವೇ ಇಲ್ಲದಾಗಿದೆ!! ಹಾಗಾಗಿ ಇದೀಗ 25 ವರ್ಷಗಳ ಕೆಂಪು ರಾಜಕೀಯ ಪಕ್ಷದಲ್ಲಿ ಉಂಟಾಗಿದ್ದ ಅವಾಂತರಗಳನ್ನು ಇದೀಗ ಬಿಪ್ಲಬ್ ಕುಮಾರ್ ದೇಬ್ ಸರ್ಕಾರವು ಸರಿ ಪಡಿಸಲು ಮುಂದಾಗಿದೆ!!

“ಎಡಪಂಥೀಯ ವಿಚಾರಧಾರೆಗಳನ್ನೇ ಒಳಗೊಂಡ ತ್ರಿಪುರಾದ ಪಠ್ಯಪುಸ್ತಕಗಳನ್ನು ಬದಲಾವಣೆ ಮಾಡುತ್ತಿದ್ದೇವೆ. ಇದಕ್ಕಾಗಿ ಸಮಿತಿಯನ್ನು ರಚಿಸಿ ಅದರ ಶಿಫಾರಸ್ಸಿನಂತೆ ಬದಲಾವಣೆಗಳನ್ನು ತರಲಾಗುವುದು” ಎಂದು ಸಿಎಂ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದಾರೆ!! ಅಷ್ಟೇ ಅಲ್ಲದೇ, “ಪ್ರಸ್ತುತ ತ್ರಿಪುರಾ ಪಠ್ಯಪುಸ್ತಕಗಳು ಮಾಕ್ರ್ಸ್‍ವಾದವನ್ನು ಪ್ರಚಾರಪಡಿಸುತ್ತಿವೆ. ಮಾವೋ, ರಷ್ಯಾ ಕ್ರಾಂತಿ, ಫ್ರೆಂಚ್ ಕ್ರಾಂತಿ, ನಾಝಿಸಂನ್ನು ಒಳಗೊಂಡಿರುವ ಈ ಪುಸ್ತಕಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆಯಾಗಲಿ ಅಥವಾ ಹಿಂದೂ ರಾಜರ ಬಗ್ಗೆಯಾಗಲಿ ಉಲ್ಲೇಖಗಳಿಲ್ಲ. ಮಹಾತ್ಮ ಗಾಂಧಿಯವರ ಬಗೆಗಿನ ಪಾಠವನ್ನು ತೆಗೆದು ಹಾಕಲಾಗಿದೆ. ಸುಭಾಷ್ ಚಂದ್ರ ಬೋಸ್, ರಾಣೀ ಲಕ್ಷ್ಮೀ ಬಾಯ್ ಅವರ ಬಗ್ಗೆಯೂ ಪಾಠಗಳಿಲ್ಲ” ಎಂದು ದೇಬ್ ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಈ ಕುರಿತು ಮಾತಾನಾಡಿರುವ ಅವರು, “ಸಿಎಂ ಕಛೇರಿಗೆ ನಾನು ಮೊದಲು ಕಾಲಿಟ್ಟಾಗ ಅಲ್ಲಿ ರಾಷ್ಟ್ರ ಧ್ವಜವೇ ಇರಲಿಲ್ಲ. ಮಾಜಿ ಸಿಎಂ ಮಾಣಿಕ್ ಸರ್ಕಾರ ತಮ್ಮ ಕಛೇರಿಯಲ್ಲಿ ತಿರಂಗವನ್ನೇ ಇಟ್ಟಿಲ್ಲ. ನಾನು ಮೊದಲ ಬಾರಿಗೆ ಅದನ್ನು ಅಳವಡಿಸಿಕೊಂಡಿದ್ದೇನೆ” ಎಂದೂ ಹೇಳಿದ್ದಾರೆ!!

ಒಟ್ಟಿನಲ್ಲಿ ಇದೇ ಕಮ್ಯುನಿಸ್ಟರ ನಾಡಿನಲ್ಲಿ, ಮೊದಲ ಬಾರಿಗೆ ರಾಷ್ಟ್ರಗೀತೆಯನ್ನು ತ್ರಿಪುರಾದ ವಿಧಾನಸಬೆಯಲ್ಲಿ ಮೊಳಗಿಸುವ ಮೂಲಕ ಇತಿಹಾಸ ಸೃಷ್ಟಿಸಿರುವ ಬಿಪ್ಲಬ್ ಕುಮಾರ್ ದೇಬ್ ಸರ್ಕಾರವು, ಈಗಾಗಲೇ ಮಕ್ಕಳ ಪಠ್ಯಪುಸ್ತಕದಲ್ಲಿದ್ದ ಭಾರತ ಇತಿಹಾಸದ ಮಹಾನ್ ನಾಯಕರ ಬದಲಿಗೆ ಕಾರ್ಲ್ ಮಾರ್ಕ್ಸ್ ಮತ್ತು ಹಿಟ್ಲರ್ ಬಗ್ಗೆ ಬೋಧನೆ ಮಾಡುವ ಮೂಲಕ ಕಮ್ಯುನಿಸ್ಟ್ ಸಿದ್ಧಾಂತವನ್ನು ಮುಂದಿನ ಪೀಳಿಗೆಯವರಲ್ಲಿ ಬಿತ್ತುವ ಕಾರ್ಯ ನಡೆಸುತ್ತಿದ್ದ ಕಮ್ಯುನಿಸ್ಟರ ಸಿದ್ಧಾಂತಗಳಿಗೆ ಬಿಪ್ಲಬ್ ಸರ್ಕಾರವು ಪೂರ್ಣ ವಿರಾಮ ಇಡಲಿರುವುದಂತೂ ಅಕ್ಷರಶಃ ನಿಜ.

ಮೂಲ:http://news13.in/archives/100448

– ಅಲೋಖಾ

Tags

Related Articles

Close