ಪ್ರಚಲಿತ

ಕುಮಾರಸ್ವಾಮಿ-ರಾಧಿಕ ಬೇರೆ ಬೇರೆ ಆಗಿದ್ದು ನಿಜಾನಾ? ಇಂತಹದ್ದೆಲ್ಲಾ ಖತರ್ನಾಕ್ ಐಡಿಯಾಗಳು ಜೆಡಿಎಸ್‍ಗಲ್ಲದೆ ಬೇರೆ ಯಾರಿಗೂ ಬರುವುದಕ್ಕೆ ಸಾಧ್ಯವೇ ಇಲ್ಲ..

ಇಂಥದೆಲ್ಲಾ ಖತರ್ನಾಕ್ ಐಡಿಯಾಗಳು ಜೆಡಿಎಸ್‍ಗಲ್ಲದೆ ಬೇರ್ಯಾರಿಗೂ ಬರ್ಲಿಕ್ಕೇ ಸಾಧ್ಯವಿಲ್ಲ. ಈ ಖತರ್ನಾಕ್ ಐಡಿಯಾದಲ್ಲಿ ಇಡೀ ಕುಮಾರಸ್ವಾಮಿ ಮಾಸ್ಟರ್ ಮೈಂಡ್ ಕೆಲಸ ಮಾಡಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಎಷ್ಟಾದ್ರೂ ದೇವೇಗೌಡರ ಪುತ್ರ ತಾನೇ… ತಾನಂತೂ ಅಧಿಕಾರ ಹಿಡಿಯೋದಿಲ್ಲ, ಬೇರೆಯವರನ್ನೂ ನೆಮ್ಮದಿಯಾಗಿರಲೂ ಬಿಡೋಲ್ಲ ಈ ದೇವೇಗೌಡ..! ಇಂಥದ್ದೆಲ್ಲಾ ಐಡಿಯಾ ಹೇಗೆ ಬರುತ್ತದೋ ಆ ದೇವೇಗೌಡ್ರಿಗೆ ಗೊತ್ತು… ಇಂಥಹಾ ಖತರ್ನಾಕ್ ಐಡಿಯಾದ ಹಿಂದೆ ಕುಮಾರ ಸ್ವಾಮಿಯವರ ರಾಜಕೀಯ ಜೀವನವೇ ಅಡಗಿದೆ ಎನ್ನುವುದನ್ನು ಯಾರೂ ಅರ್ಥ ಮಾಡಿಕೊಂಡಿರಲು ಸಾಧ್ಯವಿಲ್ಲ…

ಕುಮಾರ ಸ್ವಾಮಿಯ ಇನ್ನೊಂದು ಹೆಂಡತಿ ಯಾರು ಎಂದು ಕೇಳಿದ್ರೆ ಯಾರೇ ಆಗ್ಲಿ ತಟ್ಟನೆ ಅದು ಚಿತ್ರನಟಿ ರಾಧಿಕಾ ಎಂದು ಹೇಳಿಬಿಡ್ತಾರೆ. ರಾಧಿಕಾ ಕುಮಾರಸ್ವಾಮಿಯ ಎರಡನೇ ಹೆಂಡ್ತಿ ಎಂದು ಇಡೀ ಜಗತ್ತಿಗೇ ಗೊತ್ತಿದೆ. ಈ ಕುಮಾರಸ್ವಾಮಿಯಿಂದಾಗಿಯೇ ರಾಧಿಕಾಳಿಗೆ ಒಂದು ಮಗು ಹುಟ್ಟಿದ್ದು ಅದರ ಪಪ್ಪ ಕುಮಾರ ಸ್ವಾಮಿ ಎಂದು ಇಡೀ ಲೋಕಕ್ಕೇ ಜಹಜ್ಜಗ್ಗೀರು ಆಗಿದೆ. ಕುಮಾರ ಸ್ವಾಮಿ ಲೈಫಲ್ಲಿ ಪತ್ನಿ ಇದ್ದಾಗಲೇ ಮತ್ತೊಬ್ಬಳ ಜೊತೆ ಅಕ್ರಮ ಸಂಬಂಧ ಇರಿಸಿ ಅವಳಿಗೆ ಮಗು ಕರುಣಿಸುವುದು ಕಾನೂನೂ ರೀತಿಯಲ್ಲಿ ಅದೊಂದು ತಪ್ಪು. ಜೊತೆಗೆ ಇದನ್ನು ನೈತಿಕತೆ ಎಂದು ಕರೆಯಲು ಸಾಧ್ಯವಿಲ್ಲ. ಕುಮಾರ ಸ್ವಾಮಿ ತಾನೊಬ್ಬ ಸೊಬಗ ಎಂದು ತೋರಿಸಲು ಎಷ್ಟೇ ಪ್ರಯತ್ನಿಸಿದರೂ ಇವರ ಅಕ್ರಮ ಸಂಬಂಧದ ಪುರಾಣವನ್ನು ಬಚ್ಚಿಡಲು ಸಾಧ್ಯವಿಲ್ಲ. ಒಂದು ವೇಳೆ ಚುನಾವಣೆಗೆ ಹೋದಾಗಲೂ ಈ ಅಕ್ರಮ ಸಂಬಂಧ ಕುಮಾರ ಸ್ವಾಮಿಯ ರಾಜಕೀಯ ಬದುಕಿಗೆ ಕೊಳ್ಳಿ ಇಡಬಹುದು.

ಇನ್ನು ಈ ರಾಧಿಕಾ ವಿಷ್ಯದಲ್ಲಿ ನೋಡೋದಾದ್ರೆ ಅವರು ಕುಮಾರಸ್ವಾಮಿಯೇ ತನ್ನ ಗಂಡ ಎಂದು ಎಂದೋ ಒಪ್ಪಿಕೊಂಡುಬಿಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲೂ ಹೇಳಿಕೆ ನೀಡಿದ್ದಾರೆ. ಆವಾಗೊಮ್ಮೆ ಈವಾಗೊಮ್ಮೆ ಬರ್ತಾ ಇರ್ತಾರೆ… ಮಗು ಜೊತೆ ಆಡಿಕೊಂಡು ಹೋಗ್ತಾರೆ ಎನ್ನುವುದನ್ನು ಅವರು ಎಂದೋ ಸಮಾಜದ ಮುಂದೆ ತಿಳಿಸಿಬಿಟ್ಟಿದ್ದಾರೆ. ಕುಮಾರಸ್ವಾಮಿ ಆಕೆಯನ್ನು ಮದುವೆಯಾಗಿ ಗುಟ್ಟಾಗಿ ಇಟ್ಟುಕೊಂಡಿರುವುದು ಎಂದೋ ಬೆಳಕಿಗೆ ಬಂದ ಸತ್ಯ. ಮದುವೆಯಾದ ಮೇಲೆ ಒಬ್ಬಳು ಹೆಣ್ಣನ್ನು ನಡುನೀರಲ್ಲಿ ಬಿಟ್ರೆ ಆತನನ್ನು ಗಂಡು ಎನ್ನಲು ಸಾಧ್ಯವಿಲ್ಲ. ಅಕ್ರಮವೋ ಸಕ್ರಮವೋ ಎರಡೂ ಪತ್ನಿಯರ ಜೊತೆಗೂ ಕುಮಾರಣ್ಣ ಅಜೆಸ್ಟ್ ಮಾಡ್ಕೊಂಡು ಜೀವ ಸಾಗಿಸ್ತಾ ಇದ್ದಾರೆ… ಇರ್ಲಿ ಬಿಡಿ ಅದು ಅವರ ಪರ್ಸನಲ್ ವಿಷ್ಯ…

ಆದರೆ ಲೋಕದ ಜನರಿಗೆ ಒಂದು ವಿಷ್ಯ ಗೊತ್ತಾಗ್‍ಬೇಕು.

ಕುಮಾರಸ್ವಾಮಿಯ ಲೈಫಲ್ಲಿ ರಾಧಿಕ ಎಂದೋ ದೂರವಾಗಿ ಉಳಿದುಕೊಂಡಿದ್ದು ತನ್ನಷ್ಟಕ್ಕೆ ಜೀವನ ನಡೆಸುತ್ತಿದ್ದಾರೆ ಎಂಬ ವಿಚಾರ ಲೋಕದ ಜನರಿಗೆ ಗೊತ್ತಾಗಬೇಕು. ಕುಮಾರ ಸ್ವಾಮಿ ಹಾಗೂ ರಾಧಿಕಾ ಮಧ್ಯೆ ಇದೀಗ ಏನೂ ಸಂಬಂಧವಿಲ್ಲ, ಅವರು ಅವರಷ್ಟಕ್ಕೆ ಇವರು ಇವರಷ್ಟಕ್ಕೆ ಬದುಕಿಕೊಂಡಿದ್ದಾರೆ. ಅಲ್ಲದೆ ಜನರು ಕುಮಾರ ಸ್ವಾಮಿಯ ಎರಡನೇ ಹೆಂಡ್ತಿಯ ವಿಷ್ಯ ಮರೆತುಬಿಡ್ಬೇಕು… ಇಂತಹಾ ಕಣ್ಣುಕಟ್ಟು ಮಾಡಲೆಂದೇ ಈ ಖತರ್ನಾಕ್ ಐಡಿಯಾದ ಹಿಂದಿರುವ ಭರ್ಜರಿ ಪ್ಲಾನ್ ಆಗಿರುವ ಸಾಧ್ಯತೆ ಇದೆ.

ಅಂತಹಾ ಖತರ್ನಾಕ್ ಐಡಿಯಾ ಏನು ಗೊತ್ತೇ…?

ನಟಿ ರಾಧಿಕಾ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಗುಮ್ಮ….

ಹೌದು ಸ್ವತಃ ರಾಧಿಕಾ ಅವರೇ ಮುಂದಾಗಿ ಕಾಂಗ್ರೆಸ್ ಸೇರುತ್ತೇನೆ ಎಂದು ಮುಂದೆ ಬಂದಿದ್ದಾರೆ. ಸ್ವತಹ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂದೇಶ ಕಳುಹಿಸಿ ತಾನು ಕಾಂಗ್ರೆಸ್ ಸೇರಲು ಸಿದ್ಧ ಎಂದುಬಿಟ್ಟಿದ್ದಾರೆ. ಈ ಐಡಿಯಾದ ಹಿಂದಿದೆ ಕುಮಾರಸ್ವಾಮಿಯ ಹಲವಾರು ರಾಜಕೀಯ ಹಾಗೂ ವೈಯಕ್ತಿಕ ಲೆಕ್ಕಾಚಾರವೂ ಇದೆ. ತನಗೂ ರಾಧಿಕಾಳಿಗೂ ಯಾವ ಸಂಬಂಧವೂ ಇಲ್ಲ ಎನ್ನುವುದನ್ನು ತೋರಿಸಿಕೊಡಲು ಇದೊಂದು ನಾಟಕ ಅಷ್ಟೆ. ನಿಜವಾಗಿಯೂ ಕಾಂಗ್ರೆಸ್‍ಗೆ ಸೇರ್ತಾರೋ, ಸೇರುವುದಿಲ್ಲವೋ ಗೊತ್ತಿಲ್ಲ. ಒಟ್ಟಾರೆ ಸೇರ್ತೀನಿ ಎನ್ನುವ ಗುಮ್ಮವೊಂದನ್ನು ಹರಿಯಬಿಟ್ಟು ತನಗೂ ಕುಮಾರಸ್ವಾಮಿಗೂ ಸಂಬಂಧ ಮುರಿದುಬಿದ್ದಿದೆ ಎಂದು ತೋರಿಸಿಕೊಡಲೆಂದು ರಾಧಿಕಾ ಮಾಡುವ ಡ್ರಾಮಾ ಆಗಿರುವ ಸಾಧ್ಯತೆ ಇದೆ.

ಕುಮಾರಣ್ಣ ಕೈಕೊಟ್ಟಂತೆ ಆಗಬಾರದು ಬದಲಿಗೆ ರಾಧಿಕಾಳೇ ಕುಮಾರಣ್ಣನನ್ನು ದೂರ ಮಾಡಿಕೊಂಡು ತನ್ನಷ್ಟಕ್ಕೆ ಜೀವನ ಮಾಡಿಕೊಂಡಿದ್ದಾಳೆ ಎನ್ನುವ ವಿಚಾರ ಈ ಲೋಕಕ್ಕೆ ಗೊತ್ತಾಗಬೇಕು. ಒಂದು ವೇಳೆ ಕುಮಾರ ಸ್ವಾಮಿಯ ಜೆಡಿಎಸ್ ಪಕ್ಷಕ್ಕೆ ಸೇರಿಬಿಟ್ಟರೆ, ಅದೇ ಪಕ್ಷದಿಂದ ಸ್ಪರ್ಧಿಸಿದರೆ ಜನ ಏನಂದುಬಿಟ್ಟಾರು ಎನ್ನುವ ಪಕ್ಕಾ ರಾಜಕೀಯ ಲೆಕ್ಕಾಚಾರದೊಂದಿಗೆ ರಾಧಿಕಾಳನ್ನು ಕಾಂಗ್ರೆಸ್‍ಗೆ ಸೇರಿಸುವ ಹೈಡ್ರಾಮಾ ನಡೆಸಿಬಿಟ್ಟರು. ಅಸಲಿಗೆ ರಾಧಿಕಾ ಕಾಂಗ್ರೆಸ್‍ಗೆ ಸೇರ್ತಾರಾ ಇಲ್ವಾ ಎನ್ನೋದು ಬೇರೆ ವಿಷಯ. ಕಾಂಗ್ರೆಸ್‍ನಲ್ಲಿದ್ದುಕೊಂಡು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಜೊತೆಗೆ ಎಲ್ಲವೂ ಸರಿ ಇಲ್ಲ, ಇದೆಲ್ಲಾ ಮುಗಿದ ಅಧ್ಯಾಯ ಎಂದು ತೋರ್ಪಡಿಸಲು ಮಾಡಿದ ಪಕ್ಕಾ ಪಿತೂರಿ ಎನ್ನುವುದು ರಾಜಕೀಯ ಲೆಕ್ಕಾಚಾರ ಹೊಂದಿರುವವರಿಗೆ ಅರ್ಥವಾಗಬಹುದು.. ಅಸಲಿಗೆ ಕುಮಾರ ಸ್ವಾಮಿ ಹಾಗೂ ರಾಧಿಕಾ ಎಂದಿನಂತೆ ಚೆನ್ನಾಗಿಯೇ ಇದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ತಾ ಇದ್ದಾರೆ.

ರಾಧಿಕಾ ಕಾಂಗ್ರೆಸ್‍ಗೆ ಸೇರೋ ವಿಷ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏನಂದುಬಿಟ್ಟರು ಗೊತ್ತೇ…. ಈ ವಿಷ್ಯದಲ್ಲೆಲ್ಲಾ ಸಿದ್ದು ತಲೆಓಡಿಸೋದ್ರಲ್ಲಿ ಭಾರೀ ಎಕ್ಸ್‍ಪರ್ಟು..

ಈಗ ರಾಧಿಕಾ ಕಾಂಗ್ರೆಸ್‍ಗೆ ಬರೋದು ಬೇಡ.. ಸ್ವಲ್ಪ ದಿನಗಳ ಗ್ಯಾಪ್‍ನ ಬಳಿಕ ರಾಧಿಕಾಳನ್ನು ಕಾಂಗ್ರೆಸ್‍ಗೆ ಸೇರಿಸ್ಬೇಕಾ ಬೇಡ್ವಾ ಎನ್ನೋದನ್ನು ನಿರ್ಧಾರ ಮಾಡ್ತೀವಿ. ಈಗ ರಾಧಿಕಾ ಕಾಂಗ್ರೆಸ್‍ಗೆ ಬಂದ್ರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುವುದನ್ನು ಸಿದ್ದು ಹೇಳಿಬಿಟ್ಟಿದ್ದಾರೆ.

ಸಿದ್ದುಗೆ ಈಗಲೇ ಚೆನ್ನಾಗಿ ಅರ್ಥವಾಗಿ ಬಿಟ್ಟಿದೆ. ರಾಧಿಕಾ ಕಾಂಗ್ರೆಸ್‍ಗೆ ಬಂದ್ರೆ ಏನೆಲ್ಲಾ ಅಪಾಯವಿದೆ? ಕುಮಾರಸ್ವಾಮಿಯ ಲೆಕ್ಕಾಚಾರವೇನು? ಈಕೆಯಿಂದಾಗ ಪಕ್ಷದಲ್ಲಿ ಏನಾಗಬಹುದು? ಎಲ್ಲಾ ಅರ್ಥಮಾಡಿಕೊಂಡವರಂತೆ ಸಿದ್ದು ರಾಧಿಕಾ ಈಗ ಬರುವುದು ಬೇಡ ಎಂದು ರಾಧಿಕಾಳನ್ನು ಬರದಂತೆ ತಡೆದುಬಿಟ್ಟಿದ್ದಾರೆ. ಇಲ್ಲವಾದರೆ ನಟಿಯೊಬ್ಬಳು ಕಾಂಗ್ರೆಸ್‍ಗೆ ಬರ್ತೇನೆ ಎಂದಾಗ ರೆಡ್‍ಕಾರ್ಪೆಟ್ ಹಾಕಿ ಸ್ವಾಗತಿಸ್ತಾ ಇದ್ದರು…

ರಾಧಿಕಾ ಕಾಂಗ್ರೆಸ್‍ಗೆ ಬಂದ್ರೆ ಕಾಂಗ್ರೆಸ್‍ಗೆ ಲಾಭವಾಗುವುದಕ್ಕಿಂತ ಜೆಡಿಎಸ್‍ಗೆ ಲಾಭವಾಗುವುದೇ ಜಾಸ್ತಿ. ಮುಖ್ಯವಾಗಿ ಕುಮಾರಸ್ವಾಮಿಗಂತೂ ತುಂಬಾ ಲಾಭವಿದೆ. ಈ ಎಲ್ಲಾ ಲೆಕ್ಕಾಚಾರದೊಂದಿಗೆ ರಾಧಿಕಾ ಅವರನ್ನು ಕಾಂಗ್ರೆಸ್‍ಗೆ ಸೇರುವಂತೆ ಮಾಡಲಾಗ್ತಾ ಇದೆ ಅಷ್ಟೆ…

ಚೇಕಿತಾನ

Tags

Related Articles

Close