ಪ್ರಚಲಿತ

ಕೇಂದ್ರದ ಮೋದಿ ಸರಕಾರಕ್ಕೆ ಸುಪ್ರಿಂ ಕೋರ್ಟ್‍ನಿಂದ ಬಹು ಪರಾಕ್!! ರಾಷ್ಟ್ರ ಗೀತೆ ವಿಚಾರದಲ್ಲಿ ಕೇಂದ್ರಕ್ಕೆ ಸುಪ್ರಿಂ ಹೇಳಿದ್ದೇನು ಗೊತ್ತಾ?!

ಚಿತ್ರಮಂದಿರಗಳಲ್ಲಿ ಸಿನೆಮಾ ಪ್ರಾರಂಭವಾಗುವ ಮೊದಲು ರಾಷ್ಟ್ರಗೀತೆ ಪ್ರಸಾರಗೊಳ್ಳುವ ವೇಳೆ ಕಡ್ಡಾಯವಾಗಿ ಚಿತ್ರಮಂದಿರದಲ್ಲಿ ಇರುವವರು ಎದ್ದುನಿಲ್ಲಲೇಬೇಕು ಎಂದು ಕೇಂದ್ರ ಸರಕಾರ ನಿಯಮ‌ ಜಾರಿಗೊಳಿಸಿತ್ತು.
ಆದರೆ ಈ ನಿಯಮಕ್ಕೆ ದೇಶದ್ರೋಹಿಗಳ ಕೆಲ ಪಡೆ ವಿರೋಧ ವ್ಯಕ್ತಪಡಿಸಿದ್ದರು.

2016ರಲ್ಲಿ ಕೇಂದ್ರ ಸರಕಾರವು ಈ ನಿಯಮವನ್ನು ಜಾರಿಗೊಳಿಸಿತ್ತು.ಈ ‌ನಿಯಮದ ಪ್ರಕಾರ ರಾಷ್ಟ್ರಗೀತೆ ಪ್ರಸಾರಗೊಳ್ಳುವ ವೇಳೆ ಪ್ರತಿಯೊಬ್ಬರು ಕಡ್ಡಾಯವಾಗಿ ಎದ್ದುನಿಲ್ಲಲೇಬೇಕು ಎಂದು ಹೇಳಲಾಗಿತ್ತು.

ಈ ಕಾರಣಕ್ಕೆ ಅಸಾದುದ್ದಿನ್ ಓವೈಸಿ ಸೇರಿದಂತೆ ಅನೇಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದರು.’ರಾಷ್ಟ್ರಗೀತೆಗೆ ಎದ್ದುನಿಲ್ಲುವುದು ಅವರವರ ಅನುಕೂಲಕ್ಕೆ ಬಿಟ್ಟಿದ್ದು’ ಎಂದು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದರು.
ಕೇಂದ್ರ ಸರಕಾರದ ಈ ನಿಯಮಕ್ಕೆ ಕಾಂಗ್ರೆಸ್ ಕೂಡ ವಿರೋಧ ವ್ಯಕ್ತಪಡಿಸಿತು.

ಸಿನಿಮ ಟಿಕೇಟ್ ಗಾಗಿ ಗಂಟೆಕಟ್ಟಲೆ ಕ್ಯೂ ನಿಲ್ಲಲು ಸಾಮಾರ್ಥ್ಯವಿರುವ ಜನರಿಗೆ ಒಂದು ನಿಮಿಷ ‘ರಾಷ್ಟ್ರಗೀತೆ’ಗೆ ಗೌರವ ಕೊಡಲು ನಿಲ್ಲಲು ಕಷ್ಷವೆಂದರೆ ರಾಷ್ಟ್ರದ ಬಗ್ಗೆ ರಾಷ್ಟ್ರಗೀತೆಯ ಬಗ್ಗೆ ತಮಗಿರುವ ಗೌರವವನ್ನು ಕಾಣಬಹುದು.

ಇವರೆಲ್ಲರೂ ವಿರೋಧಿಸಲು ಕಾರಣ ಇಷ್ಟೇ, “ನಿಯಮವನ್ನು ಜಾರಿಗೆ ತಂದಿರುವುದು ಮೋದಿ ಸರಕಾರ”. ಇದರಿಂದಲೇ ರಾಷ್ಟ್ರಕ್ಕೆ ಅವಮಾನವಾಗುವ ರೀತಿಯಲ್ಲಿ ಹೇಳಿಕೆ ನೀಡುತ್ತಾ ಬಂದಿದ್ದಾರೆ.


ಓವೈಸಿ ತನ್ನ ಪ್ರಚಾರಕ್ಕಾಗಿ ದೇಶದ್ರೋಹದ ಹೇಳಿಕೆ ನೀಡುತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೂ ಆತನ ಹೇಳಿಕೆಗೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಬೆಂಬಲ ನೀಡಿದ್ದು ಕಾಂಗ್ರೆಸ್ ನ ಮನಸ್ಥಿತಿಯನ್ನು ತೋರಿಸುತ್ತದೆ.

ಈ ನಿಯಮದ ವಿರುದ್ಧ ಕೋರ್ಟ್ ಗೆ ಮೊರೆ ಹೋಗಿದ್ದ ಕೆಲವರು ಕೇಂದ್ರದ ವಿರುದ್ಧ ಮಂಡನೆ ನೀಡಿದ್ದರು.
ಆದರೆ ಇದೀಗ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡಿದ ಪ್ರಕಾರ ‘ಈ ನಿಯಮಾವಳಿಗಳನ್ನು ಕೇಂದ್ರಕ್ಕೆ ಬಿಟ್ಟಿದೆ’ ಎಂದಿದೆ.

ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಈ ಮರುಪರಿಶೀಲನೆ ನಿಯಮಾವಳಿಯ ಎಲ್ಲಾ ಆದೇಶಗಳು ಕೇಂದ್ರದ ಪ್ರಕಾರವೇ ಇರುತ್ತದೆ ಮತ್ತು ನಿಯಮಗಳ ಮರುಪರಿಶೀಲನೆಯೂ ಕೇಂದ್ರಕ್ಕೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್ ನ ಈ ತೀರ್ಪಿನಿಂದಾಗಿ ಮೋದಿ ಸರ್ಕಾರ ಮತ್ತೊಮ್ಮೆ‌ ಗೆಲುವು ಸಾಧಿಸಿದೆ.

ರಾಷ್ಟ್ರೀಯತೆಯ ವಿಚಾರ ಬಂದಾಗ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಮೋದಿ ಸರ್ಕಾರದ ಕೆಲವೊಂದು ನಿರ್ಧಾರಗಳಿಗೆ ಕಂಗಾಲಾಗಿರುವ ದೇಶದ್ರೋಹಿಗಳಿಗೆ ಸಹಿಸಲಾರದ ಸಂಕಟ ಎಂಬಂತಾಗಿದೆ.

ಇದೇ ಕಾರಣದಿಂದ ಪದೇ ಪದೇ ಮೋದಿ ಸರ್ಕಾರದ ವಿರುದ್ದ ಪ್ರತಿಭಟಿಸುತ್ತಾ ಬಂದಿದ್ದಾರೆ.
ಪ್ರತಿ ಬಾರಿಯೂ ತಮ್ಮ‌ ದೇಶದ್ರೋಹದ ಮುಖವಾಡ ಬಯಲಾಗುತ್ತಿದ್ದರು ‘ಇಂಗು ಇಂದ ಮಂಗನಂತಾಗಿರುವ’ ವಿರೋಧಿ ಪಡೆಗಳು ಪೇಚೆಗೆ ಸಿಲುಕಿವೆ.

ಯಾಕೆಂದರೆ ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಮೋದಿಯ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದ್ದು ವಿರೋಧಿಗಳಿಗೆಲ್ಲಾ ಸಹಿಸಲಾರದ ತುತ್ತು ಬಾಯಲ್ಲಿ ಇಟ್ಟುಕೊಂಡಂತೆ ವರ್ತಿಸುತ್ತಿದೆ.

ಮೋದಿ ಸರಕಾರವನ್ನು ವಿರೋಧಿಸುವ ಬರದಲ್ಲಿ ದೇಶದ್ರೋಹದ ಹೇಳಿಕೆ ನೀಡಿ ಅನೇಕ ಬಾರಿ ವಿರೋಧಿಗಳು ಬಹಿರಂಗವಾಗಿ ಮರ್ಯಾದೆ ಕಳೆದುಕೊಂಡಾಯಿತು.
ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿ ಸಿಕ್ಕಿಬಿದ್ದಿದ್ದಾಯಿತು.

ಮೋದಿ ಸರಕಾರವನ್ನು ಟೀಕಿಸುವುದರಿಂದಲೇ ಇವರು ಸುದ್ದಿಯಲ್ಲಿರುತ್ತಾರೆ ಎಂಬುದು ಗಮನಾರ್ಹ. ಅದಕ್ಕಾಗಿಯೇ ಇವರು ದೇಶಕ್ಕೆ ಕಂಟಕವಾಗಿರುವಂತಹ ಕೆಲವೊಂದು ಸಂಘಟನೆಗಳ‌ ಜೊತೆ ನಂಟು ಹೊಂದಿರುವುದು ಮತ್ತು ದೇಶದ್ರೋಹಿಗಳಿಗೆ ಬೆಂಬಲವಾಗಿ ನಿಂತಿರುವುದು.

ಅಧಿಕಾರದ ಆಸೆಯಿಂದ ಯಾವ ಮಟ್ಟಕ್ಕೂ ಇಳಿಯಲು ತಯಾರಿರುವಂತಹ ಓವೈಸಿ ಕಾಂಗ್ರೆಸ್ ನಂತಹ ವ್ಯಕ್ತಿಗಳಿಂದಲೇ ಭಾರತದಲ್ಲಿ ಇಂದು ಕೆಲವೊಂದು ಉಗ್ರ ಕ್ರತ್ಯ ಅಥವಾ ದುಷ್ಕ್ರತ್ಯಗಳು ನಡೆಯುತ್ತಿರುವುದು.

ಕೆಲವೊಂದು ಬಾರಿ ಇಂತಹ ಘಟನೆಗಳು ನಡೆದಾಗ ನೇರವಾಗಿ ಇವರುಗಳ ‘ಕೈ’ವಾಡವಿರುವುದು ಸಾಬೀತಾಗಿದೆ.
ಆದರೂ ಪಟ್ಟದ ಆಸೆಗಾಗಿ ದೇಶವನ್ನೇ ಬಲಿಕೊಡಲು ಹೊರಟಿರುವ ಕಾಂಗ್ರೆಸ್ ಮತ್ತು ಓವೈಸಿಯಂತಹ ಕೆಲವೊಂದು ಕಪಟ ಕೈಗಳು ಯಾವುದೇ ಕೆಳ ಮಟ್ಟಕ್ಕೂ ಇಳಿಯಲು ಸಿದ್ದವಾಗಿದೆ ಎಂಬೂದಂತೂ ಸ್ಪಷ್ಟ.

ಆದರೆ ಇದೀಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ದೇಶದ್ರೋಹಿಗಳಿಗೆ ವಿರುದ್ಧವಾಗಿ ಬಂದಿರುವುದರಿಂದ ಮತ್ತೊಮ್ಮೆ ಮೋದಿ ಸರಕಾರದ ವಿರುದ್ದ ನಡೆಸಿದ ಸಂಚು ವಿಫಲವಾಗಿದೆ. ಹೀಗಾಗಿಯೇ ಮೋದಿ ಸರಕಾರಕ್ಕೆ ಮತ್ತೊಮ್ಮೆ ಜಯ ದೊರಕಿದಂತಾಗಿದೆ.

-ಅರ್ಜುನ್

Tags

Related Articles

Close