ಪ್ರಚಲಿತ

ಕೈಲಾಸ ಮಂದಿರವನ್ನು ಏಳು ಅದ್ಭುತಗಳಲ್ಲಿ ಸೇರಿಸುವುದನ್ನು ಬಿಟ್ಟು ತಾಜ್ ಮಹಲ್ ನನ್ನು ಸೇರಿಸಿದ್ದರ ಹಿಂದಿನ ರಹಸ್ಯ ಏನು ಗೊತ್ತೇ?!

ನಂಬುತ್ತೀರಾ?! ತಾಜ್ ಮಹಲ್ ಗಿಂತ ಅದ್ಭುತವಾದದ್ದು ಭಾರತದಲ್ಲಿದೆ ಎಂದರೆ?! ವಿಜ್ಞಾನಕ್ಕೂ ಸಹ ಈ ದೇವಾಲಯದ ರಹಸ್ಯವನ್ನು ಭೇಧಿಸಲಿಕ್ಕಾಗಲಿಲ್ಲ! ಯಾವ ವಿಜ್ಞಾನಿಗೂ ಸಹ, ಈ ಮಹಾ ಅದ್ಭುತದ ಬಗ್ಗೆ ವಿಶ್ಲೇಷಿಸಿ ಇದಃಮಿತ್ಥಂ ಎನ್ನಲಿಕ್ಕಾಗಲಿಲ್ಲ! ಇವತ್ತಿನ ಆಧುನಿಕ ವಿಜ್ಞಾನವೇ ಈ ಅದ್ಭುತದ ಮುಂದೆ ಅಸಹಾಯಕನಾಗಿ ನಿಂತಿದೆ!

ದೇವಾಲಯದ ವಾಸ್ತುಶಿಲ್ಪದ ಬಗ್ಗೆ ಇವತ್ತಿಗೂ ಪ್ರಶ್ನಾರ್ಥಕ ಚಿಹ್ನೆಗಳಿವೆಯಾದರೂ ಸಹ, ನಮಗೆ ಯಾವುದು ಕಾಣುತ್ತದೆಯೋ , ಯಾವುದು ಸ್ಪರ್ಶಕ್ಕೆ
ನಿಲುಕುತ್ತದೆಯೋ, ಅದನ್ನು ಪರಿಗಣಿಸದೇ ಇರಲು ಸಾಧ್ಯವೇ ಇಲ್ಲ! ವಿಜ್ಞಾನ ಎಂಬುವುದು ಈ ದೇವಾಲಯದ ಬಗ್ಗೆ ಬಹಳಷ್ಟು ಪ್ರಶ್ನೆಗಳನ್ನು ಮಾಡಿದೆ! ಉತ್ತರ ಸಿಗದಿದ್ದರೂ ಸಹ, ಭಾರತೀಯರನ್ನು ಕೆಲ ವಿಚಾರಗಳಿಗಾಗಿ ಸಂಪ್ರದಾಯವಾದಿಗಳೆಂದು ಜರಿದಿದೆ! ಅಷ್ಟಾದರೂ, ಭಾರತದ ಪ್ರಾಚೀನ ವಿಜ್ಞಾನವೊಂದು ಇನ್ನೂ ಬಿಡಿಸಲಾಗದ ಗಂಟಾಗಿಯೇ ಉಳಿದಿದೆ!

Related image

ಬಿಡಿ! ಇವತ್ತಿನ ವಿಜ್ಞಾನ ಯಾವ ದೇವಾಲಯ ಎಷ್ಟು ಹಳೆಯದು ಎಂಬ ಮಾಹಿತಿಯನ್ನು ತಕ್ಷಣವೇ ಪರೀಕ್ಷಿಸಿ ತಿಳಿಸುತ್ತವಷ್ಟೇ! ಆದರೆ.. ಈ ದೇವಾಲಯ ಎಷ್ಟು ಹಳೆಯದ್ದೆಂಬ ಮಾಹಿತಿಯೇ ದೊರಕುತ್ತಿಲ್ಲ, ಯಾವ ವಿಜ್ಞಾನಕ್ಕೂ ದೇವಾಲಯ ಕಟ್ಟಿದ ಅವಧಿಯನ್ನು ಹೇಳಲಾಗಿಲ್ಲ…!!

ಅದುವೇ ಕೈಲಾಶ್ ದೇವಾಲಯ! ಔರಂಗಾಬಾದ ನಲ್ಲಿರುವ ಈ ಕೈಲಾಶ್ ದೇವಾಲಯವನ್ನು ರಾಷ್ಟ್ರಕೂಟ ಪರಂಪರೆಯವರು ಕಟ್ಟಿಸಿದರೆಂದೂ, ಕೈಲಾಸ ಪರ್ವತವನ್ನು ಹೋಲಿಸುವುದಕ್ಕಾಗಿ ದೇವಾಲಯ ನಿರ್ಮಾಣ ಮಾಡಿದರೆಂದೂ ಪ್ರತೀತಿ ಇದೆ! ಜೊತೆಗೆ ಶಿವನ ದೇವಾಲಯವಾದ ಇದರ ಮುಖ್ಯ ದೇವಸ್ಥಾನ ಪಿರಮಿಡ್ ಆಕಾರದಲ್ಲಿರುವುದರಿಂದ, ಕೈಲಾಸ ಪರ್ವತವನ್ನು ಬಿಂಬಿಸುವಂತಿದೆ!

Related image

ಆಗಿನ ಕಾಲದಲ್ಲಿ ಈ ದೇವಾಲಯವನ್ನು ಕಟ್ಟಲು 16 ವರ್ಷಗಳು ಬೇಕಾದವೆಂದು ಅಲ್ಲಿನ ಶಾಸನಗಳು ಹೇಳಿದರೆ, ಇವತ್ತಿನ ಯಾಂತ್ರಿಕ ಯುಗದಲ್ಲಿ ಕಟ್ಟಲು 200 ವರ್ಷಗಳಿಗಿಂತ ಜಾಸ್ತಿ ಸಮಯ ಹಿಡಿಯುತ್ತದೆಂಬ ವಾಸ್ತವವೇ ಅಚ್ಚರಿಯನ್ನು ಹುಟ್ಟಿಸುತ್ತದೆ. ಎಲ್ಲೋರಾ ಗುಹೆಯೊಳಡಗಿರುವ ಈ ದೇವಾಲಯವನ್ನು ಕೇವಲ ಒಂದೇ ಕಲ್ಲನ್ನು ಬಳಸಿ ಕಟ್ಟಲಾಗಿದೆ. ಅದಲ್ಲದೇ, ಇಡೀ ದೇವಾಲಯದ ಅಸ್ತಿತ್ವ ಒಂದೇ ಕಲ್ಲಿನ ಮೇಲೆ ನಿಂತಿದೆ!

ಎಷ್ಟು ವರ್ಷ ಹಳೆಯದಾಗಿರಬಹುದೀ ದೇವಾಲಯ!

ಕೆಲ ವಿಜ್ಞಾನಿಗಳು ಹೇಳುವ ಪ್ರಕಾರ ಇದು 1900 ವರ್ಷಗಳಿಗಿಂತ ಹಳೆಯದು! ಇನ್ನು ಕೆಲ ವಿಜ್ಞಾನಿಗಳು ಹೇಳುವ ಪ್ರಕಾರ 6000 ವರುಷಗಳಿಗಿಂತ ಹಳೆಯದಾದ ದೇವಾಲಯವಿದು!! ಅಚ್ಚರಿಯೆಂದರೆ, ಆಧುನಿಕ ತಂತ್ರಜ್ಞರು ನಡೆಸಿದ ಕಾರ್ಬನ್ ಡೇಟಿಂಗ್ ಪರೀಕ್ಷೆ ಕೂಡ, ದೇವಾಲಯ ಕಟ್ಟಿರಬಹುದಾದ ನಿಖರ ಸಮಯವನ್ನು ತೋರಿಸಲಿಲ್ಲ! ಅಂದರೆ, ಕಾರ್ಬನ್ ಗಿಂತ ಈ ದೇವಾಲಯ ಹಳೆಯದು!

100 ಅಡಿ ಎತ್ತರವಿರುವ ಈ ದೇವಸ್ಥಾನವನ್ನು ಕೆಳಗಿನಿಂದ ಮೇಲು ಮುಖವಾಗಿ ಕೆತ್ತಲಿಲ್ಲ. ಬದಲಿಗೆ, ಈ ದೇವಾಲಯವನ್ನು ಮೇಲಿನಿಂದ ಕೆಳಮುಖವಾಗಿ ಕೊರೆಯಲಾಗಿದೆ! ಒಟ್ಟಾರೆಯ ದೇವಾಸ್ಥಾನದ ಕಲ್ಲಿನ ತೂಕವನ್ನು ಲೆಕ್ಕ ಹಾಕಿದರೆ ವಿಜ್ಞಾನಿಗಳಿಗೆ ಸಿಕ್ಕಿದ್ದು 5 ಮಿಲಿಯನ್ ಟನ್ ತೂಕ! ಐದು ಮಿಲಿಯನ್ ಟನ್ ತೂಕದ ಕಲ್ಲನ್ನು ಕೇವಲ 16 ವರ್ಷಗಳಲ್ಲಿ ಕಟ್ಟಬೇಕಾದರೆ ವೇದಗಳಲ್ಲಿ ಹೇಳಿರುವ ‘ಭೂಮಾಸ್ತ್ರ’ವನ್ನು ಬಳಸಿ ಕಟ್ಟಲಾಯಿತೇ?! ವೇದಗಳ ಪ್ರಕಾರ , ಬಿಸಿಯಾದ ಹೊಗೆಯನ್ನು ಬಳಸಿ ಕಟ್ಟಬಹುದಾದ ವಾಸ್ತುಶಿಲ್ಪವೇ ಇದಾಗಿರಬಹುದೇ?! ಉಹೂಂ! ಇನ್ನೂ ಉತ್ತರ ಸಿಕ್ಕಿಲ್ಲ.

Related image

ಈ ವಾಸ್ತು ಶಿಲ್ಪದ ಬಗ್ಗೆ, ಇಂಗ್ಲೆಂಡ್ ನ ಆಧ್ಯಾತ್ಮಿಕ ಚಿಂತಕ ಎಮ್ಮಾ ಹಾಂಡ್ರಿಕ್ ತನ್ನ ಪುಸ್ತಕದಲ್ಲಿ ದಾಖಲಿಸಿದಾಗ, ಕೈಲಾಸ ಮಂದಿರದ ರಹಸ್ಯವೊಂದು ಜಗತ್ತಿಗೆ ತಿಳಿಯತೊಡಗಿತಷ್ಟೇ! ಅದೆಷ್ಟೋ ವಿಸ್ಮಯಗಳನ್ನು ತನ್ನೊಡಲಲಿ ಅಡಗಿಸಿಟ್ಟುಕೊಂಡ ಕೈಲಾಸ ದೇವಾಲಯ, ಅಯಸ್ಕಾಂತೀಯ ಘರ್ಷಣೆಯನ್ನೂ ಹೊಂದಿದೆ ಎಂಬುದಕ್ಕೆ ಅದೆಷ್ಟೋ ಪುರಾವೆಗಳು ದಕ್ಕಿವೆ.

Image result for kailash temple

ಇಂತಹ ದೇವಾಲಯವಿದ್ದರೂ ಕೂಡ, ತಾಜ್ ಮಹಲ್ ಮಾತ್ರ ಅದ್ಭುತ ಹೇಗಾಯಿತು ಗೊತ್ತಾ?!

ಯೋಚಿಸಿ ನೋಡಿ! ತಾಜ್ ಮಹಲ್ ಮುಂಚೆ ತೇಜೋ ಮಹಾಲಯವಾಗಿತ್ತೆಂಬುದು ಸರಿ! ಅದಲ್ಲದೇ, ಅವತ್ತು ತಿರುಚಿದ ಇತಿಹಾಸ ಹೇಳುವ ಪ್ರಕಾರ ಷಹಜಹಾನ್ ತಾಜ್ ಕಟ್ಟಿಸಿದ ಎಂದೇ ಪರಿಗಣಿಸಿ! ಬರೋಬ್ಬರಿ 20 ರಿಂದ 30 ವರ್ಷ ಸಮಯ ತೆಗೆದುಕೊಂಡನೆಂದೇ ಇಟ್ಟುಕೊಂಡರೂ, ಇವತ್ತಿನ ತಂತ್ರಜ್ಶಾನದಲ್ಲಿ ಷಹಜಾನ್ ಕಟ್ಟಿಸಿದ ತಾಜ್ ಕಟ್ಟಲು ಬಹುಷಃ ಒಂದು ಐದು ವರುಷಗಳು ಬೇಕಾಗಬಹುದಷ್ಟೇ! ಹಾಗಂತಹ, ತೇಜೋ ಮಹಾಲಯದ ಬಗ್ಗೆ ಉತ್ಪ್ರೇಕ್ಷೆಯಲ್ಲ! ಬದಲಿಗೆ, ಷಹಜಾನನ ಕಟ್ಟಿಸಿದನೆಂದು ಹೇಳಲಾಗುವ ತಾಜ್ ಜಗತ್ತಿನ ಏಳು ಅದ್ಭುತಗಳಾಗುವುದರ ಹಿಂದಿದೆ ಮತ್ತದೇ ಜಾತ್ಯಾತೀತ ಮುಖವಾಡ!

ಮೊದಲನೆಯದಾಗಿ, ತಾಜ್ ಮಹಲ್ ಜಗತ್ತಿನ ಏಳು ಅದ್ಭುತಗಳ ಸಾಲಿಗೆ ಸೇರಿಕೊಂಡಿದ್ದು 2007 ರಲ್ಲಿ! ಅಲ್ಲಿಯ ತನಕವೂ ಕೂಡ, ಭಾರತದ ಯಾವುದೂ ಸಹ ಈ ಘನತೆಗೆ ಪಾತ್ರವಾಗಿರಲಿಲ್ಲ. ತಾಜ್ ಮಹಲ್ ಜಗತ್ತಿನ ಏಳು ಅದ್ಭುತಗಳಾಗುವ ಬೆನ್ನಲ್ಲೇ ತಾಜ್ ಮಹಲ್ ಗಿಂತಲೂ ಅದ್ಭುತವಾಗಿದ್ದ ಕೈಲಾಸ ದೇವಾಲಯಗಳನ್ನು, ಎಲ್ಲೋರಾದ ಗುಹೆಗಳ ವಿಸ್ಮಯಗಳನ್ನು ಬದಿಗಿರಿಸಿತು! ಬೇಡವೆಂದರೂ, ಜಗತ್ತಿನ ಏಳು ಅದ್ಭುತಗಳಲ್ಲಿಯೂ ಸಹ ಜಾತ್ಯಾತೀತತೆಯ ವಿಷವೊಂದು ಹೊಕ್ಕಿತು!

Related image

ಆಯಾ ದೇಶಗಳಲ್ಲಿರುವ ವಾಸ್ತುಶಿಲ್ಪವನ್ನು ಜಗತ್ತಿನ ಅದ್ಭುತಗಳಲ್ಲಿ ಸೇರಿಸಲು ಆಯ್ಕೆ ಮಾಡಲಾಗುತ್ತದೆ! 200 ರಾಷ್ಟ್ರಗಳಲ್ಲಿರುವ ಅದ್ಭುತ ವಾಸ್ತುಶಿಲ್ಪಕ್ಕೆ ಅದೆಷ್ಟೋ ಮತಗಳು ಬೀಳುತ್ತವೆ! ಅಂತಹದ್ದರಲ್ಲಿ, ತಾಜ್ ಮಹಲ್ ಗೆ 100 ಮಿಲಿಯನ್ ಗೂ ಹೆಚ್ಚು ಜನ ಜಗದ ವಿವಿಧ ಭಾಗಗಳಿಂದ ಮತ ನೀಡಿದ್ದರು! ಪರಿಣಾಮ, ಜಗತ್ತಿನ ಏಳು ಅದ್ಭುತಗಳ ಪೈಕಿ ತಾಜ್ ಮಹಲ್ ಒಂದಾಯಿತು!

ದುರಂತವೇನು ಗೊತ್ತಾ?! ಭಾರತದಲ್ಲಿದ್ದ ಜ್ಯೂರಿ ಆರಿಸಿದ್ದು ಈ ತಾಜ್ ಮಹಲ್ ಮಾತ್ರ! ಯಾವುದೇ ಕಾರಣಕ್ಕೂ, ಕೈಲಾಸ ದೇವಾಲಯವನ್ನು ಪಟ್ಟಿಯಲ್ಲಿ ಸೇರಿಸಲಿಲ್ಲ.! ಜಗತ್ತಿನ ಏಳು ಅದ್ಭುತಗಳಲ್ಲಿ ಸೇರಬೇಕಿದ್ದ ಭಾರತದ ಕೈಲಾಸ ಮಂದಿರ, ಕೇವಲ ಹಿಂದೂ ದೇವಾಲಯ ಎಂಬ ಕಾರಣಕ್ಕೆ ಜ್ಯೂರಿ ತಾಜ್ ಆಯ್ಕೆ ಮಾಡಿತು! ಕೊನೆಗೂ, ಜ್ಯೂರಿಯಲ್ಲಿದ್ದ ಎಡಪಂಥೀಯದವರ ಜಾತ್ಯಾತೀತತೆ ಜಗತ್ತಿನ ಏಳು ಅದ್ಭುತಗಳಲ್ಲಿಯೂ ರಾಜಕಾರಣ ನಡೆಸಿತು.

ಅದೇನೋ?! ಅದ್ಭುತ ಗಳನ್ನು ಹೊಂದಿದ ಕೈಲಾಶ್ ದೇವಾಲಯ ವನ್ನು ಮಾತ್ರ ಹಾಗೆಯೇ ಎಲೆಮರೆಯಾಗಿಸಿ, ಮತ್ತದೇ ಮುಸ್ಲಿಂ ಕ್ರೌರ್ಯಕ್ಕೆ ಸಾಕ್ಷಿಯಾಗಿ ನಿಂತ ತಾಜ್ ಮಹಲ್ ಏಳನೇ ಅದ್ಭುತವಾಯಿತು!

– ಅಜೇಯ ಶರ್ಮಾ

Tags

Related Articles

Close