ಪ್ರಚಲಿತ

ಕೊಟ್ಟಾರದ ಬಷೀರ್ ಸಾವಿಗೆ ಮೈಸೂರಿನ ಸಂಸದರಾದ ಪ್ರತಾಪ್ ಸಿಂಹ ಹೇಳಿದ್ದೇನು ಗೊತ್ತೇ?

ನಾಲ್ಕು ದಿನ ನರಳಾಡಿ ಪ್ರಾಣ ಬಿಟ್ಟಿದ್ದಾರೆ ಕೊಟ್ಟಾರದ ಬಷೀರ್! ಬಷೀರ್ ರ ಮೇಲೆ ಹಲ್ಲೆ ನಡೆಯುವಕ್ಕಿಂತ ಒಂದಷ್ಟು ಗಂಟೆಗಳ ಹಿಂದೆ, ಹಿಂದೂ ಕಾರ್ಯಕರ್ತನಾಗಿದ್ದ ‘ದೀಪಕ್ ರಾವ್ ‘ ಎಂಬುವವರ ಮೇಲೆ ಮುಸಲ್ಮಾನರು ಹಲ್ಲೆ ಮಾಡಿದ್ದರಲ್ಲದೇ, ಹದಿನಾರು ಬಾರಿ ದೀಪಕ್ ರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿತ್ತು! ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ದೀಪಕ್ ರಾವ್ ಹತ್ಯೆಗೆ ಇಡೀ ಕರಾವಳಿ ಸ್ಥಬ್ಧವಾಗಿತ್ತು! ಕಾದ ಕೆಂಡವಾಗಿದ್ದ ಕರಾವಳಿ ಪ್ರದೇಶದಲ್ಲಿ ಹಿಂದೂ ಹಾಗೂ ಮುಸಲ್ಮಾನ ಗಲಭೆಗಳು ನಡೆಯುತ್ತಲೇ ಇರುತ್ತದೆನ್ನುವುದು ವಾಸ್ತವವಾದರೂ ಸಹ, ಹಾಡ ಹಗಲೇ ಮುಸಲ್ಮಾನರು ಕತ್ತಿ ಹಿಡಿದು ಓಲಾಡುತ್ತರೆಂದರೆ ರಾಜ್ಯ ಸರಕಾರದ ಬೆಂಬಲವೂ ಇದೆ ಎನ್ನುವುದು ಅಲ್ಲಿಗೆ ಸ್ಪಷ್ಟವಲ್ಲವೇ?!

ಕಳೆದ ನಾಲ್ಕೂವರೆ ವರುಷಗಳಲ್ಲಿ, 20 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ! ಅಷ್ಟಾದರೂ ಸಹ, ರಾಜ್ಯ ಸರಕಾರ ಇನ್ನೂ ಸಹ, ಕಣ್ಣು ಮುಚ್ಚಿ ಕುಳಿತಿರುವುದು ಅಸಹ್ಯವಲ್ಲವೇ?! ಹಿಂದೂಗಳ ಸಾವಿಗೆ ‘ಆಕಸ್ಮಿಕ ಸಾವು’ ಎಂದು ವರದಿ ನೀಡುವ ಕಾಂಗ‌್ರೆಸ್ ಸರಕಾರ ನಿಜಕ್ಕೂ ತನ್ನ ಮುಸ್ಲಿಂ ತುಷ್ಟೀಕರಣದ ಪರಮಾವಧಿ ಮುಟ್ಟಿದೆ ಬಿಡಿ! ಹಾಗಾದರೆ, ಇಂತಹದ್ದಕ್ಕೆಲ್ಲ ಕಾರಣಗಳೇನು?!

ಸಾವಾದ ತಕ್ಷಣ ಐದು, ಹತ್ತು ಲಕ್ಷ ಪರಿಹಾರ ಘೋಷಣೆ ಮಾಡುವ ರಾಜ್ಯ ಸರಕಾರ, ಯಾವತ್ತಾದರೂ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡಿದೆಯಾ?! ಬಿಡಿ! ಕಂಡವರ ದುಡ್ಡಲ್ಲಿ ಪರಿಹಾರ ನೀಡುವುದರಲ್ಲಿಯೇ ಕೈ ತೊಳೆದುಕೊಳ್ಳುವ ಇಂತಹ ಹೊಲಸು ರಾಜಕೀಯ ರಾಜ್ಯದ ಘನತೆಗೆ ತಕ್ಕುದಾದುದೇ?!

ಎಳ್ಳಷ್ಟೂ ಮರ್ಯಾದೆಯಿಲ್ಲದ ರಾಜ್ಯ ಸರಕಾರಕ್ಕೂ, ಅದರ ಮುಖ್ಯಮಂತ್ರಿಗೂ ಬಿಸಿ ಕಾಯಿಸಿದ್ದಾರೆ ಮೈಸೂರಿನ ಸಂಸದರಾದ ಪ್ರತಾಪ್ ಸಿಂಹ!

“ಕಣ್ಣಿಗೆ ಕಣ್ಣು ಎಂದು ಹೋದರೆ ಇಡೀ ಜಗತ್ತು ಅಂಧಕಾರದಲ್ಲಿ ಕಳೆದು ಹೋಗುತ್ತದೆ’! ದೀಪಕಾ ರಾವ್ ಹತ್ಯೆಗೆ ಪ್ರತೀಕಾರ ಬಷೀರ್ ರ ಹತ್ಯೆಯಲ್ಲ! ಇವತ್ತು ಹಿಂದೂ – ಮುಸ್ಲಿಂ ಶಾಂತಿ ಸಭೆಯನ್ನು ಮಾಡಬೇಕಾಗಿದೆ! ರಾಜ್ಯ ಸರಕಾರ ಸೌಹಾರ್ದತೆ ಯನ್ನು ಕಾಪಾಡುತ್ತಲೂ ಇಲ್ಲ, ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ!!”

ಇದು ಪ್ರತಾಪ್ ಸಿಂಹರವರ ಮಾತು!

Related image

ಈ ಹಿಂದೆಯೂ, ಸಿಧ್ದರಾಮಯ್ಯ ಸರಕಾರದ ಅನಾಚಾರಗಳ ವಿರುದ್ಧ ಧ್ವನಿ ಎತ್ತಿದ್ದ ಪ್ರತಾಪ್ ಸಿಂಹ ಮುಖ್ಯಮಂತ್ರಿಗಳಿಗೆ ಎಲ್ಲೆಲ್ಲಿ ಬಿಸಿ ತಾಗಿಸಬೇಕೋ, ಅಲ್ಲಲ್ಲಿ ಬಿಸಿ ತಾಗಿಸುತ್ತಲೇ ಬಂದಿದ್ದಾರೆ! ಹಿಂದುತ್ವದ ಪ್ರತಿಪಾದಕರಾಗಿರುವ ಪ್ರತಾಪ್ ಸಿಂಹರವರು ಕೋಮುವಾದಿ ಎಂದೆಲ್ಲ ವಿರೋಧಿಗಳು ಬೊಬ್ಬಿರಿಯುತ್ತಿದ್ದಕ್ಕೂ ಸಹ ಪ್ರತಾಪ್ ಸಿಂಹ , ‘ತಾನು ಸತ್ಯದ ಪರ ನಿಲ್ಲುವವನು’ ಎಂದು ತೋರಿಸಿಕೊಟ್ಟಿದ್ದಾರಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close