ಪ್ರಚಲಿತ

ಗಡಿಯಲ್ಲಿ ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು ಭಾರತ ಹೆಣೆದಿದೆ ಹೊಸ ತಂತ್ರ!! ನರಿಬುದ್ದಿ ಪಾಕಿಸ್ತಾನಕ್ಕೆ ಕಾದಿದೆ ಭಾರತದಿಂದ ಮಹಾ ಕಂಟಕ..

ಹೌದು, ಸದಾ ಗಡಿಯಲ್ಲಿ ಅಪ್ರಚೋದಿತ ದಾಳಿ ,ಉಗ್ರರನ್ನು ಭಾರತದತ್ತ ನುಸುಳುವ ಕಾರ್ಯಕ್ಕೆ ಸಹಕರಿಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಪ್ರತ್ಯುತ್ತರ ನೀಡುತ್ತಲೇ ಬಂದಿದೆ. ಆದರೆ ನರಿಬುದ್ದಿಯನ್ನು ಮೈಗಂಟಿಸಿಕೊಂಡು ಬಂದಿರುವ ಪಾಕಿಸ್ತಾನ ತನ್ನ ಕಪಟ ಕಾರ್ಯ ಮುಂದುವರೆಸುತ್ತಲೇ ಬಂದಿದೆ.

ಜಮ್ಮು – ಕಾಶ್ಮೀರ ಗಡಿಯಲ್ಲಿ ಭಾರತದ ವಿರುದ್ಧ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಭಾರತ ತಂತ್ರ ಹೆಣೆದಿದೆ.!

ಈ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ದಾಳಿಯನ್ನು ತಡೆಯಲು ಗಡಿ ರೇಖೆಯಲ್ಲಿ ಸುಮಾರು 14 ಸಾವಿರ ಬಂಕರ್ ಗಳನ್ನು ತಯಾರಿಸಲು ಯೋಜನೆ ರೂಪಿಸಿದ್ದು ಅದಕ್ಕಾಗಿಯೇ 415.73 ಕೋಟಿ ರೂಪಾಯಿ ಬಿಡುಗಡೆಗೊಳಿಸಿದೆ.

ಭಾರತವನ್ನು ಕೆಣಕಿ ಸದಾ ಮಕಾಡೆ ಮಲಗುತ್ತಿರುವ ಪಾಕಿಸ್ತಾನ ಇತ್ತೀಚೆಗೆ ಕುತಂತ್ರಿ ಚೀನಾದ ಜೊತೆಗೂಡಿ ಪಂಜಾಬ್ ಮತ್ತು ರಾಜಸ್ಥಾನ ಗಡಿಯಲ್ಲಿ ಭಾರತದ ವಿರುದ್ಧ ಬಂಕರ್ ಗಳ ನಿರ್ಮಾಣಕ್ಕೆ ಕೈ ಹಾಕಿರುವ ಪಾಕಿಸ್ತಾನದ ಯೋಜನೆಗೆ ತಕ್ಕ ತಿರುಗೇಟು ನೀಡುವ ಸಲುವಾಗಿಯೇ ಭಾರತವೂ ಬಂಕರ್ ಗಳ ನಿರ್ಮಾಣಕ್ಕೆ ಇಳಿದಿರುವುದು ಪಾಕಿಸ್ತಾನದ ವಿರುದ್ಧ ಯಾವುದೇ ಸಮಯದಲ್ಲೂ ಸಮರಕ್ಕೆ ಸಿದ್ದ ಎಂಬುದು ಸ್ಪಷ್ಟವಾಗಿ ಸಾರಿದೆ.

ಭಾರತದ ವಿರುದ್ಧ ಸಾಂಪ್ರದಾಯಿಕ ಯುದ್ದಗಳಲ್ಲಿ ಸೋತಿರುವ ಪಾಕಿಸ್ತಾನ,ಹೇಗಾದರೂ ಮೇಲುಗೈ ಸಾಧಿಸುವ ಸಲುವಾಗಿ ಚೀನಾದ ಸಹಾಯದಿಂದ ಈ ಎಲ್ಲಾ ಕಾಮಗಾರಿಗಳನ್ನು ಕೈಗೊಂಡಿದೆ ಎನ್ನಲಾಗಿದೆ.

ಭಾರತದ ಮೇಲೆ ಪೂರ್ವ ಹಾಗೂ ಪಶ್ಚಿಮದಿಂದ ಏಕಕಾಲದಲ್ಲಿ ದಾಳಿ ನಡೆಸುವ ಹುನ್ನಾರವನ್ನು ಮಾಡಿರುವ ಚೀನಾ ಪಾಕಿಸ್ತಾನದ ಭಾಗಗಳಲ್ಲಿ ಬಂಕರ್ ಗಳ ನಿರ್ಮಾಣ ಕಾಮಾಗಾರಿ ಆರಂಭಿಸಿದೆ.

ಈ ಎಲ್ಲಾ ಕಾಮಗಾರಿಗಳು ನಡೆಯುತ್ತಿದ್ದು ಮುಗಿಯುವ ಹಂತಕ್ಕೆ ಬಂದಿದೆಯಾದರೂ ಇದರ ಬಗ್ಗೆ ಭಾರತಕ್ಕೆ ಯಾವುದೇ ಮಾಹಿತಿಯನ್ನು ಪಾಕಿಸ್ತಾನದ ಸೇನಾ ಅಧಿಕಾರಿಗಳು ನೀಡಿಲ್ಲ ಎನ್ನಲಾಗಿದೆ. ನಿಯಮಿತವಾಗಿ ನಡೆಯುವ ಧ್ವಜಸಭೆಯ ವೇಳೆ ಇಂತಹ ವಿಷಯಗಳನ್ನು ಹೇಳುವ ಅವಕಾಶ ಇದ್ದರೂ ಪಾಕಿಸ್ತಾನದ ಸೇನಾ ಅಧಿಕಾರಿಗಳು ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಭಾರತವೂ ಗಡಿಭಾಗದಲ್ಲಿ ಬಂಕರ್ ನಿರ್ಮಾಣದ ಕಾಮಗಾರಿಯನ್ನು ವೇಗಗೊಳಿಸಿದೆ.

ಈ ಎಲ್ಲಾ ಸೇನಾ ಬೆಳವಣಿಗೆಯನ್ನು ಕಂಡಾಗ ಪಾಕಿಸ್ತಾನವು ಯುದ್ದದ ಒಲವನ್ನು ಮೆಲುಕು ಹಾಕುತ್ತಿದೆ.ಅದಕ್ಕೆ ಪ್ರತ್ಯುತ್ತರವಾಗಿ ಭಾರತವೂ ತಿರುಗೇಟು ನೀಡಲು ಸೇನೆಯನ್ನು ಬಲಗೊಳಿಸುತ್ತಾ ಬಂದಿದೆ. ಯಾವುದೇ ಯುದ್ದ ಸನ್ನಿವೇಶಗಳು ಎದುರಾದರು ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಭಾರತವೂ ತನ್ನ ಸೇನಾ ಬತ್ತಳಿಕೆಯಲ್ಲಿ ಶೇಖರಿಸಿಕೊಂಡಿರುವುದು ಗೋಚರಿಸುತ್ತಿದೆ.

ಪ್ರತಿಬಾರಿ ಗಡಿಯಲ್ಲಿ ಭಾರತೀಯ ಸೈನಿಕರ ಮೇಲೆ ಅಪ್ರಚೋದಿತ ಗುಂಡಿನ ದಾಳಿ ಮತ್ತು ಭಾರತದತ್ತ ಉಗ್ರರನ್ನು ಕಳುಹಿಸುವ ಕಾರ್ಯದಲ್ಲಿ ತೊಡಗಿದ್ದ ಪಾಕಿಸ್ತಾನ ಇದೀಗ ಚೀನಾದ ಸಹಾಯದಿಂದ ಹೊಸತೊಂದು ಹೆಜ್ಜೆ ಮುಂದಿಟ್ಟಿರುವುದು ಭಾರತದ ವಿರುದ್ದ ಯುದ್ದ ನಡೆಸುವ ಹುನ್ನಾರವನ್ನು ನೇರವಾಗಿ ಸಾರಿದಂತಿದೆ.ಆದರೆ ಇದೆಲ್ಲದಕ್ಕೂ ಭಾರತವೂ ತನ್ನ ಸೇನೆಯನ್ನು ಬಲಗೊಳಿಸುತ್ತಿರುದು ಪ್ರತ್ಯುತ್ತರವಾಗಿ ಯಾವುದೇ ಸಂದೇಶ ಸಾರಲು ತಯಾರಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ರಾಜಸ್ಥಾನದ ಬಾರ್ ಮರ್ ಸಮೀಪವಿರುವ ಮುನಾಬಾವ್ ಗೆ ಕೇವಲ 25 ಕಿ.ಮೀ. ದೂರದಲ್ಲಿ ಚೀನಿ ಯೋಧರು ಪಾಕ್ ಪ್ರದೇಶದಲ್ಲಿ ಈಗಾಗಲೇ ವಿಮಾನ ನಿಲ್ದಾಣ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಮತ್ತು ಗುಜರಾತ್ ಗಡಿಯಿಂದ ಕೇವಲ 20 ಕಿ.ಮೀ. ದೂರದಲ್ಲಿರುವ ಮಿಠಿ ಎಂಬಲ್ಲಿ ಚೀನಾದ ಸೈನಿಕರು ವಾಯುನೆಲೆಯನ್ನು ನಿರ್ಮಿಸುತ್ತಿದ್ದು ಯುದ್ದಕ್ಕೆ ಬೇಕಾದ ಎಲ್ಲಾ ದಾರಿಯನ್ನು ನಿರ್ಮಿಸಿಕೊಂಡು ಬರುತ್ತಿದ್ದಾರೆ.
ಸಿಪಿಇಸಿ ಯೋಜನೆಯ ಭಾಗವಾಗಿ ಈ ಪ್ರದೇಶದಲ್ಲಿ ರೈಲು ಮಾರ್ಗವನ್ನು ನಿರ್ಮಿಸಲೂ ಉದ್ದೇಶಿಸಲಾಗಿದೆ ಎನ್ನಲಾಗುತ್ತಿದೆ.ಪಾಕಿಸ್ತಾನದ ವಾಯುನೆಲೆಯಲ್ಲಿ ಚೀನಾದ ಸೈನಿಕರು ಬೀಡುಬಿಟ್ಟಿದ್ದು ಯೋಧರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ. ಈ ಎಲ್ಲಾ ಬೆಳವಣಿಗೆಯನ್ನು ಕಂಡಾಗ ಪಾಕಿಸ್ತಾನಕ್ಕೆ ಸಹಾಯ ಮಾಡುವ ನೆಪದಲ್ಲಿ ಚೀನಾವು ಭಾರತದ ವಿರುದ್ದ ತನ್ನ ಬೇಳೆ ಬೇಯಿಸುವ ಕೆಲಸವನ್ನೂ ಮಾಡುತ್ತಿದೆ.
ಪಾಕಿಸ್ತಾನವು ಒಂಟಿಯಾಗಿ ಅನೇಕ ಬಾರಿ ಭಾರತದ ವಿರುದ್ದ ತನ್ನ ಶೌರ್ಯ ಮೆರೆಯಲು ಬಂದಾಗ ಪ್ರತೀಬಾರಿ ಭಾರತೀಯ ಸೇನೆ ಅದಕ್ಕೆ ತಕ್ಕ ಪಾಠ ಕಲಿಸಿದೆ. ಇದೇ ಕಾರಣಕ್ಕಾಗಿ ಈಗ ಪಾಕಿಸ್ತಾನವು ಕುತಂತ್ರಿ ಚೀನಾದ ಸಹಾಯದಿಂದ ಭಾರತದ ವಿರುದ್ಧ ಸೆಣೆಸಾಡಲು ಮುಂದಾಗಿದೆ.

ಅದೇನೇ ಆಗಲಿ, ಪಾಕಿಸ್ತಾನವೇನಾದರು ಚೀನಾದ ಸಹಾಯದಿಂದ ಭಾರತದ ವಿರುದ್ಧ ಸಮರ ಸಾರಿದ್ದೇ ಆದರೆ ಅದಕ್ಕೆ ಬೇಕಾದ ಎಲ್ಲಾ ಸೇನಾಪಡೆಯನ್ನು ಭಾರತ ಈಗಾಗಲೇ ತಯಾರಿಸುತ್ತಿದೆ ಎಂಬುದು ಸ್ಪಷ್ಟ.

  • ಸ್ವಸ್ತಿಕ್
Tags

Related Articles

Close