ಅಂಕಣದೇಶಪ್ರಚಲಿತ

ಗುಜರಾತ್ ಪೂರ್ವ ಚುನಾವಣಾ ಸಮೀಕ್ಷೆ ಬಹಿರಂಗ : ಬಿಜೆಪಿಗೇ ಜಯ! ಇಂದಿಗಿಂತಲೂ ದೊಡ್ಡ ಜಯ ಸಾಧಿಸಲಿದ್ದಾರೆ ಮೋದಿ ಮತ್ತು ಪಕ್ಷ!

ಗುಜರಾತಿನ ರಾಜ್ಯ ಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆದ್ದಿದ್ದೇ, ಇಡೀ ಕಾಂಗ್ರೆಸ್ ನ ನರಿಗಳೆಲ್ಲ ಹೊಗಳಲು ಶುರು ಮಾಡಿದ್ದಲ್ಲದೇ, ‘ಮುಂಬರುವ
ಚುನಾವಣೆಯಲ್ಲಿ ಮೋದಿಯ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ” ಎಂದೆಲ್ಲ ಊಳಿಟ್ಟಿದ್ದು ಇಡೀ ಭಾರತಕ್ಕೇ ಕೇಳಿಸಿತ್ತು ಬಿಡಿ! ಆದರೆ, ನರಿ ಬುದ್ಧಿಯಿಂದ ಗೆದ್ದ ಕಾಂಗ್ರೆಸ್ ನ ಅದೃಷ್ಟ ನೆಟ್ಟಗಿತ್ತಷ್ಟೇ!

ಆದರೆ, ಎಬಿಪಿ ವಾಹಿನಿಯವರು ನಡೆಸಿದ ಸಿಎಸ್ ಡಿಎಸ್ ಸಮೀಕ್ಷೆಯೊಂದ ವರದಿ, ದಶಕಗಳಿಂದಲೂ ಗುಜರಾತ್ ನ ಮುಖ್ಯ ಮಂತ್ರಿ ಕುರ್ಚಿಯನ್ನಾಕ್ರಮಿಸಬೇಕೆಂದು ಹರಸಾಹಸ ಪಡುತ್ತಿರುವ ಕಾಂಗ್ರೆಸ್ ನಾಯಕರನ್ನು ಗರಬಡಿಸಿದೆ! “ಮುಂಬರುವ ಗುಜರಾತ್ ನ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿಯ ಅಲೆ ಇಡೀ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳನ್ನು ಮುಳುಗಿಸಲಿದೆ!” ಎಂಬ ವರದಿಯೊಂದೇ ಸಾಕು, ಕಾಂಗ್ರೆಸ್ ಗೆ ಹೃದಯಾಘಾತ ನೀಡಲು!!!

ಬಿಜೆಪಿ ಸರಾಸರಿ 144-152 ಸೀಟುಗಳಿಂದ ಜಯಭೇರಿ ಬಾರಿಸುವ ಸಂಭವವಿದ್ದರೆ, ಪಾಪಾ! ಕಾಂಗ್ರೆಸ್ ಕೇವಲ 26 – 32 ಸೀಟುಗಳಿಗೆ ತೃಪ್ತಿ ಪಡಬೇಕಿದೆ
ಎಂದು ಸಮೀಕ್ಷೆ ತಿಳಿಸಿದೆ! ಗುಜರಾತ್ ನ ವಿಧಾನಸಭೆಯಲ್ಲಿ ಸರಾಸರಿ 182 ಸೀಟುಗಳಿದೆ! ಅಂದರೆ, ಬಿಜೆಪಿ ಶೇ.80% ನಷ್ಟು ಸೀಟುಗಳನ್ನು ಗೆಲ್ಲುತ್ತದೆ!

Original Source : ABP Survey – Lokniti CSDS

ಮೋದಿಯ ವೈಭವೋಪೇತ ಗೆಲುವಿದು!

ಅಹ್ಮದ್ ಪಟೇಲ್ ಗೆಲುವನ್ನಿಟ್ಟುಕೊಂಡು ‘ಮೋದಿ ಅಲೆ’ ಕಡಿಮೆಯಾಯಿತೆಂದು ಸಂತಸಪಟ್ಟಿದ್ದ ಕಾಂಗ್ರೆಸ್ ಗೆ ಕಿಂಚಿತ್ತು ಅರಿವು ಕೂಡ ಇಲ್ಲವೆಂಬುದು ಸಾಬೀತಾಗಿದೆ ಬಿಡಿ! ಕಳೆದ ಇಪ್ಪತ್ತು ವರ್ಷಗಳಿಂದಲೂ ಸಹ ಮೋದಿ ಅಲೆಯೇ ಇದ್ದುದಾದರೂ, ಜೊತೆಗೆ ಪ್ರಸ್ತುತ ಮುಖ್ಯಮಂತ್ರಿ ವಿಜಯ್ ರೂಪಾನಿ ಯ ಸಾಥ್ ಕೂಡ ಸಿಕ್ಕಿರುವಾಗ ಗುಜರಾತ್ ತನ್ನ ವೈಭವವನ್ನು ಕಾಂಗ್ರೆಸ್ ಗೆಲುವಿನ ಮೂಲಕ ಕಳೆದುಕೊಳ್ಳಲು ಇಚ್ಛೆ ಪಡುವುದಿಲ್ಲ!

ಬಿಡಿ! ಜಿಎಸ್ ಟಿಯ ತೆರಿಗೆ ವಿಚಾರದಲ್ಲಿ, ಗುಜರಾತ್ ನ ವ್ಯಾಪಾರಿಗಳನ್ನಿಟ್ಟುಕೊಂಡು ವಿರೋಧ ವ್ಯಕ್ತಪಡಿಸಿದ್ದೇ ಬಂತು! ಆದರೆ, ಎಬಿಪಿ ಲೋಕನೀತಿ ಸಮೀಕ್ಷೆಯ
ಪ್ರಕಾರ ಶೇ.59% ವ್ಯಾಪಾರದ ವಹಿವಾಟುಗಳು ಜಿಎಸ್ ಟಿಯನ್ನು ಸ್ವಾಗತಿಸಿದೆ ಎಂದು ವರದಿ ನೀಡಿತು! ಕೇವಲ ಶೇ.29% ವ್ಯಾಪಾರಿಗಳು ಕಾಂಗ್ರೆಸ್ ಪರವಿದ್ದವಷ್ಟೇ!

‘ಮೋದಿಯ ಚರಿಷ್ಮಾವೊಂದು ದಿನೇ ದಿನೇ ಹೆಚ್ಚಾಗುತ್ತಿದೆ’ ಎಂಬ ವರದಿ ಬಂದಾಗಲೆಲ್ಲ, ಕಾಂಗ್ರೆಸ್ ಅದೇ ರೀತಿ ತನ್ನ ಹಿಡಿತ ಕಳೆದುಕೊಳ್ಳತೊಡಗಿದೆಯಷ್ಟೇ!

ದಲಿತ ಹಾಗೂ ಮುಸಲ್ಮಾನರೂ ಸಹ ಬೆಂಬಲಿಸುತ್ತಿರುವುದು ಬಿಜೆಪಿಯನ್ನೇ!!

ಇವತ್ತಿನ ತನಕವೂ ಸಹ ಗೋಧ್ರಾ ಗಲಭೆಯೊಂದನ್ನೇ ಇಟ್ಟುಕೊಂಡು ವಿವಾದ ಮಾಡುತ್ತಿರುವ ಕಾಂಗ್ರೆಸ್ ನೇತಾಗಳಿಗೆ ನ್ಯಾಯಾಲಯವೇ ‘ಮೋದಿ’ ಯನ್ನು
ದೋಷಮುಕ್ತಗೊಳಿಸಿರುವ ಅರಿವೂ ಇಲ್ಲ! ಬಿಡಿ! ಮೋದಿಯ ಧರ್ಮ ಶ್ರದ್ಧೆ ನೋಡಿ ಮುಸಲ್ಮಾನರೇ ಚಾದರ ಹಾಕಿ ಸ್ವಾಗತಿಸುತ್ತಿರುವಾಗ, ದಲಿತರೂ ಸಹ ಮೋದಿಯನ್ನು ಒಪ್ಪುತ್ತಿರುವಾಗ ಕಾಂಗ್ರೆಸ್ ಮಾತ್ರ ಇನ್ನೂ ‘ಅಲ್ಪಸಂಖ್ಯಾತ’, ‘ಹಿಂದುಳಿದ ವರ್ಗ’ಗಳೆಂದು ಜಪ ಮಾಡುತ್ತಲೇ ಇದೆ!

ಹೋಗಲಿ! ಹಾರ್ದಿಕ್ ಪಟೇಲ್ ನನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಇಬ್ಭಾಗ ಮಾಡಲು ಆಡಿದ ಆಟವೂ ಮೋದಿಯ ಮುಂದೆ ಹಲ್ಲು ಕಿತ್ತ ಹಾವಿನಂತೆ ಮಕಾಡೆ ಮಲಗಿತು! ಪ್ರತಿ ನಾಲ್ಕು ಹಾರ್ದಿಕ್ ಪಟೇಲ್ ಹಿಂಬಾಲಕರಲ್ಲಿ, ಮೂವರು ಬಿಜೆಪಿಯೆಡೆಗೇ ಒಲವು ಹೊಂದಿದ್ದರೆಂದು ಸಮೀಕ್ಷೆ ಬಹಿರಂಗಗೊಳಿಸಿತು!

ಮತ್ತದೇ ವೈಭವೋಪೇತ ಗೆಲುವಿಗೆ ಕ್ಷಣಗಣನೆ!!!!

ಪ್ರಸ್ತುತ ಮುಖ್ಯ ಮಂತ್ರಿ ವಿಜಯ್ ರೂಪಾನಿ ಮತ್ತದೇ ಗೆಲುವಿಗೆ ಸಿದ್ಧತೆ ನಡೆಸುತ್ತಿದ್ದಾರೆ! ಸಮೀಕ್ಷೆಯ ಪ್ರಕಾರ ಶೇ.24% ಪ್ರತಿಕ್ರಿಯೆಗಳು ವಿಜಯ್ ರೂಪಾನಿಯನ್ನೇ ಮುಖ್ಯಮಂತ್ರಿಯಾಗಿ ನೋಡಲು ಬಯಸಿದ್ದರೆ, ಶೇ.7% ಪ್ರತಿಕ್ರಿಯೆಗಳು ಮೋದಿಯದ್ದಾಗಿವೆ. ಉಳಿದ ಶೇ.2% ಅಮಿತ್ ಶಾ ನನ್ನು ಮುಖ್ಯಮಂತ್ರಿಯಾಗಲು ಬಯಸಿದ್ದರೆ, ಶೇ.43% ಬಿಜೆಪಿಯಷ್ಟೇ ಎಂದಿದೆ! ಇಷ್ಟೆಲ್ಲ ಸಮೀಕ್ಷೆಗಳು ನಡೆದ ನಂತರವೂ ಗೊತ್ತಾಗುವುದಿಷ್ಟೇ, ಗುಜರಾತ್ ‘ಮತ್ತದೇ ಕಾಂಗ್ರೆಸ್-ಮುಕ್ತ ವೈಭವಕೆ ತಯಾರಿ ನಡೆಸುತ್ತಿದೆ.’

 

– ತಪಸ್ವಿ

Tags

Related Articles

Close