ಪ್ರಚಲಿತರಾಜ್ಯ

ಗೌರಿ ಲಂಕೇಶ್ ಕೊಲೆ ಹಿಂದೆ ನಕ್ಸಲರಿದ್ದಾರೆಯೇ? ಶಂಕೆಗೆ ಕಾರಣವಾದ ಇಂದ್ರಜಿತ್ ಲಂಕೇಶ್ ಹೇಳಿಕೆ!!! ಅಷ್ಟಕ್ಕೂ ನಕ್ಸಲರ ಮೇಲೆ ಅನುಮಾನವೇಕೆ?!

ಗೌರಿ ಲಂಕೇಶ್ ಅವರ ಕೊಲೆಯನ್ನು ಬಲಪಂಥೀಯರಿಗೆ ಕಟ್ಟುವ ವ್ಯವಸ್ಥಿತ ಪಿತೂರಿಯೊಂದು ನಡೆಯುತ್ತಿದೆ. ಈ ಮೊದಲು ನಡೆದಿರುವ ಪ್ರಗತಿಪರ ಚಿಂತಕರಾದ
ಮಹಾರಾಷ್ಟ್ರದ ಗೋವಿಂದ ಪಾನ್ಸರೆ, ನರೇಂದ್ರ ದಾಬೋಲ್ಕರ್, ಕರ್ನಾಟಕದ ಎಂ. ಕಲಬುರ್ಗಿ ಹತ್ಯೆಯ ಬಗ್ಗೆಯೂ ಹಿಂದೂ ಮೂಲಭೂತವಾದಿಗಳ
ಕೃತ್ಯವೆಂದು ಆರೋಪ ಮಾಡಲಾಗಿತ್ತಿದೆ. ಯಾವುದೇ ಸುಳಿವನ್ನು ನೀಡದೆ ನಾಜೂಕಾಗಿ ಹತ್ಯೆ ಮಾಡಿರುವುದನ್ನು ನೋಡಿದಾಗ ಇದೊಂದು ಪಕ್ಕಾ ವೃತ್ತಿನಿರತ
ಶಾರ್ಪ್‍ಶೂಟರ್ ಕಿಲ್ಲರ್‍ಗಳ ಕೆಲಸ ಎಂದು ಅಂದಾಜಾಗುತ್ತದೆ.

ಯಾಕೆಂದರೆ ಗೌರಿಯವರ ಹಣೆ ಮತ್ತು ಎದೆಯನ್ನೇ ಗುರಿಯಾಗಿಸಿ ಗುಂಡು ಹಾರಿಸಿ ಹತ್ಯೆ ಮಾಡಿರುವುದನ್ನು ನೋಡಿದಾಗ ಇದೇ ರೀತಿ ಅನಿಸುವುದು ಸಹಜ. ಈ ಎಲ್ಲಾ ವಿದ್ಯಾಮಾನವನ್ನು ನೋಡಿದಾಗ ಹತ್ಯೆಯ ಹಿಂದೆ ನಕ್ಸಲರ ಕೈವಾಡದ ಬಗ್ಗೆ ಶಂಕೆ ಮೂಡುವುದು ಸಹಜ. ಯಾಕೆಂದರೆ ನಕ್ಸಲರು ಗೆರಿಲ್ಲಾ ಹಾಗೂ ಶಶ್ತ್ರಾಸ್ತ್ರ ತರಬೇತಿಯನ್ನು ಪಡೆದು ಪರಿಣತರಂತೆ ಹೋರಾಟ ನಡೆಸುತ್ತಾರೆ. ಇಲ್ಲಿ ನಡೆದಿರುವ ಕೊಲೆ ಹಾಗೂ ಅವರ ಸಹೋದರ ಇಂದ್ರಜಿತ್ ಲಂಕೇಶ್ ನೀಡಿದ ಹೇಳಿಕೆಯನ್ನು ನೋಡಿದಾಗ ಈ ಕೊಲೆ ನಕ್ಸಲರದ್ದೂ ಆಗಿರಬಹುದೆನ್ನುವ ಶಂಕೆ ಹುಟ್ಟಿಕೊಳ್ಳುತ್ತದೆ.

ಗೌರಿ ಲಂಕೇಶ್ ಅವರಿಗೆ ನಕ್ಸಲರು ದ್ವೇಷಪೂರಿತ ಪತ್ರಗಳನ್ನು ಬರೆದು ಕಳುಹಿಸುತ್ತಿದ್ದರು ಎಂದು ಸಹೋದರ ಇಂದ್ರಜಿತ್ ಲಂಕೇಶ್ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಗೌರಿ ಲಂಕೇಶ್ ನೇತೃತ್ವದ ತಂಡ ಕಾರ್ಯನಿರ್ವಹಿಸುತ್ತಿತ್ತು. ಅವರ ಈ ಪ್ರಯತ್ನಗಳು ಯಶಸ್ವಿ ಕೂಡ ಆಗಿತ್ತು. ನಕ್ಸಲರಾಗಿದ್ದ ದಂಪತಿಗಳಿಬ್ಬರನ್ನು ಗೌರಿ ಲಂಕೇಶ್ ಅವರು ಮುಖ್ಯವಾಹಿನಿಗೆ ತಂದಿದ್ದರು. ಈ ಸಂಬಂಧ ನಕ್ಸಲರು ಸಹೋದರಿ ಮೇಲೆ ದ್ವೇಷ ಬೆಳೆಸಿಕೊಂಡಿದ್ದರು. ಗೌರಿಯವರಿಗೆ ಹಲವು ಬಾರಿ ದ್ವೇಷಪೂರಿತ ಪತ್ರಗಳು ಕೂಡ ಬಂದಿವೆ. ತನಿಖಾಧಿಕಾರಿಗಳು ನಕ್ಸಲರ ಆಯಾಮದಲ್ಲಿಯೂ ತನಿಖೆ ನಡೆಸಬೇಕು ಎಂದು ಹೇಳಿರುವುದು ಚರ್ಚೆಗೆ ಗ್ರಾಸವೊದಗಿಸಿದೆ. ಈ ಪತ್ರಗಳ ಆಧಾರದಲ್ಲಿ ತನಿಖಾ ತಂಡ ತನಿಖೆ ನಡೆಸಿದರೆ ಗೌರಿ ಕೊಲೆ ರಹಸ್ಯ ಬೆಳಕಿಗೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ.

ಗೌರಿ ಲಂಕೇಶ್‍ಗೆ ಬೆದರಿಕೆಗಳು ಬರುತ್ತಿದ್ದಿರುವುದನ್ನು ಉಲ್ಲೇಖಿಸಿದ ಇಂದ್ರಜಿತ್, ಗೌರಿ ಲಂಕೇಶ್‍ಗೆ ಸಾಕಷ್ಟು ಬೆದರಿಕೆಗಳು ಬರುತ್ತಿದ್ದರೂ ಈ ಬಗ್ಗೆ ಕುಟುಂಬ
ಸದಸ್ಯರೊಂದಿಗೆ ಹೇಳಿಕೊಂಡಿರಲಿಲ್ಲ. ನನ್ನೊಂದಿಗಾಗಲೀ, ತಾಯಿ, ಸಹೋದರಿಯೊಂದಿಗಾಗಲೀ ಹೇಳಿಕೊಂಡಿರಲಿಲ್ಲ. ಕೆಲ ದಿನಗಳ ಹಿಂದಷ್ಟೇ ಗೌರಿ ಲಂಕೇಶ್
ಅವರನ್ನು ಭೇಟಿ ಮಾಡಿ 2 ಗಂಟೆಗಳ ಕಾಲ ಮಾತನಾಡಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಮುಖ್ಯಮಂತ್ರಿಗಳನ್ನು ಭೇಟಿಯಾದ
ಸಂದರ್ಭದಲ್ಲಿಯೂ ತನಗೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಅವರು ಹೇಳಿಕೊಂಡಿಲ್ಲ. ರಾಜ್ಯ ಸರ್ಕಾರ ಎಸ್‍ಐಟಿ ತನಿಖೆಯಲ್ಲಿ ನನಗೆ ಯಾವುದೇ ರೀತಿಯ
ವಿಶ್ವಾಸವಿಲ್ಲ. ಇದೇ ಸರ್ಕಾರದ ಅವಧಿಯಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ. ಆದರೆ, ಸತ್ಯ ಮಾತ್ರ ಹೊರಗೆ ಬಂದಿಲ್ಲ. ಹೀಗಾಗಿ ಸಹೋದರಿಯ ಹತ್ಯೆ
ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಹತ್ಯೆ ಪ್ರಕರಣ ಸಂಬಂಧ ಆರ್’ಎಸ್‍ಎಸ್ ಹಾಗೂ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಕಿಡಿಕಾರಿರುವ ಅವರು, ರಾಹುಲ್ ಗಾಂಧಿಯವರು ನನ್ನ ಸಹೋದರಿಯ ಹತ್ಯೆ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಬಾರದು. ಹಂತಕರು ಇವರೇ ಎಂದು ನಿಮಗೆ ಸ್ಪಷ್ಟವಾಗಿ ಗೊತ್ತಿದ್ದರೆ ಅಥವಾ ಮಾಹಿತಿ ಇದ್ದರೆ ಅದನ್ನು ನೇರವಾಗಿ ತನಿಖಾಧಿಕಾರಿಗಳಿಗೆ ನೀಡಲಿ ಎಂದು ತಿಳಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆಯ ಬಗ್ಗೆ ತನಿಖಾ ದಳಕ್ಕೂ ನಕ್ಸಲ್ ಕೈವಾಡದ ಶಂಕೆ ಮೂಡಿಸಿದೆ. ಈಗಾಗಲೇ ಚಿಕ್ಕಮಗಳೂರಿನ ಶಂಕಿತನೋರ್ವನನ್ನು ಬಂಧಿಸಲಾಗಿದೆ.
ಸ್ಥಳೀಯರ ಮಾಹಿತಿಯನ್ನಾಧರಿಸಿ ಹಂತಕನ ರೇಖಾಚಿತ್ರವನ್ನೂ ತಯಾರಿಸಲಾಗುತ್ತಿದೆ. ಒಂದು ವೇಳೆ ನಕ್ಸಲ್ ಶಂಕೆ ನಿಜವೇ ಆಗಿದ್ದರೆ, ಗೋವಿಂದ ಪನ್ಸಾರೆ,
ನರೇಂದ್ರ ದಾಬೋಲ್ಕರ್, ಎಂ.ಎಂ. ಕಲಬುರ್ಗಿ ಹತ್ಯೆಯ ಬಗ್ಗೆಯೂ ಸುಳಿವು ಸಿಗುವು ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಮಾಡಿದ ಪ್ರಯತ್ನಗಳೇ ಗೌರಿ ಲಂಕೇಶ್‍ಗೆ ಉರುಳಾಗಿರುವ ಸಾಧ್ಯತೆ ಇದೆಯೇ? ಈ ಬಗ್ಗೆ ವಿಶ್ಲೇಷಿಸಿದರೆ ಕೆಲವೊಂದು
ಪೂರಕ ಅಂಶಗಳು ಪತ್ತೆಯಾಗುತ್ತವೆ.

ಗೌರಿ ಲಂಕೇಶ್ ಅವರು ಇತ್ತೀಚೆಗೆ ಯಾವುದೇ ಚಟುವಟಿಕೆಗಳಲ್ಲಿ ತೊಡಗದೆ ಪತ್ರಿಕೆ ನಿರ್ವಹಣೆ, ವೈಯಕ್ತಿಕ ಸಮಸ್ಯೆಗಳಿಂದಲೇ ಸಾಕಷ್ಟು ಹೈರಾಣಾಗಿದ್ದರು. ಈ
ಮುಂಚೆ ಗೌರಿ ಲಂಕೇಶ್ ಕೋಮು ಸೌಹಾರ್ದ ವೇದಿಕೆ, ಪ್ರಗತಿಪರ ವೇದಿಕೆ ಮೂಲಕ ನಕ್ಸಲ್ ವಾದಿಗಳಾದ ಸಿರಿಮನೆ ನಾಗರಾಜ್, ನೂರ್ ಶ್ರೀಧರ್ ಮತ್ತಿತರರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಇದು ನಕ್ಸಲರಲ್ಲಿ ಭಿನ್ನಾಭಿಪ್ರಾಯ ಮೂಡಿಸಿ ಗೌರಿ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪೈಕಿ ಬಿ.ಜಿ. ಕೃಷ್ಣಮೂರ್ತಿ ನೇತೃತ್ವದ ನಕ್ಸಲ್ ಗುಂಪು ಅಂತೂ ಗೌರಿ ಲಂಕೇಶ್ ಪ್ರಯತ್ನದ ಬಗ್ಗೆ ಭಾರೀ ಆಕ್ರೋಶಗೊಂಡಿತ್ತು. ಅವರು ನಕ್ಸಲ್ ಹೋರಾಟ
ದುರ್ಬಲಗೊಳಿಸುತ್ತಿದ್ದಾರೆ. ಗೌರಿ ಈ ಪ್ರಯತ್ನದ ಹಿಂದೆ ಲಾಭ ಮಾಡಿಕೊಳ್ಳುವ ದುರುದ್ದೇಶವನ್ನು ಹೊಂದಿದ್ದಾರೆ ಎಂಬ ಆರೋಪವನ್ನು ಈ ಗುಂಪು ಮಾಡುತ್ತಲೇ
ಬರುತ್ತಿತ್ತು. ಆದರೆ ಹಿಂದಿನಿಂದಲೂ ಇಂಥಾ ನಟೋರಿಯಸ್‍ಗಳ ಬಗ್ಗೆ ಗೌರಿ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದ್ದರು.

ಗೌರಿ ಅವರು ಈ ಮುಂಚೆ ಮಾಡಿದ ಎಡವಟ್ಟೊಂದು ಎರವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಗೌರಿ ಅವರು ನಕ್ಸಲ್ ನಾಯಕ ಸಾಕೇತ್ ರಾಜನ್ ಅವರನ್ನು ಸಂದರ್ಶನ ಮಾಡಿ ಫೋಟೋ ಸಮೇತ ತಮ್ಮ ಸಂಪಾದಕತ್ವದ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇದಾದ ನಂತರ ಸಾಕೇತ್ ರಾಜನ್ ಪೋಲಿಸ್ರ ಗುಂಡಿಗೆ ಬಲಿಯಾಗಿದ್ದರು. ಗೌರಿ ಅವರು ಫೋಟೋ ಪ್ರಕಟಿಸಿದ್ದರಿಂದಲೇ ಪೋಲಿಸ್ ರಿಗೆ ಅವರ ಗುರುತು ಪತ್ತೆ ಹಚ್ಚಲು ಸಾಧ್ಯವಾಯಿತು. ಇದರಿಂದಾಗಿಯೇ ಅವರ ಹತ್ಯೆಯಾಯಿತು ಎಂದೂ ನಕ್ಸಲರ ಒಂದು ಗುಂಪು ಗೌರಿ ಲಂಕೇಶ್ ಅವರ ಮೇಲೆ ಕತ್ತಿ ಮಸೆಯುತ್ತಿತ್ತು. ಇದನ್ನೆಲ್ಲಾ ನೋಡಿದಾಗ ಪ್ರತೀಕಾರದ ಹತ್ಯೆಯಾಗಿರುವ ಸಾಧ್ಯತೆಗಳೂ ಇವೆ.

ಕಳೆದೆರಡು ತಿಂಗಳಿಂದಲೂ ಗೌರಿ ಅವರಿಗೆ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಪ್ರಾಣ ಬೆದರಿಕೆ ಒಡ್ಡಿದ್ದರು ಎಂದು ತನ್ನ ಆಪ್ತರಲ್ಲಿ ಹೇಳಿಕೊಂಡಿದದ್ದರು.
ತಮ್ಮೊಳಗಡೆ ಇರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವಂತೆ ಟ್ವೀಟ್‍ನಲ್ಲೂ ವಿವರಿಸಿದ್ದರು. ಅವರ ಟ್ವೀಟ್‍ನ ಒಕ್ಕಣೆಗೂ ಅವರ ಕೊಲೆಗೂ ಒಂದಕ್ಕೊಂದು
ಸಂಬಂಧವಿದೆಯಾ ಎಂಬ ಬಗ್ಗೆಯೂ ತನಿಖೆ ನಡೆಯಬೇಕು.

ಒಟ್ಟಿನಲ್ಲಿ ಗೌರಿ ಕೊಲೆಯು ಒಂದು ರಹಸ್ಯ ಕುತಂತ್ರದಂತೆ ಕಂಡುಬರುತ್ತಿದೆ.

ಇಷ್ಟೆಲ್ಲಾ ಇದ್ದರೂ ಗೌರಿ ಅವರ ಕೊಲೆಯನ್ನು ಬಲಪಂಥೀಯರ ಮೇಲೆ ಹೊರಿಸುವ ಕೃತ್ಯ ನಡೆಯುತ್ತದೆ. ಸಿದ್ಧಾಂತವಾದಿಗಳನ್ನು ಕೊಲೆ ನಡೆಸಿ ಯಾರಿಗೂ
ಆಗಬೇಕಾಗಿರುವುದು ಏನೂ ಕೂಡಾ ಇಲ್ಲ. ಯಾಕೆಂದರೆ ಹಿಂದೂಗಳು ಇಸ್ಲಾಂನಂತೆ ಕಟ್ಟರ್ ಮೂಲಭೂತ ಚಿಂತನೆಗಳನ್ನು ಹೊಂದಿಲ್ಲ.
ಪೊಲೀಸರು ಒಂದು ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದರೂ ರಾಹುಲ್ ಗಾಂಧಿ, ಸಿನಿನಟ ಪ್ರಕಾಶ್ ರೈ ಯಂಥವರು ಬಲಪಂಥೀಯರ ಕೈವಾಡದ ಬಗ್ಗೆ ಶಂಕೆ
ವ್ಯಕ್ತಪಡಿಸುತ್ತಾರೆ. ಒಂದು ತನಿಖೆಯ ಪ್ರಕ್ರಿಯೆ ಪೂರ್ಣಗೊಳ್ಳದೆ ಆರೋಪಿಗಳು ಸಿಗದೇ ಇದ್ದ ಪಕ್ಷದಲ್ಲಿ ಸುಳ್ಳಾರೋಪಗಳನ್ನು ಮಾಡುವ ವ್ಯಕ್ತಿಗಳನ್ನು ಬಂಧಿಸಿ
ಅವರಿಂದ ಮಾಹಿತಿ ಪಡೆದುಕೊಳ್ಳಲು ಸಾಧ್ಯವಿದೆ.

ತನಿಖೆಯ ಶೈಲಿಯನ್ನು ನೋಡಿದಾಗ ಸಿದ್ದರಾಮಯ್ಯನ ಸರಕಾರಕ್ಕೆ ಗೌರಿ ಕೊಲೆ ಆರೋಪಿಗಳನ್ನು ಪತ್ತೆಹಚ್ಚುವ ಉತ್ಸಾಹವಿಲ್ಲ. ಮುಂದಿನ ಚುನಾವಣೆಯ ವರೆಗೆ
ಪ್ರಕರಣವನ್ನು ಇಟ್ಟುಕೊಂಡು, ಸಂಘಪರಿವಾರದ ಮೇಲೆ ಆರೋಪಿಸಿ, ಓಟು ಪಡೆದು ಮತ್ತೊಮ್ಮೆ ಸರಕಾರ ರಚಿಸುವ ಕನಸನ್ನು ಸಿದ್ದರಾಮಯ್ಯ ಕಾಣುತ್ತಿದ್ದಾರೆ. ಚಿತೆಯ ಮುಂದೆ ಕುಳಿತು ಚಳಿ ಕಾಯಿಸುವುದು ಅಂದರೆ ಇದೇ ಅಲ್ಲವೇ?

ಚೇಕಿತಾನ

Tags

Related Articles

Close