ಪ್ರಚಲಿತ

ಚರಕ ತಿರುಗಿಸಿ ನೂಲು ತೆಗೆದ ಬೆಂಜಮಿನ್ ದಂಪತಿ. ಇಸ್ರೇಲ್ ಪ್ರಧಾನಿಯ ಹಿಂದಿ ಘೋಷ ಹೇಗಿತ್ತು? ಮೋದಿ ತವರಲ್ಲಿ ಬೆಂಜಮಿನ್ ಮಾಡಿದ ಮೋಡಿಯೇನು?

ಮೋದಿ ಪ್ರಧಾನಿಯಾದ ನಂತರ ವಿಶ್ವದ ದಿಗ್ಗಜರೆಲ್ಲಾ ಮೋದಿ ಮೋಡಿಗೆ ತಲೆಬಾಗಿದ್ದು ಈಗ ಇತಿಹಾಸ. ಅಮೇರಿಕಾ, ಚೀನಾ, ಜಪಾನ್, ಇಂಗ್ಲೆಂಡ್, ಆಸ್ಟೇಲಿಯಾ ಸಹಿತ ಅನೇಕ ರಾಷ್ಟ್ರಗಳೂ ಮೋದಿಯನ್ನು ಬರಸೆಳೆದು ಅಪ್ಪಿಕೊಂಡಿದೆ. ಭಾರತದ ಬದ್ಧ ವೈರಿ ರಾಷ್ಟ್ರ ಪಾಕಿಸ್ಥಾನ ಕೂಡಾ ಪ್ರಧಾನಿ ಮೋದಿಯನ್ನು ಕೊಂಡಾಡಿತ್ತು. ಮೋದಿಯೇನೂ ಕಡಿಮೆ ಇಲ್ಲ ಬಿಡಿ. ಕೇವಲ ಒಂದೇ ಒಂದು ಗಂಟೆಯಲ್ಲಿ ನಿರ್ಧಾರವನ್ನು ಕೈಗೊಂಡು ಭಯೋತ್ಪಾದಕರ ಹುಟ್ಟು ರಾಷ್ಟ್ರ ಪಾಕಿಸ್ಥಾನಕ್ಕೆ ಯಾವುದೇ ಭದ್ರತೆ ಇಲ್ಲದೆ ತೆರಳಿ ಸೈ ಎನಿಸಿಕೊಂಡು ಬಿಟ್ಟಿದ್ದಾರೆ. ಮೋದಿಯ 56 ಇಂಚಿನ ಎದೆಯ ತಾಕತ್ತು ಅದಾಗಲೇ ವಿಶ್ವವ್ಯಾಪಿಯಲ್ಲಿ ಚರ್ಚೆಯಾಗಿ ಹೋಗಿತ್ತು.

ಹಿಂದೀ-ಹಿಬ್ರೂ (ಭಾರತ ಇಸ್ರೇಲ್) ಬಾಯಿ ಬಾಯಿ…

ಇಸ್ರೇಲ್. ಅದೊಂದು ಸಣ್ಣ ರಾಷ್ಟ್ರ. 50 ಲಕ್ಷ ಜನಸಂಖ್ಯೆಯನ್ನು ದಾಟದ ರಾಷ್ಟ್ರ. ಆ ರಾಷ್ಟ್ರದ ಸಾಮಾಥ್ರ್ಯ ಎಷ್ಟಿದೆ ಎಂದರೆ ಜಗತ್ತಿನ ಯಾವೊಂದು ರಾಷ್ಟ್ರಕ್ಕೂ ಇಸ್ರೇಲ್ ದೇಶವನ್ನು ಮಣಿಸಲು ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಇದೆ ಆ ರಾಷ್ಟ್ರದ ತಾಕತ್ತು. ಜಗತ್ತಿನ ಯಾವೊಬ್ಬ ಸೈನಿಕನೂ ಇಸ್ರೇಲ್ ದೇಶದ ಸೈನಿಕನನ್ನು ಹತ್ಯೆ ಮಾಡಿದರೆ, ಆ ದೇಶದ ಪ್ರಧಾನಿಯ ಪಕ್ಕದಲ್ಲಿರುವ ಸೈನಿಕನ ತಲೆಯನ್ನು ಕಡಿದು ತರುತ್ತಾರೆ ಈ ಇಸ್ರೇಲ್ ದೇಶದ ಸೈನಿಕರು. ಅಷ್ಟೊಂದು ಪುಟ್ಟ ರಾಷ್ಟ್ರವಾಗಿದ್ದರೂ ರಕ್ಷಣಾ ಕ್ಷೇತ್ರದಲ್ಲಿ ಇಸ್ರೇಲ್ ಮಾಡಿದ ಸಾಧನೆ ಮಾತ್ರ ಅಮೋಘ.

ಭಾರತ-ಇಸ್ರೇಲ್ ಸ್ನೇಹ ಇಂದು ನಿನ್ನೆಯದಲ್ಲ. ಅದು 25 ವರ್ಷಗಳ ಹಳೆಯ ಸ್ನೇಹ. ಆದರೆ ಆ ರಾಷ್ಟ್ರಕ್ಕೆ ಭಾರತದ ಪ್ರಧಾನಿಯಾಗಿ ಮೊದಲ ಭೇಟಿ ನೀಡಿದ್ದು ಮಾತ್ರ ನಮ್ಮ ಪ್ರಧಾನಿ ನರೇಂದ್ರ ಮೋದಿ. ಮೋದಿ ಬರುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಆ ರಾಷ್ಟ್ರದ ಸಂತಸ ಇಮ್ಮಡಿಯಾಗಿತ್ತು. ಮೋದಿಯನ್ನು ಭವ್ಯವಾಗಿ ಸ್ವಾಗತಿಸಿ ಅದ್ಧೂರಿ ಜಾತ್ರೆಯನ್ನೇ ನಡೆಸಿತ್ತು.

ಈಗ ಅದೇ ಇಸ್ರೇಲ್ ರಾಷ್ಟ್ರದ ದೊರೆ ಭಾರತಕ್ಕೆ ಆಗಮಿಸಿದ್ದಾರೆ. 6 ದೇಶಗಳ ಪ್ರವಾಸದ ನಿಮಿತ್ತ ಇಂದು ಭಾರತಕ್ಕೆ ಆಗಮಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಹಾಗೂ ಅವರ ಪತ್ನಿ ದೇಶದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ನಿನ್ನೆ ತಾನೇ ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್‍ಗೆ ಭೇಟಿ ನೀಡಿದ್ದರು.

ಮೋದಿ ತವರಿಗೆ ಆಗಮಿಸಿದ ನೇತಾನ್ಯಾಹು…

ಇಂದು ನಮ್ಮ ಪ್ರಧಾನಿ ಮೋದಿ ತವರು ಗುಜರಾತಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಆಗಮಿಸಿದ್ದಾರೆ. ದಂಪತಿ ಸಮೇತ ಆಗಮಿಸಿದ ಇಸ್ರೇಲ್ ಪ್ರಧಾನಿ ಅಹಮ್ಮದಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ಪ್ರಧಾನಿ ದಂಪತಿಗಳಿಗೆ ಮೋದಿ ಭವ್ಯ ಸ್ವಾಗತವನ್ನು ಕೋರಿದ್ದಾರೆ. ವಿಮಾನ ನಿಲ್ದಾಣದಲ್ಲಿ ಆಯೋಜಿಸಿದ್ದ ಜನಪದ ಕಾರ್ಯಕ್ರಮಗಳನ್ನು ವೀಕ್ಷಿಸಿದ ಬೆಂಜಮಿನ್ ದಂಪತಿಗಳು ಅಲ್ಲಿಂದ ನೇರವಾಗಿ ರೋಡ್ ಶೋ ಮೂಲಕ ಮೂಲಕ ಸಾಬರಮತಿ ಆಶ್ರಮ ತಲುಪಿದ್ದಾರೆ.

ಸುಮಾರು 8 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ ಹಾಗೂ ನೇತಾನ್ಯಾಹು ದಂಪತಿಗಳು ಒಂದೇ ಕಾರಿನಲ್ಲಿ ಸಾಬರಮತಿ ಆಶ್ರಮಕ್ಕೆ ತಲುಪಿದ್ದಾರೆ. ಸಾಬರಮತಿ ಆಶ್ರಮ ತಲುಪಿರುವ ಉಭಯ ರಾಷ್ಟ್ರಗಳ ಧಿಗ್ಗಜರು ಸಾಬರಮತಿ ಆಶ್ರಮದಲ್ಲಿರುವ ಮಹಾತ್ಮ ಗಾಂಧೀಜಿಯ ಆಶ್ರಮಕ್ಕೆ ತೆರಳಿದ್ದಾರೆ.

ಗಾಂಧಿ ಚರಕವನ್ನು ತಿರುಗಿಸಿ ನೂಲು ತೆಗೆದ ನೇತಾನ್ಯಾಹು ದಂಪತಿಗಳು…

ಸಾಬರಮತಿ ಆಶ್ರಮಕ್ಕೆ ಆಗಮಿಸಿದ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ನೇತಾನ್ಯಾಹು ದಂಪತಿಗಳು ಸಾಬರಮತಿಯಲ್ಲಿ ಮಹಾತ್ಮ ಗಾಂಧೀಜಿಯ ಆಶ್ರಮಕ್ಕೆ ತೆರಳಿ ಅಲ್ಲಿ ಕೆಲಕಾಲ ವಿಹಾರಿಸಿದರು. ಆಶ್ರಮ ಪ್ರವೇಶಿಸುತ್ತಲೇ ಮಹಾತ್ಮ ಗಾಂಧೀಜಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನೇತಾನ್ಯಾಹು ದಂಪತಿಗಳು, ಭಾವಚಿತ್ರದ ಕೆಳಗಡೆ ಬರೆದಿದ್ದ ಗಾಂಧೀ ವಾಕ್ಯಗಳನ್ನು ಓದಿದರು. ಈ ವೇಳೆ ಗಾಂಧೀಜಿಯವರು ಚರಕ ಬಳಸಿ ನೂಲು ತೆಗೆಯುತ್ತಿದ್ದ ಇತಿಹಾಸವನ್ನು ನೆತಾನ್ಯಾಹುಗೆ ತಿಳಿಸಿದ ಮೋದಿ ಅವರನ್ನು ಕುಳ್ಳಿರಿಸಿ ನೂಲು ತೆಗೆಸಿದರು. ಇದನ್ನು ನೋಡಿದ ನೇತಾನ್ಯಾಹು ದಂಪತಿಗಳು “ವಾವ್ ವಂಡರ್‍ಫುಲ್” ಎಂದಿದ್ದರು.

ಆಶ್ರಮದ ಹೊರಭಾಗಕ್ಕೆ ಆಗಮಿಸಿದ ಮೋದಿ ಹಾಗೂ ನೇತಾನ್ಯಾಹು ದಂಪತಿಗಳು ಗಾಳಿಪಟ ಹಾರಿಸುವುದರಲ್ಲಿ ಮಗ್ನರಾದರು. ಇಸ್ರೇಲ್ ಪ್ರಧಾನಿ ಹಾಗೂ ಅವರ ಪತ್ನಿಗೆ ಗಾಳಿಪಟವನ್ನು ಹೇಗೆ ಹಾರಿಸಬಹುದು ಎಂಬುವುದನ್ನು ಮೋದಿ ಹೇಳಿಕೊಟ್ಟರು. ಗಾಳಿಪಟವನ್ನು ಕೈಯಲ್ಲಿ ಹಿಡಿದು ಬಿಟ್ಟ ಕಣ್ಣು ಬಿಟ್ಟಂಗೆ ನೋಡುತ್ತಿದ್ದ ನೋಟಗಳು ಅಧ್ಬುತವಾಗಿದ್ದವು.

ನಂತರ ಅಲ್ಲೇ ಇದ್ದ ಗಾಂಧೀಜಿ ಪ್ರತಿಮೆಗೆ ಪುಷ್ಪ ನಮನವನ್ನು ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಆಶ್ರಮದ ಸುತ್ತಲೂ ಸಂಚರಿಸುವಾಗ ಪ್ರತಿಯೊಂದು ಕಥೆಗಳನ್ನೂ ಮೋದಿ ಬಿಡಿಸಿ ಬಿಡಿಸಿ ಹೇಳುತ್ತಿದ್ದರು. ನೇತಾನ್ಯಾಹು ಹಾಗೂ ಅವರ ಪತ್ನಿ ಮೇಲಿಂದ ಮೇಲೆ ಕೇಳುತ್ತಿದ್ದ ಪ್ರಶ್ನೆಗಳಿಗೆ ಮೋದಿಯವರು ತಣ್ಣನೆ ಉತ್ತರ ನೀಡುತ್ತಿದ್ದುದು ಗಮನ ಸೆಳೆಯುತ್ತಿತ್ತು.

ಅಹಮದಬಾದ್ ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮದವರೆಗೂ ರೋಡ್ ಶೋ ಮೂಲಕ 8 ಕಿಲೋ ಮೀಟರ್ ತೆರಳಿದ್ದರು. ಈ ವೇಳೆ ಸಾವಿರಾರು ಅಭಿಮಾನಿಗಳು ಭಾರತ ಹಾಗೂ ಇಸ್ರೇಲ್ ಧ್ವಜಗಳನ್ನು ಹಿಡಿದು ಉಭಯ ರಾಷ್ಟ್ರಗಳ ನಾಯಕರನ್ನು ಸ್ವಾಗತಿಸಿದರು. ಸಾಬರ ಮತಿಯಲ್ಲಿ ಇಳಿದ ಮೋದಿ ಹಾಗೂ ನೇತಾನ್ಯಾಹು ದಂಪತಿಗಳು ಜನರತ್ತ ಭಾರತೀಯ ಶೈಲಿಯಲ್ಲಿಯೇ ಕೈ ಮುಗಿದು ಅಭಿನಂದಿಸಿದರು.

https://www.ndtv.com/video/news/news/after-8-km-roadshow-pm-modi-netanyahu-at-gandhi-s-ashram-476798

ಜೈಹಿಂದ್, ಜೈ ಇಸ್ರೇಲ್…

ಇನ್ನು ಕಾರ್ಯಮದಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು “ನಮ್ಮದು ಅತ್ಯಂತ ಶ್ರೇಷ್ಟವಾದ ಸ್ನೇಹ. ಈ ಸ್ನೇಹ ಇನ್ನಷ್ಟು ಗಟ್ಟಿಯಾಗಿದೆ. ಎಲ್ಲಾ ರಂಗಗಳಲ್ಲೂ ನಾವು ಒಟ್ಟಾಗಿ ಮುನ್ನಡೆಯಬೇಕಾಗಿದೆ. ಈ ದೇಶ ನನಗೆ ತುಂಬಾನೆ ಇಷ್ಟವಾಗಿದೆ. ಮೋದಿಯವರು ದೂರದೃಷ್ಟಿಯುಳ್ಳ ಅದ್ಭುತ ನಾಯಕ” ಎಂದಿದ್ದಾರೆ. ಮಾತ್ರವಲ್ಲದೆ ಎರಡೂ ದೇಶಗಳನ್ನೂ ಒಂದು ಗೂಡಿಸಿ ಹಿಂದಿಯಲ್ಲಿ “ಜೈ ಹಿಂದ್ ಜೈ ಇಸ್ರೇಲ್” ಎಂಬ ಮಂತ್ರ ಘೋಷವನ್ನು ಉಚ್ಚರಿಸಿದರು. ಭಾರತದ ಶೈಲಿಯಲ್ಲಿಯೇ ಭಾಷಣ ಮುಗಿಸಿದ ನೇತಾನ್ಯಾಹು ಜೈ ಹಿಂದ್ ಜೈ ಇಸ್ರೇಲ್ ಎಂದು ಹೇಳಿ ವಿರಮಿಸಿದರು.

ಒಟ್ಟಿನಲ್ಲಿ ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ದಂಪತಿಗಳು ಇಲ್ಲಿನ ಕಲೆ, ಸಂಸ್ಕøತಿ, ಪ್ರೇಕ್ಷಣೀಯ ಸ್ಥಳಗಳನ್ನು ಕಂಡು ಮೂಕ ವಿಸ್ಮಿತರಾಗಿದ್ದು, ಈ ಉಭಯ ದೇಶಗಳ ಇತಿಹಾಸದಲ್ಲೇ ಇದೊಂದು ಹೊಸ ಭಾಷ್ಯ ಬರೆದಂತಾಗಿದೆ ಅನ್ನೋದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.

-ಸುನಿಲ್ ಪಣಪಿಲ

Tags

Related Articles

Close