ಪ್ರಚಲಿತ

ಟಿಪ್ಪುವಿನ ಹೆಸರಲ್ಲಿ ಕುಟ್ಟಪ್ಪನ ಕೊಂದಾಯ್ತು! ಇದೀಗ ಮತ್ತೊಬ್ಬನ ಕೊಲೆಗೆ ಮಹೂರ್ತ ಫಿಕ್ಸ್? ಸಿದ್ದಪ್ಪಾ ಜೀವ ತೆಗಿಬೇಡಪ್ಪಾ!

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಮುಸಲ್ಮಾನರ ಓಲೈಕೆಗೆ ಅದೇನೇನು ನಾಟಕವಾಡುತ್ತೋ ಗೊತ್ತಿಲ್ಲ!! ಟಿಪ್ಪು ಜಯಂತಿಯನ್ನು ಆಚರಿಸಬೇಕೆಂದು ರಾಜ್ಯ ಸರಕಾರ ನಿರ್ಧರಿಸಿದ ಹಿನ್ನಲೆಯಲ್ಲಿ ಎಲ್ಲೆಡೆ ಭಾರೀ ಆಕ್ರೋಶಕ್ಕೆ ಕಾರಣವಾಯಿತಲ್ಲದೇ ವಿವಾದವನ್ನೇ ಸೃಷ್ಟಿಸಿದ ಆಚರಣೆ ಇದಾಗಿದೆ ಎಂದರೆ ತಪ್ಪಾಗಲಾರದು!! ಟಿಪ್ಪು ಆಚರಣೆಯ ಬಗ್ಗೆ ಎಲ್ಲೆಡೆ ವಿವಾದಗಳು ಸೃಷ್ಟಿಯಾಗುತ್ತಿದ್ದರೂ ಕೂಡ ಸಿದ್ದರಾಮಯ್ಯ ಸರಕಾರ ಟಿಪ್ಪುವನ್ನು ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ ಮಹಾನ್ ಸಾಧಕ ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೋಡಿದರೇ, ಟಿಪ್ಪುವಿನ ಮೇಲಿರುವ ಮೋಹವು ಸಿದ್ದರಾಮಯ್ಯ ಅವರನ್ನು ಕೂಡ ಬಿಡಲಿಲ್ಲವೇ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಲೇ ಬೇಕು!!

ಆದರೆ ಟಿಪ್ಪು ಜಯಂತಿಯ ಪರ ಹಾಗೂ ವಿರೋಧ ಚರ್ಚೆ ಪ್ರತಿದಿನ ಹೆಚ್ಚುತ್ತಿದ್ದು, ಇತ್ತೀಚೆಗೆ ತುಸು ಗಂಭೀರ ಸ್ವರೂಪವನ್ನೇ ಪಡೆಯುತ್ತಿವೆ. ಆದರೆ ಕರ್ನಾಟಕದ ಹೃದಯಭಾಗವಾದ ಬೆಂಗಳೂರಿನಲ್ಲಿ ಟಿಪ್ಪು ಜಯಂತಿಯನ್ನು ವಿರೋಧಿಸಿದ್ದಕ್ಕೆ ಜೀವ ಬೆದರಿಕೆಯ ಕರೆ ಬಂದಿರುವುದು ಮಾತ್ರ ಅಕ್ಷರಶಃ ನಿಜ!! ಹೌದು… ಬೆಂಗಳೂರಿನ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯೊಬ್ಬರಿಗೆ ಟಿಪ್ಪು ಜಯಂತಿ ವಿರೋಧಿಸಿದರೆ ತಲೆ ತೆಗೆಯುತ್ತೇನೆಂದು ಎಂದು ಜೀವ ಬೆದರಿಕೆ ಕರೆ ಬಂದಿದೆ!!

ಆದರೆ, ಸಿದ್ದರಾಮಯ್ಯ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಯಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಒಬ್ಬ ದೇಶಪ್ರೇಮಿ. ಆತ ಹಿಂದೂ ಅಥವಾ ಯಾವುದೇ ಜನಾಂಗದ ವಿರೋಧಿ ಆಗಿರಲಿಲ್ಲ. ಹೀಗಾಗಿ ಜನ ಒಪ್ಪಿದ್ದಕ್ಕೆ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದಿದ್ದಾರೆ!! ಆದರೆ ಯಾವ ಜನರು ಒಪ್ಪಿದ್ದಾರೇ ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ. ಯಾಕೆಂದರೆ ಈಡೀ ರಾಜ್ಯವೇ ಟಿಪ್ಪು ಜಯಂತಿಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರಬೇಕಾದರೆ ಟಿಪ್ಪು ಜಯಂತಿಯನ್ನು ಆಚರಿಸಲು ಒಪ್ಪಿಗೆ ನೀಡಿರುವುದಾದರೂ ಯಾರು ಎನ್ನುವುದು ಈಗಿರುವ ಪ್ರಶ್ನೆ!!

ಯಾರು ಎಷ್ಟೇ ವಿರೋಧಿಸಿದರೂ ಟಿಪ್ಪು ಜಯಂತಿಯನ್ನು ಆಚರಿಸದೆ ಬಿಡುವುದಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಛರಿಸಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನವೆಂಬರ್ 10 ರಂದು ಆಚರಿಸಲು ನಿರ್ಧರಿಸಿರುವ ಟಿಪ್ಪು ಜಯಂತಿಯ ಕುರಿತು ರಾಜ್ಯದಾದ್ಯಂತ ಪರವಿರೋಧ ಚರ್ಚೆಯಾಗುತ್ತಿದೆ. ಬಿಜೆಪಿ ನಾಯಕರು, ದೇಶದ್ರೋಹಿ ಟಿಪ್ಪು ಜಯಂತಿ ಆಚರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರೆ, ಕಾಂಗ್ರೆಸ್ಸಿಗರು, ದೇಶಪ್ರೇಮಿ ಟಿಪ್ಪು ಜಯಂತಿಯನ್ನು ಆಚರಿಸದೆ ಬಿಡುವುದಿಲ್ಲ ಎನ್ನುತ್ತಿದ್ದಾರೆ. ಉಭಯ ಪಕ್ಷಗಳ ಈ ಹಗ್ಗಜಗ್ಗಾಟಕ್ಕೆ ಕರ್ನಾಟಕದ ಜನತೆ ಮೌನಸಾಕ್ಷಿಯಾಗಿದ್ದಾರೆ. ಅಷ್ಟೇ ಅಲ್ಲದೇ, “ರಾಜ್ಯೋತ್ಸವದಷ್ಟೇ ಅಭಿಮಾನದಿಂದ ಟಿಪ್ಪು ಸೇರಿದಂತೆ 26 ಮಹಾ ಪುರುಷರು ಹಾಗೂ ಮಹಾ ಮಾತೆಯರ ಜಯಂತಿಯನ್ನು ನಮ್ಮ ಸರ್ಕಾರ ಆಚರಿಸುತ್ತಿದೆ.” ಎಂಬ ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದು, ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ!! ಅತ್ತ ಪರಿವರ್ತನಾ ಯಾತ್ರೆಯಲ್ಲಿ ನಿರತರಾಗಿರುವ ಬಿಜೆಪಿ ನಾಯಕರು ಟಿಪ್ಪು ಜಯಂತಿ ಆಚರಣೆಯ ಸರ್ಕಾರದ ನಿರ್ಧಾರ ‘ಅಲ್ಪಸಂಖ್ಯಾತರ ಓಲೈಕೆಯ ನಾಟಕ’ ಎಂದಿದ್ದಾರೆ.

ಆದರೆ, ಅಕ್ಟೋಬರ್ 23 ರಂದು ಹಮ್ಮಿಕೊಂಡಿದ್ದ ಟಿಪ್ಪು ಜಯಂತಿ ವಿರೋಧಿ ಹೋರಾಟದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಸಂದೀಪ್ ಕುಮಾರ್ ಭಾಗಿಯಾಗಿದ್ದರು. ಈ ಸಮಾವೇಶ ಮುಗಿದ ದಿನವೇ ರಾತ್ರಿ 1 ಗಂಟೆಗೆ ವೇಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಸಂದೀಪ್ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಈ ಕರೆಯು ಅಮೆರಿಕದಿಂದ ಬಂದಿದ್ದು, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾದ ಸಂದೀಪ್ ಕುಮಾರ್ ಅವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಮಡಿವಾಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು, ಟಿಪ್ಪು ಜಯಂತಿಯ ಆಚರಣೆಯ ವಿಚಾರವಾಗಿ ಆಡಳಿತ ರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತೀವೃವಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ!! ಅಲ್ಲದೇ, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರುಗಳು ಟಿಪ್ಪು ಜಯಂತಿ ಆಚರಣೆಯ ಅಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕುವ ಬಗ್ಗೆ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ!! ಟಿಪ್ಪುಸುಲ್ತಾನ ಒಬ್ಬ ಮತಾಂಧ, ಸಾವಿರಾರು ಹಿಂದೂ ದೇವಾಲಯ, ಚರ್ಚ್‍ಗಳನ್ನು ಧ್ವಂಸ ಮಾಡಿ ಲಕ್ಷಾಂತರ ಹಿಂದೂ ಕ್ರೈಸ್ತರನ್ನು ಕೊಲೆ ಮಾಡಿದ ಕ್ರೂರಿಯಾಗಿದ್ದ ಈತ, ಕನ್ನಡ ಭಾಷೆಯ ಬದಲಾಗಿ ಪರ್ಶಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಎಂದು ಎಡಪಂಥೀಯರೇ ಬರೆದಿರುವ ಬಹುತೇಕ ಕೃತಿಗಳಲ್ಲಿ ಉಲ್ಲೇಖಿತವಾಗಿದೆ!! ಆದರೆ ಕನ್ನಡ ಮತ್ತು ಸಂಸ್ಕøತಿಗೆ ಯಾವುದೇ ಕೊಡುಗೆ ನೀಡದವನ ಜಯಂತಿಯನ್ನು ಆಚರಣೆ ಮಾಡುವುದರ ಜೌಚಿತ್ಯವೇನು ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ!!

ಟಿಪ್ಪುವನ್ನು ಒಬ್ಬ ದೇಶಪ್ರೇಮಿ ಎಂದು ಕೊಂಡಾಡುತ್ತಿರುವ ಸಿದ್ದರಾಮಯ್ಯ ಅವರಿಗೆ, ಟಿಪ್ಪು ನಮ್ಮ ರಾಜ್ಯದ ದೇವಸ್ಥಾನಗಳನ್ನು ಮಾತ್ರವಲ್ಲ ನಮ್ಮ ರಾಜ್ಯದ ಕರಾವಳಿ ಭಾಗದಲ್ಲಿರುವ ಕ್ರೈಸ್ತರ ಚರ್ಚುಗಳನ್ನೂ ಕೂಡ ಟಿಪ್ಪು ಧ್ವಂಸ ಮಾಡಿದ್ದಾನೆ ಎನ್ನುವುದು ಇವರಿಗೆ ಗೊತ್ತಿಲ್ಲವೋ ಹೇಗೆ?? ಇಂತಹ ಮತಾಂಧ ಟಿಪ್ಪುವಿನ ಜಯಂತಿಯನ್ನು ಮುಖ್ಯಮಂತ್ರಿಗಳು ಆಚರಿಸುತ್ತಿರುವುದು ದೌರ್ಭಾಗ್ಯವಲ್ಲದೇ ಮತ್ತೇನು??

ಯಾವುದೇ ವ್ಯಕ್ತಿಯ ಅಥವಾ ಮಹಾ ಪುರುಷರ ಜಯಂತಿಯನ್ನು ಆಚರಿಸುವುದು ಅವರು ನಡೆದ ಬಗೆಯನ್ನು ಸ್ಮರಿಸಿ ಅವರ ಹಾದಿಯಲ್ಲಿ ಯುವ ಜನತೆ ಮುನ್ನಡೆಯಲಿ ಎಂದು. ಹಾಗಾಗಿಯೇ ರಾಮ ನವಮಿಯನ್ನು , ಬಸವ, ವಾಲ್ಮೀಕಿ ಜಯಂತಿಯನ್ನು ಜನರೇ ಆಚರಿಸುತ್ತಾರೆ, ಆದರೆ ಟಿಪ್ಪುವಿನಲ್ಲಿ ಪ್ರೇರಣೆ ಪಡೆಯುವಂತಹುದೇನಿದೆ ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ!!ನಿಮಗೇನಾದರೂ ಗೊತ್ತೇ??

Source :http://vijayavani.net/bjp-youth-wing-secratery-get-threaten-call-for-opposing-tipu-jayanti/

-ಅಲೋಖಾ

 

Tags

Related Articles

Close