ಪ್ರಚಲಿತ

ತಾವೇ ಬೆಳೆಸಿದ ಗಿಡ ಹೆಮ್ಮರವಾಗಿ ಬೆಳೆದು ತಮ್ಮ ಬುಡವನ್ನೇ ಅಲುಗಾಡಿಸತೊಡಗಿದಾಗ ನಿಷೇಧಿಸುವ ಮಾತೇಕೆ ದಿನೇಶ್ ಗುಂಡೂರಾವ್ ಅವರೇ?!

ಪಿಎಫ್‍ಐ ಸಂಘಟನೆಯನ್ನು ನಿಷೇಧಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿರುವ ವಿಷಯ ಸಧ್ಯ ಕಾಂಗ್ರೆಸ್ ಪಕ್ಷದ ಭಯವನ್ನು ತೋರಿಸುತ್ತದೆ. ಮುಸಲ್ಮಾನರ ಮತಗಳನ್ನು ಓಲೈಸುವ ಭರದಲ್ಲಿ ಉಗ್ರ ಸಂಘಟನೆಗಳಿಗೆ ಪ್ರೋತ್ಸಾಹ ನೀಡುವ ಕಾಂಗ್ರೆಸ್, ಈಗ ಬಹುಸಂಖ್ಯಾತರ ಮತಗಳನ್ನು ಕಳೆದುಕೊಳ್ಳುವ ಭಯದಲ್ಲಿ ಈಗ ಪಿಎಫ್‍ಐ ಸಂಘಟನೆಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾವನ್ನು ಆಗ್ರಹಿಸಿದೆ.

ಪಿಎಫ್‍ಐ ಸಂಘಟನೆಯ ಕರಾಳ ಮುಖವನ್ನು ನೋಡುವುದಾದರೆ, “ಸಿಮಿ” ಎಂಬ ಮುಸಲ್ಮಾನ ಸಂಘಟನೆ ಉಗ್ರ ತತ್ವವನ್ನು ಹೊಂದಿದೆ ಎನ್ನುವ ಕಾರಣಕ್ಕೆ ನಿಷೇಧಗೊಂಡ ನಂತರ, ದೇಶದಲ್ಲಿ ಅದರ ಮುಖವಾಡವನ್ನು ಧರಿಸಿಕೊಂಡು ಸಿಂಪತಿ ಹುಟ್ಟಿಸುವ ಕೆಲಸಗಳನ್ನು ಮಾಡುತ್ತಾ, ಕ್ರಮೇಣ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವ ಮೂಲಕ ದೇಶದಲ್ಲಿ ಮತ್ತೊಮ್ಮೆ ಸಿಮಿ ಯ ದರ್ಶನವನ್ನು ತೋರಿಸುತ್ತಾ ಮೆರೆಯುತ್ತಿರುವ ಸಂಘಟನೆ ಪಿಎಫ್‍ಐ.

ಆರಂಭದಲ್ಲಿ ಕೆಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್‍ರ ಭಾವಚಿತ್ರವನ್ನು ಹಿಡಿದುಕೊಂಡು ನಾಟಕವಾಡುತ್ತಿತ್ತು ಈ ಸಂಘಟನೆ. ನಂತರ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಾ, ಪರದೆಯ ಒಳಗೆ ತನ್ನ ಕರಾಳ ಮುಖವನ್ನು ತೋರಿಸುತ್ತಿತ್ತು. ಅದಾಗ್ಯೂ ಈ ಸಂಘಟನೆ ಕೆಲವು ಕೃತ್ಯಗಳನ್ನು ಮಾಡುತ್ತಿವೆ ಎಂಬುವುದಕ್ಕೆ ಯಾವ ಸಾಕ್ಷ್ಯಾಧಾರವೂ ಇರಲಿಲ್ಲ.

ಆದರೆ ಕೆಲವು ವರ್ಷಗಳಿಂದ ಪಿಎಫ್‍ಐ ಹಾಗೂ ಕೆಎಫ್‍ಡಿ ಸಂಘಟನೆಗಳು ನಡೆಸುತ್ತಿರುವ ಕೃತ್ಯಗಳು ಬಯಲಾಗಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆಗಳಲ್ಲಿ ಈ ಸಂಘಟನೆಗಳು ಸಕ್ರಿಯವಾಗಿರುವುದು ದೃಢವಾಗಿದೆ. ಈ ಮೂಲಕ ಬಲಪಂಥೀಯ ಸಂಘಟನೆಗಳ ಹೋರಾಟಕ್ಕೆ ಮತ್ತಷ್ಟು ಶಕ್ತಿ ಸಿಕ್ಕಂತಾಗಿದೆ.

ಪಿಎಫ್‍ಐ ಹಾಗೂ ಕೆಎಫ್‍ಡಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಹಿಂದೂ ಸಂಘಟನೆಗಳು ಹಾಗೂ ಭಾರತೀಯ ಜನತಾ ಪಕ್ಷ ಅವಿರತ ಹೋರಾಟವನ್ನು ನಡೆಸುತ್ತಿದೆ. ಬೆಂಗಳೂರಿನ ರುದ್ರೇಶ್, ಮೂಡುಬಿದಿರೆಯ ಪ್ರಶಾಂತ್ ಪೂಜಾರಿ, ಬಂಟ್ವಾಲದ ಶರತ್ ಮಡಿವಾಳ ಸಹಿತ ಅನೇಕ ಹಿಂದೂ ಕಾರ್ಯಕರ್ತರ ಕೊಲೆಗಳಲ್ಲಿ ಪಿಎಫ್‍ಐ ಹಾಗೂ ಕೆಎಫ್‍ಡಿ ಎಂಬ ಇಸ್ಲಾಮೀ ಮೂಲಭೂತವಾದಿ ಸಂಘಟನೆಗಳ ಕೈವಾಡ ಬಹಿರಂಗಗೊಂಡಿದೆ.

ಈ ಹಿಂದೆ ಪಾಕಿಸ್ಥಾನದ ಮೂಲಭೂತ ಸಂಘಟನೆಗಳಾದ ಇಂಡಿಯನ್ ಮುಜಾಹಿದ್ದೀನ್ ಹಾಗೂ ಲಷ್ಕರ್-ಎ-ತೋಯ್ಬಾದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಭಾರತ ಮೂಲದ ಮುಸಲ್ಮಾನರ “ಸಿಮಿ”(ಸ್ಟೂಡೆಂಟ್ ಇಸ್ಲಾಮಿಕ್ ಮೂವ್‍ಮೆಂಟ್ ಆಫ್ ಇಂಡಿಯಾ) ಎಂಬ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ದೇಶದಲ್ಲಿ ನಡೆಯುತ್ತಿರುವ ವಿಧ್ವಂಸಕ ಕೃತ್ಯಗಳಲ್ಲಿ ನೇರ ಭಾಗಿಯಾಗಿದ್ದ ಈ ಸಿಮಿ ಸಂಘಟನೆಯನ್ನು ಕಠಿಣ ನಿರ್ಧಾರದಿಂದ ಕೇಂದ್ರ ನಿಷೇಧಿಸಿತ್ತು.

ಹೀಗೆ ನಿಷೇಧಗೊಂಡ ಸಿಮಿ ಸಂಘಟನೆಯ ಕಾರ್ಯಕರ್ತರು ತಮ್ಮ ಸಿದ್ಧಾಂತಗಳನ್ನು ಮಾತ್ರ ಬಿಡಲೇ ಇಲ್ಲ. ಕೆಲವು ಉಗ್ರತ್ವವನ್ನೇ ಹೊಂದಿದ್ದ ಕಾರ್ಯಕರ್ತರು ತಮ್ಮ ಆಯುಧಗಳನ್ನು ಹಿಡಿದುಕೊಂಡು ಇಂಡಿಯನ್ ಮುಜಾಹಿದ್ದೀನ್ ಎಂಬ ಪಾಕಿಸ್ಥಾನ ಹಸ್ತಕ ಭಯೋತ್ಪಾದಕ ಸಂಘಟನೆಗೆ ಸೇರಿದ್ದರೆ, ಮತ್ತೆ ಕೆಲವರು ಶಾಂತಿಯ ಮುಖವಾಡ ಧರಿಸಿಕೊಂಡು ಪಿಎಫ್‍ಐ, ಕೆಎಫ್‍ಡಿ ಎಂಬ ಸಂಘಟನೆಗಳನ್ನು ಕಟ್ಟಿ ಬೆಳೆಸಲು ಯತ್ನಿಸಿ, ಬಂದೂಕು, ಬಾಂಬ್‍ಗಳನ್ನು ಬದಿಗಿಟ್ಟು ತಲವಾರುಗಳಲ್ಲಿ ತಮ್ಮ ಕಾರ್ಯ ಸಾಧನೆಯನ್ನು ಮಾಡತೊಡಗಿದರು.

ಕರ್ನಾಟಕದಲ್ಲಿ, ಅದರಲ್ಲೂ ಕರಾವಳಿಯಲ್ಲಿ ಭದ್ರವಾಗಿ ಬೇರೂರಿ, ಅಲ್ಲೆಲ್ಲೋ ಅಡಗಿ ಕುಳಿತು ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಆರಂಭಿಸಿದರು. ಕಳೆದ ಬಾರಿ ಬಿಜೆಪಿ ಸರ್ಕಾರವಿದ್ದಾಗ ಬಾಲ ಮಡಚಿ ಕುಳಿತಿದ್ದ ಈ ಮೂಲಭೂತವಾದಿಗಳು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದೊಡನೆ ತಮ್ಮ ಗರಿಗಳನ್ನು ಬಿಚ್ಚತೊಡಗಿದರು. ಮುಸಲ್ಮಾನರೆಂಬ ಕಾರಣಕ್ಕೆ ಯಾವ ಸಮಸ್ಯೆ ಬಂದರೂ ಕಾಂಗ್ರೆಸ್ ಸರ್ಕಾರ ಅದನ್ನು ಪರಿಹರಿಸುತ್ತದೆ ಎಂಬ ಧೈರ್ಯ ಈ ಸಂಘಟನೆಗಳಿಗೆ ಬಲವಾಗಿತ್ತು.

ದಕ್ಷಿಣ-ಕನ್ನಡ ಜಿಲ್ಲೆಯ ಮೂಡುಬಿದ್ರಿಯ ಬಜರಂಗದಳದ ಕಾರ್ಯಕರ್ತ, ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿಯನ್ನು ತಲವಾರುಗಳಿಂದ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಕೊಲೆಗೂ, ಪಿಎಫ್‍ಐ ಸಂಘಟನೆಗೂ ಸಂಬಂಧ ಇದೆ ಎಂಬುವುದು ಧೃಢವಾಗಿತ್ತು. ಕೊಲೆಗಾರರು ಪಿಎಫ್‍ಐ ಸಂಘಟನೆಯ ಕಾರ್ಯಕ್ರಮದ ಬ್ಯಾನರ್‍ನ ಅಡಿಯಲ್ಲಿ, ಶಾಸಕ ಅಭಯಚಂದ್ರ ಜೈನರೊಂದಿಗೆ ಇದ್ದಂತಹ ಫೋಟೋ ವೈರಲ್ ಆಗಿತ್ತು. ಆದರೆ ಸರ್ಕಾರದ ಕೃಪೆಯಿಂದ ಇದರ ತನಿಖೆ ನೆಲಕಚ್ಚಿ ಹೋಗುತ್ತೆ.

ಹೀಗೆ ಹಲವಾರು ಕೊಲೆಗಳಲ್ಲಿ ತನ್ನ ಪಾತ್ರವಿದ್ದರೂ ರಾಜ್ಯ ಸರ್ಕಾರದ ಕೃಪಾ ಕಟಾಕ್ಷದಿಂದ ಪಿಎಫ್‍ಐ ಉಗ್ರರ ಎಲ್ಲಾ ಪ್ರಕರಣಗಳು ಖುಲಾಸೆಯಾಗಿತ್ತು. ಪಿಎಫ್‍ಐ ಮೇಲಿದ್ದ ಸುಮಾರು 150ಕ್ಕೂ ಅಧಿಕ ಪ್ರಕರಣಗಳನ್ನು ಸರ್ಕಾರ ರದ್ದುಗೊಳಿಸುತ್ತೆ. ಇದರಿಂದ ಮತ್ತೆ ಪುಟಿದೆದ್ದ ಪಿಎಫ್‍ಐ ಉಗ್ರರು, ಮತ್ತೆ ತಲವಾರು ಝಳಪಿಸಲು ಆರಂಭಿಸುತ್ತಾರೆ. ಮತ್ತೆ ರಾಜ್ಯದಲ್ಲಿ ಬಲಪಂಥೀಯ ವಾದಿಗಳ ನೆತ್ತರು ಹರಿಯುತ್ತೆ.

ಸತ್ಯ ಯಾವಾಗಲೂ ಹೊರಬರಲೇ ಬೇಕು. ಬೆಂಗಳೂರಿನಲ್ಲಿ ವಿಜಯ ದಶಮಿ ಪ್ರಯುಕ್ತ ನಡೆಯುತ್ತಿದ್ದ ಆರ್‍ಎಸ್‍ಎಸ್ ಪಥ ಸಂಚಲನ ನಡೆಸಿ ವಾಪಾಸ್ ಬರುತ್ತಿದ್ದ ರುದ್ರೇಶ್ ಎಂಬ ಆರ್‍ಎಸ್‍ಎಸ್ ಕಾರ್ಯಕರ್ತನನ್ನು ಮಾರ್ಗ ಮಧ್ಯೆ ತಲವಾರುಗಳಿಂದ ಹತ್ಯೆ ಮಾಡುತ್ತಾರೆ. ಈ ಹತ್ಯೆಯನ್ನೂ ಮುಸಲ್ಮಾನ ಭಯೋತ್ಪಾದಕರು ಮಾಡಿದ್ದೆಂದು ಖಚಿತಾವಾಗಿದ್ದರೂ, ಪಿಎಫ್‍ಐ ಮೇಲೆ ಆರೋಪಿಸಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತೆ. ಆದರೆ ಬಿಜೆಪಿಯ ತೀವ್ರ ಒತ್ತಾಯದ ನಂತರ ಈ ತನಿಖೆಯನ್ನು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಎನ್‍ಐಎ(ರಾಷ್ಟ್ರೀಯ ಭದ್ರತಾ ದಳ)ಗೆ ವಹಿಸಲಾಗಿತ್ತು. ಈ ತನಿಖೆಯಿಂದ ಬಂದಂತಹ ಸತ್ಯವೇ ಪಿಎಫ್‍ಐ ಕೈವಾಡ ಸತ್ಯವೆಂಬುವುದು.

ಆನಂತರ ಹಿಂದೂ ಸಂಘಟನೆಗಳ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತದೆ. ಇದು ಕೇವಲ ಹಿಂದೂ ಸಂಘಟನೆಗಳು, ಬಿಜೆಪಿ ಪಕ್ಷಕ್ಕೆ ಮಾತ್ರವಲ್ಲದೆ ಸಾಮಾನ್ಯ ಜನರಿಗೂ ಈ ಕೃತ್ಯಗಳು ಅರ್ಥವಾಗುತ್ತದೆ. ಈ ಉಗ್ರ ಸಂಘಟನೆಗಳಿಗೆ ಕಾಂಗ್ರೆಸ್ ನೀಡುತ್ತಿರುವ ಬೆಂಬಲವನ್ನು ಪ್ರತಿಯೊಬ್ಬ ಪ್ರಜೆಯೂ ಟೀಕಿಸುತ್ತಾನೆ. ಈ ಮೂಲಕ ಪಿಎಫ್‍ಐ ಗೆ ಕಾಂಗ್ರೆಸ್ ನೀಡುವ ಪರೋಕ್ಷ ಬೆಂಬಲದ ಕರಾಳ ಮುಖ ಬಹಿರಂಗವಾಗುತ್ತದೆ. ಜನತೆ ಬೀದಿಗಿಳಿಯುತ್ತಾರೆ. ಇದರ ಮಧ್ಯೆ ಬಂಟ್ವಾಲದ ಶರತ್ ಮಡಿವಾಳ ಎಂಬ ಆರ್‍ಎಸ್‍ಎಸ್ ಕಾರ್ಯಕರ್ತನ ಕೊಲೆಯಾಗುತ್ತೆ. ಈ ಕೊಲೆಯಲ್ಲೂ ಪಿಎಫ್‍ಐ ಉಗ್ರರ ಕೃತ್ಯ ಬಯಲಾಗುತ್ತೆ. ಆದ್ರೆ ರಾಜ್ಯ ಸರ್ಕಾರ ಮಾತ್ರ ಮೌನ ವಹಿಸುತ್ತೆ.

ಆದ್ರೆ ಯಾವಾಗ ಒಬ್ಬ ಸಾಮಾನ್ಯ ಪ್ರಜೆಯೂ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಲು ಆರಂಭಿಸುತ್ತಾನೋ, ಪಿಎಫ್‍ಐ, ಕೆಎಫ್‍ಡಿ ಸಂಘಟನೆಗಳನ್ನು ವಿರೋಧಿಸುತ್ತಾನೋ ಆಗ ಕಾಂಗ್ರೆಸ್‍ಗೆ ಬುದ್ಧಿ ಬಂದಂತೆ ಕಾಣ ತೊಡಗಿತು. ಇನ್ನೂ ಸುಮ್ಮನಿದ್ದರೆ ತನ್ನಲ್ಲಿ ಉಳಿದಿದ್ದ ಅಲ್ಪ ಸ್ವಲ್ಪ ಮತಕ್ಕೂ ಕುತ್ತು ಬರಬಹುದೆಂಬ ವಿಷಯ ಸತ್ಯವಾಗತೊಡಗಿದಾಗ ಸ್ವತಃ ಕಾಂಗ್ರೆಸ್ಸಿನ ಕಾರ್ಯಾಧ್ಯಕ್ಷರೇ ಪಿಎಫ್‍ಐ ಸಹಿತ ಮೂಲಭೂತವಾದಿ ಉಗ್ರ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸುತ್ತಾರೆ.

ಹೌದು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸುದ್ಧಿಗೋಷ್ಠಿ ನಡೆಸಿ ಪಾಕಿಸ್ಥಾನ ಹಸ್ತಕವಾಗಿರುವ, ಹಲವಾರು ಉಗ್ರ ಕೃತ್ಯಗಳನ್ನು ಎಸೆದಿರುವ ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಈ ಮೂಲಕ ಕಾಂಗ್ರೆಸ್ ಕೂಡಾ ಮುಸಲ್ಮಾನ ಉಗ್ರ ಸಂಘಟನೆಗಳನ್ನು ನಾವು ಎಂದಿಗೂ ಪ್ರೋತ್ಸಾಹಿಸಲ್ಲ ಎಂಬುವುದನ್ನು ನಿರೂಪಿಸಲು ಪ್ರಯತ್ನ ಪಟ್ಟರು.

ಇನ್ನೂ ಕೂಡಾ ನಾವು ಮುಸಲ್ಮಾನರಿಗೆ ಬೆಂಬಲ ನೀಡುವ ಭರದಲ್ಲಿ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡಿದರೆ ಜನ ಕ್ಷಮಿಸಲ್ಲ ಎಂಬುವುದು ಖಾತ್ರಿಯಾದ ಕೂಡಲೇ ಈ ರೀತಿ ಹೇಳಿಕೆಯನ್ನು ನೀಡಿ ಬಹುಸಂಖ್ಯಾತ ಬಲಪಂಥೀಯರ ಮತದ ಓಲೈಕೆಗೆ ಮುಂದಾಗಿದ್ದಾರೆ.

ಈವರೆಗೆ ಪಿಎಫ್‍ಐ ಸಂಘಟನೆಗಳನ್ನು ತಮ್ಮ ಮನೆಯ ನಾಯಿ ಸಾಕಿದಂತೆ ಸಾಕಿ, ಈಗ ಚುನಾವಣೆ ಹತ್ತಿರ ಬರುವಾಗ ಅದನ್ನು ವಿರೋಧಿಸುವ ಕೆಲಸಕ್ಕೆ ಕೈ ಹಾಕಿದೆ ಕಾಂಗ್ರೆಸ್.

ಇರಲಿ. ಈಗಲಾದರೂ ನಿಮಗೆ (ಕಾಂಗ್ರಸ್ಸಿಗರಿಗೆ) ಬುದ್ಧಿ ಬಂತಲ್ಲ ಎಂದು ಖುಷಿ ಪಡುತ್ತಾ ನಿಮ್ಮ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ ಪಿಎಫ್‍ಐ ಸಹಿತ ಮುಸಲ್ಮಾನರ ಈ ಎಲ್ಲಾ ವಿಧ್ವಂಸಕ ಕೃತ್ಯಗಳಿಗೆ ನಿಮ್ಮ ಕಾಂಗ್ರೆಸ್ಸಿಗರೇ ಕಾರಣ ಎಂಬುದನ್ನು ಮರೆಯುವಂತಿಲ್ಲ.

ಹಿಂದೂ ಸಂಘಟನೆಗಳನ್ನು, ಬಿಜೆಪಿ ಪಕ್ಷವನ್ನು ವಿರೋಧಿಸುವ ಭರದಲ್ಲಿ ದೇಶದ್ರೋಹಿ ಕೆಲಸಗಳನ್ನು ಕಾಂಗ್ರೆಸ್ ಮಾಡುತ್ತಿದೆ ಎನ್ನುವುದೂ ಸುಳ್ಳಲ್ಲ.

-ಸುನಿಲ್

Tags

Related Articles

Close