ಅಂಕಣದೇಶಪ್ರಚಲಿತ

ತ್ರಿವಳಿ ತಲಾಕ್!!!!! ಸುಪ್ರೀಮ್ ಕೋರ್ಟಿನ ಸುಪ್ರೀಮ್ ತೀರ್ಪು!!!!

ಮುಸಲ್ಮಾನ ಸಮುದಾಯದಲ್ಲಿ ‘ನಿಕಾಹ್ ಹಲಾಲ್’ ಹಾಗೂ ‘ತ್ರಿವಳಿ ತಲಾಕ್’ ನಿಂದ ಕಿರುಕುಳ ಅನುಭವಿಸಿದ್ದ ಮುಸ್ಲಿಂ ಮಹಿಳೆಯರು ನ್ಯಾಯ ದೊರಕಿಸುವಂತೆ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು! ಅಲ್ಲದೆಯೇ, ತ್ರಿವಳ ತಲಾಕ್ ನನ್ನು ನಿಷೇಧಿಸುವಂತೆ ಕೂಡ ಒತ್ತಡ ಹೇರಿತ್ತು!

ಇದೀಗ ಸುಪ್ರೀಮ್ ಕೋರ್ಟ್ ತನ್ನ ತೀರ್ಪನ್ನು ಹೊರಡಿಸಿದೆ!!

ನಿಕಾಹ್ ಹಲಾಲ್ ಎಂಬ ಒನ್-ನೈಟ್-ಸ್ಟ್ಯಾಂಡಿನಿಂದ ಅದೆಷ್ಟೋ ಮಹಿಳೆಯರು ಪರಪುರುಷರಿಂದ ಅನ್ಯಾಯಕ್ಕೊಳಗಾಗಿದ್ದಲ್ಲದೇ, ತ್ರಿವಳಿ ತಲಾಕ್ ಎಂಬ ಪುರುಷ ಪ್ರಧಾನ ಶರಿಯತ್ ಕಾನೂನಿನಿಂದ ಅದೆಷ್ಟೋ ಮುಸ್ಲಿಂ ಹೆಣ್ಣು ಮಕ್ಕಳು ಬೀದಿ ಪಾಲಾಗಿದ್ದರೆಂಬ ಸತ್ಯ ಸಮಾಜದ ಮುಂದಿರುವಾಗಲೇ, ಉತ್ತರ ಪ್ರದೇಶದ 40 ಕ್ಕಿಂತರ ಹೆಚ್ಚು ಮುಸಲ್ಮಾನ ಸ್ತ್ರೀಯರು ಅಲ್ಲಿನ ಮುಖ್ಯ ಮಂತ್ರಿಯಾದ ಯೋಗಿ ಆದಿತ್ಯನಾಥ್ ರವರಿಗೆ ‘ರಕ್ಷೆ’ಯನ್ನು ಕಳಿಸುವ ಮೂಲಕ ನ್ಯಾಯ ಕೋರಿದ್ದರು. ಭಾರತದ ಪ್ರಧಾನ ಮಂತ್ರಿಯಾದ ಮೋದಿಯವರಿಗೂ ರಕ್ಷೆ ಕಳುಹಿಸಿದ್ದ ಮುಸ್ಲಿಂ ಹೆಣ್ಣು ಮಕ್ಕಳು ತ್ರಿವಳಿ ತಲಾಕನ್ನು ನಿಷೇಧಿಸುವಂತೆ ಕೋರಿ ಪತ್ರ ಬರೆದಿದ್ದರು!

ಪಂಚಧರ್ಮ ಸದಸ್ಯ ಪೀಠದಿಂದ ಇವತ್ತು ಸುಪ್ರೀಮ್ ನ್ಯಾಯಲಯ ತ್ರಿವಳಿ ತಲಾಕ್ ಗೆ ಸಂಬಂಧಿಸಿ ಸತತ ಆರು ದಿನ ವಾದ ಪ್ರತಿವಾದಗಳನ್ನು ಆಲಿಸಿ ತೀರ್ಪು ನೀಡಿದೆ!!!

ನ್ಯಾಯಮೂರ್ತಿ ಜೆ.ಎಸ್. ಖೇಹರ್ ‘ಮೊದಲು ಸಂಸತ್ತು ಕಾನೂನನ್ನು ತರಬೇಕೆಂದು’ ಹೇಳಿದ್ದು, ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ!! ತ್ರಿವಳಿ ತಲಾಕ್ ನನ್ನು ಎತ್ತಿ ಹಿಡಿದ ಸುಪ್ರೀಮ್ ನ್ಯಾಯಲಯ ‘ಯಾವುದೇ ಕಾರಣಕ್ಕೂ ‘ತ್ರಿವಳಿ ತಲಾಕ್’ ಗೆ ತಾನು ಮಧ್ಯ ಬರುವುದಿಲ್ಲ ಎಂದು ಹೇಳಿರುವ ಸುಪ್ರೀಮ್, ಕೇಂದ್ರ ಸರಕಾರ ಇನ್ನು ಆರು ತಿಂಗಳೊಳಗೆ ತ್ರಿವಳಿ ತಲಾಕ್ ಬಗ್ಗೆ ಒಂದಷ್ಟು ಕಾಯ್ದೆ, ಹಾಗೂ ಶರತ್ತುಗಳನ್ನು ನೀಡಿ ಆದೇಶ ಕೊಡಬೇಕೆಂದು ಹೇಳಿದೆ.

ಅಲ್ಲದೇ, ಇನ್ನು ಆರು ತಿಂಗಳು ತ್ರಿವಳಿ ತಲಾಕ್ ನನ್ನು ನಿಷೇಧಿಸಿರುವ ಸುಪ್ರೀಮ್ ನ್ಯಾಯಾಲಯ, ಕೇಂದ್ರ ಸರಕಾರಕ್ಕೆ ಕಾಯ್ದೆಯನ್ನು ತರುವಂತೆ ಸಲಹೆ ನೀಡಿದ್ದು, ಪಂಚ ಧರ್ಮ ಸದಸ್ಯತ್ವ ಪೀಠವೂ ಬೇರೆ ಬೇರೆ ಸಮರ್ಥನೆ ನೀಡಿದ್ದರಿಂದ, ತಾನು ಮಧ್ಯವಸ್ಥಿಕೆ ವಹಿಸಲು ಬರುವುದಿಲ್ಲ ಎಂದು ಹೇಳಿದೆ!

ಮೂವರು ನ್ಯಾಯಮೂರ್ತಿಗಳಿಂದ ತಲಾಕೆ ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಸುಪ್ರೀಮ್ ನ್ಯಾಯಲಾಯದ ಸುಪ್ರೀಮ್ ತೀರ್ಪು ‘ತ್ರಿವಳಿ- ತಲಾಕ್’ ನನ್ನು ನಿಷೇಧಿಸಿದೆ! ಮೊದಲು, ಜೆ.ಎಸ್.ಖೇಹರ್ ರವರು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದರೂ ಕೂಡ ಮೂವರು ನ್ಯಾಯಮೂರ್ತಿಗಳು ವಿರೋಧಿಸಿದ ಹಿನ್ನೆಲೆಯಲ್ಲಿ ಬಹುಮತದಿಂದ ತಡೆಯಾಜ್ಞೆಯಾಗಿದ್ದ ತ್ರಿವಳಿ ತಲಾಕ್ ಈಗ ಸಂಪೂರ್ಣವಾಗಿ ನಿಷೇಧಗೊಂಡಿದೆ!

ತ್ರಿವಳಿ ತಲಾಕ್ ಕುರಾನ್ ನ ತತ್ವಗಳಿಗೆ ವಿರುದ್ಧವಾಗಿದೆ! ತ್ರಿವಳಿ ತಲಾಕ್ ಕುರಾನಿನ ಭಾಗವಲ್ಲ! ಶರಿಯಾ ಕಾನೂನನ್ನು ಸುಪ್ರೀಮ್ ನ್ಯಾಯಾಲಯ ಮಾನ್ಯಗೊಳಿಸಲು ಸಾಧ್ಯವಿಲ್ಲ. ಸಂತ್ರಸ್ತೆಯರೇ ನ್ಯಾಯಲಾಯಕ್ಕೆ ಅರ್ಜಿ ಸಲ್ಲಿಸಿರುವಾಗ ಕೈ ಕಟ್ಟಿ ಕೂರಲು ಸಾಧ್ಯವೇ ಇಲ್ಲ.” – ಸುಪ್ರೀಮ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ತ್ರಿವಳಿ ತಲಾಕ್’ ಅಸಂವಿಧಾನಿಕ ಎಂದು ಹೇಳಿರುವ ನ್ಯಾಯಪೀಠ, ಬಹುಮತದ ತೀರ್ಪಿನ ಅನ್ವಯ ತ್ರಿವಳಿ ತಲಾಕ್ ಇಂದಿನಿಂದಲೇ ನಿಷೇಧಗೊಂಡಿದೆ.

ತ್ರಿವಳಿ ತಲಾಕೆಂಬ ‘ವೈಯುಕ್ತಿತ’ ಪುರುಷ ಪ್ರಧಾನ ಶರಿಯತ್ ಕಾನೂನು!!

ಪತಿ ತನ್ನ ಪತ್ನಿಗೆ, ಫೋನಿನ ಮೂಲಕವಾಗಲೀ, ಸಂದೇಶಗಳನ್ನು ಕಳುಹಿಸುವ ಮೂಲಕವಾಗಲಿ, ತಲಾಕ್ ಎಂದು ಮೂರು ಸಲ ಹೇಳಿದರೆ, ಅಲ್ಲಿಗೆ ‘ವಿಚ್ಛೇಧನ!’ ಯಾವುದೇ ರೀತಿಯ ಸಂವಹನವಿಲ್ಲದೇ, ಅಥವಾ ಇನ್ಯಾವ ಕಾನೂನು ಬದ್ಧ ರೀತಿಯನನ್ನುಸರಿಸದೇ ಇರುವ ಈ ಶರಿಯತ್ ಎನ್ನುವ ಕಾನೂನಿಗೆ ಶತಮಾನಗಳಿಂದಲೂ ‘ಶೋಷಣೆ’ಗೊಳಗಾಗುತ್ತಾ ಬಂದಿದ್ದಾರೆ ಮುಸಲ್ಮಾನ ಹೆಣ್ಣು ಮಕ್ಕಳು!

ಅಕಸ್ಮಾತ್, ವಿಚ್ಛೇಧನ ನೀಡಿದ ಪತಿಗೆ ಜ್ಞಾನೋದಯವಾಗಿ ಪತ್ನಿಯ ಜೊತೆ ಮತ್ತೆ ಸಂಸಾರ ಮಾಡಬೇಕೆಂದರೆ, ಆಕೆ ಅಲ್ಲಿನ ಮುಲ್ಲಾಗಳ ಜೊತೆ ಒಂದು ರಾತ್ರಿ ‘ಕಾಮ’ಕ್ಕೆ ಬಲಿಯಾದ ನಂತರ, ಆಕೆ ಪತಿಯನ್ನು ಮತ್ತೆ ಸೇರಬಹುದೆಂಬ ಅನಾಗರಿಕ ‘ನಿಕಾಹ್ ಹಲಾಲ್ ‘ ಎಂಬ ಅತಿ ದರಿದ್ರ ಕಾನೂನೊಂದು ಬುರ್ಖಾದೊಳಗಿನ ಹೆಣ್ಣನ್ನೂ ಸದ್ದಿಲ್ಲದೇ ಕೊಂದಿರುತ್ತದೆ.

https://twitter.com/DOCTORATLARGE/status/899863454424612864

ನ್ಯಾ.ಆರ್.ಎಫ್.ನಾರೀಮನ್, ನ್ಯಾ.ಲಲಿತ್ ಉದಯ್, ನ್ಯಾ.ಜೋಸೆಫ್ ವಿರೋಧ ವ್ಯಕ್ತಪಡಿಸಿದ್ದರೆ, ಮುಖ್ಯ.ನ್ಯಾ.ಖೇಹರ್ ಹಾಗೂ ನ್ಯಾ.ಅಬ್ದುಲ್ ನಜೀರ್ ತ್ರಿವಳಿ ತಲಾಕ್ ನನ್ನು ಎತ್ತಿ ಹಿಡಿದಿದ್ದಾರೆ.

ಇನ್ನಾರು ತಿಂಗಳಿನ ನಂತರ ಕೇಂದ್ರ ಸರಕಾರ ಅನುಷ್ಠಾನಗೊಳಿಸುವ ಕಾಯ್ದೆಯಿಂದ ನಿರ್ಧಾರವಾಗುವ ಮುಸಲ್ಮಾನ ಹೆಣ್ಣು ಮಕ್ಕಳ ಭವಿಷ್ಯವನ್ನು ಇನ್ನಷ್ಠೇ ಕಾದು ನೋಡಬೇಕಿದೆ. ಅಲ್ಲದೇ, ಈ ಆರು ತಿಂಗಳು ತ್ರಿವಳಿ ತಲಾಕ್ ಗೆ ತಡೆ ನೀಡಿರುವ ಸುಪ್ರೀಮ್ ನ್ಯಾಯಲಯದ ತೀರ್ಪು  ಹೆಣ್ಣು ಮಕ್ಕಳಲ್ಲಿ ಭರವಸೆ ಮೂಡಿಸಿರುವುದಂತೂ ಸತ್ಯ!

https://twitter.com/FrustIndian/status/899864522248249344

 

– ತಪಸ್ವಿ

Tags

Related Articles

Close