ಪ್ರಚಲಿತ

ದೀಪಾವಳಿ ಹಬ್ಬದ ಬಂಪರ್ ಆಫರ್! ಯೋಧರಿಗೆ ಮೋದಿ ಸರಕಾರದಿಂದ ಸಿಕ್ಕಿದ ಉಡುಗೊರೆಯೇನು ಗೊತ್ತೇ?!

ಭಾರತೀಯ ಯೋಧರಿಗೆ ಕೇಂದ್ರ ಸರಕಾರ ಭರ್ಜರಿ ದೀಪಾವಳಿ ಉಡುಗೊರೆಯನ್ನು ನೀಡಿದ್ದು, ಸೈನಿಕರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ!! ಹೌದು.. ಕಳೆದ ವರ್ಷ ದೀಪಾವಳಿಯಂದು ಸೈನಿಕರ ಮುಖದಲ್ಲಿ ನಗು ತರಿಸಿರುವ ಕೇಂದ್ರ ಸರಕಾರ ದೀಪಾವಳಿಗೆ ಶೇಕಡಾ 10ರಷ್ಟು ಬಾಕಿ ವೇತನ ಬಿಡುಗಡೆ ಮಾಡಲು
ನಿರ್ಧರಿಸಿತ್ತು!! ಆದರೆ ಈ ವರ್ಷ ದೇಶದ ಗಡಿಯಲ್ಲಿ, ದುರ್ಗಮ ಸ್ಥಳಗಳಲ್ಲಿ ದೇಶದ ಗಡಿಯನ್ನು ಕಾಯುತ್ತಿರುವ ಯೋಧರಿಗೆ ಕೇಂದ್ರ ಸರಕಾರ ಭರ್ಜರಿ ಗಿಫ್ಟ್ ನೀಡಿದೆ, ಅದೇನಂತೀರಾ??!!

ಈಗಾಗಲೇ ಗಡಿ ಭಾಗದಲ್ಲಿ ನಿಯೋಜಿತರಾಗಿರುವ ಸೈನಿಕರು ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಲು ಸ್ಯಾಟಲೈಟ್ ಫೋನ್ ಬಳಕೆ ಮಾಡುತ್ತಿದ್ದರು. ಆದರೆ ಈಗ ಕೇಂದ್ರ ಸರಕಾರ ಈ ಸ್ಯಾಟಲೈಟ್ ಫೋನ್‍ಗಳ ಕರೆ ದರವನ್ನು ಕಡಿತಗೊಳಿಸಿದ್ದು, ಸೈನಿಕರಿಗೆ ಹೆಚ್ಚಿನ ಸಮಯ ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಲು ಅನುಕೂಲ ಮಾಡಿಕೊಟ್ಟಿದೆ. ಈ ಹಿಂದೆ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಭಾರತೀಯ ಸೈನಿಕರಿಗೆ ಪಟಕಾ ಮಾದರಿಯ ಹೆಲ್ಮೆಟ್ ಗಳನ್ನು ನೀಡಲಾಗುತ್ತಿತ್ತು. ಆದರೆ ಹಣೆ ಮತ್ತು ಹಿಂಭಾಗಕ್ಕೆ ಮಾತ್ರ ರಕ್ಷಣೆ ನೀಡುತ್ತಿದ್ದವು ಎನ್ನುವ ಕಾರಣಕ್ಕಾಗಿ ಕೇಂದ್ರಸರಕಾರವು ಗಡಿ ಕಾಯುವ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಒದಗಿಸಲು ಮುಂದಾಗಿದೆ!! ತದನಂತರದಲ್ಲಿ 1,59,000 ಬುಲೆಟ್ ಪ್ರೂಫ್ ಹೆಲ್ಮೆಟ್‍ಗಳನ್ನು ಒದಗಿಸಿದ್ದು, ಎರಡು ದಶಕಗಳ ಬಳಿಕ ಬುಲೆಟ್ ಪ್ರೂಫ್ ಹೆಲ್ಮೆಟ್‍ನ್ನು ಸೈನಿಕರಿಗೆ ನೀಡಿರುವುದು ಖುಷಿಯ ಸಮಾಚಾರವಾಗಿದೆ!!

ಆದರೆ ಇದೀಗ ದೀಪಾವಳಿಗೆ ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಕೇಂದ್ರ ಸರಕಾರ ಸ್ಯಾಟಲೈಟ್ ಫೆÇೀನ್‍ಗಳ ಕರೆ ದರವನ್ನು ಕಡಿತಗೊಳಿಸಿದೆ. ಅಷ್ಟೇ
ಅಲ್ಲದೇ, ಈ ಮೊದಲು ಸ್ಯಾಟಲೈಟ್ ಫೋನ್‍ನಲ್ಲಿ ಮಾತನಾಡಲು ಸೈನಿಕರು ಡಿಜಿಟಲ್ ಸ್ಯಾಟಲೈಟ್ ಫೋನ್ ಟರ್ಮಿನಲ್‍ಗೆ(ಡಿಎಸ್‍ಪಿಟಿ) ಮಾಸಿಕ 500 ರೂ. ಪಾವತಿಸುತ್ತಿದ್ದರು. ಜತೆಗೆ ಪ್ರತಿ ನಿಮಿಷಕ್ಕೆ 5 ರೂ. ದರ ನೀಡುತ್ತಿದ್ದರು. ಈಗ ದೂರ ಸಂಪರ್ಕ ಸಚಿವಾಲಯ ಕರೆ ದರವನ್ನು ಪ್ರತೀ ನಿಮಿಷಕ್ಕೆ 1 ರೂ.ಗೆ ಇಳಿಕೆ ಮಾಡಿದೆ. ಮತ್ತು ಡಿಎಸ್‍ಪಿಟಿ ದರವನ್ನು ಹಿಂಪಡೆದುಕೊಂಡಿದೆ!!

ಈಗಾಗಲೇ ಭಾರತದ ಸೇನೆಯು ಮೇಕ್ ಇಂಡಿಯಾ ಮಾರ್ಗದ ಮೂಲಕ ಅನೇಕ ಪ್ರಮುಖ ಉಪಕರಣಗಳನ್ನು ಖರೀದಿಸಲು ಒತ್ತು ನೀಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಹಾಗಾಗಿ “ಹೊಸ ಬ್ಯಾಲಿಸ್ಟಿಕ್ ಶಿರಸ್ತ್ರಾಣಗಳು ಸೇನೆಗೆ ದಶಕಗಳ ನಂತರ ಬರಲಿವೆ. ಆದರೆ 1,59,000 ಹೆಲ್ಮೆಟ್ಗಳು ಆರಂಭಿಕ ಪ್ರಮಾಣದಲ್ಲಿ ಬರುತ್ತಿದ್ದು, ಇದರಲ್ಲಿ 6000ದಷ್ಟು ಹೆಲ್ಮೆಟ್ಗಳನ್ನು ಭಾರತೀಯ ನೌಕಾಪಡೆಗೆ ನೀಡಲಾಗುವುದು ಎಂದು ರಕ್ಷಣಾ ಸಚಿವಾಲಯದ(ಎಮ್‍ಒಡಿ) ಮೂಲಗಳು ತಿಳಿಸಿವೆ!!

ಪ್ರಾಣ ಒತ್ತೆಯಿಟ್ಟು ದೇಶ ಕಾಯುವ ಯೋಧರಿಗೆ ರಕ್ಷಣೆ ನೀಡುವಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಭಾರತೀಯ ಸೇನೆ, ಗುಂಡು ನಿರೋಧಕ ಅತ್ಯಾಧುನಿಕ ವಿಶ್ವದರ್ಜೆಯ ಹೆಲ್ಮೆಟ್ ಗಳನ್ನು ನೀಡ ಬಯಸಿರುವುದು ಹೆಮ್ಮೆಯ ವಿಚಾರ. ನೂತನ ಮಾದರಿಯ ಹೆಲ್ಮೆಟ್ ಗಳನ್ನು ತಯಾರಿಸಲು ಕಾನ್ಪುರದ ಎಂಕೆಯು ಕಂಪನಿಗೆ ಅಧಿಕೃತ ಆದೇಶ ನೀಡಲಾಗಿದ್ದು, ಎಂಕೆಯು ಕಂಪನಿಯು ವಿಶ್ವ ನಾನಾ ದೇಶಗಳ ಸೇನೆಗಳಿಗೆ ರಕ್ಷಣಾ ಪರಿಕರಗಳನ್ನು ತಯಾರಿಸಿ ರವಾನಿಸುತ್ತದೆ ಎಂದು ಮೂಲಗಳು ತಿಳಿಸಿದ್ದವು! ಆದರೆ ಇದೀಗ ಕೇಂದ್ರ ಸರಕಾರ ಇನ್ನೊಂದು ಮಹತ್ತರವಾದ ಯೋಜನೆಯನ್ನು ಹಾಕಿದ್ದು ಅದಕ್ಕಾಗಿ ಈ ಭಾರಿ ದೇಶ ಕಾಯುವ ಸೈನಿಕರು ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಲು ನೀಡುತ್ತಿದ್ದ ಈ ಸ್ಯಾಟಲೈಟ್ ಫೋನ್‍ಗಳ ಕರೆ ದರವನ್ನು ಕಡಿತಗೊಳಿಸಲಾಗಿದೆ!!

ಮೋದಿ ಸರಕಾರ ಆಡಳಿತಕ್ಕೆ ಬಂದ ನಂತರ ಅದೆಷ್ಟು ಬದಲಾವಣೆಯನ್ನು ಕಂಡಿದೆ ಎಂದರೆ, ದೇಶಕ್ಕೋಸ್ಕರ ಪ್ರಾಣವನ್ನೇ ತ್ಯಾಗ ಮಾಡುತ್ತಿದ್ದ ಸೈನಿಕ ತನ್ನ ಮೇಲೆ ವೈರಿಗಳು ಗುಂಡಿನ ಸುರಿಮಳೆಯನ್ನು ಹಾರಿಸಿದಾಗಲೂ ತನ್ನ ಕೈಯಲ್ಲಿದ್ದ ಬಂದೂಕಿನ ಒಂದು ಗುಂಡನ್ನು ಹಾರಿಸಲು ಮೇಲಿನಿಂದ ಅನುಮತಿ ಕೇಳಬೇಕಿತ್ತು!! ಆದರೆ ಇದೀಗ ಸೈನಿಕರು ಯಾರ ಅನುಮತಿಯನ್ನು ಪಡೆಯಬೇಕೆಂದಿಲ್ಲ!! ಶತ್ರುಗಳು ತಮ್ಮ ಮೇಲೆ ಆಕ್ರಮಣ ಮಾಡಿದಾಗ ಪ್ರತಿದಾಳಿಯನ್ನು ಮಾಡುವ ಸ್ವಾತಂತ್ರ್ಯ ನಮ್ಮ ಸೈನಿಕರಲ್ಲಿದೆ!! ಅಷ್ಟೇ ಅಲ್ಲದೇ, ಇತ್ತೀಚೆಗೆ ನಮ್ಮ ಸೈನ್ಯ ಎಷ್ಟೊಂದು ಬಲಿಷ್ಠವಾಗಿದೆ ಎಂದರೆ ಶತ್ರುರಾಷ್ಟ್ರಗಳನ್ನು ಯುದ್ದಕ್ಕಾಗಿ ಆಮಂತ್ರಿಸಿ ಸರಿಯಾದ ಪಾಠವನ್ನು ಕಲಿಸಿಕೊಡುವಷ್ಟು ಸಮರ್ಥವಾಗಿದೆ ನಮ್ಮ ಭಾರತೀಯ ಸೇನೆ!!

ತನ್ನ ಕುಟುಂಬವನ್ನು ತೊರೆದು, ಪ್ರಾಣವನ್ನೇ ಲೆಕ್ಕಿಸದೇ, ದೇಶಕ್ಕೋಸ್ಕರ ತನ್ನನ್ನೇ ಅರ್ಪಿಸುವ ಸೈನಿಕ ಈ ದೇಶದ ಆಸ್ತಿ!! ದೇಶದ ಗಡಿ ಕಾಯುವ ಸೈನಿಕ ಅದೆಷ್ಟೋ ಸಂಕಷ್ಟಗಳನ್ನು ಎದುರಿಸುತ್ತಾ, ದೇಶ ಸೇವೆಯಲ್ಲಿ ನಿರತರಾಗಿರುವ ಸೈನಿಕರಿಗೆ ಮೋದಿ ಸರಕಾರ ಈಗಾಗಲೇ ಅನೇಕ ಸವಲತ್ತುಗಳನ್ನು ನೀಡುತ್ತಲೇ ಬರುತ್ತಿದೆ!!ಆದರೆ ಈ ಬಾರಿಯ ದೀಪಾವಳಿ ದಿನದಂದೇ ಕೇಂದ್ರಸರಕಾರ ಇನ್ನೊಂದು ಭರ್ಜರಿ ಗಿಫ್ಟ್‍ನ್ನು ನೀಡಿದ್ದು, ಸೈನಿಕನ ಮೊಗದಲ್ಲಿ ಮಂದಹಾಸ ಬೀರಲು ಕಾರಣವಾಗಿದೆ!!

Source :http://vijayavani.net/central-government-reduced-call-rates-on-digital-satellite-phone-terminal-to-help-soldiers/

– ಅಲೋಖಾ

Tags

Related Articles

Close