ಪ್ರಚಲಿತ

ನಮ್ಮ ಸರಕಾರದಲ್ಲಿ ಹೆಣ್ಣು ಮಕ್ಕಳು ರಾತ್ರಿ ರಸ್ತೆಯಲ್ಲಿ ತಿರುಗಾಡಬಾರದು! ತುಂಡುಡುಗೆ ತೊಡಬಾರದು! ಕರ್ನಾಟಕದ ಗೃಹಮಂತ್ರಿಯ ಫತ್ವಾ!

ಕರ್ನಾಟಕದ ಆಡಳಿತ ಪಕ್ಷಕ್ಕೆ ಏನಾಗಿದೆಯೋ ಗೊತ್ತಿಲ್ಲ! ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಒಂದೊಂದೇ ತಗಾದೆಯನ್ನು ಮೈಮೇಲೆಳೆದುಕೊಳ್ಳುತ್ತಿರುವ ಕಾಂಗ್ರೆಸ್ ಗೆ ಪ್ರಜೆಗಳ ಜೀವ ಉಳಿಸುವುದಕ್ಕಿಂತ ಮಾಡಿದ ತಪ್ಪಿಗೆ ಸಮರ್ಥನೆ ಮಾಡಿಕೊಳ್ಳುವುದೇ ಆಗಿದೆ ಅಷ್ಟೇ!

ಮಹಿಳೆಯರಿಗೆ ರಾತ್ರಿ ಏನು ಕೆಲಸ?!

ಇದು ಕರ್ನಾಟಕದ ಗೃಹಸಚಿವರಾದ ರಾಮಲಿಂಗಾರೆಡ್ಡಿಯವರ ಪ್ರಶ್ನೆ! ಬೆಂಗಳೂರಿನಲ್ಲಿ ದಿನೇ ದಿನೇ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಲೇ ಸಾಗಿದೆ! ಎರಡು ತಿಂಗಳ ಹಿಂದಷ್ಟೇ ಪತ್ರಕರ್ತೆಯಾದ ಗೌರೀ ಲಂಕೇಶ್ ಹತ್ಯೆಯಾಗಿದೆ! ಅವತ್ತಿನಿಂದಲೂ ಸಹ, ಗೃಹಮಂತ್ರಿಯಾದ ರಾಮಲಿಂಗಾರೆಡ್ಡಿ ‘ನಮಗೆ ಹಂತಕರು ಯಾರೆಂದು ಗೊತ್ತು!’ ಎಂದು ಸುಳ್ಳು ಹೇಳುತ್ತಲೇ ಹೋದರು ವಿನಃ ಕೊನೆಗೂ ಹಂತಕರಾರೆಂದು ಪತ್ತೆಯಾಗಿಲ್ಲ.

ವಿಧಾನಸಭೆಯ ಕಲಾಪದಲ್ಲಿ ರಾಮಲಿಂಗಾರೆಡ್ಡಿ ಹೇಳಿದ್ದೇನು ಗೊತ್ತೇ?!

ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ಹಾಗೂ, ಗೌರೀ ಹಂತಕರ ಬಂಧಿಸುವ ವಿಚಾರದಲ್ಲಿ ವಿಧಾನಸಭೆಯ ಕಲಾಪದಲ್ಲಿ ಚರ್ಚಿಸಲಾಗಿತ್ತು. ಯಾವಾಗ, ಮಹಿಳೆಯರ ಸುರಕ್ಷೆಯ ವಿಷಯ ಬಂದಿತೋ, ಕರ್ನಾಟಕದ ಗೃಹ ಮಂತ್ರಿಯಾದ ರಾಮಲಿಂಗಾರೆಡ್ಡಿ, “ರಾತ್ರಿ ವೇಳೆ ಹೊರ ಹೋಗುವ ಕೆಲಸವೇನಿರುತ್ತದೆ ಹೆಣ್ಣಿಗೆ?! ಅದಲ್ಲದೇ, ಒಂದು ಹೆಣ್ಣು ಸುರಕ್ಷವಾಗಿರಬೇಕೆಂದರೆ ಆಕೆ ಧರಿಸುವ ಬಟ್ಟೆಯಿಂದ ಹಿಡಿದು, ಸಮಯವನ್ನೂ ಕೂಡ ಪರಿಗಣಿಸಲೇಬೇಕಾಗುತ್ತದೆ!” ಎಂದು ಹೇಳಿದ್ದಾರೆ!

ಇದೇ ವರ್ಷದ ಜನವರಿ 5 ರಂದು ಬೆಂಗಳೂರಿನಲ್ಲಿ ರಾತ್ರಿ ವೇಳೆ ಮನೆಗೆ ವಾಪಸಾಗುತ್ತಿದ್ದ ಮಹಿಳೆಯ ಮೇಲೆ ದೌರ್ಜನ್ಯವೆಸಗಲಾಗಿದ್ದನ್ನು ಪ್ರಶ್ನಿಸಿದ್ದಕ್ಕೆ, ‘ಮಹಿಳೆಯರಿಗೆ ಸುರಕ್ಷೆ ನೀಡಬೇಕಾಗಿರುವ ಸರಕಾರವೇ ಜವಾಬ್ದಾರಿಯನ್ನು ತೆಗೆದುಕೊಳ್ಳದೇ, ಬದಲಾಗಿ ಮಹಿಳೆಯರ ಬಟ್ಟೆ, ಉಡುಗೆ, ತೊಡುಗೆ, ಸ್ವಾತಂತ್ರ್ಯದ ಬಗ್ಗೆ ತಿರುಗಿ ಪ್ರಶ್ನಿಸಿದೆ!

ಹಾಗಾದರೆ. . . . . .

ರಾತ್ರಿ ವೇಳೆಯ ಶಿಫ್ಟ್ ಗಳಲ್ಲಿ ಕೆಲಸ ಮಾಡುವ ಸ್ತ್ರೀಗೆ ಯಾವುದೇ ರಕ್ಷಣೆಯಿಲ್ಲವೇ?!

ರೆಡ್ಡಿಯವರು ಹೇಳಿದಂತೆ, ಕೇವಲ ಬಟ್ಟೆಯ ಮೇಲೆಯೇ ಆಕೆಯ ಚಾರಿತ್ರ್ಯವನ್ನು ಗುರುತಿಸಲಾಗುತ್ತದೆಯೆಂದರೆ, ಇಲ್ಲಿಯವರೆಗೆ ಭಾರತೀಯ ಸೀರೆಯನ್ನುಟ್ಟವರಿಗೆ ಯಾವ ರೀತಿಯ ದೌರ್ಜನ್ಯವೂ ನಡೆಯಲಿಲ್ಲವೇ?!

ರಾತ್ರಿ ವೇಳೆ ಹೊರ ಹೋಗುವ ಅನಿವಾರ್ಯವೇನಿರುತ್ತದೆ ಹೆಣ್ಣಿಗೆ ಎಂಬುದಾದರೆ ಆಕೆ ಹಗಲು ಹೊತ್ತಿನಲ್ಲಿ ಮಾತ್ರ ಹೊರ ಹೋಗಿ ಸಂಜೆ ಇಷ್ಟರೊಳಗೆ ಮನೆ ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೇ ರಾಜ್ಯದಲ್ಲಿ?! ಆಗಿದ್ದರೆ, ಭದ್ರತಾ ವ್ಯವಸ್ಥೆ ಅಷ್ಟು ಹದಗೆಟ್ಟಿದೆ ಎಂದು ಒಪ್ಪಿಕೊಂಡಂತಾಯಿತಲ್ಲವೇ?!

ಗೌರೀ ಹತ್ಯೆಯನ್ನು ಬಗೆಹರಿಸಲಾಗದ್ದಕ್ಕೆ ಈ ರೀತಿಯ ನಾಟಕವೇ?!

ನಿಜಕ್ಕೂ ಇದು ಹಾಗೆನಿಸುತ್ತಿದೆ! ಪತ್ರಕರ್ತೆಯಾಗಿದ್ದ ಗೌರೀ ಲಂಕೇಶ್ ಗೆ ಕಾಂಗ್ರೆಸ್ಸಿಗರೇ ಹೇಳುವಂತೆ, ತುಂಬಾ ಬೆದರಿಕೆಗಳಿತ್ತು ಎನ್ನುವುದನ್ನೊಪ್ಪುವುದಾದರೆ, ರಕ್ಷಣೆಯನ್ನೂ ಗೌರಿ ಲಂಕೇಶ್ ಗೆ ಕೊಡದಿದ್ದ ಕಾಂಗ್ರೆಸ್ ಈಗ ಆಕೆಯ ಹತ್ಯೆಯನ್ನೂ ಸಮರ್ಥನೆಗಳನ್ನು ಕೊಟ್ಟು ಕೈ ತೊಳೆದುಕೊಳ್ಳಲು ನೋಡುತ್ತಿದೆಯಲ್ಲವೇ?! ಯಾವುದೇ ಮಹಿಳೆಯರಿಗೂ ಸಹ, ರಕ್ಷಣೆಯನ್ನೂ ನೀಡಲಾಗದಷ್ಟು ವಿಫಲವಾಗಿರುವ ಆಡಳಿತದಲ್ಲಿ ಇನ್ನೇನನ್ನು ಬಯಸಲು ಸಾಧ್ಯ ಹೇಳಿ?!

ಜನವರಿ 5 ರ ಆಚೆ ಈಚೆ ಅದೆಷ್ಟೋ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಮೇಲಿನಿಂದ ಮೇಲೆ ದಾಖಲಾಗುತ್ತಲೇ ಇದೆ! ಮಹಿಳೆಯರಿಗೆ ರಕ್ಷಣೆ
ಕೊಡಲಾಗದ ಆಡಳಿತ ಪಕ್ಷ ಮಹಿಳೆಯ ಸ್ವತಂತ್ರ್ಯದ ಬಗ್ಗೆ ಪ್ರಶ್ನಿಸುತ್ತಿರುವುದು ತಪ್ಪಲ್ಪವೇ?! ಇವರರ್ಥದಲ್ಲಿ ಹಾಗಾದರೆ, ಮಹಿಳೆಯರು ಹೊರ ಹೋಗದೇ,
ಸ್ವಾವಲಂಬಿಗಳಾಗದೇ, ಮನೆಯಲ್ಲಿಯೇ ಕೂರಬೇಕೇ?!

ಮಹಿಳೆಯರ ಸಬಲೀಕರಣ ಎನ್ನುವ ಕಾಂಗ್ರೆಸ್ಸಿಗರು ಮಹಿಳೆಯರನ್ನು ಮನೆಯಲ್ಲಿ ಕೂರಿಸಿ ಸಬಲೀಕರಣ ಮಾಡುತ್ತದೆಯೇ ಕಾಂಗ್ರೆಸ್ ಸರಕಾರ?! ಬರೀ ಬೆಂಗಳೂರು ಮಾತ್ರವಲ್ಲ, ಬದಲಿಗೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ಸಹ ಅದೆಷ್ಟೋ ದೌರ್ಜನ್ಯದ ಪ್ರಕರಣಗಳಾಗುವಾಗ, ಕಾಂಗ್ರೆಸ್ ನ ಗೃಹಮಂತ್ರಿ ಬಟ್ಟೆ ಬರೆ ತುಂಡುಗಳನ್ನು ನೋಡುತ್ತಾ ಕುಳಿತುಕೊಳ್ಳುತ್ತದೆಯೇ ಹಾಗಾದರೆ?!

– ಪೃಥು ಅಗ್ನಿಹೋತ್ರಿ

Tags

Related Articles

Close