ಪ್ರಚಲಿತ

ನಿಜವಾಗಿಯೂ ಇವಿಎಂ ಹ್ಯಾಕ್ ಮಾಡಿಸಿ ಮೋದಿ ಚುನಾವಣೆ ಗೆಲ್ಲುತ್ತಿದ್ದಾರಾ?

ದೇಶದಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರದಿಂದ ಹಲವಾರು ರಾಜ್ಯಗಳಲ್ಲಿ, ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ನಡೆದಿವೆ, ಕಾಂಗ್ರೆಸ್ ಬಹುತೇಕ ರಾಜ್ಯಗಳಲ್ಲಿ ಮೋದಿ ಮೋಡಿಯೆದುರು ಸೋತು ಸುಣ್ಣವಾಗಿದೆ.

ಮೋದಿ ಹವಾ ಮುಂದೆ ಕಾಂಗ್ರೆಸ್ ಚಿತ್ ಆಗಿದೆ, ದೇಶದ 20 ಪ್ರಮುಖ ರಾಜ್ಯಗಳಲ್ಲಿ ತನಗಿದ್ದ ಅಧಿಕಾರವನ್ನ ಕಾಂಗ್ರೆಸ್ ಕಳೆದುಕೊಂಡು ಕೇವಲ ಐದಾರು ಚಿಕ್ಕಪುಟ್ಟ ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಂಡಿದೆ.

ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜನವಿರೋಧಿ ನೀತಿ, ಅಭಿವೃದ್ಧಿಯನ್ನ ಕಡೆಗಣಿಸಿದ್ದಕ್ಕೆ ಸಾಮಾನ್ಯವಾಗೇ ಜನಸಾಮಾನ್ಯರಲ್ಲಿ ಕಾಂಗ್ರೆಸ್ಸಿನೆಡೆಗೆ ಜನರು ವೋಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ಸನ್ನ ಅಧಿಕಾರದಿಂದ ಕೆಳಗಿಳಿಸಿದ್ದರು ಈಗಲೂ ಅದೇ ಕೆಲಸವನ್ನ ಮಾಡುತ್ತಿದ್ದಾರೆ.

ಆದರೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರೋ ಕಾಂಗ್ರೆಸ್ ತನ್ನ ಸೋಲನ್ನ ಒಪ್ಪಿಕೊಳ್ಳುವುದನ್ನ ಬಿಟ್ಟು ತನ್ನ ಸೋಲಿಗೆ ಬಿಜೆಪಿಯ ಕಡೆಗೆ ಬೊಟ್ಟು ಮಾಡಿ “ಬಿಜೆಪಿ EVM ಮಷೀನ್ ಗಳನ್ನ ಹ್ಯಾಕ್ ಮಾಡಿಸಿ ಚುನಾವಣೆ ಮಾಡುತ್ತಿದೆ, ಯಾವ ಪಕ್ಷದ ಬಟನ್ ಒತ್ತಿದರೂ ವೋಟು ಬಿಜೆಪಿಗೇ ಬೀಳುವಂತೆ ಮತಯಂತ್ರವನ್ನ ಮಾಡಲಾಗಿದೆ” ಅನ್ನೋ ಬಾಲಿಶ ಹೇಳಿಕೆ ನೀಡುತ್ತ ಬಂದಿದೆ & ಈಗ ನಡೆದಿರುವ ಗುಜರಾತ್ ಚುನಾವಣೆಯಲ್ಲಿ ಸೋಲೋದು ಗ್ಯಾರಂಟಿ ಅಂತ ಗೊತ್ತಾದಮೇಲೆ ಇಲ್ಲೂ ಅದೇ ನಿರಾಧಾರ ಆರೋಪ ಮಾಡುತ್ತಿದೆ.

EVM ಹ್ಯಾಕ್ ಮಾಡಿ ಬಿಜೆಪಿ ಗೆಲ್ಲುತ್ತಿದೆ ಅಂತ ಹೇಳುವ ಕಾಂಗ್ರೆಸ್ಸಿಗರಿಗೆ ತನ್ನದೇ ಪಕ್ಷದ ಮುಖ್ಯಮಂತ್ರಿ ಕಪಾಳಮೋಕ್ಷವಾಗುವಂತೆ ಉತ್ತರ ಕೊಟ್ಟಿದ್ದೂ ಮರೆತು ಹೋಯಿತಾ?

ಗುಜರಾತ ಚುನಾವಣೆಯ ನಂತರ ಎಕ್ಸಿಟ್ ಪೋಲ್ ಗಳ ಸಮೀಕ್ಷೆಯ ರಿಸಲ್ಟ್ ಎಲ್ಲ ಚಾನೆಲ್ ಗಳ ತೋರಿಸುತ್ತಿವೆ, ಅದರಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಗುಜರಾತ್ ಗದ್ದುಗೆ ಹಿಡಿಯುತ್ತೆ ಅನ್ನುತ್ತಿವೆ.

ಈ ಸಂದರ್ಭದಲ್ಲಿ ತನ್ನ ಸೋಲನ್ನ ಮರೆಮಾಚೋಕೆ ಕಾಂಗ್ರೆಸ್ ಮತ್ತೆ EVM ಮತಯಂತ್ರಗಳ ಕಡೆ ಬೊಟ್ಟು ಮಾಡಿದೆ.

ಈ ಬಾರಿ ಕಾಂಗ್ರೆಸ್ಸಿನ ಪ್ರಮುಖ ನಾಯಕರು ಇವಿಎಂ ಯಂತ್ರದ ಬಗ್ಗೆ ಆರೋಪ ಮಾಡಿಲ್ಲ, ಬದಲಾಗಿ ಗುಜರಾತಿನ ಪಾಟೀದಾರ್ ಆಂದೋಲನ ನಡೆಸಿ ಬಿಜೆಪಿ ವಿರೋಧಿಸಿ ಕಾಂಗ್ರೆಸ್ಸಿಗೆ ಸಹಾಯ ಮಾಡಿದ್ದ ಹಾರ್ದಿಕ್ ಪಟೇಲನಿಂದ EVM ಹ್ಯಾಕ್ ಆಗಿದೆ ಅನ್ನೋ ಹೇಳಿಕೆಯನ್ನ ನೀಡಿಸಿದೆ.

ಹಾರ್ದಿಕ್ ಪಟೇಲ್
ಹೇಳೋದೇನು?

ಹಾರ್ದಿಕ್ ಪಟೇಲ್ ನೆನ್ನೆ ಟ್ವೀಟೋಂದನ್ನ ಮಾಡಿ ಹೇಳ್ತಾನೆ “ದೇವರು ಮನುಷ್ಯನ ದೇಹವನ್ನ ಸೃಷ್ಟಿಸಿದ ಮೇಲೆ ದೇಹದಲ್ಲಿ ವ್ಯತ್ಯಾಸಗಳು ಕಾಣಬಹುದಾದರೆ ಇವಿಎಂ ಮಷೀನ್ ಗಳಲ್ಲಿ ಬದಲಾವಣೆ ಮಾಡೋಕೆ ಆಗಲ್ವ? ನನ್ನ ಈ ಮಾತುಗಳಿಂದ ನಗು ಬರುಬಹುದು ಆದರೆ ಇದರ ಬಗ್ಗೆ ಯಾರೂ ಯೋಚಿಸುತ್ತಿಲ್ಲ, ಈ ಬಾರಿ ಗುಜರಾತ್ ನಲ್ಲಿ ಬಿಜೆಪಿ ಗೆಲ್ಲುತ್ತೆ ಹಿಮಾಚಲ ಪ್ರದೇಶದಲ್ಲಿ ಸೋಲುತ್ತೆ. ಹಿಮಾಚಲದಲ್ಲಿ ಬೇಕೂಂತಾನೇ ಈ ಇವಿಎಂ ಮಷೀನ್ ಗಳ ಗೋಲಮಾಲ್ ತೋರ್ಪಡಿಸದಿರೋಕೆ ಬಿಜೆಪಿ ಅಲ್ಲಿ ಸೋತು ಇಲ್ಲಿ ಗೆಲ್ಲುತ್ತೆ” ಅನ್ನೋ ತನ್ನ ಬಾಲಿಶತನದ ಹೇಳಿಕೆಯನ್ನ ನೀಡಿದ್ದಾನೆ.

ಅಷ್ಟಕ್ಕೂ ಇವರು ಹೇಳುವ ರೀತಿಯಲ್ಲಿ ಇವಿಎಂ ಮಷೀನ್ ಗಳನ್ನ ಬಿಜೆಪಿ ಹ್ಯಾಕ್ ಮಾಡಿಸಿದೆ ಅಂತಲೇ ಇಟ್ಟುಕೊಳ್ಳೋಣ, ಹಾಗಿದ್ದರೆ ಬಿಜೆಪಿ ಬಿಹಾರ್, ಕಾಶ್ಮೀರ, ಪಂಜಾಬ್, ದೆಹಲಿಯಂತಹ ರಾಜ್ಯಗಳಲ್ಲಿ ಸೋತಿದ್ಯಾಕೆ?

ಅಧಿಕಾರವನ್ನ ಹೇಗಾದರೂ ಮಾಡಿ ಪಡೆದೇ ತೀರಬೇಕು ಅಂತಿದ್ದರೆ ಈ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲೂ ಮತಯಂತ್ರಗಳು ಹ್ಯಾಕ್ ಆಗಬೇಕಿತ್ತಲ್ಲವೇ?

ಕಾಂಗ್ರೆಸ್ ಹಾಗು ವಿರೋಧ ಪಕ್ಷಗಳು ಇವಿಎಂ ಮಷೀನ್ ಗಳ ಮೇಲೆ ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗ ಹಿಂದೆ ಸ್ಪಷ್ಟೀಕರಣ ನೀಡುತ್ತ “ಇವಿಎಂ ಮಷೀನ್ ಗಳು ಹ್ಯಾಕ್ ಆಗಿವೆ ಅನ್ನೋ ಅನುಮಾನಗಳು ನಿಮ್ಮಲ್ಲಿದ್ದರೆ ಎಕ್ಸಪರ್ಟ್ ಗಳನ್ನ ಕರೆತಂದು ನೀವು ಇದರ ಪರೀಕ್ಷೆ ನಡೆಸಬಹುದು, ಇವಿಎಂ ಮಷೀನ್ ಗಳು ಸರಿಯಾಗೇ ಇವೆ ಅವುಗಳನ್ನ ಹ್ಯಾಕ್ ಮಾಡೋಕೆ ಸಾಧ್ಯವಿಲ್ಲ” ಅಂದಿತ್ತು.

ಕೇಂದ್ರ ಚುನಾವಣಾ ಆಯೋಗ ನೀಡಿದ ಪಂಥಾಹ್ವಾನವನ್ನ ಇವಿಎಂ ಮೇಲೆ ಆರೋಪ ಮಾಡಿದ ಕೇಜ್ರಿವಾಲ್, ಮಾಯಾವತಿ, ಕಾಂಗ್ರೆಸ್, ಅಖಲೇಶ್ ಯಾದವ್, ಮುಲಾಯಂ ಸಿಂಗ್ ಆದಿಯಾಗಿ ಯಾರೂ ಪರೀಕ್ಷೆ ಮಾಡಲು ಮುಂದೆ ಬರಲೇ ಇಲ್ಲ.

ಈಗ ಗುಜರಾತ್ ಚುನಾವಣೆಯಲ್ಲಿ ಸೋಲುತ್ತೇವೆ ಅಂತ ಖಾತ್ರಿಯಾದ ಮೇಲೆ ಮತ್ತೆ ಇವಿಎಂ ಮಷೀನ್ ಗಳು ಹ್ಯಾಕ್ ಆಗಿವೆ ಅನ್ನೋ ತಮ್ಮ ಹಳೇ ಚಾಳಿಯನ್ನ ಕಾಂಗ್ರೆಸದ ಮುಂದುವರೆಸಿದೆ.

ಆದರೆ EVM ಹ್ಯಾಕ್ ಮಾಡಿ ಬಿಜೆಪಿ ಗೆಲ್ಲುತ್ತಿದೆ ಅಂತ ಹೇಳುವ ಕಾಂಗ್ರೆಸ್ಸಿಗರಿಗೆ ತನ್ನದೇ ಪಕ್ಷದ ಕಾಂಗ್ರೆಸ್ ಮುಖ್ಯಮಂತ್ರಿ ಉತ್ತರ ಕೊಟ್ಟಿದ್ದು ಹೇಗೆ ಗೊತ್ತಾ?

“EVM ಹ್ಯಾಕ್ ಆಗಿರುತ್ತಿದ್ದರೆ ನಾನು ಅಧಿಕಾರದಲ್ಲಿರುತ್ತಿರಲಿಲ್ಲ” ಎಂದು ಕಾಂಗ್ರೆಸ್ ಆರೋಪವನ್ನು ಪಂಜಾಬ್ ಕಾಂಗ್ರೆಸ್ ಮುಖ್ಯಮಂತ್ರಿ ಅಮರೇಂದರ್ ಸಿಂಗ್ ತಿರಸ್ಕರಿಸಿದ್ದು ಕಾಂಗ್ರೆಸ್ಸಿಗೆ ಕಪಾಳಮೋಕ್ಷ ಮಾಡಿದಂತಾಗಿದೆ.

ಪಂಜಾಬ್ ನ ಕಾಂಗ್ರೆಸ್ ಮುಖ್ಯಮಂತ್ರಿ ಅಮರೇಂದರ್ ಸಿಂಗ್ ತಮ್ಮ ಪಕ್ಷದ ಆರೋಪವನ್ನು ತಳ್ಳಿಹಾಕಿದ್ದಾರೆ.. ಕೆಂದ್ರ ಸರ್ಕಾರ ದಿಂದ EVM ಹ್ಯಾಕ್ ಆರೋಪ ನಿಜವಾಗಿದ್ದರೆ ನಾನು ಅಧಿಕಾರಕ್ಕೆ ಬರುತ್ತಿರಲಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷದ ನಿಲುವನ್ನು ಸ್ಪಷ್ಟವಾಗಿ ವಿರೋಧಿಸಿದ್ದಾರೆ.
“ಇವಿಎಂ ಮೋಸದ” ಆರೋಪ ನೈಜವಾಗಿದ್ದರೆ ನಾನು ಇಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ ಅಥವಾ ಅಧಿಕಾರಲ್ಲಿ ಇರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ..

ಅಮರೇಂದರ್ ಸಿಂಗರ ಮುಂಚೆಯೂ ಕಾಂಗ್ರೆಸ್ಸಿನ ನಾಯಕರಾದ ವೀರಪ್ಪ ಮೊಯ್ಲಿ ಕೂಡ ಇವಿಎಂ ಮಷೀನ್ ಹ್ಯಾಕಿಂಗ್ ಆರೋಪವನ್ನ ತಳ್ಳಿ ಹಾಕಿದ್ದನ್ನ ಇಲ್ಲಿ ಸ್ಮರಿಸಬಹುದು.

EVM ಗಳ ಬದಲು ಹಳೆಯ ಮತಪತ್ರದ ಪದ್ಧತಿ ಜಾರಿಗೆ ಬರಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ.

ಜಿಗ್ನೇಶ್ ಮೇವಾನಿ, ಹಾರ್ದಿಕ್ ಪಟೇಲನಂಥ ಬಚ್ಚಾಗಳು ಮೋದಿಯ ವಿರುದ್ಧ ಬೊಟ್ಟು ಮಾಡಿ ಎಟಿಎಂ ಮಷೀನ್ ಗಳನ್ನ ಹ್ಯಾಕ್ ಮಾಡಬಹುದಾದರೆ ಇವಿಎಂ ಮಷೀನ್ ಹ್ಯಾಕ್ ಮಾಡೋಕೆ ಯಾಕಾಗಲ್ಲ ಅನ್ನೋ ಬಾಲಿಶ ಹೇಳಿಕೆಗಳನ್ನ ನೀಡುತ್ತ ನಗೆಪಾಟಲಿಗೀಡಾಗುತ್ತಿದ್ದಾರೆ.

ಒಟ್ಟಿನಲ್ಲಿ ಇವರೆಲ್ಲರ ಈ ಸರ್ಕಸ್ ನಡುವೆ ಮೋದಿ ಮೋಡಿ ಮುಂದುವರೆಯುತ್ತಿದ್ದು ಸದ್ಯ ಲೋಕಸಭಾ ಚುನಾವಣೆ ನಡೆದರೂ ಮೋದಿಯೇ ನಿರಾಯಾಸವಾಗಿ ಗೆದ್ದು ಮತ್ತೆ ಪ್ರಧಾನಮಂತ್ರಿ ಆಗುತ್ತಾರೆ ಅನ್ನೋ ಸರ್ವೇಗಳು ಬರುತ್ತಿವೆ.

ಕೈಲಾಗದವನು ಮೈ ಪರಚಿಕೊಂಡ, ಕುಣಿಯೋಕೆ ಬಾರದವನು ನೆಲ ಡೊಂಕು ಅಂದ ಹಾಗೆ ಮೋದಿ ವಿರೋಧಿಗಳು ಚುನಾವಣೆ ಗೆಲ್ಲೋಕಾಗದೆ ಇವಿಎಂ ಮಷೀನ್ ಗಳು ಹ್ಯಾಕ್ ಆಗಿವೆ ಅಂತಿದಾರೆ.

ಇವಿಎಂ ಮಷೀನ್ ಗಳು ಹ್ಯಾಕ್ ಆಗಿಲ್ಲ ಮತದಾರನ ಮನಸ್ಸು ಬದಲಾಗಿದೆ ಅನ್ನೋದು ಇವರಿಗೆ ಅದ್ಯಾವಾಗ ಅರ್ಥವಾಗುತ್ತೋ??

– Vinod Hindu Nationalist

Tags

Related Articles

Close