ಪ್ರಚಲಿತ

ಪಾಕಿಸ್ತಾನ ಭಾರತದ ವಿರುದ್ಧ ಮಾಡಿದ ಕುತಂತ್ರ ನೋಡಿದ್ರೆ ಖಂಡಿತಾ ಬೆಚ್ಚಿಬೀಳಲೇಬೇಕು! ಪಾಕ್ ವಿರುದ್ಧ ಯುದ್ಧ ಅನಿವಾರ್ಯ?

ಪಾಕಿಸ್ತಾನ ಭಾರತದ ವಿರುದ್ಧ ಎಂದೋ ಜಿಹಾದ್ ಸಾರಿದೆ. ಭಾರತೀಯರನ್ನು ನಾಶ ಮಾಡಲೇಬೇಕು ಎಂದು ಹಟಕ್ಕೆ ಬಿದ್ದಿರುವ ಪಾಕಿಸ್ತಾನ ಅದಕ್ಕಾಗಿ ನಾನಾ
ರೀತಿಯ ಸರ್ಕಸ್‍ಗಳನ್ನು ಮಾಡುತ್ತಲೇ ಬಂದಿದೆ. ಆದರೆ ಈ ಬಾರಿ ಭಾರತವನ್ನು ನಾಶ ಮಾಡಲು ಭಾರೀ ದೊಡ್ಡದೊಂದು ಕುತಂತ್ರವನ್ನು ಹೆಣೆದಿದೆ. ಈ ಕುತಂತ್ರವನ್ನು ನೋಡಿದರೆ ಭಾರತೀಯರು ಖಂಡಿತಾ ಬೆಚ್ಚಿಬೀಳಲೇಬೇಕು. ಇಂಥದೊಂದು ಕುತಂತ್ರವನ್ನು ಭಾರತ ಕೊನೆಗೂ ಪತ್ತೆ ಮಾಡಿದ್ದು, ಭಾರತೀಯ ಸೇನೆ ಹೈ ಅಲೆರ್ಟ್ ಘೋಷಿಸಿದೆ.

ಹೌದು, ಪಾಕಿಸ್ತಾನ ತನ್ನ ಅಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡುವ ಸಲುವಾಗಿ ಭಾರತದ ಸಮೀಪದಲ್ಲೇ ಸುರಂಗವನ್ನು ಕೊರೆದಿದ್ದು, ಭಾರತೀಯರ ಭಾರೀ ಆತಂಕಕ್ಕೆ ಕಾರಣವಾಗಿದೆ. ಇದು ಎಷ್ಟು ದೂರವಿದೆ ಎಂದರೆ ನೀವು ಖಂಡಿತಾ ಬೆಚ್ಚಿಬೀಳಲೇಬೇಕು. ಅಣುಸುರಂಗ ಅಮೃತಸರದಿಂದ ಕೇವಲ 350 ಕಿ.ಮೀ ದೂರದಲ್ಲಿದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಕೇವಲ 750 ಕಿ.ಮೀ ದೂರದಲ್ಲಿದೆ. ಅಲ್ಲದೆ ಅಣು ಶಸ್ತ್ರಾಸ್ತ್ರಗಳ ಸಂಗ್ರಹಕ್ಕೆ ಅನೇಕ ಸುರಂಗಗಳನ್ನು ಕೊರೆಯಲಾಗಿದ್ದು, ಒಂದಕ್ಕೊಂದು ಸಂಪರ್ಕ ಹೊಂದಿವೆ ಎಂಬ ಆತಂಕಕಾರಿ ವಿಷಯವನ್ನು ವಿಯಾನ್ ಪತ್ರಿಕೆ ವರದಿ ಮಾಡಿದೆ.

ಇದರ ಜೊತೆಗೆ ಇನ್ನೊಂದು ಆತಂಕದ ವಿಚಾರವೊಂದಿದೆ. ಅದೇನಪ್ಪಾ ಅಂದ್ರೆ ಪಾಕಿಸ್ತಾನ ಕೇವಲ ತನ್ನ ಭೂಪ್ರದೇಶದಲ್ಲಿ ಮಾತ್ರ ಸುರಂಗವನ್ನು ಕೊರೆದುಕೊಂಡಿಲ್ಲ. ಬದಲಿಗೆ ಭಾರತದ ಗಡಿಯನ್ನು ದಾಟಿರುವ ಬಗ್ಗೆಯೂ ವರದಿಗಳು ಬಂದಿದ್ದು, ಅಲ್ಲಿಯೂ ಅಣುಸಂಗ್ರಹ ಮಾಡಿರುವ ಸಾಧ್ಯತೆಯ ಬಗ್ಗೆ ಆತಂಕ ಶುರುವಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಗಡಿ ಭದ್ರತಾ ಪಡೆ ಹಾಗೂ ಪಾಕಿಸ್ತಾನ ರೇಂಜರ್ಸ್ ನಡುವೆ ಅಂತಾರಾಷ್ಟ್ರೀಯ ಗಡಿಯಲ್ಲಿ ಶಾಂತಿ ಸ್ಥಾಪಿಸಬೇಕು ಎಂಬ ಉದ್ದೇಶಕ್ಕಾಗಿ ನಡೆದ ಸಭೆಯ ಮರು ದಿನವೇ ಭಾರತೀಯ ಭದ್ರತಾ ಪಡೆಗಳು ಪಾಕಿಸ್ತಾನದಿಂದ ಜಮ್ಮು ಕಾಶ್ಮೀರದ ಅರ್ನಿಯಾ ಪ್ರದೇಶದವರೆಗೂ ಸುರಂಗ ಕೊರೆದಿರುವುದನ್ನು ಪತ್ತೆ ಹಚ್ಚಿದ್ದಾರೆ. ಇದರಿಂದಾಗಿ ಪಾಕಿಸ್ತಾನದ ಜಿಹಾದಿ ಮುಖ ಮತ್ತೊಮ್ಮೆ ಅನಾವರಣಗೊಂಡಂತಾಗಿದೆ.

10 ಮೀಟರ್ ಎತ್ತರ, 10 ಮೀಟರ್ ಅಗಲ…!

ಪಾಕಿಸ್ತಾನ ಕೊರೆದಿರುವ ಅಣುಸುರಂಗಗಳು 10 ಮೀಟರ್ ಎತ್ತರವಿದ್ದು, 10 ಮೀಟರ್ ಅಗಲವಿದೆ. ಇವುಗಳಿಗೆ ಹಾನಿಯಾಗಬಾರದೆಂಬ ಕಾರಣಕ್ಕೆ ದೊಡ್ಡ ಪ್ರಮಾಣದ ಗೋಡೆಗಳನ್ನು ನಿರ್ಮಿಸಲಾಗಿದೆ. ಈ ಪ್ರತಿ ಸುರಂಗದಲ್ಲೂ 12ರಿಂದ 24 ಅಣ್ವಸ್ತ್ರಗಳನ್ನು ಶೇಖರಿಸಿಡುವ ಅವಕಾಶ ಮಾಡಲಾಗಿದೆ. ಜೊತೆಗೆ ಸರಂಗಕ್ಕೆ ಹೊಂದಿಕೊಂಡು ಅಗಲವಾದ ರಸ್ತೆಯನ್ನೂ ನಿರ್ಮಿಸಲಾಗಿದೆ. ಒಂದು ವೇಳೆ ಈ ಗೋಡೆಗೆ ಹಾನಿಯಾದರೆ ಇದರಿಂದ ಭಾರೀ ಅನಾಹುತ ಸೃಷಿಯಾಗುವ ಸಾಧ್ಯತೆ ಇದೆ. ಪಾಕಿಸ್ತಾನ ಈ ಸುರಂಗಗಳನ್ನು ಭಾರತಕ್ಕೆ ಸಮೀಪವಾಗುವಂತೆ ನಿರ್ಮಿಸಿರುವುದರ ಜತೆಗೆ ಕೆಲವು ಸುರಂಗಗಳನ್ನು ಭಾರತದ ಗಡಿಯೊಳಗೂ ಕೊರೆದಿರುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಈ ಸುರಂಗಗಳಿಗೆ ಹಾನಿಯಾಗಿ ಅಣ್ವಸ್ತ್ರಗಳ ಸ್ಫೋಟಿಸದರೆ, ಅಥವಾ ಲಾಂಚರ್ ಮೂಲಕ ಭಾರತಕ್ಕೆ ಪ್ರಯೋಗಿಸಿದರೆ, ಅಥವಾ ಇದು ಉಗ್ರರ ವಶವಾದರೆ ಭಾರತದ ಮೇಲಷ್ಟೇ ಅಲ್ಲ, ಇಡೀ ಜಗತ್ತಿಗೇ ಆತಂಕ ಎದುರಾಗಿದೆ.

ಯುದ್ಧ ಅನಿವಾರ್ಯ!!!

ಮೂರು ದಿನಗಳ ಹಿಂದೆಯಷ್ಟೇ ಭಾರತದ ಏರ್‍ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಅಗತ್ಯಬಿದ್ದರೆ ಅಲ್ಪಾವಧಿ ಯುದ್ಧ ನಡೆಸಲು ವಾಯುಪಡೆ ಸನ್ನದ್ಧವಾಗಿದೆ
ಎಂದಿದ್ದರು. ಅವರ ಮಾತುಗಳು ಈಗ ಮತ್ತಷ್ಟು ಮಹತ್ವಪಡೆದಿದೆ. ಇದೀಗ ಭಾರತದ ಸಮೀಪವೇ ಅಣುಸಂಗ್ರಹಗಾರ ಕೊರಿದಿರುವುದು ಭಾರತಕ್ಕೆ ಎಷ್ಟು ಗಂಡಾಂತರ ಕಾದಿದೆಯೋ ಅಷ್ಟೇ ಗಂಡಾಂತರ ಇಡೀ ವಿಶ್ವಕ್ಕೂ ಕಾದಿದೆ. ಆದ್ದರಿಂದ ಇದು ಇಡೀ ವಿಶ್ವಕ್ಕೆ ಅಪಾಯಕಾರಿಯಾಗಿರುವುದರಿಂದ ಭಾರತ ಪಾಕಿಸ್ತಾನದ ಅಣುಸ್ಥಾವರಗಳನ್ನು ನಾಶಪಡಿಸಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇದಕ್ಕಾಗಿ ಭಾರತ ಪಾಕಿಸ್ತಾನದ ಜೊತೆ ಸೀಮಿತ ದಾಳಿಯನ್ನು ನಡೆಸಬೇಕಾದೀತು ಇಲ್ಲವೇ ಯುದ್ಧದಲ್ಲೂ ತೊಡಗಬೇಕಾದ ಅನಿವಾರ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. ಯಾಕೆಂದರೆ ಭಾರತ ಭಯೋತ್ಪಾದನೆಯ ವಿರುದ್ಧ ಈಗಾಗಲೇ ಬದ್ಧತೆ ತೋರಿದೆ. ಅತ್ತ ಅಮೆರಿಕಾ ಕೂಡಾ ಉತ್ತರ ಕೊರಿಯಾದ ಅಣುಚಟುವಟಿಕೆಗಳ ವಿರುದ್ಧ ಬೆಚ್ಚಿಬಿದ್ದಿದ್ದು, ಯುದ್ಧಕ್ಕೂ ಮುಂದಾಗಿದೆ. ಅಮೇರಿಕಾ ಕೂಡಾ ಉತ್ತರ ಕೊರಿಯಾದ ಅಣು ಚಟುವಟಿಕೆ ಇಡೀ ಜಗತ್ತಿಗೆ ಗಂಡಾಂತರ ಎಂದು ಸಾರಿದ್ದು, ಇದನ್ನು ವಿಶ್ವಸಂಸ್ಥೆಯ ಮುಂದೆಯೂ ಸಾದರಪಡಿಸಿದೆ. ಪಾಕಿಸ್ತಾನದ ಭಯೋತ್ಪಾದನೆಯ ಮುಖವನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದ ಭಾರತ, ಮುಂದೆ ಪಾಕಿಸ್ತಾನ ಒಡ್ಡಿದ ಅಣು ಸವಾಲನ್ನು ಕೂಡಾ ಇಡೀ ಜಗತ್ತಿಗೆ ತೋರಿಸಿ ಅದರ ವಿಕಾರ ಮುಖವನ್ನು ಜಗತ್ತಿಗೆ ತೋರಿಸಬೇಕಾಗಿದೆ. ಇದಕ್ಕಾಗಿ ಭಾರತ ಪಾಕಿಸ್ತಾನದ ಜೊತೆ ಯುದ್ಧವನ್ನೂ ಆಯ್ಕೆ ಮಾಡುವ ಪರಿಸ್ಥಿತಿಯೂ ಎದುರಾಗಬಹುದು.

-ಚೇಕಿತಾನ

Tags

Related Articles

Close