ಪ್ರಚಲಿತ

ಪೆಟಾದವರೇ, ಕಂಬಳದಲ್ಲಿ ಕೋಣಗಳನ್ನು ಓಡಿಸುವುದು ಹಿಂಸೆಯಾದರೆ ಬಲಿದಾನದ ಹೆಸರಲ್ಲಿ ಜಾನುವಾರುಗಳ ಕತ್ತು ಸೀಳಿ ಕೊಲ್ಲುವುದಕ್ಕೆ ಏನಂತೀರಿ?!

ಪೆಟಾದವರಿಗೆ ಪ್ರಾಣಿಗಳ ಬಗ್ಗೆ ಭಾರೀ ಕರುಣೆ ಇದೆ, ಅವರು ಪ್ರಾಣಿಗಳ ಹಕ್ಕುಗಳ ಬಗ್ಗೆ ಸಾಕಷ್ಟು ಕಾಳಜಿ ಇದೆ ಎಂದು ಭಾವಿಸಲಾಗಿತ್ತು. ಆದರೆ ಇವರ ದಯೆ ಬರೀ ಬೂಟಾಟಿಕೆ ಎನ್ನುವುದುದ ಕೊನೆಗೂ ಬಹಿರಂಗಗೊಂಡಿದೆ. ಯಾಕೆಂದರೆ ಸುಪ್ರೀಂಕೋರ್ಟು ಕಂಬಳ ನಡೆಸಲು ಅನುಮತಿ ನೀಡಿದ್ದರೂ ಪೆಟಾ ಮಾತ್ರ ಮತ್ತೆ ಮತ್ತೆ ಏನಾದರೂ ಕಿರಿಕ್ ಮಾಡಿಕೊಂಡು ಅದನ್ನು ನಿಷೇಧಿಸಲು ತುದಿಗಾಲಲ್ಲಿ ನಿಂತಿದೆ. ಅಷ್ಟಕ್ಕೂ ಕಂಬಳದ ಬಗ್ಗೆ ಈ ಪೆಟಾದವರಿಗೆ ಏನು ಗೊತ್ತಿದೆ… ಇವರಿಗೆ ಪ್ರಾಣಿಗಳ ಬಗ್ಗೆ ಕರುಣೆ ಇರುವುದು ಬರೇ ಹಿಂದೂಗಳ ಆಚರಣೆಯ ವಿಷಯದಲ್ಲಿ ಮಾತ್ರ ಎನ್ನುವುದು ಕೊನೆಗೂ ಸಾಬೀತಾಗಿದೆ. ಪೆಟಾದವರಿಗೆ ಪ್ರಾಣಿಗಳ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಹಸುಗಳನ್ನು ಧರ್ಮದ ಹೆಸರಲ್ಲಿ ಕತ್ತು ಸೀಳುವುದರ ವಿರುದ್ಧವೂ ಹೋರಾಟ ನಡೆಸುತ್ತಿದ್ದರು…

ಮೂಡುಬಿದಿರೆಯಲ್ಲಿ ಶನಿವಾರ ನಡೆದ ಕೋಟಿ ಚೆನ್ನಯ ಕಂಬಳದಲ್ಲಿ ಕೋಣಗಳನ್ನು ತೀವ್ರತರವಾಗಿ ಹಿಂಸಿಸಲಾಗಿದೆ ಎನ್ನುವುದು ಪ್ರಾಣಿ ದಯಾ ಸಂಘಟನೆ(ಪೆಟಾ)ಯ ಆರೋಪವಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೊ ಮತ್ತು ಛಾಯಾಚಿತ್ರಗಳ ಸಾಕ್ಷ್ಯಗಳನ್ನು ಸೋಮವಾರ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದೆ..ಕಂಬಳದಲ್ಲಿ ಪಾಲ್ಗೊಂಡಿದ್ದ 100ಕ್ಕೂ ಹೆಚ್ಚು ಕೋಣಗಳನ್ನು ಹಿಂಸಿಸಿರುವುದನ್ನು ದೃಢಪಡಿಸುವ ಸಾಕ್ಷ್ಯಗಳು ಪೆಟಾದವರ ಬಳಿ ಇದೆಯಂತೆ… ಪೆಟಾ ಕಾರ್ಯಕರ್ತರು ಕಂಬಳಕ್ಕೆ ಭೇಟಿನೀಡಿ ವಿಡಿಯೊ ಮತ್ತು ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರಂತೆ… ಈ ಎಲ್ಲ ದಾಖಲೆಗಳನ್ನೂ ನ್ಯಾಯಾಲಯದ ಮುಂದಿಟ್ಟು, ಕರ್ನಾಟಕ ಸರ್ಕಾರ ಪ್ರಾಣಿ ಹಿಂಸೆ ತಡೆ ಕಾಯ್ದೆ (ತಿದ್ದುಪಡಿ ಮಸೂದೆ) 2017 ಅನ್ನು ರದ್ದುಗೊಳಿಸುವಂತೆ ಮನವಿ ಮಾಡುತ್ತೇವೆ’ ಎಂದು ಪೆಟಾ ಪಬ್ಲಿಕ್ ಪಾಲಿಸಿ ವಿಭಾಗದ ಮುಖ್ಯಸ್ಥ ನಿಕುಂಜ್ ಶರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುಮಾರು 100 ಕೋಣಗಳನ್ನು ಬಲವಂತವಾಗಿ ಕಂಬಳದಲ್ಲಿ ಓಡಿಸುವ ಉದ್ದೇಶದಿಂದ ಕೋಲಿನಿಂದ ಹೊಡೆದು, ತಿವಿಯಲಾಗಿದೆ. ಬಾಲವನ್ನು ತಿರುವಿ ಹಿಂಸಿಸಲಾಗಿದೆ. ಹಲವು ಕೋಣಗಳ ತೊಡೆ ಭಾಗದಲ್ಲಿ ಕೆಂಪಾದ ಬಾಸುಂಡೆಗಳಿದ್ದವು. ಅವುಗಳನ್ನು ಕಂಬಳದ ಅಂಗಣಕ್ಕೆ ತರುವ ಮುನ್ನವೇ ತೀವ್ರತರವಾಗಿ ಹಿಂಸಿಸಲಾಗಿತ್ತು ಎಂಬುದನ್ನು ಇದು ಖಚಿತಪಡಿಸುತ್ತದೆ. ರಕ್ತ ಸುರಿಯುತ್ತಿದ್ದ ಗಾಯಗಳೊಂದಿಗೆ ಕೋಣಗಳನ್ನು ಕಂಬಳದಲ್ಲಿ ಓಡಿಸಲಾಗಿದೆ ಎಂದು ಸಂಘಟನೆ ಆರೋಪಿಸಿದೆ. ಕರ್ನಾಟಕ ಸರ್ಕಾರ ಪ್ರಾಣಿ ಹಿಂಸೆ ತಡೆ ಕಾಯ್ದೆ (ತಿದ್ದುಪಡಿ ಮಸೂದೆ) 2017ರ ಮೂಲಕ ಕಂಬಳಕ್ಕೆ ಅವಕಾಶ ಕಲ್ಪಿಸಿರುವುದನ್ನು ಪ್ರಶ್ನಿಸಿ ಪೆಟಾ ಸಲ್ಲಿಸಿರುವ ಅರ್ಜಿಯನ್ನು ನವೆಂಬರ್ 6ರಂದು ಸುಪ್ರೀಂಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ. ಕಂಬಳಕ್ಕೆ ಅವಕಾಶ ಕಲ್ಪಿಸಿರುವ ಸುಗ್ರೀವಾಜ್ಞೆಯನ್ನು ರದ್ದುಗೊಳಿಸುವಂತೆ ಪೆಟಾ ಈ ಅರ್ಜಿಯಲ್ಲಿ ಕೋರಿದೆ. ಮತ್ತೆ ವಿಚಾರಣೆ ನಡೆಯಲಿದೆ…

ಶಹಬ್ಬಾಸ್ ಪೆಟಾದವರೇ… ನಿಮ್ಮ ಪ್ರಾಣಿ ಕಾಳಜಿಗೆ ಮೆಚ್ಚಲೇಬೇಕು…  ಇಷ್ಟೆಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಿದ ನಿಮಗೆ ಬಕ್ರಿದ್ ಹೆಸರಲ್ಲಿ ಕೋಣಗಳನ್ನು ಕತ್ತು ಸೀಳಿ ಕೊಂದಿರುವುದಕ್ಕೆ, ಹಟ್ಟಿಯಿಂದ ಗೋವುಗಳನ್ನು ಕದ್ದು , ಹಿಂಸೆ ನೀಡಿ ಕೊಲ್ಲವುದನ್ನು ಛಾಯಾಚಿತ್ರ ಮಾಡಿ ಸುಪ್ರೀಂಕೋರ್ಟಿಗೆ ಸಲ್ಲಿಸಲು ನಿಮಗೆ ಆಗಲಿಲ್ಲ.. ಕಂಬಳ ಕೊಲ್ಲುವುದಕ್ಕಿಂತಲೂ ಕ್ರೂರವಾಗಿ ಕಂಡಿತಲ್ವೇ… ಥೂ ನಿಮ್ಮ ಜನ್ಮಕ್ಕಿಷ್ಟು..

ಪ್ರಾಣಿ ದಯಾ ಸಂಘದವರೇ ಬಕ್ರಿದ್ ಎಂಬ ಬಲಿದಾನದ ಹೆಸರಲ್ಲಿ, ಕೆಲವರ ನಾಲಿಗೆ ಚಪಲದ ನೆಪದಲ್ಲಿ ಸಾವಿರಾರು ಗೋವುಗಳನ್ನು ಕತ್ತು ಸೀಳಿ ಕೊಂದಿರುವುದು ಮಾತ್ರ ನಿಮಗೆ ಹಿಂಸೆಯೇ ಅಲ್ಲವೇ.  ಬಕ್ರಿದ್ ಮುಸ್ಲಿಮರ ಆಚರಣೆಯಾಗಿದ್ದು, ಈ ಸಂದರ್ಭ ಗೋವುಗಳನ್ನು ಕೊಂದರೆ ಅದು ಹಿಂಸೆಯಾಗುವುದಿಲ್ಲ. ಬದಲಿಗೆ ಹಿಂದೂಗಳು ತುಳುನಾಡಿನ ಸಂಪ್ರದಾಯದ ಹೆಸರಲ್ಲಿ, ಕೋಣಗಳನ್ನು ಒಂದು ವರ್ಷ ಚೆನ್ನಾಗಿ ಸಾಕಿ ಕಂಬಳದ ಗದ್ದೆಯಲ್ಲಿ ಓಡಿಸುವುದು ಮಾತ್ರ ಇವರಿಗೆ ಹಿಂಸೆಯಾಗಿ ಕಂಡಿದೆ.  ಪೆಟಾದವರ ಕಣ್ಣಿನಲ್ಲಿ ಪೊರೆ ಬಂದಿದೆಯೋ ಅಥವಾ ಮುಸ್ಲಿಮರ ಆಚರಣೆಯ ಬಗ್ಗೆ ಮಾತಾಡಲು ಬ್ಯಾಟ್ರಿ ಇಲ್ಲವೇ? ಪೆಟಾದವರಿಗೆ ಪುರ್ಸೊತ್ತು ಇದ್ದರೆ ಹಸುಗಳನ್ನು ಯಾವ ರೀತಿ ಕತ್ತು ಸೀಳಿ ಕೊಲ್ಲಲಾಗುತ್ತಿದೆ ಎನ್ನುವುದನ್ನು ಯೂಟ್ಯೂಬ್‍ನಲ್ಲಿ ನೋಡಿಕೊಂಡು ಗೋಹತ್ಯೆಯನ್ನು ನಿಷೇಧಿಸುವಂತೆ ಸುಪ್ರೀಂಕೋರ್ಟಿಗೆ ಮೊರೆ ಹೋಗಬಹುದು.

ಹಸುವಿನ ಮೇಲೆ ಬಿಸಿ ನೀರು ಸುರಿದು, ಅವುಗಳನ್ನು ಜೀವಂತವಾಗಿಯೇ ಕೊಚ್ಚಿ ಹತ್ಯೆ ನಡೆಸಲಾಗುತ್ತದೆ. ಕೆಲವು ಗೋವುಗಳ ಕಾಲುಗಳನ್ನು ಗಟ್ಟಿಯಾಗಿ ಕಟ್ಟಿ ಅದರ ಕುತ್ತಿಗೆ ಮೇಲೆ ಹರಿತವಾದ ಚೂರಿಯಲ್ಲಿ ಇರಿದು ಹಲಾಲ್ ಮಾಡಿ ಕೊಲ್ಲಲಾಗುತ್ತದೆ. ಗೋವುಗಳು ಜೀವಂತವಾಗಿದ್ದಾಗಲೇ ಅವುಗಳ ಕಣ್ಣುಗಳನ್ನು ಕುಕ್ಕಿ ತೆಗೆದು, ಅದರ ಚರ್ಮವನ್ನು ಜೀವಂತವಾಗಿದ್ದಾಲೇ ಸುಲಿದು ಎಳೆಯಲಾಗುತ್ತದೆ. ಅದರ ಬಾಲವನ್ನು ಕತ್ತರಿಸಿ ಅದರ ಮೇಲೆ ಮೆಣಸಿನ ಪುಡಿ ಎರಚಿ ಅವುಗಳನ್ನು ನದಿಯ ನೀರಿಗೆ ದೂಡಿ ಸಾಗಾಟ ನಡೆಸಲಾಗುತ್ತದೆ. ಬಕ್ರಿದ್ ಸಂದರ್ಭದಲ್ಲಿ ದಷ್ಟಪುಷ್ಟ ಗೋವುಗಳ ನಾಲ್ಕೂ ಕಾಲನ್ನು ಗಟ್ಟಿಯಾಗಿ ಕಟ್ಟಿ ಹಾಕಿ ಬಲವಾದ ಖಡ್ಗದಿಂದ ಒಂದೇ ಏಟಿನಲ್ಲಿ ರುಂಡ ಬೇರೆ ಮುಂಡ ಬೇರೆ ಮಾಡಲಾಗುತ್ತದೆ.  ಒಟ್ಟಿನಲ್ಲಿ ಗೋವುಗಳನ್ನಿ ಯಾವ ಯಾವ ರೀತಿಯಲ್ಲಿ ಹಿಂಸಿಸಿ ಕೊಲ್ಲಲಾಗುತ್ತದೆ ಎನ್ನುವುದನ್ನು ಎಲ್ಲವನ್ನೂ ಯೂಟ್ಯೂಬ್‍ನಲ್ಲಿ  ನೋಡಬಹುದು.

ಆದರೆ ಇದರ ಬಗ್ಗೆ ಪೆಟಾ ಚಕಾರವೆತ್ತಿದ್ದನ್ನು ನೋಡಿದ್ದೀರಾ? ಬಕ್ರಿದ್ ಹೆಸರಲ್ಲಿ ಕೋಣ, ಒಂಟೆ, ಹಸುಗಳನ್ನು ಕಡಿದು ತಿನ್ನುವುದನ್ನು ನಿಲ್ಲಿಸಬೇಕೆಂದು ಪೆಟದವರು
ಪ್ರತಿಭಟನೆ ನಡೆಸಿದ್ದಾರೆಯೇ? ಕಂಬಳದಲ್ಲಿ ಹಿಂಸೆ ಇದೆ ಎಂದು ಕಾಣುವ ಪೆಟದವರಿಗೆ ಇದ್ಯಾಕೆ ಕಂಡಿಲ್ಲ ಎನ್ನುವುದೇ ದೊಡ್ಡದೊಂದು ಅಚಾತುರ್ಯ..
ಯೂಟ್ಯೂಬ್‍ನಲ್ಲಿರುವುದನ್ನೇ ಕ್ಯಾಸೆಟ್ ಮಾಡಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದರೂ ಸುಪ್ರೀಂ ಕೋರ್ಟು ಖಂಡಿತಾ ಗೋಹತ್ಯೆಯನ್ನು ನಿಷೇಧಿಸಬಹುದು. ಪೆಟದವರೇ ಯಾಕೆ ಇದನ್ನು ನೀವು ಇದನ್ನು ಮಾಡ್ತಿಲ್ಲ ?

ಪೆಟಾದವರಿಗೆ ಗೊತ್ತಾಗಲಿ ಎಂದು ಹೇಳುತ್ತಿದ್ದೇನೆ… ಇಂದು ಎಷ್ಟೋ ಮಂದಿ ರೈತರು ಜಾನುವಾರು ಸಾಕುವುದನ್ನೇ ಬಿಟ್ಟಿದ್ದಾರೆ. ಇದು ಯಾಕೆ ಎಂದು ನಿಮಗೆ
ತಿಳಿಯಬೇಕಿದ್ದರೆ ಪೆಟಾದ ಕಾರ್ಯಕರ್ತರು ರೈತರ ಮನೆಮನೆ ಭೇಟಿಯನ್ನು ಕೈಗೊಂಡು ಅವರಿಂದ ವಿಷಯ ಸಂಗ್ರಹಿಸಲಿ.. ಬಡವರ ಜೀವನಾಧರಾವಾಗಿರುವ
ಗೋವುಗಳನ್ನು ಕತ್ತಿ ಝಳಪಿಸಿ ಮನೆಯವರನ್ನು ಹೆದರಿಸಿ ಕದ್ದೊಯ್ಯುವುದು ನಿಮಗೆ ಗೊತ್ತಿದೆಯೇ? ಕಾರು, ಟೆಂಪೋಗಳಲ್ಲಿ ಹಲವಾರು ಗೋವುಗಳನ್ನು ತುಂಬಿಸಿ, ಅವುಗಳನ್ನು ಅರೆಜೀವ ಸ್ಥಿತಿಯಲ್ಲಿ ಸಾಗಾಟ ನಡೆಸುತ್ತಿರುವುದು ನಿಮಗೆ ತಿಳಿದಿದೆಯೇ? ಗೋವುಗಳ ಕೈಕಾಲನ್ನು ಕಡಿದು ಸಾಗಾಟ ನಡೆಸುವ ಮತಾಂಧರ ಬಗ್ಗೆ ನೀವೆಷ್ಟು ಕಾನೂನು ಹೋರಾಟ ಮಾಡಿದ್ದೀರಿ? ಗೋವುಗಳ ಕುತ್ತಿಗೆಗೆ ಬಿಸಿನೀರು ಸುರಿದು, ಅದರ ಮೇಲೆಯೇ ಹಗ್ಗ ಕಟ್ಟಿ ಗೋವುಗಳು ಬೊಬ್ಬೆ ಹೊಡೆಯದಂತೆ ಅದರ ಮೂತಿಗೆ ರಬ್ಬರ್‍ಟೇಪ್ ಕಟ್ಟಿಕೊಂಡು ಎಳೆದಾಡಿ ಕೊಂಡೊಯ್ಯುವುದು ಗೊತ್ತೇನ್ರೀ ನಿಮಗೆ?

ಇದರ ಬಗ್ಗೆ ಯಾಕೆ ನೀವು ಕೋರ್ಟಿಗೆ ಮೊರೆ ಹೋಗಲಿಲ್ಲ? ಯಾಕೆಂದು ನಮಗೆ ಚೆನ್ನಾಗಿ ಗೊತ್ತಿದೆ. ಯಾಕೆಂದರೆ ಅಕ್ರಮ ಗೋಸಾಗಾಟ ದಂಧೆಯಲ್ಲಿ ಹೆಚ್ಚಾಗಿ
ತೊಡಗಿಕೊಂಡಿರುವವರು ಮುಸ್ಲಿಮರು. ಯಾಕೆಂದರೆ ನಿಮ್ಮ ಜಾತ್ಯತೀತ ತತ್ವದ ಪ್ರಕಾರ ಮುಸ್ಲಿಮರು ಗೋವುಗಳನ್ನು ಕದಿಯವುದು, ಅದನ್ನು ಕಡಿದು ತಿನ್ನುವುದು, ಹಿಂಸಿಸುವುದು ಎಲ್ಲ ತಪ್ಪಲ್ಲ.. ಯಾಕೆಂದರೆ ಇದೆಲ್ಲಾ ಅವರ ಆಹಾರ ಹಕ್ಕು…

ಆದರೆ ಹಿಂದೂಗಳು ಆಚರಣೆಯ ಹೆಸರಲ್ಲಿ ಕೋಣಗಳಿಗೆ ಸಾಕಷ್ಟು ತಿನ್ನಲು ಕೊಟ್ಟು ವರ್ಷದಲ್ಲಿ ಒಂದು ಬಾರಿ ಓಡಿಸುವುದು ಮಾತ್ರ ನಿಮಗೆ ಹಿಂಸೆಯಾಗಿ ಕಾಣುತ್ತದೆ. ಒಂದು ದಿನ ಕೋಣಗಳನ್ನು ಓಡಿಸಿ ಪ್ರಶಸ್ತಿ ಗೆಲ್ಲಬೇಕಾದಾರೆ ಅವುಗಳನ್ನು ಎಷ್ಟು ಚೆನ್ನಾಗಿ ಸಾಕಲಾಗುತ್ತಿದೆ ಎಂದು ಪೆಟಾದವರಿಗೆ ಗೊತ್ತಿದೆಯೇ? ಕೋಣಗಳಿಗೆ ಪ್ರತಿದಿನ ಎಣ್ಣೆ ಪೂಸಿಕೊಂಡು ಅಭ್ಯಂಗ ಸ್ನಾನ ಮಾಡಿಸ್ತಾರೆ. ಅವುಗಳನ್ನು ನೀರಿನಲ್ಲಿ ಚೆನ್ನಾಗಿ ಈಜಲು ಬಿಟ್ಟು, ತಿಂದು ತೇಗುವಷ್ಟು ಹಿಂಡಿ, ಹುರುಳಿ, ಹುಲ್ಲು ಹಾಕಲಾಗುತ್ತದೆ. ಬಿಸಿ ಬಿಸಿ ಗಂಜಿ ಕೊಡಲಾಗುತ್ತದೆ. ಮನೆಯ ಯಜಮಾನ `ದಾನೆಂಬೆ’ ಎಂದು ಕೇಳಿದರೆ ಗತ್ತಿನಿಂದ ಎದ್ದುನಿಂತು ಕಿವಿಯಾಣಿಸಿಕೊಳ್ಳುವ ಕೋಣಗಳು ಯಜಮಾನನ ಮೈಯನ್ನು ನೆಕ್ಕುತ್ತಾ ಪ್ರೀತಿಸುವುದನ್ನು ಪೆಟಾದವರು ಕಂಡಿದ್ದಾರಾ? ಇಷ್ಟು ಚೆನ್ನಾಗಿ ಸಾಕಿ ಗದ್ದೆಯಲ್ಲಿ ಓಡಿಸುವುದು ಹಿಂಸೆಯಾಗಿ ಕಂಡರೆ ಅವುಗಳ ಕತ್ತು ಸೀಳಿ ಕೊಲ್ಲುವುದಕ್ಕೆ ಏನೆಂದು ಹೇಳುತ್ತೀರಿ?

-ಚೇಕಿತಾನ

Tags

Related Articles

Close