ಪ್ರಚಲಿತ

ಪ್ರಕಾಶ್ ರೈ ಬಾಯಿಬಿಡಲು ಇನ್ನೆಷ್ಟು ಬಲಿ ಬೇಕು?!

ತಾನೊಬ್ಬ ಮಹಾನಟನೆಂದುಕೊಂಡಿರುವ ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್ ಅವರು ಈಗ ಎಲ್ಲಿ ಹಾಳಾಗಿ ಹೋಗಿದ್ದಾರೆ? ಗೌರಿ ಲಂಕೇಶ್ ಹತ್ಯೆ ನಡೆದಾಗ ಕರ್ನಾಟಕದಲ್ಲಿ ಏನಾಗ್ತಿದೆ ಎಂದು ಪ್ರಶ್ನಿಸಿದ್ದ ಪ್ರಕಾಶ್ ರೈಗೆ ಇಂದು ಕರ್ನಾಟಕದಲ್ಲಿ ಏನಾಗ್ತಿದೆ ಎಂದು ಗೊತ್ತಿದೆಯಾ?? ನನಗೆ ಪ್ರಶ್ನಿಸುವ ಹಕ್ಕಿದೆ ಎಂದು ಬೊಬ್ಬಿಡುವ ನಿಮ್ಮ ತಲೆಯಲ್ಲಿ ಈಗ ಒಂದೂ ಪ್ರಶ್ನೆ ಹೊಳೆಯುತ್ತಿಲ್ಲವೇ? ತನ್ನ ಪ್ರಚಾರದ ತೆವಲಿಗಾಗಿ `ಏನಾಗ್ತಿದೆ ಕರ್ನಾಟಕದಲ್ಲಿ?’ ಎಂದು ಮಾಧ್ಯಮದ ಮುಂದೆ ಅಬ್ಬರಿಸಿದ್ದ ಮಹಾನಟ ಪ್ರಕಾಶ್ ರೈಯ ಅಬ್ಬರ ಕಮ್ಮಿಯಾಯಿತೇ? ಅಥವಾ ಧ್ವನಿಪೆಟ್ಟಿಗೆಯಲ್ಲೇನಾದರೂ ಸಮಸ್ಯೆ ಇದೆಯಾ?

ಅಲ್ಲಾ ಸ್ವಾಮಿ!! ಖಾಸಗಿ ವೈದ್ಯರ ಮುಷ್ಕರದಿಂದಾಗಿ ಇದುವರೆಗೆ ಬರೋಬ್ಬರಿ 42 ಮಂದಿ ಮುಗ್ಧ ರೋಗಿಗಳು ಚಿಕಿತ್ಸೆ ಸಿಗದೆ ಸತ್ತಿದ್ದಾರೆ ಎಂಬ ವಿಷ್ಯ ಗೊತ್ತಿಲ್ಲವೇ? ಇಷ್ಟೊಂದು ಮಂದಿ ಸತ್ತಿದ್ದಾರಲ್ವಾ? ಇದೆಲ್ಲಾ ಸಾವಲ್ಲವೇ ಸ್ವಾಮಿ? ನಾನು ಪ್ರಶ್ನಿಸುತ್ತಲೇ ಇರುತ್ತೇನೆ, ನನ್ನ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಬ್ಬರಿಸುತ್ತಿದ್ದ ನಿಮ್ಮ ಧ್ವನಿಯನ್ನು ಈ ವಿಷ್ಯದಲ್ಲಿ ಅಡಗಿಸಿದ್ದು ಯಾರು? ಗೌರಿ  ಹತ್ಯೆಯಾದಾಗ ಮೋದಿಯನ್ನು ಎಳೆದುತಂದು ಪ್ರಶ್ನಿಸಿದ್ದ ನಿಮಗೆ ಕರ್ನಾಟಕದಲ್ಲಿ ಮುಗ್ಧ ರೋಗಿಗಳ ಸಾವಿಗೆ ಕಾರಣನಾದ ಸಿದ್ದರಾಮಯ್ಯನನ್ನು ಪ್ರಶ್ನಿಸುವ ಧೈರ್ಯವಿಲ್ಲವೇ?

ಥೂ ನಿಮ್ಮ ಜನ್ಮಕ್ಕೆ!!

ನೀವೊಬ್ಬ ಎರಡು ನಾಲಗೆಯ ಕೇರೆ ಹಾವೆಂದು ಕೊನೆಗೂ ಸಾಬೀತು ಮಾಡಿದ್ದೀರಿ. ನರೇಂದ್ರ ಮೋದಿಯವರ ಪ್ರತಿಯೊಂದು ವಿಚಾರವನ್ನೂ ಪ್ರಶ್ನಿಸುತ್ತಾ, ಬಿಟ್ಟಿ ಪ್ರಚಾರಕ್ಕಾಗಿ ಡೊಂಬರಾಟ ನಡೆಸುತ್ತಿದ್ದ ನೀವು ಇದುವರೆಗೆ 70 ಮಂದಿ ಸತ್ತಿದ್ದರೂ ನಿಮ್ಮ ಧ್ವನಿ ಅಡಗಿಹೋಗಿದ್ದು ಯಾಕೆ? ಅದೆಷ್ಟೋ ಮಂದಿ ರೋಗಿಗಳ ಪ್ರಾಣ ಉಳಿಸಲು ಪರದಾಟ ನಡೆಸುತ್ತಿದ್ದರೂ ಇವರ ನರಳಾಟ, ಚೀರಾಟ ಯಾವುದೂ ಕೇಳಿಸಲಿಲ್ಲವಲ್ಲ ಸ್ವಾಮಿ… ನಿಮಗೆ ನಾಚಿಗೆಯಾಗುವುದಿಲ್ಲವೇ? ನಿಮ್ಮ ನಾಟಕವನ್ನು ನಾವು ತುಂಬಾ ಸಮಯದಿಂದ ನೋಡ್ತಾ ಇದ್ದೆವು.. ಕೊನೆಗೂ ನಿಮ್ಮ ಬಂಡವಾಳವನ್ನು ಬಯಲು ಮಾಡಿದ್ದೀರಲ್ವಾ…?? ಥ್ಯಾಂಕ್ಸ್ ವೆರಿ ಮಚ್!!ಅಂದು ಏನು ಹೇಳಿದ್ರಿ ಸ್ವಾಮಿ?? ಗೌರಿ ಹತ್ಯೆಯಾದಾಗ ಕುಯ್ಯೋಮುಯ್ಯೋ ಎಂದು ಬೊಬ್ಬಿಟ್ಟಿರಿ… ಗೌರಿ ಹತ್ಯೆಯಾಗಿದ್ದು ನಿಮಗೆ ಮಾತ್ರವಲ್ಲ ನಮಗೂ ದುಃಖವಿದೆ. ಆದರೆ, ನೀವು ಡೈರೆಕ್ಟಾಗಿ ಮೋದಿಯವರನ್ನು ಟಾರ್ಗೆಟ್ ಮಾಡಿ ಕರ್ನಾಟಕದಲ್ಲಿ ಏನಾಗ್ತಿದೆ ಎಂದು ಪ್ರಶ್ನಿಸಿದ್ದೀರಿ… ನಾನು ಈ ದೇಶದ ಪ್ರಜೆ, ನನ್ನ ಮನಸ್ಸಲ್ಲಿದ್ದುದನ್ನು ಕೇಳುವ ಕಾರ್ಯ ನಡೆಯುತ್ತಲೇ ಇರುತ್ತದೆ, ಅಗತ್ಯವಿದ್ದಾಗ ಪ್ರತಿಕ್ರಿಯೆ ನಡೆಯುತ್ತಲೇ ಇರುತ್ತದೆ, ಮೋದಿ ಈ ದೇಶದ ಪ್ರಧಾನಿಯಾಗಿರಬಹುದು, ಆದರೆ ಈ ದೇಶದ ನಾಗರಿಕನಾಗಿ ಅವರನ್ನು ತಿರಸ್ಕರಿಸುವ ಹಕ್ಕು ನನಗೂ ಇದೆ ಎಂದು ಮೈಯ್ಯಲ್ಲಿ ದೆವ್ವ ಬಂದಂತೆ ಆರ್ಭಟಿಸಿದ್ದ ನೀವು ರಾಜ್ಯದಲ್ಲಿ ರೋಗಿಗಳ ಮರಣಮೃದಂಗ ಬಾರಿಸುತ್ತಿದ್ದರೂ ಯಾಕೆ ಸಿದ್ದರಾಮಯ್ಯನನ್ನು ಪ್ರಶ್ನಿಸುತ್ತಿಲ್ಲಾ?

ನೀವೇನು ಕಾಂಗ್ರೆಸ್ಸಾ? ಅಥವಾ ಮೋದಿಯವರನ್ನು ದೂರಲು ಸಿದ್ದರಾಮಯ್ಯನೇನಾದರೂ ಹಣಕೊಟ್ಟಿದ್ದಾರೆಯೇ? ಈ ರೀತಿ ಡೊಂಬರಾಟ ಆಡಿಕೊಂಡಿರುವ ಬದಲು ಕಾಂಗ್ರೆಸ್‍ಗೆ ಸೇರಿ ಕಾಂಗ್ರೆಸ್ ಪರ ಪ್ರಚಾರಮಾಡಬಹುದಲ್ವೇ..?. ನಾನು ಪ್ರಶ್ನಿಸುತ್ತಲೇ ಇರುತ್ತೇನೆ ಎಂದ ನಿಮಗೆ ಸಿದ್ದರಾಮಯ್ಯನನ್ನು ಪ್ರಶ್ನಿಸಲು
ನಿಮ್ಮಿಂದಾಗುತ್ತಿಲ್ಲವೇ? ಪ್ರಕಾಶ್ ರೈ ಯವರೇ ನಿಮಗೆ ಸಿದ್ದರಾಮಯ್ಯನನ್ನು ಪ್ರಶ್ನಿಸಲು ಇನ್ನೆಷ್ಟು ಬಲಿ ಬೇಕು ಸ್ವಾಮಿ?

ಪ್ರಕಾಶ್ ರೈಯವರೇ ನಿಮಗೆ ರೋಗಿಗಳು ಸಾಯುತ್ತಿರುವ ವಿಷ್ಯ ಇನ್ನೂ ಗೊತ್ತಿಲ್ವಾ? ಅಥವಾ ಬೇಕೆಂದೇ ಮೌನವಾಗಿದ್ದೀರಾ? ಪ್ರತಿಯೊಂದೂ ವಿಷ್ಯದ ಬಗ್ಗೆಯೂ ಟ್ವೀಟ್ ಮಾಡುವ ನಿಮ್ಮ ಟ್ವಿಟರ್ ಅಕೌಂಟ್ ಬಂದ್ ಆಗಿದೆಯಾ? ನಿಮಗೆ ರೋಗಿಗಳು ಸಾಯ್ತಿರುವ ವಿಷ್ಯ ಗೊತ್ತಿಲ್ಲದಿದ್ದರೆ ಅದರ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಆಮೇಲೆ ಆದ್ರೂ ನಿಮ್ಮ ಧ್ವನಿಪೆಟ್ಟಿಗೆಯಿಂದ ಧ್ವನಿ ಹೊರಡುತ್ತಾ ನೋಡೋಣ..

ಪ್ರಕಾಶ್ ಅವರೇ , ಸ್ವಲ್ಪ ಗಮನವಿಟ್ಟು ಕೇಳಿ.. ಕೆಪಿಎಂಇ ಕಾಯ್ದೆ ಅನುಷ್ಠಾನ ಕೈಬಿಡಬೇಕೆಂದು ಬೇಡಿಕೆ ಇಟ್ಟುಕೊಂಡು ಕಳೆದ ನಾಲ್ಕು ದಿನಗಳಿಂದ ವೈದ್ಯರು ಮುಷ್ಕರ ಮಾಡ್ತನೇ ಇದ್ದಾರೆ. ಇಷ್ಟು ದಿನಗಳಾದ್ರೂ ವೈದ್ಯರ ಮುಷ್ಕರ ನಿಂತಿಲ್ಲ.. ಈ ಕಾಯಿದೆಯನ್ನು ಅನುಷ್ಠಾನ ಮಾಡಿಯೇ ಸಿದ್ಧ ಎಂದು ಹಠ ಹಿಡಿದು ಕುಳಿತಿರುವ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್‍ಗೆ ಮುಗ್ಧ ರೋಗಿಗಳ, ಅವರ ಸಂಬಂಧಿಕ ನೋವು ಕೇಳುತ್ತಿಲ್ಲ. ವೈದ್ಯರ ಪ್ರತಿಭಟನೆಯನ್ನು ಕೈಬಿಟ್ಟು ವೈದ್ಯಕೀಯ ನೆರವು ಕಲ್ಪಿಸುವಂತೆ ಮಾಡುವುದು ಸರಕಾರದ ಕರ್ತವ್ಯ. ಆದರೆ ಸರಕಾರ ಏನು ಮಾಡ್ತಾ ಇದೆ? ಇವರ ಹಠದಿಂದಾಗಿ ರೋಗಿಗಳು ಸಾಯ್ತನೇ ಇದ್ದಾರೆ. ಸದ್ಯದ ಮಾಹಿತಿ ಪ್ರಕಾರ 42ಕ್ಕೂ ಅಧಿಕ ಮಂದಿ ರೋಗಿಗಳು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಸರಕಾರಕ್ಕೆ ತಾಕತ್ ಇದ್ದಿದ್ದರೆ ವೈದ್ಯರ ಪ್ರತಿಭಟನೆಯಿಂದ ರೋಗಿಗಳಿಗೆ ತೊಂದರೆಯಾಗದಂತೆ ಮಾಡಬೇಕಿತ್ತು. ಸರಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡಬೇಕಿತ್ತು. ಆದರೆ ಸರಕಾರ ಮಾತ್ರ ತನಗೂ ಪ್ರತಿಭಟನೆಗೂ ಸಂಬಂಧ ಇಲ್ಲದಂತೆ ಕೂತಿದೆಯಲ್ವಾ… ಇಡೀ ರಾಜ್ಯದ ಜನರು ಇದರ ವಿರುದ್ಧ ಆಕ್ರೋಶದಲ್ಲಿದ್ದಾರೆ. ಆದರೆ ದೇಶದಲ್ಲಿ ಏನಾದ್ರೂ ನಡೆದ್ರೆ ತಕ್ಷಣ ಅದನ್ನು ಖಂಡಿಸುತ್ತಾ ಪ್ರಚಾರ ಗಿಟ್ಟಿಸುತ್ತಿದ್ದ ಪ್ರಕಾಶ್ ರೈ ಇಂದು ಬಾಯಿಗೆ ಬೀಗ ಹಾಕಿ ಕುಳಿತಿರಲು ಕಾರಣವೇನು?

ರೈಯವರೇ!! ಇದುವರೆಗೆ ನೀವು ಏನೆಲ್ಲಾ ಹೇಳಿದ್ದೀರಿ ಗೊತ್ತೇ? ಜಸ್ಟ್ ನಿಮಗೆ ನೆನಪಿಸುತ್ತೇನೆ!!

1. ಗೌರಿ ಹತ್ಯೆ ನಡೆದಾಗ, ಹತ್ಯೆಯನ್ನು ಸಂಭ್ರಮಿಸಿದವರು ಮೋದಿ ಹಿಂಬಾಲಕರು ಎಂಬುವುದನ್ನು ಕಂಡು ನನಗೆ ಗಾಬರಿಯಾಗಿದೆ. ದೇಶದ ಪ್ರಧಾನಿ ಮೌನ ಬೇಸರ ತರಿಸಿದೆ. ಇದನ್ನು ಪ್ರಶ್ನಿಸುವುದು ತಪ್ಪೇ? ಎಂದು ಕೇಳಿದ್ದೀರಿ… ನೀವು ಒಂದು ಜೀವಕ್ಕೆ ಕೊಟ್ಟ ಬೆಲೆಯನ್ನು ಇದುವರೆಗೆ ಮೃತಪಟ್ಟ 42 ಜೀವಗಳಿಗೆ ಕೊಟ್ಟಿಲ್ಲ ಯಾಕೆ? ಇಷ್ಟೆಲ್ಲಾ ಹತ್ಯೆಗೆ ಕಾರಣರಾದ ಸಿದ್ದುವನ್ನು ಪ್ರಶ್ನಿಸಬಾರದೇ?

2. ನನ್ನ ಬಗ್ಗೆ ಟೀಕಿಸುವ ಧ್ವನಿಗಳಿಗೆ ನಾನು ತಲೆಕೆಡಿಸಿಕೊಳ್ಳುತ್ತಿಲ್ಲ, ನನಗೆ ಪ್ರಜಾಪ್ರಭುತ್ವ ಹಾಗೂ ವಾಕ್‍ಸ್ವಾತಂತ್ರ್ಯದ ಬಗ್ಗೆ ನಂಬಿಕೆ ಇದೆ ಎನ್ನುವ ನಿಮ್ಮ
ವಾಕ್‍ಸ್ವಾತಂತ್ರ್ಯ ಎಲ್ಲಿ ಮರೆಯಾಯಿತು?

3. ಗೌರು ಕೊಲೆಯನ್ನು ಬಲಪಂಥೀಯರು ಮಾಡಿದ್ದಾರಾ ಬಲಪಂಥೀಯರು ಮಾಡಿದ್ದಾರಾ ಎಂದು ಅಪ್ಪಟ ಕೋಮುವಾದಿಯಂತೆ ಪ್ರಶ್ನಿಸಿದ್ದ ನೀವು ಈಗ ಸತ್ತಿರುವ ಇಷ್ಟೊಂದು ಮಂದಿಯನ್ನು ಸಾಯುವಂತೆ ಮಾಡಿದ್ದು ಯಾವ ಪಂಥೀಯರು ಸ್ವಾಮಿ?

4. ಗೌರಿ ಕೊಲೆಯ ಬಗ್ಗೆ ಸದಾ ಸರಕಾರಕ್ಕೆ ಸಲಹೆ ನೀಡುತ್ತಿದ್ದ ಪ್ರಕಾಶ್ ರೈ ಇಂದೇಕೆ ಸರಕಾರಕ್ಕೆ ಸಲಹೆ ನೀಡುತ್ತಿಲ್ಲ?

5. ನಾವೆಲ್ಲಾ ಗೌರಿ ಲಂಕೇಶ್‍ರ ಮಕ್ಕಳು.. ವಾಕ್‍ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಹೇಳಿಕೊಟ್ಟವರು ಲಂಕೇಶರು ಎಂದಿರುವ ನಿಮಗೆ ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸಬಾರದು ಎಂದು ಹೇಳಿಕೊಟ್ಟವರು ಕೂಡಾ ಅವರೇನಾ?

6. ಗೌರಿ ಹತ್ಯೆ ವಿಷಯದಲ್ಲಿ ಪ್ರಶಸ್ತಿ ವಾಪಸ್ ಮಾಡ್ತೇನೆ ಎಂದು ಬೋಂಗುಬಿಟ್ಟ ನೀವು ರಾಜ್ಯದಲ್ಲಿ ಚಿಕಿತ್ಸೆ ಸಿಗದೆ ಇಷ್ಟೊಂದು ಮಂದಿ ಸತ್ತಿದ್ದಾರೆ… ಈಗ್ಲಾದರೂ ನಿಮ್ಮ ಪ್ರಶಸ್ತಿ ವಾಪಸ್ ಆಗಬಹುದೇ?

6. ಮೋದಿ, ಯೋಗಿ ನನಗಿಂತಲೂ ದೊಡ್ಡ ನಟರು ಎಂದು ಟೀಕಿಸಿದ ನೀಮಗೆ ಸಿದ್ದರಾಮಯ್ಯ ಖಳನಟ ಎಂದು ಯಾಕೆ ಅನಿಸಲಿಲ್ಲ?

7. ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ ಎಂದು ಕಮಲ್‍ಹಾಸನ್ ಹೇಳಿದಾಗ ಆತನ ಬೆಂಬಲ ಸೂಚಿಸಿದ್ದ ರೈ ರೋಗಿಗಳ ವಿಷ್ಯದಲ್ಲಿ ಯಾಕೆ ರೋಗಿಗಳನ್ನು
ಬೆಂಬಲಿಸೋಲ್ಲ?

8. ಗೌರಿ ಲಂಕೇಶ್ ಹತ್ಯೆಯಾದಾಗ ಸರಕಾರದ ಜೊತೆ ಇದ್ದ ನೀವು ಇಂದು ರೋಗಿಗಳು ಸಾಯುತ್ತಿದ್ದರೂ ಸರಕಾರದ ಪರ ಯಾಕೆ ನಿಂತಿದ್ದೀರಾ ಎಂದು ಸ್ಪಷ್ಟಪಡಿಸಿ..

9. ಟಿ.ವಿ. ಕಾರ್ಯಕ್ರಮವೊಂದರಲ್ಲಿ ಆಂಕರ್ ಕಾವೇರಿ ಸಮಸ್ಯೆಯ ಬಗ್ಗೆ ಪ್ರಶ್ನೆ ಕೇಳಿದಾಗ ಮೈಕ್ ಕಿತ್ತು ಬಿಸಾಡಿ, ಇದು ಈ ಸಂದರ್ಭದಲ್ಲಿ ಕೇಳೋ ಪ್ರಶ್ನೆಯಾ ಎಂದು ಅಬ್ಬರಿಸಿದ್ದ ನೀವು, ರೋಗಿಗಳ ಸಾವಾದಾಗ ಪ್ರಶ್ನೆ ಕೇಳಲು ಸಮಯವಿಲ್ವೇ?

10. ನೀವು ಮೋದಿ, ಯೋಗಿಯವರಲ್ಲಿ ಮಾತ್ರನಾ ಪ್ರಶ್ನೆ ಕೇಳೋದು? ಸಿದ್ದರಾಮಯ್ಯ, ಮಮತಾ ಬ್ಯಾನರ್ಜಿಯಂಥವರು ಏನು ಮಾಡಿದ್ರೂ ಪ್ರಶ್ನೆ ಮಾಡೋಲ್ವಾ?

ಅಯ್ಯಾ ಪ್ರಕಾಶ್ ರೈಯವರೇ!! ನೀವೊಬ್ಬ ಒಳ್ಳೆಜನ ಅಂದೊಕೊಂಡಿದ್ದೆ. ಆದರೆ ನೀವು ಎಂಥವರು ಎನ್ನುವುದನ್ನೂ ತೋರಿಸಿಕೊಟ್ಟಿದ್ದೀರಿ. ಸದಾಕಾಲ ವಿವಾದಾತ್ಮಕವಾಗಿ ಮಾತಾಡುತ್ತಾ ನೀವು ಮಾಡಿರುವುದೆಲ್ಲಾ ಬಿಟ್ಟಿ ಪ್ರಚಾರಕ್ಕೆ ಎನ್ನುವುದನ್ನು ಕೊನೆಗೂ ಸಾಬೀತುಪಡಿಸಿದ್ದೀರಿ. ಇಡೀ ದೇಶದ ಮುಂದೆ ತಾನೊಬ್ಬ ಎಂಥಾ ವ್ಯಕ್ತಿ ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮಗೆ!!

-ಚೇಕಿತಾನ…

Tags

Related Articles

Close