ಪ್ರಚಲಿತ

ಪ್ರತಾಪ್ ಸಿಂಹ ಪ್ರಾಣಿಯೋ ಮನುಷ್ಯನೋ ?! ಅನ್ನ ತಿನ್ನುವುದೋ ಅಥವಾ ಬೇಟೆಯಾಡುವುದೋ?! : ಪ್ರಕಾಶ್ ರಾಜ್

ನೆನ್ನೆ ಮಂಗಳೂರಿನ ಕರಾವಳಿ ಉತ್ಸವಕ್ಕೆ ಪ್ರಕಾಶ್ ರಾಜ್ ಭೇಟಿ ನೀಡಿದ್ದರು! ಪಾಪ! ಆಯೋಜಕರು ಮಾತಾಡ್ಕಳ್ಳಿ ಬಿಡಿ ಅಂತ ಪ್ರಕಾಶ್ ರಾಜ್ ಗೆ ಮೈಕು ಕೊಟ್ಟು ನಾಲ್ಕು ಮಾತನಾಡಿ ಎಂದಿದ್ದೇ ಸಿಕ್ಕಿದ್ದೇ ಚಾನ್ಸ್ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹರ ಮೇಲೆ ಕೆಂಡ ಕಾರಿದ್ದಾನೆ ಆಸಾಮಿ! ಸಭೆಯಲ್ಲಿದ್ದವರಿಗಾಗಲೀ, ವೇದಿಕೆಯ ಮೇಲೆ ಕುಳಿವರಿಗಾಗಲಿ, ಕರಾವಳಿ ಉತ್ಸವಕ್ಕೂ, ಪ್ರತಾಪ್ ಸಿಂಹರಿಗೂ ಏನು ಸಂಬಂಧ ಎಂದು ತಲೆ ಕೆರೆದುಕೊಳ್ಳತೊಡಗಿದಾಗಲೇ, ಅಂತೂ ಪ್ರಕಾಶ್ ರಾಜ್ ಮೈಕು ಬಿಟ್ಟು ಕೆಳಗಿಳಿದ್ದಿದ್ದಾನೆ!

ಈ ಪ್ರಕಾಶ್ ಎಂಬ ಎಡಬಿಡಂಗಿಗೆ ಬುದ್ಧಿ ಭ್ರಮಣೆಯಾಗಿರುವ ವಿಷಯ ಯಾರಿಗಾದರೂ ಗೊತ್ತಾ?!

ಇದ್ದಕ್ಕಿದ್ದ ಹಾಗೆ, ಒಬ್ಬ ಪತ್ರಕರ್ತೆಯ ಹತ್ಯೆಯಾಗುತ್ತದೆ! ಅಲ್ಲಿಯ ತನಕ ಎಲ್ಲೋ ಅಡಗಿದ್ದ ಪ್ರಕಾಶ್, ಇದ್ದಕ್ಕಿದ್ದಂತೆ ‘ಕರ್ನಾಟಕದಲ್ಲಿ ಏನಾಗುತ್ತಿದೆ?!’ ಎಂದು ಪ್ರಶ್ನಿಸುತ್ತಾನೆ! ಪ್ರಶ್ನಿಸಿದ್ದು ಮಾತ್ರವಲ್ಲ, ‘ಬಲಪಂಥೀಯರು ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ ಎಂಬ ಕಾರಣಕ್ಕೆ ಈ ರೀತಿ ಹತ್ಯೆ ಮಾಡಬಾರದಿತ್ತು’ ಎಂದ ಪ್ರಕಾಶ್ ರೈ ಗೆ ನ್ಯಾಯಾಲಯದ ತೀರ್ಪಿಗೂ ಮುನ್ನ ಹಂತಕರು ಯಾರೆಂದು ಗೊತ್ತಾಗಿಬಿಟ್ಟಿತ್ತೇನೋ! ಇಡೀ ಕರ್ನಾಟಕ ಪ್ರಕಾಶ್ ರಾಜ್ ನಡೆಯನ್ನು ಟೀಕಿಸಿದಾಗ, ಪ್ರಶ್ನಿಸುವುದು ನನ್ನ ಹಕ್ಕು, ನನ್ನನ್ನು ಯಾರೂ ತಡೆಯೋಕೆ ಸಾಧ್ಯವೇ ಇಲ್ಲ ಎಂದು ಒದರಿದವನು ಸಾರ್ವಜನಿಕವಾಗಿ ನಿಲ್ಲಲೂ ಹೆದರಿ, ಪೋಲಿಸ್ ಭದ್ರತೆ ತೆಗೆದುಕೊಂಡಿದ್ದರಲ್ಲೇ ಅರ್ಥವಾಗಿತ್ತು! ಪ್ರಕಾಶ್ ರೈ ಪುಕ್ಕಲ ಎಂದು!

ಗೌರೀ ಲಂಕೇಶ್ ಹತ್ಯೆಯಾಗುವವರೆಗೂ ಕೂಡ ಧ್ವನಿ ಎತ್ತದಿದ್ದ ಪ್ರಕಾಶ್ ಇದ್ದಕ್ಕಿದ‌್ದಂತೆ ಎದ್ದು ಬಂದು, ಸಾಮಾಜಿಕ ಕ್ಷೇತ್ರದಲ್ಲಿ ರೌಂಡು ಹೊಡೆಯಲು ಪ್ರಾರಂಭಿಸಿದ್ದು ಅನುಮಾನಾಸ್ಪದ ನಡೆಯೇ ಬಿಡಿ! ಕೊನೆ ಕೊನೆಗೆ, ಮೋದಿಯನ್ನೂ, ಯೋಗಿ ಆದಿತ್ಯ ನಾಥ್ ರನ್ನೂ ಪ್ರಶ್ನಿಸಿ ಟೀಕಿಸಿದ ಪ್ರಕಾಶ್ ರಾಜ್ ಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು! ಉರಿ ಹತ್ತಿತು ನೋಡಿ ಪ್ರಕಾಶ್ ರಾಜ್ ಗೆ! #justasking ಎನ್ನುತ್ತಾ ಬಿಟ್ಟಿ ಪ್ರಚಾರ ತೆಗೆದುಕೊಳ್ಳಲು ಪ್ರಾರಂಭಿಸಿದ ಪ್ರಕಾಶ್ ರಾಜ್, ಅಲಿಖಿತ ಉಗ್ರ ಸಂಘಟನೆಯಾದ ಪಿಎಫ್ ಐ ಗೆ ಅನುದಾನ ನೀಡುತ್ತೇನೆ ಎಂದು ಕೇರಳದಲ್ಲಿ ವಚನವಿತ್ತಿದ್ದವನ ಕರಾಳ ಮುಖವೊಂದು ನಿಧಾನಕೆ ಗೊತ್ತಾಗ ತೊಡಗಿತ್ತು.

ಸಿಂಹ ಮನುಷ್ಯನೋ ಪ್ರಾಣಿಯೋ?!

“ಪ್ರತಾಪ್ ಸಿಂಹ ನನಗೆ ಪ್ರಶ್ನೆ ಮಾಡಿದ್ದರು! ನನ್ನ ಹೆಸರು ರಾಜ್ ಮತ್ತು ರೈ ಎಂಬುದಿದೆ. ಎರಡೆರಡು ಹೆಸರಿಟ್ಟು ದ್ವಂದ್ವ ಬದುಕು ನಡೆಸುತ್ತಿದ್ದೇನೆ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ! ನನ್ನ ಹೆಸರು ಪ್ರಕಾಶ್ ರೈ! ಸಿನಿಮಾದಲ್ಲಿ ರಾಜ್ ಆಗಿ ನಟಿಸುತ್ತೇನೆ! ನನ್ನನ್ನು ಪ್ರಶ್ನಿಸುವ ನೀವು ರಾಜಕುಮಾರ್, ವಿಷ್ಣುವರ್ಧನ್ ರವರಂತಹವರ ಮೂಲ ಹೆಸರನ್ನು ಪ್ರಶ್ನಿಸುತ್ತೀರಾ ?! ನನಗಿಂತ ನೀವು ಕನ್ನಡಿಗರಲ್ಲ! ಸಂಸದರಾದ ನಿಮಗೆ ಭಾಷೆ ಗೊತ್ತಿಲ್ಲ! ನಿಮ್ಮದು ಅವಾಚ್ಯ ಭಾಷೆ! ನನ್ನದು ಮನುಷ್ಯ ಭಾಷೆ!

ನಿಮ್ಮ ಹೆಸರಿನ ಮುಂದೆ ಸಿಂಹ ಎಂಬುದಿದೆ! ನೀವು ಮನುಷ್ಯನೋ ಪ್ರಾಣಿನೋ?! ಅನ್ನ ತಿನ್ನುತ್ತೀರಾ ಅಥವಾ ಪ್ರಾಣಿಗಳ ರೀತಿ ಬೇಟೆಯಾಡುತ್ತೀರಾ?!”

ಇಷ್ಟೆಲ್ಲ ಮಾತನಾಡುವ ಪ್ರಕಾಶ್ ರೈ ಗೆ ತನ್ನ ‘ರೈ’ ಎಂಬ ಹೆಸರಿನ ಬಗ್ಗೆ, ಅಥವಾ ‘ರಾಜ್’ ಎಂಬ ಹೆಸರನ್ನಿಟ್ಟುಕೊಂಡ ಕಾರಣದ ಬಗೆಯಾಗಲಿ, ಅಥವಾ ತಾನು ಯಾವ ಧರ್ಮಕ್ಕೆ ಸೇರಿದವನೆಂದು ಬಹಿರಂಗವಾಗಿ ಹೇಳುವಷ್ಟು ತಾಕತ್ತಿದೆಯಾ?!

ಗುಜರಾತ್ ಚುನಾವಣೆಯಲ್ಲಿ, ಮೋದಿಗೆ ನೀವು ನೆಮ್ಮದಿಯಿಂದಿದ್ದೀರಾ ಎಂದು ಕೇಳುವ ಮೊದಲು, ತನ್ನ ವೈಯುಕ್ತಿಕ ಬದುಕನ್ನು ವಿಮರ್ಶೆ ಮಾಡಿಕೊಂಡು ಯಾರ ನೆಮ್ಮದಿ ಯಾರಿಂದ ಹಾಳಾಗಿದೆ ಎಂದು ಯೋಚಿಸುವಷ್ಟು ತಲೆಯಲ್ಲಿ ಮಿದುಳಿದೆಯಾ?!

ಗೌರೀ ಹತ್ಯೆಯ ವಿಚಾರದಲ್ಲಿ, ಕರ್ನಾಟಕದಲ್ಲಿ ಏನಾಗುತ್ತಿದೆ ಎಂದವನು, 20 ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಪ್ರಶ್ನಿಸಲಿಲ್ಲವೇಕೆ?! ಮೊನ್ನೆ ಮೊನ್ನೆಯವರೆಗೂ, ಬಲಪಂಥೀಯರು ಹಂತಕರು ಎಂದು ಬೊಬ್ಬಿರಿದವನು, ಕೇರಳದ ಕಣ್ಣೂರಿನಲ್ಲಿ ನಡೆದ ಹಿಂದೂಗಳ ಮಾರಣಹೋಮದ ಬಗ್ಗೆ ಪ್ರಶ್ನಿಸಲಿಲ್ಲವೇಕೆ?! ಧ್ವನಿ ಹೊರಬರಲು ಒದ್ದಾಡಿತೇ?! ಅಥವಾ, ಪ್ರಶ್ನಿಸಿದರೆ ತನ್ನ ಸುನ್ನತ್ ಆಗಿಬಿಡುತ್ತದೆಂಬ ಹೆದರಿಕೆಯೋ?!

ಯೋಗಿ ಆದಿತ್ಯನಾಥ್ ಟಿಪ್ಪು ಜಯಂತಿ ಬೇಡವೆನ್ನತ್ತಾರೆ, ಅವರ ಅಜೆಂಡಾ ಏನು ಎಂದು ಪ್ರಶ್ನಿಸುವ ಇದೇ ರೈ ಅಲಿಯಾಸ್ ರಾಜ್, ಸಿದ್ಧರಾಮಯ್ಯನ ಸರಕಾರ ಹನುಮ ಜಯಂತಿಗೆ ಅಡ್ಡಿ ಪಡಿಸಿದ್ದನ್ನಾಗಲಿ, ಗಣೇಶೋತ್ಸವಕ್ಕೆ ತಡೆ ಹಾಕಿದ್ದಾಗಲಿ, ಮಂಜುನಾಥನ ಕ್ಷೇತ್ರಕ್ಕೆ ಮಾಂಸ ತಿಂದು ಹೋದವರನ್ನು ಪ್ರಶ್ನಿಸಲಿಲ್ಲವೇಕೆ?! ಸದಾಕಾಲ ಇಂಗ್ಲಿಷ್ ನಲ್ಲಿಯೇ ಪಟ್ಟಾಂಗ ಹೊಡೆಯುತ್ತ ಕೂರುವ ನಿಮಗೆ, ಟಿಪ್ಪುವಿನ ಇತಿಹಾಸ ಗೊತ್ತಿದ್ದರೂ ಸಹ, ಟಿಪ್ಪು ಜಯಂತಿಗೆ ಬೆಂಬಲ ಸೂಚಿಸಿದ ನಿಮ್ಮಂತಹವರಿಗೆ ಯಾವುದರಲ್ಲಿ ಹೊಡೆಯಬೇಕೆಂಬ ಇಬ್ಬಂದಿತನದ ಅಜೆಂಡಾ ನಮ್ಮಲ್ಲಿಯೂ ಇದೆ!

ರಾಷ್ಟ್ರೀಯ ಸ್ವಯಂ ಸೇವಕ ಕಾರ್ಯಕರ್ತರ ಬಗ್ಗೆ ಕಣ್ಣುಕೆಂಪಗೆ ಮಾಡಿ ಚಡ್ಡಿಗಳೆನ್ನುವ ರೈ, ದೇಶದ್ರೋಹಿ ಚಟುವಟಿಕೆಯಲ್ಲಿ ಪಾಲ್ಹೊಳ್ಳುವ ಪಿಎಫ್ ಐಗೆ ಅನುದಾನ ಕೊಡುತ್ತೇನೆ ಎನ್ನುಗ ಹಿಂದಿರುವ ಅಜೆಂಡಾ ಏನು ಹಾಗಾದರೆ?!

ನನಗಿಂತ ಕನ್ನಡಿಗರಲ್ಲ ಎಂದ ಇದೇ ಪ್ರಕಾಶ, ಕೇರಳದಲ್ಲಿ ಮೊನ್ನೆ ಮೊನ್ನೆಯಷ್ಟೇ, ‘ಕೇರಳದಲ್ಲಿ ಮಾತ್ರ ನಾನು ಸ್ವಚ್ಛಂಧವಾಗಿರಲು ಸಾಧ್ಯ’ ಎಂದೆಲ್ಲ ಲೊಟ್ಟೆ ಲುಸ್ಕೆಂದು ಬೋಂಗು ಬಿಟ್ಟವನು ಕನ್ನಡ ಪ್ರೇಮಿಯಾ?!

ಮೈಸೂರಿನ ಗೌರವಾನ್ವಿತ ಸಂಸದರಾದ ಪ್ರತಾಪ್ ಸಿಂಹರ ಕುರಿತು ಪ್ರಶ್ನೆ ಮಾಡುವ ಮೊದಲು, ತಾನು ಯಾವ ಸ್ಥಾನದಲ್ಲಿದ್ದೇನೆ ಎಂದು
ಯೋಚಿಸಬೇಕಿತ್ತಲ್ಲವಾ?! ಪ್ರತಾಪ್ ಸಿಂಹ ನನಗಿಂತ ಹೆಚ್ಚು ಕನ್ನಡಿಗರಲ್ಲ ಎಂದ ಪ್ರಕಾಶ್ ಗೆ, ಕರ್ನಾಟಕಕ್ಕೆ ದ್ರೋಹ ಬಗೆದವನ ಜಯಂತಿ ಆಚರಿಸುವಾಗ,
ನವರಂಧ್ರಗಳೂ ಮುದುರಿ ಕುಳಿತಿತ್ತೇ?!

ಭಗತ್ ಸಿಂಗ್, ರಾಣಾ ಪ್ರತಾಪ್ ಸಿಂಗ್, ಗುರುಗೋವಿಂದ ಸಿಂಹ ಎಂಬುವವರ ಹೆಸರೂ ಸಿಂಹ ಎಂದಿದೆಯಲ್ಲವೇ?! ಪ್ರಕಾಶ್
ರಾಜ್ ಸಿಂಹ ಎಂಬ ಹೆಸರಿಗೇ ಅವಮಾನ ಮಾಡಿದ್ದಾರೆನ್ನಿ! ಕೊನೆಯದಾಗಿ, ಕಾಡಿನಲ್ಲಿ, ಸಿಂಹವನ್ನು ಬಹಳಷ್ಟು ಬಾರಿ ಕೆರಳಿಸುವುದು ಕತ್ತೆಕುರುಬ ಅಥವಾ ಗುಳ್ಳೇ ನರಿ
ಮಾತ್ರವೇ! ಹಾಗಾದಲ್ಲಿ, ಪ್ರಕಾಶ್ ರೈ ತಮ್ಮ ವ್ಯಕ್ತಿತ್ವವನ್ನು ಅರಿತುಕೊಂಡೇ ಮಾತನಾಡುತ್ತಿದ್ದಾನಾ?!

ಸಿಂಹ ಯಾವತ್ತೂ ಪರರ ಎಂಜಲಿಗೆ ಬಾಯಿ ಹಾಕುವುದೂ ಇಲ್ಲ, ಹುಲ್ಲನ್ನೂ ತಿನ್ನುವುದಿಲ್ಲ! ಕೊಟ್ಟಷ್ಟು ಕಾಸಿಗೆ ನಟನೆ ಮಾಡಿಕೊಂಡಿರುವುದನ್ನು ಬಿಟ್ಟು, ಕಂಡವರ ಎಂಜಲಿಗೆ ಬಾಯಿ ಹಾಕುವವನಿಗೆ ಎಂಜಲೊಗೆಯುವವರ ಬಗ್ಗೆ ಪ್ರಶ್ನೆ ಮಾಡಲು ಧ್ವನಿ ಅಡರುತ್ತದೆ ಬಿಡಿ!

ಜಸ್ಟ್ ಆಸ್ಕಿಂಗ್ ಎಂದು ದಲಿತಪರ ಹೋರಾಟ ನನ್ನದು, ಜಾತ್ಯಾತೀತತೆ ನನ್ನದು, ಮಾನವ ಧರ್ಮ ನನ್ನದು ಎಂದು ಬೊಬ್ಬರಿಯುವ
ಮಿಶ್ರ ತಳಿಗೆ,. ದಾನೇಶ್ವರಿಯ ಮೇಲಿನ ಅತ್ಯಾಚಾರ, ಮೇಸ್ತಾನ ಹತ್ಯೆ, ಕೇರಳದ ಕಮ್ಯುನಿಸ್ಟ್ ಅಟ್ಟಹಾಸಗಳೆಲ್ಲ ನೆನಪಾಗುವುದಿಲ್ಲ ಎಂಬುದೇ ವಿಪರ್ಯಾಸ!

ಬಿಡಿ! ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವ ಹಾಗೆ, ಪ್ರಕಾಶ್ ರೈ ಗೂ ಸಹ ಬುದ್ಧಿ ಅತಿಯಾಗಿಯೇ ಓಲಾಡುತ್ತಿದೆ ಎಂಬುದು ಸಾಬೀತಾಗುತ್ತಿದೆಯಷ್ಟೇ!

– ತಪಸ್ವಿ

Tags

Related Articles

Close