ಪ್ರಚಲಿತ

ಫೇಸ್ ಬುಕ್,ವಾಟ್ಸಾಪ್- ಮೋದಿಗೊಂದು ಹಾಟ್ಸಾಪ್… ಇಂಟರ್ನೆಟ್ ಬಳಕೆದಾರರಿಗೆ ಗುಡ್ ನ್ಯೂಸ್.!! ಎಲ್ಲೆಲ್ಲೂ ಫುಲ್ ನೆಟ್ ವರ್ಕ್!!

ಮೋದಿ ಸರ್ಕಾರ ಇಂದು ಮಂಡಿಸಿದ ವಾರ್ಷಿಕ ಬಜೆಟ್ ನಲ್ಲಿ ಈಗಾಗಲೇ ಭರಪೂರ ಘೋಷಣೆಯಾಗಿರುವುದು ನಾವೆಲ್ಲಾ ಕಂಡಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ವಿಶ್ವದಾಖಲೆ ಸೃಷ್ಟಿಸಿದ ಮೋದಿ ಬಜೆಟ್ ಜನಸಾಮಾನ್ಯರಿಗೆ ಬಾರೀ ಕೊಡುಗೆಯನ್ನೇ ನೀಡಿದೆ. ಬಾಣಂತಿಯರಿಗೆ, ರೈತರಿಗೆ,ವಿದ್ಯಾರ್ಥಿಗಳಿಗೆ ಬಂಪರ್ ಮೇಲೆ ಬಂಪರ್ ಹೊಡೆದು ಬಿಟ್ಟಿದೆ. ಭಾರತದ ಇತಿಹಾಸದಲ್ಲೇ ಹೊಸ ದಾಖಲೆಯನ್ನೇ ಇಂದಿನ ಬಜೆಟ್ ಬರೆದುಬಿಟ್ಟಿದೆ.

ಇಂಟರ್ನೆಟ್ ಬಳಕೆದಾರರಿಗೂ ಗುಡ್ ನ್ಯೂಸ್…

ಮೋದಿಗೆ ಸಾಮಾಜಿಕ ಜಾಲತಾಣವೆಂದರೆ ಮೊದಲಿನಿಂದಲೂ ಅಚ್ಚುಮೆಚ್ಚು. ದೇಶದ ರಾಜಕೃರಣಿಗಳಲ್ಲಿ ಅತಿ ಹೆಚ್ಚು ಸಾಮಾಜಿಕ ಜಾಲತಾಣ ಉಪಯೋಗಿಸುವ ವ್ಯಕ್ತಿ ಮೋದಿ. ಟ್ವಿಟರ್ ನಲ್ಲೂ ಮೋದಿಗೆ ಅತಿ ಹೆಚ್ಚು ಹಿಂಬಾಲಕರಿದ್ದಾರೆ. ಕಳೆದ ಲೋಕ ಸಭಾ ಚುನಾವಣೆಯಲ್ಲಿ ಮೋದಿಯ ಹವಾ ಧೂಳೆಬ್ಬಿಸಿದ್ದು ಕೂಡಾ ಸಾಮಾಜಿಕ ಜಾಲತಾಣ. ಹೀಗಾಗೆ ಸದಾ ಇಂಟರ್ನೆಟ್ ಗೆ ಒತ್ತು ನೀಡುತ್ತಿದ್ದ ಮೋದಿ ಈ ಬಾರಿಯ ಬಜೆಟ್ ನಲ್ಲೂ ಹೊಸ ಇತಿಹಾಸವನ್ನೇ ಬರೆದಿದ್ದಾರೆ.

3ಜಿ,4ಜಿ ಬಿಟ್ಟು 5ಜಿ ಗೆ ಲಗ್ಗೆ ಇಟ್ಟ ಮೋದಿ…

ಈವರೆಗೂ ಇಂಟರ್ನೆಟ್ ಬಳಕೆದಾರರು 2ಜಿ, 3ಜಿ,4ಜಿ ಎಂದು ಜಪ ಮಾಡುತ್ತಿದ್ದರು. ಆದರೆ ಭಾರತ ಎಷ್ಟು ವೇಗವಾಗಿ ಸಾಗುತ್ತಿದೆ ಎಂಬುವುದಕ್ಕೆ ಜೇಟ್ಲೆ ಘೋಷಿಸಿದ ಬಜೆಟ್ಟೇ ಸಾಕ್ಷಿಯಾಗಿದೆ.

ಇನ್ನು 3ಜಿ,4ಜಿ ಎಲ್ಲ ಯಾವ ಲೆಕ್ಕನೂ ಇಲ್ಲ. ಇನ್ನೇನಿದ್ದರೂ 5ಜಿ ದುನಿಯಾ. ಭಾರತದಲ್ಲಿ ಇಂಟರ್ ನೆಟ್ ಬಳಕೆದಾರರ ಗಣನೀಯ ಏರಿಕೆಯನ್ನು ಗಮನಿಸಿ ಬಜೆಟ್ ನಲ್ಲಿ 5ಜಿ ಎಂಟರ್ನೆಟ್ ಸೇವೆ ಘೋಷಣೆಯಾಗಿದೆ. ಇದರಿಂದ ಸಾಮಾಜಿಕ ಜಾಲತಾಣ ಸಹಿತ ಅಂತರ್ಜಾಲ ಚಟುವಟಿಕೆಗಳನ್ನು ಯಥಾ ಶೀಘ್ರ ನಡೆಸಬಹುದಾಗಿದೆ. ನೆಟ್ವರ್ಕ್ ಇಲ್ಲ ಎಂದು ತಲೆಬೆಸಿ ಮಾಡುವ ಕಾಲ ಹೊರಟು ಹೋಗಲಿದೆ.ಭಾರತದಲ್ಲಿ 5ಜಿ ದುನಿಯಾ ಆರಂಭವಾಗಿದ್ದು, ಹೊಸ ಭಾಷ್ಯವನ್ನು ಬರೆದಿದೆ.

ಪಂಚಾಯತ್ ಗೆ ಅಪ್ಟಿಕಲ್ ಫೈಬರ್…

ನಮ್ಮ ಗ್ರಾಮ ಪಂಚಾಯತ್ ನಲ್ಲಿ ಅದ್ಯಾವಾಗ ನೋಡಿದ್ರೂ ಸರ್ವರ್ ಸಮಸ್ಯೆ. ಇಂಟರ್ನೆಟ್ ಸಮಸ್ಯೆಯಿಂದಾಗಿ ಅದೆಷ್ಟೋ ಕೆಲಸಗಳು ಬಾಕಿ ಉಳಿದುಬಿಡುತ್ತದೆ. ಆದರೆ ಇನ್ನು ಹಾಗಾಗುವುದಿಲ್ಲ. ಮೋದಿ ಸರ್ಕಾರ ಬಂದ ತಕ್ಷಣವೇ ಎಲ್ಲಾ ಪಂಚಾಯತ್ ಗಳನ್ನೂ ಡಿಜಿಟಲೀಕರಣಗೊಳಿಸಲಾಗಿತ್ತು. ಈಗ ಮತ್ತೆ ಡಿಜಿಟಲ್ ಮಂತ್ರವನ್ನು ಜಪಿಸುತ್ತಿದೆ. ದೇಶದ ಎಲ್ಲಾ ಪಂಚಾಯತ್ ಗಳಿಗೂ ಆಪ್ಟಿಕಲ್ ಫೈಬರ್ ಎಳೆದು ಇಂಟರ್ನೆಟ್ ಉಪಯೋಗಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ಈ ಮೂಲಕ ಗ್ರಾಮ ಪಂಚಾಯತ್ ನಲ್ಲಿ ನಡೆಸುವ ಕೆಲಸಗಳು ಇನ್ನು ಮುಂದೆ ಕ್ಷಣ ಮಾತ್ರದಲ್ಲಿ ಆಗಲಿವೆ. ನಾಳೆ ಬನ್ನಿ ಅನ್ನುವ ಮಾತೇ ಇಲ್ಲ.

ಇನ್ನು ಎಪಿಎಂಸಿ ಯೂ ಡಿಜಿಟಲ್…

ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಇನ್ನು ಇ ಮಾರುಕಟ್ಟೆಯಾಗಲಿದೆ. ಸುಮಾರು 470ಎಪಿಎಂಸಿ ಮಾರುಕಟ್ಟೆ ಡಿಜಿಟಲೀಕರಣಗೊಳ್ಳಲಿದೆ. ರೈತರು ನೇರವಾಗಿ ತಮ್ಮ ವ್ಯವಹಾರಗಳನ್ನು ಆನ್ ಲೈನ್ ಮುಖಾಂತರವೇ ನಡೆಸಲಿದ್ದಾರೆ. ಈ ಮೂಲಕ ರೈತರ ಹೊಲದವರೆಗೂ ಇಂಟರ್ ನೆಟ್ ನ್ನು ವಿಸ್ತರಿಸಲಾಗಿದೆ.

ಒಟ್ಟಾರೆ ಅರುಣ್ ಜೇತ್ಲೀ ಮಂಡಿಸಿದ ಮೋದಿ ಸರ್ಕಾರದ ಇಂದಿನ ಕೇಂದ್ರ ಬಜೆಟ್ ಭಾರೀ ಕೊಡುಗೆನ್ನೇ ನೀಡಿದ್ದು, ಸಾಮಾನ್ಯ ಜನತೆ,ಬಡವರ್ಗ,ವೈದ್ಯಕೀಯ ಹಾಗೂ ಶಿಕ್ಷಣ ವರ್ಗ,ಆರೋಗ್ಯ ಕ್ಷೇತ್ರ ಹಾಗೂ ಅಂತರ್ಜಾಲ ಕ್ಷೇತ್ರಗಳಲ್ಲೂ ಭಾರೀ ಮೋಡಿ ಮಾಡಿದೆ. ಇದು ಭಾರತ ಬೆಳಗುತ್ತಿದೆ ಎಂಬುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ವನ್ಸ್ ಎಗೆಯಿನ್ ಥಾಂಕ್ ಯೂ ಮೋದೀಜಿ…

-ಸುನಿಲ್ ಪಣಪಿಲ

 

Tags

Related Articles

Close