ಪ್ರಚಲಿತ

ಬಯಲಾಯ್ತು ಹಾರ್ದಿಕ್ ಪಟೇಲ್ ಹಾಗೂ ರಾಬರ್ಟ್ ವಾದ್ರಾನ ಗುಪ್ತ ಮೀಟಿಂಗ್!!

ರಾಬರ್ಟ್ ವಾದ್ರಾರನ್ನು ಗುಪ್ತವಾಗಿ ಭೇಟಿ ಮಾಡಿದ್ದ ಎಂಬ ಸತ್ಯ ಈ ಬಟಬಯಲಾಗಿದೆ...

ಮೊನ್ನೆ ಮೊನ್ನೆವರೆಗೂ ತಾನೊಬ್ಬ ಪಾಟೀದಾರ್ ಸಮುದಾಯದ ಹಕ್ಕಿಗಾಗಿ, ಅದರ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಯುವ ನಾಯಕ, ಪಟೇಲ್ ಸಮುದಾಯಕ್ಕೆ ಮೀಸಲಾತಿ ಸಿಗಬೇಕೆನ್ನುವುದೇ ತನ್ನ ಹೋರಾಟ ಎಂದು ಬೊಬ್ಬೆ ಹೊಡೆದು ರಾಜಕೀಯ ಮಾಡುತ್ತಿದ್ದ ಗುಜರಾತಿನ ಯುವ ನಾಯಕನೆನಿಸಿಕೊಂಡ ಹಾರ್ದಿಕ್ ಪಟೇಲನ ನಿಜಮುಖ ಅನಾವರಣವಾಗಿದೆ!!! ಈ ಹಿಂದೆಯೇ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾರನ್ನು ಗುಪ್ತವಾಗಿ ಭೇಟಿ ಮಾಡಿದ್ದ ಎಂಬ ಸತ್ಯ ಈ ಬಟಬಯಲಾಗಿದೆ…

ಗುಜರಾತ್ ಚುನಾವಣೆಯಲ್ಲಿ ತಾನೇ ನಿರ್ಣಾಯಕನೆಂದು ಜನರನ್ನು ಮೋಸಗೊಳಿಸುತ್ತಿದ್ದ ಹಾರ್ದಿಕ್ ಪಟೇಲನ ನೈಜ ಮುಖದ ಅನಾವರಣವನ್ನು ಮಾಡಿದ್ದು ಬೇರಾರೂ ಅಲ್ಲ. ಸ್ವತಃ ಆತನೊಂದಿಗೆ ಪಾಟೀದಾರ್ ಸಮುದಾಯಕ್ಕಾಗಿ ಹೋರಾಟ ನಡೆಸಿದ್ದ ದಿನೇಶ್ ಬಂಬಾನಿಯಾ…

ಹೇಳಿದ್ದು ಪಾಟೀದಾರ್ ಸಮುದಾಯದ ಧ್ವನಿ-ತನ್ನ ಸ್ವಾರ್ಥಕ್ಕಾಗಿ ಸಮುದಾಯವನ್ನು ಮಾಡಿಕೊಂಡಿದ್ದ ಏಣಿ…!!!

ಆತನಿಗಿನ್ನೂ 24 ವರ್ಷ. ಸಾಮಾಜಿಕ ಚಟುವಟಿಕೆಗಳ ಗಂಧ ಗಾಳಿನೂ ಗೊತ್ತಿರಲ್ಲ. ಆದರೂ ರಾಜಕೀಯ ಪ್ರಬುದ್ಧತೆ ಇಲ್ಲದ ಈ ವ್ಯಕ್ತಿಯನ್ನು ಮಾಧ್ಯಮಗಳು ಅಟ್ಟಕ್ಕೇರಿಸಿದ್ದರು. ಕೇವಲ ಮೋದಿಯ ಹಾಗೂ ಭಾರತೀಯ ಜನತಾ ಪಕ್ಷದ ವಿರೋಧಿಯಾಗಿದಕ್ಕೆ ಆತನನ್ನು ಗುಜರಾತ್‍ನ ರೋಲ್ ಮೋಡೆಲ್ ಆಗಿ ಬಿಂಬಿಸಲಾಯಿತು. ಈಗ ಅದೇ ಹಾರ್ಧಿಕ್ ಪಟೇಲನ ಅವಾಂತರ ಗುಜರಾತ್ ರಾಜಕೀಯದಲ್ಲಿಯೇ ಬಿರುಗಾಳಿ ಎಬ್ಬಿಸಿದ್ದು ಮಾತ್ರವಲ್ಲದೆ ಆತನ ಜೊತೆಗೆ ಇದ್ದಂತಹ ಹೋರಾಟಗಾರರೇ ಆತನ ವಿರುದ್ಧ ತಿರುಗಿ ಬೀಳುವಂತೆ ಮಾಡಿದೆ.

ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಪಾಟೀದಾರ್ ಸಮುದಾಯವನ್ನು ಏಣಿ ಮಾಡಿಕೊಂಡಿದ್ದ ಹಾರ್ಧಿಕ್ ಪಟೇಲ್ ಎಂಬ ಸ್ವಘೋಷಿತ ಯುವ ನಾಯಕ ಪಟೇಲ್ ಸಮುದಾಯದ ಬಗ್ಗೆ ನಿಜವಾಗಿಯೂ ಪ್ರೀತಿಯನ್ನು ಇರಿಸದೆ ಕೇವಲ ರಾಜಕೀಯ ಲಾಭಕ್ಕಾಗಿ, ತಾನೊಬ್ಬ ಹೀರೋ ಆಗಬೇಕೆನ್ನುವ ಉದ್ಧೇಶದಿಂದ ಸಮುದಾಯವನ್ನು ಬಳಸಿಕೊಂಡಿದ್ದಾನೆ. ಇದು ಈಗ ಮತ್ತೊಮ್ಮೆ ಸಾಭೀತಾಗಿದೆ.

ದಿನೇಶ್ ಬಂಬಾನಿಯಾ ಬಾಯಿ ಬಿಟ್ಟ ಸ್ಪೋಟಕ ಸತ್ಯ…!!!

ದಿನೇಶ್ ಬಂಬಾನಿಯಾ. ಹಾರ್ದಿಕ್ ಪಟೇಲ್ ಜೊತೆಗೆ ಪಾಟೀದಾರ್ ಸಮುದಾಯದ ಹೋರಾಟಕ್ಕಾಗಿ ಧುಮುಕಿದ ವ್ಯಕ್ತಿ. ಮೊದ ಮೊದಲು ಎಲ್ಲವೂ ಸರಿಯಾಗಿಯೇ ಇತ್ತು. ಪಾಟೀದಾರ್ ಸಮುದಾಯಕ್ಕಾಗಿ ಈ ಇಬ್ಬರೂ ಹೋರಾಟವನ್ನು ನಡೆಸುತ್ತಿದ್ದರು. ಆದರೆ ಯಾವಾಗ ಹಾರ್ಧಿಕ್ ಪಟೇಲನ ರಾಜಕೀಯ ನಾಟಕಗಳು ಬಯಲಾಗುತ್ತಾ ಬಂತೋ ಅಂದಿನಿಂದ ದಿನೇಶ್ ಬಂಬಾನಿಯಾ ಆತನ ತಂಡದಿಂದ ಹೊರಬರಲು ಯತ್ನಿಸಿದ್ದರು.

ಸಹಿಸಿಕೊಳ್ಳವಷ್ಟು ಸಹಿಸಿಕೊಂಡ ಈ ದಿನೇಶ್ ಬಂಬಾನಿಯಾ ಈಗ ಹಾರ್ಧಿಕ್ ಪಟೇಲನ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಆತನ ನಾಟಕ ತಂಡದಿಂದ ಹೊರಬಂದು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ರಾಬರ್ಟ್ ವಾದ್ರಾನನ್ನು ಗುಪ್ತವಾಗಿ ಭೇಟಿ ಮಾಡಿದ್ದ ಹಾರ್ಧಿಕ್…

ದಿನೇಶ್ ಬಂಬಾನಿಯಾ ಹೇಳಿಕೆ ಪ್ರಕಾರ ಹಾರ್ದಿಕ್ ಪಟೇಲ್ ಅಕ್ಟೋಬರ್‍ನಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾನನ್ನು ಗುಪ್ತವಾಗಿ ಭೇಟಿಯಾಗಿದ್ದ. ಆದರೆ ಯಾವುದೇ ಕಾರಣಕ್ಕೂ ಭೇಟಿ ಹಿಂದೆ ಇದ್ದ ವಿಷಯವನ್ನು ಬಹಿರಂಗ ಪಡಿಸಿಲ್ಲ. ರಾಬರ್ಟ್ ವಾದ್ರಾನಿಗೂ ಹಾರ್ಧಿಕ್ ಪಟೇಲ್‍ಗೂ ಏನು ಸಂಬಂಧ..?

ದಿನೇಶ್ ಬಂಬಾನಿಯಾ ಹೇಳಿದ್ದಿಷ್ಟು…

* ರಾಹುಲ್ ಗಾಂಧಿ ಭೇಟಿ ಬಗ್ಗೆ ಹಾರ್ದಿಕ್ ಪಟೇಲ್, ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ (ಪಾರ್ಸ್) ಬಳಿ ಯಾವುದೇ ವಿಷಯವನ್ನೂ ಹಂಚಿಕೊಂಡಿಲ್ಲ. ಇದರ ಪ್ರಮುಖರು ಪ್ರಶ್ನಿಸಿದ್ದರೂ ಯಾವುದೇ ವಿಚಾರವನ್ನೂ ಬಾಯಿ ಬಿಟ್ಟಿಲ್ಲ.

* ಈ ಮಧ್ಯೆ ರಾಬರ್ಟ್ ವಾದ್ರನ ಭೇಟಿಯನ್ನೂ ಹಾರ್ದಿಕ್ ಪಟೇಲ್ ಮಾಡಿದ್ದು ಅದರ ಸತ್ಯಾ ಸತ್ಯತೆಯನ್ನು ಬಹಿರಂಗಪಡಿಸಿಲ್ಲ. ರಾಬರ್ಟ್ ವಾದ್ರಾನಿಗೂ ಪಾಟೀದಾರ್ ಸಮುದಾಯದ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಆತನ ಭೇಟಿ ಬಗ್ಗೆ ಯಾವುದೇ ಪ್ರಸ್ತಾಪವನ್ನೂ ನಮ್ಮ ಮುಂದೆ ಇಟ್ಟಿಲ್ಲ.

* ಕಾಂಗ್ರೆಸ್ ಪಕ್ಷ ಅಂದರೆ ನನಗೆ ಇಷ್ಟವಿಲ್ಲ ಎಂದು ಹೇಳುತ್ತಲೇ ಬರುತ್ತಿದ್ದ ಹಾರ್ಧಿಕ್ ಪಟೇಲ್ ಈಗ ಕಾಂಗ್ರೆಸ್‍ಗೆ ಓಟ್ ಹಾಕಿ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಇದರ ಹಿಂದಿನ ಉದ್ಧೇಶವೇನು? ಇದಕ್ಕೂ ರಾಹುಲ್ ಗಾಂಧಿ ಹಾಗೂ ರಾಬರ್ಟ್ ವಾದ್ರಾ ಭೇಟಿಗೂ ಏನು ಸಂಭಂಧ..?

* ರಾಹುಲ್ ಗಾಂಧಿಯನ್ನು ಹಾರ್ದಿಕ್ ಪಟೇಲ್ ಒಟ್ಟು ಮೂರು ಬಾರಿ ಭೇಟಿಯಾಗಿದ್ದಾರೆ. ಆದರೆ ಯಾವ ವಿಷಯವನ್ನೂ ನಮ್ಮ ಸಮಿತಿ ಮುಂದೆ ಬಹಿರಂಗಪಡಿಸಿಲ್ಲ. ಪಾಟೀದಾರ್ ಹೋರಾಟಗಾರರಿಗೆ ರಾಹುಲ್ ಗಾಂಧಿಯನ್ನು ಭೇಟಿ ಮಾಡುವ ಅಗತ್ಯವೇನಿತ್ತು..?

https://twitter.com/rishibagree/status/940794402821300229

* ಅಹ್ಮದಬಾದ್‍ನಲ್ಲೂ ರಾಹುಲ್ ಗಾಂಧಿಯನ್ನು ಹಾರ್ದಿಕ್ ಪಟೇಲ್ ಭೇಟಿ ಮಾಡಿದ್ದರು. ಈ ವೇಳೆ 48 ನಿಮಿಷಗಳ ಕಾಲ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು. ಆಗಲೂ ಯಾವುದೇ ವಿಚಾರವನ್ನು, ಭೇಟಿಯ ರಹಸ್ಯವನ್ನು ಹಾರ್ಧಿಕ್ ಪಟೇಲ್ ಬಹಿರಂಗಪಡಿಸಲೇ ಇಲ್ಲ.

* ರಾಹುಲ್ ಗಾಂಧಿಯನ್ನು ಭೇಟಿಯಾಗಿ ತಪ್ಪು ಮಾಡಿದ್ದೇನೆ ಎಂದು ಹೇಳಿದ್ದ ಹಾರ್ದಿಕ್ ಪಟೇಲ್ ಮತ್ತೆ ರಾಹುಲ್ ಗಾಂಧಿಯೊಡನೆ ಒಳ ಒಪ್ಪಂದ ಮಾಡಿಕೊಂಡು ರಾಹುಲ್ ಪರ ವಕಾಲತು ಮಾಡಿದ್ದೇಕೆ..? ಇದರ ಹಿಂದಿರುವ ಸತ್ಯ ಏನು?

ಇವಿಷ್ಟು ಹಾರ್ಧಿಕ್ ಪಟೇಲ್ ಜೊತೆ ಪಾಟೀದಾರ್ ಸಮುದಾಯಕ್ಕೆ ಹೋರಾಟ ಮಾಡುತ್ತಿದ್ದ ದಿನೇಶ್ ಬಂಬಾನಿಯಾ ಅವರ ಹೇಳಿಕೆಗಳು. ಮಾತ್ರವಲ್ಲದೆ “ಹಾರ್ದಿಕ್ ಪಟೇಲ್ ನಡೆಯಿಂದ ಪಾಟೀಲ್ ಸಮುದಾಯದಲ್ಲಿಯೇ ಬಿರುಕುಂಟಾಗಿದೆ” ಎಂದು ಆಕ್ರೋಷ ವ್ಯಕ್ತಪಡಿಸಿದ್ರು.

ಒಟ್ಟಾರೆ ನಿನ್ನೆ ರಾಹುಲ್ ಗಾಂಧಿ ಸುದ್ಧಿಗೋಷ್ಟಿ ನಡೆಸಿ ಯಡವಟ್ಟು ಮಾಡಿಕೊಂಡಿದ್ದು, ಇಂದು ಅವರ ಸ್ನೇಹಿತ ಹಾರ್ಧಿಕ್ ಪಟೇಲ್‍ನ ನಿಜಮುಖ ಬಯಲಾಗಿದೆ. ಕಾಂಗ್ರೆಸ್‍ಗೆ ಓಟ್ ಹಾಕಿ ಎನ್ನುವ ಹಾರ್ದಿಕ್ ಪಟೇಲ್‍ನ ಹಿಂದಿನ ಉದ್ಧೇಶವೇನು ಎಂಬುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳಿಯ ರಾವರ್ಟ್ ವಾದ್ರಾನನ್ನು ಭೇಟಿ ಮಾಡಿ ಹಣಕಾಸು ಒಪ್ಪಂದ ಮಾಡಿಕೊಂಡು ತಾನು ಕಾಂಗ್ರೆಸ್‍ಗೆ ಬೆಂಬಲ ನೀಡುತ್ತೇನೆ ಎಂದು ಭರವಸೆ ನೀಡಿದ್ದಂತು ಅಕ್ಷರಷಃ ಸತ್ಯವಾಗಿ ಗೋಚರಿಸುತ್ತಿದೆ.

ಇನ್ನು ದಿನ ಹೋಗುತ್ತಲೇ ಹಾರ್ದಿಕ್ ಪಟೇಲ್‍ನ ವಿರುದ್ಧ ಸ್ವತಃ ಪಾಟೀದಾರ್ ಸಮುದಾಯವೇ ಸಿಡಿದೆದ್ದಿದೆ. ಪಾಟೀದಾರ್ ಸಮುದಾಯವನ್ನು ಹಾರ್ದಿಕ್ ಪಟೇಲ್ ದತ್ತು ಪಡೆದುಕೊಂಡಿಲ್ಲ ಎಂದು ಪಾಟೀದಾರ್ ಸಮುದಾಯದ ಮಹಿಳೆಯೊಬ್ಬರು ವಾಗ್ದಾಳಿ ನಡೆಸಿದ್ದಾರೆ. ಈಗ ಈ ವೀಡಿಯೋ ಕೂಡಾ ವೈರಲ್ ಆಗಿದೆ. ಗುಜರಾತ್‍ನಲ್ಲಿ ಈಗಾಗಲೇ ಒಂದು ಹಂತದ ಚುನಾವಣೆಯೂ ಮುಗಿದಿದ್ದು ಎರಡನೇ ಹಂತದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಾರ್ಧಿಕ್ ಪಟೇಲ್ ಎಂಬ ಸೋಗಲಾಡಿ ಯುವ ನಾಯಕನ ನಿಜಮುಖ ಅನಾವರಣಗೊಳ್ಳುತ್ತಿದೆ. ಇದು ಗುಜರಾತಿನಲ್ಲಿ ಕಾಂಗ್ರೆಸ್‍ನ ಹೀನಾಯ ಸೋಲಿಗೆ ಮುನ್ನುಡಿ ಅನ್ನುವುದಂತು ಸುಳ್ಳಲ್ಲ…

-ಸುನಿಲ್ ಪಣಪಿಲ

Tags

Related Articles

Close