ಪ್ರಚಲಿತ

“ಬಿಗ್ ಬ್ರೇಕಿಂಗ್: ಬಂದ್ ಗೆ ಕರೆ ನೀಡಿದ ವಾಟಾಳ್ ನಿಜಮುಖ ಬಯಲು…!ಸಿಎಂ ಹಾಗೂ ವಾಟಾಳ್ ನಡುವಿನ‌ ಒಪ್ಪಂದ ಏನು ಗೊತ್ತಾ…!?”

‘ಮಹದಾಯಿಗೋಸ್ಕರ ಜೀವ ಕೊಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಈ ಕೂಡಲೇ ಮಧ್ಯ ಪ್ರವೇಶಿಸಬೇಕು. ಅಮಿತ್ ಶಾ ಬಗೆಹರಿಸಬೇಕು. ನಾವು ಕರ್ನಾಟಕ ಬಂದ್ ಮಾಡುತ್ತಿದ್ದೇವೆ’ ಎಂದು ಉತ್ತರ ಕುಮಾರನಂತೆ ಬೊಬ್ಬಿರಿದ ನಕಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಭಾರತೀಯ ಜನತಾ ಪಕ್ಷ ಮಹದಾಯಿ ನದಿ ನೀರಿನ ಸಮಸ್ಯೆಯ ಬಗೆಹರಿಸುವಿಕೆಗಾಗಿ ಮಾಡಿದ್ದ ಸಂಧಾನವನ್ನು ನೋಡಲಾರದೆ ಹೋರಟದ ಕಿಚ್ಚುಹಚ್ಚಿಸಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರ ಅಸಲೀ ಮುಖ ಅನಾವರಣವಾಗಿದೆ.

ಗೋವಾ ರಾಜ್ಯಕ್ಕೆ ಭರವಸೆ ನೀಡಿದ್ದ ಸೋನಿಯಾ ಗಾಂಧಿ ಅಥವಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಒಂಚೂರೂ ಪ್ರಶ್ನಿಸದ ಈ ಕನ್ನಡ ಪರ ಸಂಘಟನೆಗಳು ಮೋದಿ ಹಾಗೂ ಅಮಿತ್ ಶಾ ವಿರೋಧಿಸಿ ಬೀದಿಗಿಳಿಯುತ್ತಾರೆ. ಕಾಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಹೇಗಾದರೂ ಭಾರತೀಯ ಜನತಾ ಪಕ್ಷವನ್ನು ಮಣಿಸಿ ಮತ್ತೊಮ್ಮೆ ಗದ್ದುಗೆಗೆ ಏರಬೇಕೆಂಬ ಹಠ ಹಿಡಿದು, ಆ ಪಕ್ಷವನ್ನು ಹೇಗಾದರೂ ಇಕ್ಕಟ್ಟಿಗೆ ಸಿಲುಕಿಸಬೇಕೆನ್ನುವ ಉದ್ಧೇಶವನ್ನು ಹೊಂದಿತ್ತು. ಒಂದು ಕಡೆ ಜಾತಿಯಾಧಾರೀತವಾಗಿ ಬಿಜೆಪಿಗೆ ಬೆಂಬಲವಾಗಿರುವ ಲಿಂಗಾಯತ ವೀರಶೈವರನ್ನು ಒಡೆದು ಪ್ರತ್ಯೇಕ ಧರ್ಮ ಎಂಬ ನಾಟಕವಾಡಿ ಬಿಜೆಪಿಯನ್ನು ಎತ್ತಿ ಕಟ್ಟುವ ಕೆಲಸವನ್ನು ಮಾಡಿತ್ತು.

ಆದರೆ ಇದರಲ್ಲಿ ವಿಫಲವಾದ ಕಾಂಗ್ರೆಸ್ ಬಿಜಪಿಯನ್ನು ಅಪ್ಪಿಕೊಂಡಿದ್ದ ಉತ್ತರ ಕರ್ನಾಟಕದ ಮಂದಿಯನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಲು ಬಿಗ್ ಪ್ಲಾನ್ ಒಂದನ್ನು ರೆಡಿ ಮಾಡುತ್ತೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಹೆಣೆದ ತಂತ್ರವೇ ಮಹದಾಯಿ ನದಿ ನೀರಿನ ಹೋರಾಟದ ಕಿಚ್ಚು. ಈ ನಾಟಕಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯರೇ ನಿರ್ಧೇಶಕರಾದರೆ, ನಟನಾಗಿ ಆಗಮಿಸಿದ್ದು ನಕಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್… ಉಳಿದ ಕನ್ನಡ ಪರ ಸಂಘಟನೆಗಳನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಿ ಬೀದಿಗಿಳಿದು ಹೋರಾಡಲು ಪ್ರೇರೇಪಣೆ ನೀಡಿ ಬಂದ್ ಗೆ ಕರೆ ನೀಡಿದ್ದ ವಾಟಾಳ್ ನಾಗರಾಜ್ ನ ಕರಾಳ ಮುಖ ಈಗ ಬಯಲಾಗಿದೆ..

ಮುಖ್ಯಮಂತ್ರಿಗಳಿಂದ ಹಣ ಪಡೆದಿದ್ದ ವಾಟಾಲು ನಿಜ ಮುಖ ಬಯಲು…

ಮೊದ ಮದಲು ಈ ಬಂದ್ ಪ್ರೇಮಿಯ ಮಾತನ್ನು ಉಳಿದ ಕನ್ನಡ ಪರ ಸಂಘಟನೆಗಳು ಕೇಳಲೇ ಇಲ್ಲ. ಬಂದ್ ಬೇಡವೇ ಬೇಡ ಎನ್ನುತ್ತಿದ್ದರು. ವಿಶೇಷವಾಗಿ ಮಹದಾಯಿ ಹೋರಾಟಗಾರರೂ ಕೂಡಾ “ಯಾರನ್ನು ಕೇಳಿ ಬಂದ್ ಘೋಷಣೆ ಮಾಡಿದ್ದೀರಿ” ಎಂದು ವಾಟಾಳ್ ಗೆ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ ಅದೆಲ್ಲವನ್ನೂ ಸಹಬದಿಗೆ ತಂದಿಟ್ಟ ವಾಟಾಳ್ ನಾಗರಾಜ್ ಬಂದ್ ನಿಶ್ಚಿತ ಎಂದು ಬಿಟ್ಟಿದ್ದರು.

ಆದರೆ ಈಗ ವಾಟಾಳ್ ನಾಗರಾಜ್ ಕರೆ ನೀಡಿದ ಈ ಬಂದ್ ನ ಹಿಂದಿರುವ ರಹಸ್ಯ ಬಯಲಾಗಿದೆ. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಾಟಾಳ್ ನಾಗರಾಜರ ಒಳ ಒಪ್ಪಂದ ಜಗದ್ಜಾಹೀರಾಗಿದೆ. ಈವರೆಗೂ ನಮ್ಮದೇನೂ “ಹಸ್ತ”ಕ್ಷೇಪ ಇಲ್ಲ ಎಂದೇ ನುನುಚುಕೊಳ್ಳುತ್ತಿದ್ದ ಕಾಂಗ್ರೆಸ್ ಸರ್ಕಾರ ಈಗ ತನ್ನ ಅಸಲೀ ಮುಖವನ್ನು ಸಮಾಜದ ಮುಂದೆ ತೆದಿಟ್ಟಿದೆ.

ಮುಖ್ಯಮಂತ್ರಿಗಳ ಋಣ ಸಂದಾಯ ಮಾಡಿದ ವಾಟಾಳ್…

ಪ್ರತಿ ವರ್ಷದಂತೆಯೇ ಈ ವರ್ಷವೂ ಕನ್ನಡ ರಾಜ್ಯೋತ್ಸವಕ್ಕೆ ಹಣ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ವಾಟಾಳ್ ನಾಗರಾಜ್ ಮನವಿ ಮಾಡಿದ್ದರು. 75ಲಕ್ಷ ನಿಡುವಂತೆ ಮನವಿ ಮಾಡಿದ್ದ ವಾಟಾಳ್ ನಾಗರಾಜರನ್ನು ಮುಖ್ಯಮಂತ್ರಿಗಳು ತಮ್ಮ ಬಳಿ ಕರೆಸಿ ಮಾತನಾಡಿಸಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಗ್ ಗಿಫ್ಟ್ ವಾಟಾಳ್ ಬಳಿ ಕೇಳಿದ್ದಾರೆ.

ಯಾವುದೇ ಸಮಯ ಸಂದರ್ಭದಲ್ಲೂ ನಮಗೆ ಸಂಕಷ್ಟ ಎದುರಾದಾಗ ನೀವು ನಮ್ಮ ಸಹಾಯಕ್ಕೆ ಧಾವಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಟಾಳ್ ನಾಗರಾಜ್ ಬಳಿ ಕೇಳಿದ್ದರು ಎನ್ನಲಾಗಿದೆ. ಈ ವೇಳೆ ಮುಖ್ಯಮಂತ್ರಿಗಳ ಡಿಮಾಂಡ್‍ಗೆ ವಾಟಾಳ್ ನಾಗರಾಜ್ ಓಕೆ ಎಂದಿದ್ದಾರೆ. ನಂತರ ಮುಖ್ಯಮಂತ್ರಿಗಳು ವಾಟಾಳ್ ನಾಗರಾಜ್ ಅವರಿಗೆ ಅನುದಾನ ಮಂಜೂರು ಮಾಡಿದ್ದಾರೆ ಎನ್ನಲಾಗಿದೆ.

ವಾಟಾಳ್ ಮನವಿ..,

ಕರ್ನಾಟಕ ರಾಜ್ಯೋತ್ಸವ ಸಮಿತಿ
ಅಧ್ಯಕ್ಷರು: ವಾಟಾಳ್ ನಾಗರಾಜ್

ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ,
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ
ವಿಧಾನ ಸೌಧ, ಬೆಂಗಳೂರು.

ಸನ್ಮಾನ್ಯರೇ,

ಕರ್ನಾಟಕ ರಾಜಧಾನಿ ಬೆಂಗಳೂರು ನಗರದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ನಿರಂತರವಾಗಿ ಸುಮಾರು 50 ವರ್ಷಗಳಿಂದ ಮೈಸೂರು ಬ್ಯಾಂಕ್ ಹತ್ತಿರ ನೃಪತುಂಗ ಮಂಟಪದಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ. ಈ ಬಾರಿಯ ಕರ್ಣಾಟಕ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸುವ ಉದ್ಧೇಶವನ್ನು ಇಟ್ಟುಕೊಂಡಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ನೊಂದಣಿ ವಿನಾಯಿತಿ ನೀಡಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ರೂ 75 ಲಕ್ಷಗಳನ್ನು ಬಿಡುಗಡೆ ಮಾಡಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿಸುತ್ತಿದ್ದೇನೆ.

ವಂದನೆಗಳು.

ಇದು ವಾಟಾಳ್ ನಾಗರಾಜ್ ಮುಖ್ಯಮಂತ್ರಿಗಳಿಗೆ ನೀಡಿದ್ದ ಮನವಿ ಪತ್ರ. ಈ ಮನವಿಗೆ ಕೂಡಲೇ ಸ್ಪಂಧಿಸಿದ್ದ ಮುಖ್ಯಮಂತ್ರಿ ಸಿದ್ದರಮಯ್ಯನವರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ 40 ಲಕ್ಷ ರೂ ಬಿಡುಗಡೆಗೊಳಿಸಿದ್ದಾಗಿ ತಿಳಿಸಿದ್ದರು.

ಎಲ್ಲಿ ಹೋಯಿತು ಹಣ…

ಆದರೆ ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದ್ದ ಆ 40 ಲಕ್ಷ ರೂಗಳು ಎಲ್ಲಿ ಹೋಯಿತು ಎಂದರೆ ವಾಟಾಳ್ ನಾಗರಾಜ್ ಬಳಿ ಲೆಕ್ಕವೇ ಇಲ್ಲ. ಮಾತ್ರವಲ್ಲದೆ ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳ ಬಳಿಯೇ ದಾಖಲೆಗಳು ಇಲ್ಲವಂತೆ. ಮುಖ್ಯಮಂತ್ರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ತಾತ್ಸಾರ ಮನೋಭಾವನೆ ವ್ಯಕ್ತಪಡಿಸಿದ್ದರು. ಆದರೆ ಮುಖ್ಯಮಂತ್ರಿಗಳು ವಾಟಾಳ್ ನಾಗರಾಜ್ ಬಗ್ಗೆ ಯಾಕೆ ಮೃಧು ಧೋರಣೆ ಅನುಸರಿದ್ದರು ಎಂಬ ವಿಚಾರ ಈಗ ಬಹಿರಂಗವಾಗಿದೆ.

ಋಣ ತೀರಿಸಿದ ವಾಟಾಳ್ ನಾಗರಾಜ್…

ಮುಖ್ಯಮಂತ್ರಿಗಳು ಈ ಮೊದಲೇ ಹೇಳಿದಂತೆ ಮುಖ್ಯಮಂತ್ರಿಗಳ ಸಂಕಷ್ಟಕ್ಕೆ ಧಾವಿಸಿದ್ದಾರೆ. ಆವರೆಗೂ ಅತ್ತ ಕಾಲೇ ಹಾಕದ ವಾಟಾಳ್ ನಾಗರಾಜ್ ಏಕಾಏಕಿ ಪ್ರವೇಶಿಸಿ ಮಹದಾಯಿಗಾಗಿ ರಾಜ್ಯ ಬಂದ್‍ಗೆ ಕರೆ ನೀಡಿದ್ದಾರೆ. ಈ ಮೂಲಕ ಮುಖ್ಯಮಂತ್ರಿಗಳಿಗೆ ಪರೋಕ್ಷವಾಗಿ ಸಹಕಾರವನ್ನು ವಾಟಾಳ್ ನಾಗರಾಜ್ ನೀಡಿದ್ದಾರೆ.

ಒಟ್ಟಿನಲ್ಲಿ ಕನ್ನಡ ಪರ ಹೋರಾಟ ಎಂಬ ನಾಮಧ್ಯೇಯವನ್ನು ಇಟ್ಟುಕೊಂಡಿರುವ ವಾಟಾಳ್ ನಾಗರಾಜ್ ಹಾಗೂ ಭ್ರಷ್ಟ ಆಡಳಿತ ನಡೆಸಿ ಕುತಂತ್ರೀ ನೀತಿಯನ್ನು ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಕರಾಳ ಮುಖ ಈಗ ಅನಾವರಣವಾಗಿದೆ. ಭಾರತೀಯ ಜನತಾ ಪಕ್ಷವನ್ನು ಮಣಿಸಲು ಈ ತಂತ್ರವನ್ನು ಅನುಸರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಟಾಳ್ ನಾಗರಾಜ್ ಹಾಗೂ ಕನ್ನಡ ಸಂಘಟನೆಗಳನ್ನು ತನ್ನ ರಾಜಕೀಯ ದಾಳವನ್ನಾಗಿ ಉಪಯೋಗಿಸಿ ಕರ್ನಾಟಕಕ್ಕೆ ಕಪ್ಪು ಚುಕ್ಕ ಬರುವಂತೆ ಮಾಡಿದ್ದಾರೆ. ವಾಟಾಳ್ ನಾಗರಾಜ್ ಅವರ ನಿಜಮುಖ ಇದೀಗ ಬಯಲಾಗಿದ್ದು ಮುಂದಿನ ದಿನದಲ್ಲಿ ವಾಟಾಳ್‍ರ ಯಾವುದೇ ಕುತಂತ್ರಗಳು ನಡೆಯಲು ಸಾಧ್ಯವಿಲ್ಲ ಎಂಬ ಸಂದೇಶವೂ ಸಾರಿದಂತಾಗಿದೆ.

-ಸುನಿಲ್ ಪಣಪಿಲ

Tags

Related Articles

Close