ಪ್ರಚಲಿತ

ಬಿಗ್ ಬ್ರೇಕಿಂಗ್!!! ಸ್ಫೋಟಕ ಮಾಹಿತಿ ನೀಡಿದ ಖ್ಯಾತ ಪತ್ರಕರ್ತ ರವಿ ಬೆಳಗೆರೆ!!

ಸುನಿಲ್ ಹೆಗ್ಗರವಳ್ಳಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದು ಈ ಕಾರಣಕ್ಕೆ!

ಇವತ್ತು ಸಿಸಿಬಿ ಪೋಲಿಸರು ‘ಭೀಮಾ ತೀರದ ಹಂತಕರು’ ಎಂದು ಖ್ಯಾತಿ ಪಡೆದ ಶಾರ್ಪ್ ಶೂಟರ್ ಗಳ ಮಾಹಿತಿಯ ಮೇರೆಗೆ ಹಾಯ್ ಬೆಂಗಳೂರು ಖ್ಯಾತಿಯ ರವಿ ಬೆಳಗೆರೆಯವರನ್ನು ಬಂಧಿಸಿದ್ದಾರೆ! ‘ತಾಹಿರ್’ ನ ಮಾಹಿತಿ ಮೇರೆಗೆ ರವಿ ಬೆಳಗೆರೆಯನ್ನು ಬಂಧಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ!

ಅನೈತಿಕ ಸಂಬಂಧ ಕಾರಣ?!

‘ಎರಡನೇ ಪತ್ನಿ ಯಶೋಮತಿಯ ಜೊತೆ ಸುನಿಲ್ ಹೆಗ್ಗರವಳ್ಳಿ ಅನೈತಿಕ ಸಂಬಂಧ ಹೊಂದಿದ್ದಕ್ಕಾಗಿ ಸುಪಾರಿ ನೀಡಲಾಗಿದೆ’ ಎಂಬ ಆಘಾತಕಾರಿ ವಿಷಯ ಬಯಲಾಗಿದೆ! 2002 ರಿಂದ 2015 ರ ವರೆಗೂ ಕೂಡ ಒಟ್ಟಿಗೇ ಇದ್ದ ಸುನಿಲ್ ಹೆಗ್ಗರವಳ್ಳಿ ಹಾಗೂ ರವಿ ಬೆಳಗೆರೆಯ ಮಧ್ಯೆ ತದನಂತರ ಮನಸ್ತಾಪ ಪ್ರಾರಂಭವಾಗಿತ್ತು. ಕೊನೆ ಕೊನೆಗೆ ಬಹಿರಂಗವಾಗಿಯೂ ತೋರ್ಪಡಿಕೆಯಾಗಿದ್ದ ಇಬ್ಬರ ಜಟಾಪಟಿ ಈಗ ಹತ್ಯೆಗೆ ಸುಪಾರಿ ಕೊಡುವಲ್ಲಿ ಬಂದು ನಿಂತಿದೆ!

ರವಿ ಬೆಳಗೆರೆಯ ಎರಡನೇ ಹೆಂಡತಿ ಯಶೋಮತಿಯ ಸಹವಾಸಕ್ಕೆ ಹೋಗಿದ್ದರಿಂದ ಈ ಹಿಂದೆಯೇ ಸುನಿಲ್ ಗೆ ಎಚ್ಚರಿಸಿದ್ದರು. ಆದರೂ, ಬೆಳಗೆರೆಯವರ ಮಾತು ಕೇಳದಿದ್ದ ಸುನಿಲ್ ಹೆಗ್ಗರವಳ್ಳಿ ಯವರ ಹತ್ಯೆಗೆ ಸ್ಕೆಚ್ ರೂಪಿಸಿದ್ದರು ಎಂಬ ಮಾಹಿತಿ ಬಯಲಾಗಿದೆ!

ಮುಂಚೆ ಇಂದಲೂ ಸಹ, ಹಂತಕರ ಜೊತೆ ಒಡನಾಟವಿಟ್ಟುಕೊಂಡಿರುವ ರವಿ ಬೆಳಗೆರೆಯವರ ಸ್ಕೆಚ್ ನಂತೆ ಆಗಸ್ಟ್ 28 ರಂದೇ ಸುನಿಲ್ ಹತ್ಯೆ ನಡೆಯಬೇಕಿತ್ತು. ಆದರೆ, ಸುನಿಲ್ ಮನೆಯಲ್ಲಿದ್ದ ಸಿಸಿಟಿವಿ ನೋಡಿ ಹಂತಕರು ವಾಪಾಸ್ ಹೋಗಿದ್ದಾಗಿ ಹೇಳಿದ್ದು, ಸುನಿಲ್ ಮನೆಯ ವಿಳಾಸ ಪತ್ತೆ ಹಚ್ಚಲು ಕೊರಿಯರ್ ವ್ಯವಸ್ಥೆಯ ಮೊರೆ ಹೋಗಿ, ಕೊರಿಯರ್ ಬಂದಿದೆ ಎಂದು ಸುನಿಲ್ ಗೆ ಫೋನ್ ಕರೆ ಮಾಡಿ ವಿಳಾಸ ತಿಳಿದುಕೊಂಡಿದ್ದರು!

ಶಾರ್ಪ್ ಶೂಟರ್ ತಾಹಿರ್ ಯಾರು?

ಭೀಮಾ ತೀರದ ಹಂತಕ ಶಶಿಧರ್ ಮುಂಡಾದರ್ ಹಾಗೂ ಶಾರ್ಪ್ ಶೂಟರ್ ತಾಹಿರ್ ಜೊತೆಯಾಗಿ ಸುನಿಲ್‍ನನ್ನು ಕೊಲೆಗೆ ಮುಂದಾಗಿದ್ದರು. ರವಿ ಬೆಳಗೆರೆಯಿಂದ ಸುಪಾರಿ ಪಡೆದ ಶಶಿಧರ್ ತನ್ನ ಕೆಲಸವನ್ನು ಶಾರ್ಪ್ ಶೂಟರ್ ತಾಹಿರ್‍ಗೆ ವಹಿಸಿದ್ದಾನೆ. ಸುನಿಲ್ ಹೆಗ್ಗರವಳ್ಳಿ ಒಮ್ಮೆ ಈ ಸ್ಕೆಚ್‍ನಿಂದ ಪಾರಾಗಿದ್ದು, ಆ ಬಳಿಕ ತಾಹಿರ್ ಮತ್ತೊಮ್ಮೆ ಸ್ಕೆಚ್ ರೂಪಿಸಿದ್ದ. ಅದಕ್ಕಾಘಿ ಬಂದೂಕನ್ನೂ ಖರೀದಿಸಲಾಗಿತ್ತು. ಆದರೆ ಪೊಲೀಸರು ಈತ ಯಾರನ್ನೋ ಕೊಲೆಗೆ ಮುಂದಾಗಿದ್ದಾನೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ಇತ್ತೀಚೆಗೆ ಈತನನ್ನು ಬಂಧಿಸಿ ವಿಚಾರಿಸಿದಾಗ ಸುನಿಲ್ ಹೆಗ್ಗರವಳ್ಳಿ ಕೊಲೆಯನ್ನು ನಡೆಸಲು ಶಶಿಧರ್ ತನಗೆ ವಹಿಸಿರುವುದು ಬೆಳಕಿಗೆ ಬಂದಿದೆ. ಅತ್ತ ಶಶಿಧರ್ ಕೂಡಾ ಕೊಲೆಗೆ ಸುಫಾರಿ ಪಡೆದಿರುವುದು ಬೆಳಕಿಗೆ ಬರುತ್ತಿದ್ದಂತೆ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ರವಿಬೆಳಗೆರೆ ಸುಫಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ.

ಸುನಿಲ್ ಹೆಗ್ಗರವಳ್ಳಿ ಹೇಳಿದ್ದೇನು?

ಈ ಬಗ್ಗೆ ದೃಶ್ಯ ಮಾಧ್ಯಮವೊಂದರಲ್ಲಿ ಮಾತಾಡಿದ ಸುನಿಲ್ ಹೆಗ್ಗರವಳ್ಳಿ. `ಇಂದು ಬೆಳಿಗ್ಗೆ ಹಿರಿಯ ಅಧಿಕಾರಿಗಳು ತನ್ನನ್ನು ಕರೆಸಿಕೊಂಡು ಕೊಲೆ ಸ್ಕೆಚ್ ಬಗ್ಗೆ ಮಾಹಿತಿ ನೀಡಿದ್ದು, ತುಂಬಾ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದರು. ಆದರೆ ಇಂದು ಬೆಳಿಗ್ಗೆ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿ ಹೇಳಿಕೆ ಪಡೆದುಕೊಂಡು ಹೋಗಿದ್ದಾರೆ. ಅಧಿಕಾರಿಗಳ ಮಾತಿನಿಂದ ಶಾಖ್‍ಗೊಳಗಾದ ಸುನಿಲ್ ಇದು ನಿಜಾನಾ ಎಂದು ನಂಬುವಂತಾಗಿತ್ತು. ಆದರೆ ಇತ್ತೀಚೆಗೆ ನಡೆದ ಕೆಲವು ವಿದ್ಯಾಮಾನಗಳನ್ನು ನೋಡಿದಾಗ ತನ್ನ ಕೊಲೆಗೆ ಸ್ಕೆಚ್ ರೂಪಿಸಿರುವುದು ಸತ್ಯ ಎನ್ನುವುದು ತಿಳಿಯಿತು. ನನಗೂ ರವಿಬೆಳಗೆರೆಗೂ ವೈಯಕ್ತಿಕ ದ್ವೇಷವಿಲ್ಲ. ನಿನ್ನೆಯೂ ನನಗೆ ಕರೆ ಮಾಡಿ ವಿಚಾರಿಸಿದ್ದರು. ಆದರೆ ಕೆಲ ದಿನಗಳ ಹಿಂದೆ ಶಶಿಧರ್ ಮುಂಡಾದರ್ ತನ್ನ ಮನೆಯ ಸಮೀಪ ಅಡ್ಡಾಡುತ್ತಿದ್ದ. ಆದರೆ ಇದರಿಂದ ಅನುಮಾನ ಮೂಡಿ ಅಲ್ಲಿಂದ ತಪ್ಪಿಸಿಕೊಂಡಿದ್ದೆ.. ನನ್ನನ್ನು ಕೊಲ್ಲುವ ಭಾವನೆ ಅವರ ಮನದಲ್ಲಿ ಯಾಕೆ ಮೂಡಿತು ಎಂದು ನನಗೆ ಗೊತ್ತಿಲ್ಲ. ಮೂರು ವರ್ಷಗಳ ಹಿಂದೆ ಇನ್ವೆಸ್ಟರ್ ಮೀಟಿಂಗ್ ಎಂದು ಯಾರ್ಯಾರನ್ನೋ ಕರೆದುಕೊಂಡು ಬಂದಿದ್ದ ರವಿಬೆಳಗೆರೆಯ ಬಗ್ಗೆ ಹಿಂದೆಯೇ ಅನುಮಾನ ಇತ್ತು. ಆದರೆ ಇದೆಲ್ಲಾ ಇಂದು ಸಾಬೀತಾಗಿದೆ. ಅವರು ನನ್ನನ್ನು ಯಾಕಾಗಿ ಕೊಲೆಗೆ ಮುಂದಾಗಿದ್ದಾರೆ ಎಂದು ಪೊಲೀಸರ ತನಿಖೆಯಿಂದ ಇನ್ನಷ್ಟೇ ತಿಳಿಯಬೇಕಾಗಿದೆ.

ಶೋಕಿವಾಲ ರವಿಬೆಳಗೆರೆ ರೌಡಿಸಂಗೆ ಎಂಟ್ರಿಯಾಗಿದ್ದು ಹೇಗೆ?

ಅನೇಕ ಪುಸ್ತಕಗಳನ್ನು ಬರೆದಿರುವ ರವಿಬೆಳಗೆರೆ ಹಾಯ್ ಬೆಂಗಳೂರು, ಓ ಮನಸೇ ಎನ್ನುವ ಪತ್ರಿಕೆ ನಡೆಸುತ್ತಿದ್ದಾರೆ. ಅನೇಕ ರೌಡಿಗಳ ಜೊತೆ ಒಡನಾಟ ಇಟ್ಟುಕೊಂಡು ರೌಡಿಗಳ ಇತಿಹಾಸದ ಬಗ್ಗೆ ಎಕ್ಸ್‍ಕ್ಲೂಸಿವ್ ವರದಿಗಳನ್ನು ತನ್ನ ಪತ್ರಿಕೆಯಲ್ಲಿ ಬಿತ್ತರಿಸುತ್ತಿದ್ದ. ಅನೇಕ ಪುಡಿರೌಡಿಗಳನ್ನು ರಕ್ಷಿಸುವ ಕೆಲಸವನ್ನೂ ರವಿ ಮಾಡಿದ್ದರು. ಡಿಫೆರೆಂಟ್ ಮ್ಯಾನರಿಸಂ ಮೂಲಕ ತನ್ನದೇ ಹವಾ ಸೃಷ್ಟಿಸಿಕೊಂಡಿದ್ದ ರವಿ, ತನ್ನ ಬರಹದ ಮೂಲಕವೇ ಪ್ರಸಿದ್ಧಿ ಪಡೆದಿದ್ದರು. ಚಿಕ್ಕಂದಿನಿಂದಲೇ ವಿಚಿತ್ರ ಶೋಕಿಗಳನ್ನು ಇಟ್ಟುಕೊಂಡಿದ್ದ ರವಿ, ರೌಡಿಸಂನಲ್ಲಿ ಕೈಯಾಡಿಸದಿದ್ದರೂ ಕೊನೆ ಹಂತದಲ್ಲಿ ಅದೇ ರೌಡಿಸಂಗೆ ರವಿ ಎಂಟ್ರಿ ಪಡೆಯುವಂತಾಗಿದೆ. ಭೀಮಾ ತೀರದ ಹಂತಕರಿಗೂ ರವಿಬೆಳಗೆರೆಗೂ ಈ ಹಿಂದಿನಿಂದಲೂ ನಂಟಿದ್ದು, ಭೀಮಾ ತೀರದ ಹಂತಕರು ಎನ್ನುವ ಪುಸ್ತಕವನ್ನೂ ಬರೆದಿದ್ದರು. ಪ್ರತೀ ರೌಡಿಗಳ ಬಗ್ಗೆ ಚೆನ್ನಾಗಿ ಅರಿತುಕೊಂಡು ತನ್ನ ಪತ್ರಿಕೆಯಲ್ಲಿಯೂ ಬರೆದಿದ್ದರು. ರೌಡಿಸಂ ಬೆಳೆಯಲು ಕಾರಣವೇನು ಎಂದು ಅವರ ಮಾನಸಿಕತೆಯನ್ನು ಇತರ ರೌಡಿಗಳ ಅಧ್ಯಯನ ಮಾಡಿದ್ದ ಅದೇ ರವಿಬೆಳಗೆರೆ ಇಂದು ಅದೇ ರೌಡಿಸಂಗೆ ಎಂಟ್ರಿ ಪಡೆದಿರುವುದು ದೊಡ್ಡದೊಂದು ಅಚ್ಚರಿಗೆ ಕಾರಣವಾಗಿದೆ. ಸದ್ಯ ರವಿ ಬೆಳಗೆರೆಯ ಬಗ್ಗೆ ಕೂಲಂಕುಷ ತನಿಖೆ ನಡೆಸಸುತ್ತಿದ್ದು, ಅವರ ನಿವಾಸ, ಕಚೇರಿ, ಕಾರುಗಳನ್ನು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ರವಿಬೆಳಗೆರೆಯನ್ನು ತನ್ನ ಕಸ್ಟಡಿಗೆ ಪಡೆದುಕೊಂಡು ತನಿಖೆ ನಡೆಸಲಿದ್ದಾರೆ. ಇದರ ಜೊತೆಗೆ ಖಾಸಗಿ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲು ಸುನಿಲ್ ಹೆಗ್ಗರವಳ್ಳಿಯನ್ನೂ ವಿಚಾರಣೆ ನಡೆಸಲಿದ್ದಾರೆ.

ಗೌರೀ ಮೇಲೆಯೂ ಸಿಟ್ಟಿತ್ತು!!!

ಸುನಿಲ್ ಹೆಗ್ಗರವಳ್ಳಿಗೆ ಆಶ್ರಯ ಕೊಟ್ಟ ಹಿನ್ನೆಲೆಯಲ್ಲಿ ಗೌರೀ ಲಂಕೇಶ್ ಮೇಲೂ ಸಿಟ್ಟಿಗೆದ್ದಿದ್ದ ರವಿ ಬೆಳಗೆರೆ ಈ ಹಿಂದೆಯೂ ಗೌರಿಗೆ ಎಚ್ಚರಿಸಿದ್ದರೆನ್ನಲಾಗಿದೆ. ಗೌರೀ ಹತ್ಯೆಗೂ ರವಿ ಬೆಳಗೆರೆಗೂ ಸಂಬಂಧವಿಲ್ಲವೆಂದ ಪೋಲಿಸ್ ಅಧಿಕಾರಿ ಅನುಚೇತ್ ರವರ ಹೇಳಿಕೆ ಇನ್ನಷ್ಟೇ ವಿಚಾರಣೆ ನಡೆದ ಸತ್ಯವೋ ಇಲ್ಲವೋ ಎಂದು ಗೊತ್ತಾಗಬೇಕಿದ್ದು, ಸುನಿಲ್ ಹೆಗ್ಗರವಳ್ಳಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ!

ಗೌರಿ ಹತ್ಯೆಗೂ ರವಿ ಬೆಳಗೆರೆಗೂ ಲಿಂಕ್ ಇದೆಯಾ?

ಸದ್ಯ ರವಿಬೆಳಗೆರೆ, ಸುನಿಲ್ ಹೆಗ್ಗರವಳ್ಳಿ ಹಾಗೂ ಭೀಮಾ ತೀರದ ಹಂತಕರ ಮಧ್ಯೆ ಗಿರಕಿ ಹೊಡೆಯುತ್ತಿದ್ದ ಈ ಪ್ರಕರಣ ಮುಂದೆ ಗೌರಿ ಹತ್ಯೆಗೂ ತಗಲಾಕಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ ಗೌರಿ ಲಂಕೇಶ್ ಹತ್ಯೆಯ ಕುರಿತು ಆರೋಪಿಗಳ ಬಗ್ಗೆ ಇನ್ನೂ ಸುಳಿವು ಸಿಕ್ಕಿರಲಿಲ್ಲ. ಒಬ್ಬ ಪತ್ರಕರ್ತನನ್ನು ಕೊಲೆ ಮಾಡಲು ಮುಂದಾಗಿರುವ ಮತ್ತೊಬ್ಬ ಪತ್ರಕರ್ತನ ಪಾತ್ರ ಗೌರಿ ಹತ್ಯೆಯಲ್ಲೂ ಇದೆಯೋ ಎನ್ನುವ ಬಗ್ಗೆ ಎಸ್‍ಐಟಿ ತನಿಖೆ ಮುಂದಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಭೀಮಾ ತೀರದ ಹಂತಕರೇ ಗೌರಿ ಹತ್ಯೆಯಲ್ಲಿ ಶಾಮೀಲಾಗಿದ್ದಾರೆಯೇ ಇವರಿಗೆ ಸುಫಾರಿ ನೀಡಿದ್ದು ಯಾರು? ರವಿ ಬೆಳಗೆರೆಯ ಪಾತ್ರ ಇದೆಯಾ ಎಂಬ ಬಗ್ಗೆ ತನಿಖೆ ಮುಂದುವರಿಯಲಿದೆ.

ಪೊಲೀಸರೆದುರು ಗಡಗಡ ನಡುಗುತ್ತಿರುವ ರವಿಬೆಳಗೆರೆ!!

ಒಂದು ಕಾಲದಲ್ಲಿ ರೌಡಿಸಂ, ರಾಜಕಾರಣಿಗಳು ಎಲ್ಲರನ್ನೂ ಗಡಗಡ ನಡುಗಿಸುತ್ತಿದ್ದ ಅದೇ ರವಿಬೆಳಗೆರೆ ಇಂದು ಪೊಲೀಸರು ಸುಪಾರಿ ಕೊಲೆಯ ಬಗ್ಗೆ ಮಾತಾಡಿದಾಗ ಗಡಗಡ ನಡುಗುತ್ತಿದ್ದಾರೆ. ವಿಚಾರಣೆಯ ವೇಳೆ ಅಸ್ವಸ್ಥರಾಗಿರುವ ರವಿ, ಐದು ನಿಮಿಷಕ್ಕೊಮ್ಮೆ ನೀರು ಕುಡಿಯುತ್ತಿದ್ದಾರೆ. ಸುಪಾರಿ ಕೊಲೆಯ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದಾಗ ಬೆಳಗೆರೆ ಅಚ್ಚರಿಚಕಿತರಾಗಿದ್ದಾರೆ. ಮೊದಮೊದಲು ಶಾಂತವಾಗಿ ಮಾತಾಡಿದ ರವಿ, ಯಾವ ಸುನಿಲ್, ಯಾವ ಸುಪಾರಿ ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡ ರವಿ, ಐ ಆಮ್ ಸಾರಿ ಎಂದು ಹೇಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ತನ್ನ ಹೆಂಡತಿಯ ಮೇಲೆ ಕಣ್ಣಾಕಿದ್ದಾಗಿ ಸುನಿಲ್‍ನ ಕೊಲೆಗೆ ಸ್ಕೆಚ್ ರೂಪಿಸಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ತನಿಖಾ ಮೂಲಗಳಿಂದ ಮಾಹಿತಿ ಲಭಿಸಿದೆ. ನಾನೇ ಅವನ ಕೊಲೆಗೆ ಸುಪಾರಿ ಕೊಟ್ಟಿದ್ದೆ. ಅವನ ಅದೃಷ್ಟ ಚೆನ್ನಾಗಿತ್ತು ಆತ ಬದುಕಿದದ. ನನ್ನ ಅದೃಷ್ಟ ಕೈಕೊಟ್ಟಿತು ಆದ್ದರಿಂದ ಸಿಕ್ಕಿಬಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

-PriChe Team

 

Tags

Related Articles

Close