ಪ್ರಚಲಿತ

ಬುಲೆಟ್ ಟ್ರೈನ್ ಎಂಬ ಸುಳ್ಳು ಸುದ್ದಿ ಹಬ್ಬಿದ್ದು ಹೇಗೆ ಗೊತ್ತೇ?!

ಇಪ್ಪತ್ತೊಂದನೇ ಶತಮಾನದಲ್ಲಿ ಬಹುಷಃ ಈ ‘ಮಾಡಿದ್ದುಣ್ಣೋ ಮಹರಾಯ’ ಎಂಬ ಕರ್ಮವಿಧಿ ಬಹಳ ಬೇಗನೇ ಕಾರ್ಯಗತವಾಗುವುದು ಸಾಮಾಜಿಕ
ಜಾಲತಾಣದಲ್ಲಿಯೇ! ಇದಕ್ಕೆ ಉದಾಹರಣೆಯಾಗಿ ನಿಲ್ಲುವುದಾದರೆ ಬಹುಷಃ ಪ್ರಶಾಂತ್ ಭೂಷಣ್ ಎಂಬ ಹೊಸದಾಗಿ ಪಟ್ಟಿಯಲ್ಲಿ ಸೇರಿದ ವ್ಯಕ್ತಿ!

ವಿಷಯ ಇಷ್ಟೇ! ಎಲ್ಲಿ ಬುಲೆಟ್ ಟ್ರೈನ್ ಎಂಬ ಯೋಜನೆಯೊಂದನ್ನು ಭಾರತದಲ್ಲಿ ನರೇಂದ್ರ ಮೋದಿಯವರು ಶುರು ಮಾಡಿದರೋ, ಅಲ್ಲಿಂದಲೇ NDTV ಮಾಧ್ಯಮವೊಂದು ಮೋದಿಯವರ ಯೋಜನೆಯ ಬಗ‌್ಗೆ ಮನಸ್ಸಿಗೆ ಬಂದ ಹಾಗೆ ಸುಳ್ಳು ಸುದ್ದಿ ಹಬ್ಬಿಸಲು ಶುರು ಮಾಡಿತ್ತು. ಸ್ವತಃ ಬುಲೆಟ್ ಟ್ರೈನ್ ಅನ್ವೇಷಣೆ ಮಾಡಿದವನೂ ಸಹ ಬಿದ್ದು ಬಿದ್ದು ನಗುವಷ್ಟು NDTV ಬಹಳ ಚೆನ್ನಾಗಿಯೇ ಸುಳ್ಳು ಸುದ್ದಿ ಹಬ್ಹಿಸಿ ಬಿಟ್ಟಿಯಾಗಿ ಮಜಾ ಕೊಟ್ಟಿತ್ತು!

ಈಗ ಆ ಸರದಿಗೆ ಹೊಸದಾಗಿ ಸೇರ್ಪಡೆಯಾದವರು ಪ್ರಶಾಂತ್ ಭೂಷಣ್ ಅಷ್ಟೇ! ಯಾವಾಗ ನೋಡಿದರೂ ಬಿಜೆಪಿ ಸರಕಾರಕ್ಕೆ ತನ್ನ ಪ್ರತೀ ಟ್ವೀಟ್ ನಲ್ಲಿಯೂ ಮಿಥ್ಯಾರೋಪ ಮಾಡುತ್ತಾ ಬಾಣ ಬಿಡುವ ಭೂಷಣ್ ಗೆ ಈಗ ಸದ್ಯಕ್ಕೆ ಭೂಷಣವಾಗಿಯೇ ಮರ್ಯಾದೆ ತೆಗೆದಿದ್ದಾರೆ ಮೋದಿಯ ಅನುಯಾಯಿಗಳು!

ಇವರದ್ದು ಎಂಥಾ ಲಾಜಿಕ್ಕು ಗೊತ್ತಾ?!

ಹಾ! ಬುಲೆಟ್ ಟ್ರೈನ್ ಎಂಬ ಹೈ – ಸ್ಪೀಡ್ ಟ್ರೈನ್ ಇರುವುದು ಅಹಮದಾಬಾದ್ ನಿಂದ ಮುಂಬೈವರೆಗೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ! ಆದರೆ, ಇವರ ಲಾಜಿಕ್ಕಿಗೆ ಗಣಿತ ಕಂಡುಹಿಡಿದವನೇ ಬೆಪ್ಪಾಗಿ ನೋಡುವಷ್ಟಿದೆ!

ಈ ಪ್ರಶಾಂತ್ ಭೂಷಣ್ ಥಾಯ್ಲಾಂಡ್ ನ ಬುಲೆಟ್ ಟ್ರೈನ್ ನನ್ನು ಭಾರತದ ಟ್ರೈನ್ ಗೆ ಹೋಲಿಸಿದ್ದಲ್ಲದೇ, ಒಂದು ಬುಲೆಟ್ ಟ್ರೈನ್ ತಯಾರಿಸಲು ತಗುಲುವ ಖರ್ಚು ವೆಚ್ಚಕ್ಕೆ ಹೋಲಿಸಿ ಭಾರತದ ಪ್ರಧಾನ ಮಂತ್ರಿ ದೊಡ್ಡ ಹಗರಣ ಮಾಡಲು ಹೊರಟಿದ್ದಾರೆ ಎಂದು ಬಿಂಬಿಸಲಾಗಿತ್ತು!

ಆತ ಅಧ್ಯಯನ ಮಾಡಿದ್ದು ಇದೇ ಮತಿಗೆಟ್ಟ NDTV ಯ ಸುದ್ದಿಗಳು ಹಾಗೂ ಲೇಖನಗಳನ್ನು! ಇಲ್ಲೇ ಪ್ರಶಾಂತ್ ಭೂಷಣ್ ಮುಗ್ಗರಿಸಿ ಬಿದ್ದದ್ದು!

NDTV ಹೇಳಿದ್ದೇನು ಗೊತ್ತಾ?!

” ಥಾಯ್ಲಾಂಡ್ ನಲ್ಲಿಯೂ ಬುಲೆಟ್ ಟ್ರೈನ್ ತಯಾರಿಸಲಾಗಿದೆ! ಅದಕ್ಕೆ ತಗುಲಿದ ವೆಚ್ಚ $5.5 ಬಿಲಿಯನ್ ಡಾಲರ್ ಗಳು! ಅದೇ ಭಾರತದಲ್ಲಿ ಒಂದು ಬುಲೆಟ್ ಟ್ರೈನ್ ತಯಾರಿಸಲು $17 ಬಿಲಿಯನ್ ಡಾಲರ್ ಗಳು” ಎಂದಿದ್ದ NDTV ಎಲ್ಲಿಯೂ ಸಹ ಟ್ರೈನ್ ನ ಪ್ರಯಾಣಿಸುವ ದೂರವನ್ನು ಹೇಳಿರಲೇ ಇಲ್ಲ. ಅದೆಷ್ಟು ಬುದ್ಧಿವಂತಿಕೆಯಿಂದ ಸ್ಕ್ರಿಪ್ಟ್ ತಯಾರಿಸಿತ್ತೆಂದರೆ ಬುಲೆಟ್ ಟ್ರೈನ್ ಗೆ ಬೆಂಬಲಿಸಿದವರೂ ಸಹ ಒಮ್ಮೆ ದಂಗು ಬಡಿದು ಅನುಮಾನ ಪಡುವಂತಾಗಿತ್ತು!

ಇದರ ಜೊತೆಗೆ ಎಷ್ಟು ಹಂತದ ಟ್ರೈನ್ ತಯಾರಿಸಲಾಗುತ್ತಿದೆ ಎಂಬ ಮಾಹಿತಿಯನ್ನೂ NDTV ನೀಡಿರಲೇ ಇಲ್ಲ. ಕೇವಲ ವೆಚ್ಚವನ್ನು ಮಾತ್ರ ಲೆಕ್ಕದಲ್ಲಿರಿಸಿ ಚರ್ಚೆಗಿಳಿದಿದ್ದ NDTV ಯೊಂದು ದೇಶದಲ್ಲಿ ವಿವಾದವೆಬ್ಬಿಸಿದ್ದು ಅದರ ‘Smart Move againist Nation’ ಅಷ್ಟೇ!

ವಾಸ್ತವ ಏನು ಗೊತ್ತಾ?!

ಥಾಯ್ಲಾಂಡ್ ನ ಮೊದಲ ಹಂತದ ಬುಲೆಟ್ ಟ್ರೈನ್ ಯೋಜನೆಯ ಪ್ರಯಾಣದ ದೂರ ಕೇವಲ 256 ಕಿಮೀ! ಆದರೆ, ಭಾರತದಲ್ಲಿರುವ ಬುಲೆಟ್ ಟ್ರೈನ್ ಯೋಜನೆಯಿರುವುದು 508 ಕಿ.ಮೀ ಪ್ರಯಾಣಿಸುವುದಕ್ಕಾಗಿ! ಅಹಮದಾಬಾದ್ ಹಾಗೂ ಮುಂಬೈ ನ ದೂರ ಥಾಯ್ಲಾಂಡ್ ನ ಬುಲೆಟ್ ಟ್ರೈನ್ ನ ದೂರಕ್ಕಿಂತ ದುಪ್ಪಟ್ಟಿದೆ!

ತೀರಾ ವಿವಾದ ಸೃಷ್ಟಿಸಿದ ಬುಲೆಟ್ ಟ್ರೈನ್ ಟ್ವೀಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದೇ ಗಂಟೆಗಳಲ್ಲಿ ದೇಶದಲ್ಲಿ ಗೊಂದಲ ಸೃಷ್ಟಿಸಿದ್ದಾದರೂ ಉಳಿದ ಟ್ವೀಟಿಗರು ಪ್ರಶಾಂತ್ ಭೂಷಣ್ ನ ಲಾಜಿಕ್ಕನ್ನು ಬಯಲುಗೊಳಿಸಿದ್ದರು!

ಪ್ರಶಾಂತ್ ಭೂಷಣ್ ನ ಲೆಕ್ಕಾಚಾರವೊಂದು ಅದೆಷ್ಟು ಮೂರ್ಖತನವಾಗಿತ್ತೆಂದರೆ 256 ಕಿಮೀ ಹಾಗೂ 508 ಕಿಮೀ ಒಂದೇ ಎನ್ನುವ
ಉತ್ತರವನ್ನು ನೀಡಿದ ಹಾಗಷ್ಟೇ! ಆದರೆ, ತನ್ನ ಅಸಂಬದ್ಧ ಟ್ವೀಟಿಗಾಗಿ ಕ್ಷಮೆಯನ್ನೂ ಕೇಳಿದ ಪ್ರಶಾಂತ್ ಭೂಷಣ್ ತನ್ನ ಹಿಂದಿನ ಟ್ವೀಟ್ ನನ್ನು ಅಳಿಸಲೇ ಇಲ್ಲ!

ಮಜಾ ಎಂದರೆ ಆತನ ಈ ಲಾಜಿಕ್ಕಿಲ್ಲದ ತಿಕ್ಕಲು ಟ್ವೀಟ್ ರಿಟ್ವೀಟ್ ಆಗಿದ್ದು 1300 ಕ್ಕೂ ಹೆಚ್ಚು! ಅದೇ ಆತನ ಕ್ಷಮಾಪಣೆಯ ಟ್ವೀಟೊಂದು ಮತ್ತೆ ರಿಟ್ವೀಟ್ ಆಗಿದ್ದು ಕೇವಲ 350 ಅಷ್ಟೇ! ಆದರೂ, ಸುಳ್ಳು ಸುದ್ದಿ ಹಬ್ಬುವಷ್ಟು ಹಬ್ಬಲಿ ಎಂದು ಸುಮ್ಮನಿರುವ ಇಂತಹ ಹುಚ್ಚು ನರಿಗಳಿಗೆ ಕಡಿವಾಣ ಹಾಕಲೇಬೇಕಾಗಿದೆಯಷ್ಟೇ.

ಬಿಡಿ! ಆಮ್ ಆದ್ಮಿ ಪಾರ್ಟಿ ಯ ಅರವಿಂದ್ ಜಾ ಕೂಡ ಅದೇ ರೀತಿ ಲೆಕ್ಕಾಚಾರವಿಲ್ಲದ ಟ್ವೀಟ್ ಮಾಡಿದ್ದನ್ನೂ ಅಳಿಸದೇ ಹಾಗೇ ಇಟ್ಟಿರುವುದನ್ನು ನೋಡಿದರೆ NDTV ಇವರನ್ನು ಕೊಂಡುಕೊಂಡಿದೆಯೋ ಅಥವಾ ಇವರೇ NDTV ಕೊಂಡುಕೊಂಡು ಕೆಲಸ ಮಾಡುತ್ತಿರುವವರೋ ಆ ಸೋನಿಯಾಗೇ ಗೊತ್ತು!

ಹಾ! ಮೋದಿ ಯಾವಾಗ ಬುಲೆಟ್ ಟ್ರೈನ್ ಎಂಬ ಅತಿದೊಡ್ಡ ಯೋಜನೆಯೊಂದನ್ನು ಭಾರತಕ್ಕೆ ಪರಿಚಯಿಸಲ್ಪಟ್ಟರೋ, ಅಲ್ಲಿಂದಲೇ NDTV ಎಂಬ ಮಾಧ್ಯಮವೊಂದು ತಕ್ಷಣವೇ ಅನುಮಾನಾಸ್ಪದವಾಗಿರುವಂತಹ ಚರ್ಚೆಗೆ ಶುರುವಿಟ್ಟ ಪರಿಣಾಮ ಈ ಪ್ರಶಾಂತ್ ಭೂಷಣ್, ಬರ್ಖಾ ದತ್ ಎಂಬಂತಹ ಜಾತ್ಯಾತೀತ ಹಾಗೂ ಮಾನವತಾವಾದಿಗಳು ಬುಲೆಟ್ ಟ್ರೈನ್ ಹಾಗೂ ಮೋದಿಯ ಬಗ್ಗೆ ಕಿಡಿಕಾರಿದ್ದು ನೋಡಿದರೆ ಬಹುಷಃ ಮೋದಿ ದೇಶದ ಬೊಕ್ಕಸವನ್ನೆಲ್ಲವನ್ನೂ ಟ್ರೈನ್ ಗೆ ಸುರಿದು ದೇಶಕ್ಕೆ ತಿನ್ನಲೂ ಗತಿಯಿಲ್ಲವಾದಂತಾಗುತ್ತದೆ ಎಂಬಷ್ಟು ವಿವಾದ ಸೃಷ್ಟಿಸಿಬಿಟ್ಟಿದ್ದರು!

ದೊಡ್ಡದಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆಂದು ನೆಪ ಮಾತ್ರಕ್ಕೆ ಉಪವಾಸ ಕುಳಿತು ತದನಂತರ ಸತ್ಯವನ್ನೇ ಹೇಳುತ್ತೇನೆ ಎಂದು ಬರೀ ಸುಳ್ಳುಗಳಲ್ಲೇ ಬದುಕಿದ್ದ ಅರವಿಂದ್ ಕೇಜ್ರಿವಾಲ್ ಕೂಡ ಇದನ್ನೇ ರಿಟ್ವೀಟ್ ಮಾಡಿರುವುದನ್ನು ನೋಡಿದರೆ ಮೂರ್ಖತನದ ಪರಮಾವಧಿಗೆ ಬಹುಷಃ ಸ್ಪರ್ಧೆ ಇಡುವುದಾದರೆ ಕೇಜ್ರಿವಾಲ್ ಹಾಗೂ ರಾಹುಲ್ ಗಾಂಧಿಯೇ ಫೈನಲ್ ಗೆ ಬರಬಹುದು!

– ಪೃಥು ಅಗ್ನಿಹೋತ್ರಿ

Tags

Related Articles

Close