ಪ್ರಚಲಿತ

ಬ್ಯಾನ್ ಮಾಡೋಲ್ಲ ಏನ್ ಮಾಡ್ತೀರಾ ಮಾಡ್ಕೊಳ್ಳಿ ! ಕೇರಳದ ಸೆಕ್ಸ್ ಸರದಾರನಿಂದ ಕರ್ನಾಟಕದ ಜನತೆಗೆ ಮಹಾಮೋಸ!!

“ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ. ಬಿಜೆಪಿ, ಬಜರಂಗದಳ ಹಾಗೂ ಆರ್ ಎಸ್‍ಎಸ್ ನಲ್ಲೂ ಉಗ್ರಗಾಮಿಗಳಿದ್ದಾರೆ” ಎಂದು ಅತ್ತ ಸಿಎಂ ಸಿದ್ದರಾಮಯ್ಯ ನವರು ವಿವಾದಾತ್ಮಕ ಹೇಳಿಕೆ ನೀಡಿದ್ದರೆ, ಇತ್ತ “ಮೊದಲು ಬಿಜೆಪಿ ಮತ್ತು ಆರ್ ಎಸ್ ಎಸ್ ಬ್ಯಾನ್ ಮಾಡಬೇಕು ಜಿಹಾದಿಗಳು ನೀವು” ಎಂದು ಬಿಜೆಪಿ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿಕಾರಿದ್ದರು. ಆದರೆ ಇದೀಗ ಭಯೋತ್ಪಾದಕರನ್ನು ಹುಟ್ಟು ಹಾಕುತ್ತಿರುವ ಪಿ ಎಫ್ ಐ ಸಂಘಟನೆಯನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸುದ್ದಿಯಾಗಿದ್ದಾರೆ.

ಹೌದು… ಆರ್ ಎಸ್ ಎಸ್, ಬಿಜೆಪಿ, ಮತ್ತು ಭಜರಂಗದಳದವರೇ ಉಗ್ರಗಾಮಿಗಳು, ಹಾಗಾಗಿ ಬಿಜೆಪಿಯವರಿಗೆ ಕಾಂಗ್ರೆಸ್ಸಿಗರ ಬಗ್ಗೆ ಮಾತಾನಾಡುವ ನೈತಿಕ ಹಕ್ಕಿಲ್ಲ ಎಂದಿರುವ ಕರ್ನಾಟಕದ ಸಿಎಂ ಸಿದ್ದರಾಮಯ್ಯನವರು ಫಜೀತಿಗೆ ಸಿಕ್ಕಿ ಬಿದ್ದಿದ್ದರೆ, ಇತ್ತ ದಿನೇಶ್ ಗುಂಡೂರಾವ್ ಅವರು ಚಿಕ್ಕಮಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಸಲ್ಮಾನರನ್ನು ಓಲೈಕೆ ಮಾಡುವ ಉದ್ದೇಶದಿಂದ ಆರ್ ಎಸ್ ಎಸ್, ಬಿಜೆಪಿ, ಮತ್ತು ಭಜರಂಗದಳವನ್ನು ಜಿಹಾದಿಗಳೆಂದಿದ್ದಾರಲ್ಲದೇ ಆರ್ ಎಸ್ ಎಸ್ ಮತ್ತು ಭಜರಂಗದಳವನ್ನು ಬ್ಯಾನ್ ಮಾಡಬೇಕೆಂದು ಹೇಳಿಕೆ ನೀಡಿದ್ದರು.

ಅಷ್ಟೇ ಅಲ್ಲದೇ ಮುಖ್ಯಮಂತ್ರಿಗಳು ಹಾಗೂ ಗುಂಡೂರಾವ್ ಅವರು ಸಾಚಾಗಳಂತೆ ಪಿ ಎಫ್ ಐ ಬಗ್ಗೆ ಮೃದುಧೋರಣೆಯನ್ನು ವ್ಯಕ್ತಪಡಿಸಿದ್ದಲ್ಲದೇ ಆರ್ ಎಸ್ ಎಸ್ ಮತ್ತು ಭಜರಂಗದಳವನ್ನು ಉಗ್ರ ಸಂಘಟನೆಯೆಂದು ಬೊಬ್ಬಿರಿದ್ದಿದ್ದು ಮಾತ್ರ ಅಚ್ಚರಿಯ ಸಂಗತಿಯಾಗಿತ್ತು. ಆದರೆ ಇದೀಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಚಿವರಾಗಿರುವ ಕೆ.ಸಿ. ವೇಣುಗೋಪಾಲ್ ರವರು ಪಿ ಎಫ್ ಐ ಬಗ್ಗೆ ಮೃದು ಧೋರಣೆಯನ್ನು ವ್ಯಕ್ತ ಪಡಿಸಿದ್ದಲ್ಲದೇ ಮುಸಲ್ಮಾನರ ಓಲೈಕೆಯಲ್ಲಿ ಬ್ಯುಸಿಯಾಗಿರುವುದನ್ನು ನೋಡಿದರೆ ದೇಶಪ್ರೇಮಿಗಳಿಗೆ ಭಾರತದಲ್ಲಿ ಸ್ಥಾನಮಾನವೇ ಇಲ್ವೇ ಎನ್ನುವ ಪ್ರಶ್ನೆ ಮನದಲ್ಲಿ ಮೂಡುವುದಂತೂ ಗ್ಯಾರೆಂಟಿ!!

‘ಜನರನ್ನು ಕೋಮು ಆಧಾರದ ಮೇಲೆ ವಿಭಜಿಸಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಲು ಬಿಜೆಪಿ ಮತ್ತು ಆರ್ ಎಸ್ ಎಸ್ ಪ್ರಯತ್ನಿಸುತ್ತಿವೆ. ಕರಾವಳಿಯಲ್ಲಿ ನಡೆಯುತ್ತಿರುವ ಕೊಲೆ ಅಪರಾಧಗಳಿಗೆ ಇವುಗಳೇ ಕಾರಣ,’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೇ, ಈ ಕುರಿತು ಮಾತಾನಾಡಿರುವ ಕೆ.ಸಿ. ವೇಣುಗೋಪಾಲ್ ‘ಅಪರಾಧಗಳು ಕೃತ್ಯಗಳಿಗೆ ಬಿಜೆಪಿ ಪ್ರಚೋದಿಸುತ್ತಿದೆ. ಆದರೆ, ರಾಜ್ಯದಲ್ಲಿ ಪಿ ಎಫ್ ಐ ನಿಷೇಧಿಸುವ ಪ್ರಶ್ನೆಯೇ ಇಲ್ಲ. ಮೊದಲು ಬಿಜೆಪಿ ಕ್ರಿಮಿನಲ್ ರಾಜಕೀಯದಿಂದ ಹೊರ ಬರಲಿ,’ ಎಂದಿದ್ದಾರೆ.

‘ಕರ್ನಾಟಕದ ಜನತೆ ಜಾಣರಿದ್ದು, ಬಿಜೆಪಿ ಮತ್ತು ಆರ್ ಎಸ್ ಎಸ್ ಕೋಮು ವಿಭಜನೆಯ ತಂತ್ರವನ್ನು ಬಲ್ಲವರಾಗಿದ್ದಾರೆ. ಚುನಾವಣೆಯಲ್ಲಿ ಕನ್ನಡಿಗರು ಇಂಥವರಿಗೆ ಅವಕಾಶ ನೀಡುವುದಿಲ್ಲ. ಆರ್ ಎಸ್ ಎಸ್ ಅಷ್ಟೇ ಅಲ್ಲ, ಹಿಂದೂ ಮೂಲಭೂತವಾದಿಗಳಾಗಲಿ ಬೇರೆ ಯಾರೇ ಕೋಮವಾದಿಗಳಾದದರೂ ಅವರ ವಿರುದ್ಧ ಸರಕಾರ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ,’ ಎಂದು ಹೇಳಿದ್ದಾರೆ.

ಆದರೆ ಮದರಸಾಗಳು ಜಿಹಾದ್ ಪಾಠವನ್ನು ಹೇಳಿಕೊಡುವ ಮೂಲಕ ಉಗ್ರರನ್ನು ಹುಟ್ಟು ಹಾಕುತ್ತಿದೆ ಹಾಗಾಗಿ ಶಿಕ್ಷಣವನ್ನು ತಿರುಚಿ ವಿದ್ಯಾರ್ಥಿಗಳನ್ನು ಭಯೋತ್ಪಾದನಾ ಕಡೆಗೆ ಸೆಳೆಯುತ್ತಿರುವ ಮದರಸಾಗಳನ್ನು ಮುಚ್ಚಬೇಕು ಎಂದು ಶಿಯಾ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಆಗ್ರಹಿಸುತ್ತಿದ್ದಾರಲ್ಲದೇ ಎಲ್ಲ ನಗರ, ಪಟ್ಟಣ, ಹಳ್ಳಿಗಳಲ್ಲಿ ನಾಯಿಕೊಡೆಗಳಂತಿರುವ ಈ ಮದರಸಾಗಳಿಗೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಭಯೋತ್ಪದನಾ ಸಂಘಟನೆಗಳಿಂದ ನೆರವು ಹರಿದು ಬರುತ್ತಿದೆ’ ಎಂದು ರಿಜ್ವಿ ಆಪಾದಿಸಿದ್ದಾರೆ. ಆದರೆ ಕಾಂಗ್ರೆಸ್ಸಿಗರಿಗೆ ಮಾತ್ರ ಪಿ ಎಫ್ ಐ ಯನ್ನು ದೇಶ ಪ್ರೇಮಿ ಸಂಘಟನೆಯಾಗಿ ಬಿಂಬಿಸಿರೋದು ಮಾತ್ರ ಅಚ್ಚರಿಯ ಸಂಗತಿ.

ಅಪರಾಧ ಕೃತ್ಯಗಳಿಗೆ ಬಿಜೆಪಿ ಪ್ರಚೋದಿಸುತ್ತಿದೆ. ಆದರೆ, ರಾಜ್ಯದಲ್ಲಿ ಪಿ ಎಫ್ ಐ ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕರ್ನಾಟಕದಲ್ಲಿಯೂ ಗುಜರಾತ್ ಮಾದರಿಯ ಚುನಾವಣಾ ತಂತ್ರವನ್ನು ಹೆಣೆಯಲು ಸಜ್ಜಾಗಿರೋದಂತೂ ಖಂಡಿತಾ ಎಂದನಿಸುತ್ತದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು, “ರಾಜ್ಯದಲ್ಲಿ ಬಿಜೆಪಿ ಜನರಲ್ಲಿ ಕೋಮುಭಾವನೆ ಕೆರಳಿಸಿ, ಅಧಿಕಾರಕ್ಕೆ ಬರಲು ಹವಣಿಸುತ್ತಿದೆ, ರಾಜ್ಯದ ಜನತೆಗೆ ಬರುವ ಚುನಾವಣೆಯಲ್ಲಿ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಹೇಳಿದ್ದಲ್ಲದೇ “ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಯಾವುದೇ ಭಿನ್ನಮತವಿಲ್ಲ. ಕಳೆದ ಬಾರಿಗಿಂತ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಲಿದೆ” ಎಂದು ಹೇಳಿದ್ದಾರೆ.

ಅಂತೂ…. ಮುಸಲ್ಮಾನರ ಓಲೈಕೆಯಲ್ಲಿ ನಿರತರಾಗಿರುವ ಕರ್ನಾಟಕದ ಸಿದ್ದರಾಮಯ್ಯ ಸರ್ಕಾರವು ದೇಶದ್ರೋಹಿಗಳನ್ನು ದೇಶಪ್ರೇಮಿಗಳೆಂದು ಬಿಂಬಿಸುತ್ತಿದ್ದಾರಲ್ಲದೇ, ವಂದೇ ಮಾತರಂ, ಭಾರತ್ ಮಾತ ಕೀ ಜೈ ಎಂದವರನ್ನೆಲ್ಲ ಉಗ್ರರೆಂದು ಬಿಂಬಿಸುತ್ತಿರುವುದನ್ನು ನೋಡಿದರೆ, ಎತ್ತ ಸಾಗುತ್ತಿದೆ ನಮ್ಮ ಸಮಾಜ ಎನ್ನುವ ಪ್ರಶ್ನೆ ಮನದಲ್ಲಿ ಮೂಡುವುದಂತೂ ಖಂಡಿತಾ….

– ಅಲೋಖಾ

 

Tags

Related Articles

Close