ಪ್ರಚಲಿತ

ಬ್ರೇಕಿಂಗ್: ಸಿದ್ದರಾಮಯ್ಯರ ಮತ್ತೊಂದು ಮುಖ ಅನಾವರಣ!! ಮಹದಾಯಿ ವಿಚಾರವಾಗಿ ಗೋವಾ ಕಾಂಗ್ರೆಸ್ಸಿಗರ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?!

“ಮಹದಾಯಿ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಜೊತೆ ನಾಳೆನೇ ಮಾತನಾಡುತ್ತೇನೆ. ಮಾತ್ರವಲ್ಲದೆ ಗೋವಾ ಕಾಂಗ್ರೆಸ್ ನಾಯಕರ ಜೊತೆಗೂ ಮಾತನಾಡುತ್ತೇನೆ. ಆದಷ್ಟು ಬೇಗ ಮಹದಾಯಿ ವಿವಾದ ಬಗೆಹರಿಸುತ್ತೇನೆ”… ಇದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊನ್ನೆ ತಾನೇ ಹೇಳಿದ್ದ ಮಾತುಗಳು. ಶನಿವಾರ ಕರೆದಿದ್ದ ಸರ್ವ ಪಕ್ಷ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ನಾಯಕರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಮಾತುಗಳನ್ನು ಹೇಳಿದ್ದರು.

ದಿಢೀರ್ ಉಲ್ಟಾ ಹೊಡೆದ ಸಿದ್ದರಾಮಯ್ಯ..!

ಅದೇನೋ ಗೊತ್ತಿಲ್ಲ. ಮುಖ್ಯಮಂತ್ರಿಗಳ ಮಾತನ್ನು ಉಳಿದ ರಾಜ್ಯ ಕಾಂಗ್ರೆಸ್ ನಾಯಕರು ಕೇಳೋದಿಲ್ಲವೋ ಅಥವಾ ಅವರೇ ನಮ್ಮ ರಾಜ್ಯದ ಮುಖ್ಯಮಂತ್ರಿಗಳನ್ನು ಬಾಯಿ ಮುಚ್ಚಿಸುತ್ತಿದ್ದರೋ… ಆದರೆ ಮುಖ್ಯಮಂತ್ರಿಗಳು ಮಾತ್ರ ಇಬ್ಬಗೆ ನೀತಿಯನ್ನೇ ಅನುಸರಿಸಿಕೊಂಡು ಬರುತ್ತಿದ್ದಾರೆ. ಭಾರತೀಯ ಜನತಾ ಪಕ್ಷದವರು ಗೋವಾ ಮುಖ್ಯಮಂತ್ರಿಯನ್ನು ಒಪ್ಪಿಸಲಿ ಎಂದೇ ಬೊಬ್ಬೆ ಹಾಕಿಕೊಂಡು ಬರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ತನ್ನ ವರಸೆಯನ್ನು ಬದಲಾಯಿಸಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರ ಅಪೇಕ್ಷೆಯಂತೆ ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕರು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮಧ್ಯಸ್ಥಿಕೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಸಕಾರಾತ್ಮಕವಾಗಿಯೇ ಮಾತನಾಡಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಈ ಬಗ್ಗೆ ತಾವು ಮೃದು ಧೋರಣೆಯನ್ನು ಪಾಲಿಸುತ್ತೇವೆ ಎಂದು ಹೇಳಿದ್ದರು. ಮಾತ್ರವಲ್ಲದೆ ನಾವು ಈ ನಮ್ಮಿಂದಾದಷ್ಟು ಸಹಕಾರವನ್ನು ನೀಡುತ್ತೇವೆ ಎಂದು ಹೇಳಿದ್ದರು. ಹುಬ್ಬಳ್ಳಿಯಲ್ಲಿ ನಡೆದಿದ್ದ ಪರಿವರ್ತನಾ ಯಾತ್ರೆಯ ಸಂಧರ್ಭದಲ್ಲಿ ಪತ್ರವನ್ನೂ ಬರೆದಿದ್ದರು. ಭಾರತೀಯ ಜನತಾ ಪಕ್ಷದ ನಾಯಕರ ಸಂಧಾನ ಅಕ್ಷರಷಃ ಯಶಸ್ಸನ್ನು ಕಂಡಿತ್ತು.

ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಗೆಟ್ಟಿ ಹೋಗುತ್ತಾರೆ. ಭಾರತೀಯ ಜನತಾ ಪಕ್ಷದ ಈ ನಡೆ ಕಮಲ ಪಡೆಯ ಗೆಲುವನ್ನೇ ಸೂಚಿಸುತ್ತಿತ್ತು. ಈ ಸಂಧಾನ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸುತಾರಾಮ್ ಇಷ್ಟವಿರಲಿಲ್ಲ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಮತ್ತೊಂದು ಅವಾಂತರವನ್ನೇ ಎಬ್ಬಿಸುತ್ತಾರೆ. “ನಾನು ಈ ರಾಜ್ಯದ ಮುಖ್ಯಮಂತ್ರಿ. ಗೋವಾ ಮುಖ್ಯಮಂತ್ರಿ ನನಗೆ ಪತ್ರವನ್ನು ಬರೆಯಬೇಕಿತ್ತು. ಆದರೆ ಅವರು ಬಿಜೆಪಿಯವರಿಗೆ ಪತ್ರ ಬರೆದಿದ್ದಾರೆ. ಇದು ಯಾವ ನ್ಯಾಯ. ನಾನು ಇದನ್ನು ಒಪ್ಪೋದಿಲ್ಲ” ಎಂದು ಅಹಂಕಾರದಿಂದಲೇ ವರ್ತಿಸಲು ಆರಂಭಿಸಿದರು. ಈ ಮೂಲಕ ಮಹದಾಯಿ ಸಮಸ್ಯೆಯನ್ನು ಶಾಶ್ವತವಾಗಿ ಉಳಿಯುವಂತೆ ಹಾಗೂ ಇದಕ್ಕೆ ಭಾರತೀಯ ಜನತಾ ಪಕ್ಷದ ನಾಯಕರೇ ಕಾರಣವಾಗುವಂತೆ ಗಿಮಿಕ್ ಮಾಡಿದ್ದರು.

ನಂತರ ನಡೆದಿದ್ದೇ ಇತಿಹಾಸ. ಮಹದಾಯಿಗಾಗಿ ರಾಜ್ಯ ಬಂದ್‍ಗೆ ಕರೆ ನೀಡುವಂತೆ ಕನ್ನಡ ಪರ ಸಂಘಟನೆಗಳಿಗೆ ಸುಪಾರಿ ನೀಡಿ, ವಾಟಾಳ್ ನಾಗರಾಜ್ ಬೆಂಬಲದೊಂದಿಗೆ ಮತ್ತೆ ಭಾರತೀಯ ಜನತಾ ಪಕ್ಷದ ನಾಯಕರನ್ನು ಎತ್ತಿಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡೇ ಬಂದಿದ್ದರು. ಆದರೆ ಯಾವಾಗ ಇವರ ಒಳ ಮರ್ಮ ರಾಜ್ಯದ ಜನತೆಯ ಮುಂದೆ ಬೆತ್ತಲಾಯಿತೋ ಅಂದು ತರಾತುರಿಯಲ್ಲಿ ಸರ್ವಪಕ್ಷ ಸಭೆಯನ್ನು ಕರೆಯುತ್ತಾರೆ.

ಈ ಸರ್ವ ಪಕ್ಷ ಸಭೆಯಲ್ಲಿ ಮತ್ತೆ “ನೀವು ಗೋವಾ ಮುಖ್ಯಮಂತ್ರಿಯನ್ನು ಒಪ್ಪಿಸಿ” ಎಂಬ ಮಾತುಗಳೇ ಮುಖ್ಯಮಂತ್ರಿಯವರ ಬಾಯಿಂದ ಬರುತ್ತದೆ. ಇದಕ್ಕೆ ಉತ್ತರಿಸಿದ್ದ ಭಾರತೀಯ ಜನತಾ ಪಕ್ಷದ ನಾಯಕರು “ನಾವು ಈಗಾಗಲೇ ಗೋವಾ ಮುಖ್ಯಮಂತ್ರಿಯನ್ನು ಒಪ್ಪಿಸಿದ್ದೇವೆ. ಆದರೆ ಅಲ್ಲಿ ಕಾಂಗ್ರೆಸ್ ನಾಯಕರು ಅಡ್ಡಗಾಲು ಹಾಕುತ್ತಿದ್ದಾರೆ. ಇದಕ್ಕಾಗಿ ಅಲ್ಲಿನ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿ ಅವರನ್ನು ಮನವೊಲಿಸಿ” ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕರು ಒತ್ತಡ ಹಾಕಿದ್ದರು. ಇದಕ್ಕೆ ಮಣಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ “ನಾನು ಈ ಕೂಡಲೇ ಗೋವಾ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸುತ್ತೇನೆ” ಎಂದು ಹೇಳಿದ್ದರು.

ಗೋವಾ ಕಾಂಗ್ರೆಸ್‍ಗೆ ಸಂಬಂಧವೇ ಇಲ್ಲ ಎಂದ ಸಿಎಂ…

ಮೊನ್ನೆ ತಾನೇ ಗೋವಾ ಕಾಂಗ್ರೆಸ್ ನಾಯಕರ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಉಲ್ಟಾ ಹೊಡೆದಿದ್ದಾರೆ. ಗೋವಾ ಕಾಂಗ್ರೆಸ್ಸಿಗರಿಗೂ ನಮಗೂ ಸಂಬಂಧವೇ ಇಲ್ಲ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ. ಸುದ್ಧಿಗಾರರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, “ನಾವು ಕರ್ನಾಟಕದವರು, ಅವರು ಗೋವಾದವರು. ನಮಗೂ ಗೋವಾ ಕಾಂಗ್ರೆಸ್ಸಿಗರಿಗೂ ಯಾವುದೇ ಸಂಬಂಧವಿಲ್ಲ. ನಾವ್ಯಾಕೆ ಅವರ ಜೊತೆ ಮಾತನಾಡಬೇಕು? ಹೀಗಾಗಿ ನಾವು ಅವರ ಜೊತೆ ಮಾತನಾಡೋದಿಲ್ಲ. ಬಿಜೆಪಿಯವರು ಗೋವಾ ಮುಖ್ಯಮಂತ್ರಿಯನ್ನು ಒಪ್ಪಿಸುತ್ತೇವೆ ಎಂದು ಹೇಳಿದ್ದಾರೆ, ಅದನ್ನು ಮಾಡಲಿ” ಎಂದು ಉಡಾಫೆಯಾಗಿ ಮಾತನಾಡಿದ್ದಾರೆ. ಶನಿವಾರ ತಾನೇ ತಾನು ಗೋವಾ ಕಾಂಗ್ರೆಸ್ಸಿಗರ ಜೊತೆ ಮಾತನಾಡುತ್ತೇನೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಗೋವಾ ಕಾಂಗ್ರೆಸ್ಸಿಗರ ಬಗ್ಗೆ ತನ್ನ ರಹಸ್ಯ ಮುಖವನ್ನು ಅನಾವರಣಗೊಳಿಸಿದ್ದಾರೆ.

ಸದಾ ಭಾರತೀಯ ಜನತಾ ಪಕ್ಷದ ನಾಯಕರನ್ನೇ ಗುರಿಯಾಗಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರ ಮತ್ತೊಂದು ಮುಖ ಇದೀಗ ಅನಾವರಣವಾಗಿದೆ. ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಈ ಬಗ್ಗೆ ಸ್ಪಷ್ಟನೆ ನೀಡಲಿ ಎಂದಿದ್ದ ಭಾರತೀಯ ಜನತಾ ಪಕ್ಷದ ನಾಯಕರ ಬೇಡಿಕೆಗೆ ಒಲ್ಲೆ ಎಂದಿದ್ದ ಕಾಂಗ್ರೆಸ್ ನಾಯಕರು ಈಗ ಕನಿಷ್ಟ ಗೋವಾ ಕಾಂಗ್ರೆಸ್ಸಿಗರ ಜೊತೆಗೂ ಮಾತನಾಡುವುದಿಲ್ಲ ಎಂದಿದ್ದಾರೆ. ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವ ಮೂಲಕ ತನ್ನ ಕರಾಳ ಮುಖವನ್ನು ಪ್ರದರ್ಶನ ಮಾಡಿದ್ದಾರೆ.

ಸದಾ ಕನ್ನಡ ಸಂಘಟನೆಗಳನ್ನು ಬರಸೆಳೆದು ಭಾರತೀಯ ಜನತಾ ಪಕ್ಷಕ್ಕೂ ರಾಜ್ಯದ ಜನತೆಗೂ ಎತ್ತಿಕಟ್ಟುತ್ತಿದ್ದ ರಾಜ್ಯದ ಮುಖ್ಯಮಂತ್ರಿಗಳ ಖಳಮುಖ ಬಟಬಯಲಾಗಿದ್ದು ಈಗ ಮತ್ತೆ ರಾಜ್ಯದ ಜನತೆಗೆ ಹಾಗೂ ಮಹದಾಯಿ ಹೋರಾಟಗಾರರಿಗೆ ಮುಖ್ಯಮಂತ್ರಿ ಸಿದ್ದಾರಾಮಯ್ಯ ಉತ್ತರ ನೀಡಬೇಕಾಗಿದೆ.

-ಸುನಿಲ್ ಪಣಪಿಲ

Tags

Related Articles

Close