ಪ್ರಚಲಿತ

ಭಾರತದಲ್ಲಿ ಒತ್ತುವ ಒಂದು ಬಟನ್ ಗೆ ಶತ್ರುದೇಶಗಳು ಸುಟ್ಟು ಹೋಗುತ್ತವೆ!! ಪ್ರಬಲ ರಾಷ್ಟ್ರಗಳೊಂದಿಗೆ ಸೂಪರ್- ಎಕ್ಸ್ ಕ್ಲೂಸಿವ್ ಕ್ಲಬ್ ಸೇರಿಕೊಂಡ ಭಾರತ!!

ಇತ್ತೀಚೆಗಷ್ಟೇ ಅಭಿವೃದ್ಧಿ ಮತ್ತು ಭದ್ರತೆಗೆ ನೀಡುತ್ತಿದ್ದ ಕೋಟಿಗಟ್ಟಲೆ ಡಾಲರ್ ನೆರವನ್ನು ಪಾಕಿಸ್ತಾನ ಭಯೋತ್ಪಾದನೆ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದೆ ಎಂದು ತಡವಾಗಿಯಾದರೂ ಅಮೇರಿಕಕ್ಕೆ ಜ್ಞಾನೋದಯವಾಗಿರುವುದು ಭಾರತದ ಪಾಲಿಗೆ ಶುಭಸೂಚನೆಯನ್ನು ನೀಡಿತ್ತು. ಆದರೆ ಇದೀಗ ಗುರುವಾರ ಒಡಿಶಾದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮಥ್ರ್ಯವಿರುವ ಪ್ರಬಲವಾದ ಕ್ಷಿಪಣಿ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದ್ದು ಶತ್ರು ದೇಶಗಳ ಎದೆಯಲ್ಲಿ ನಗಾರಿ ಬಾರಿಸಿದಂತಾಗಿದೆ.

ಈಗಾಗಲೇ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಮೇಲೆ ಹರಿಹಾಯ್ದಿರುವ ರೀತಿಯನ್ನು ನೋಡಿದರೆ ಮುಂದಿನ ದಿನಗಳು ಪಾಕ್ ಪಾಲಿಗೆ ದುಸ್ತರವಾಗುವ ಸಾಧ್ಯತೆ ಇದೆ ಎದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ಅಷ್ಟೇ ಅಲ್ಲದೇ, ಈಗಾಗಲೇ 15 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಅಮೆರಿಕ 2.14 ಲಕ್ಷ ಕೋ. ರೂಪಾಯಿ ನೆರವು ನೀಡಿದೆ. ಆದರೆ ಇದರಪ್ರತಿಯಾಗಿ ಪಾಕ್ ಕೊಟ್ಟಿರುವುದು ಬರೀ ಸುಳ್ಳು ಮತ್ತು ವಂಚನೆಯನ್ನು. ಹಾಗಾಗಿ ಪಾಕಿಸ್ತಾನಕ್ಕೆ ಅಮೇರಿಕ ಬಹು ದೊಡ್ಡದಾದ ಶಾಕ್ ನೀಡಿತ್ತು!!

ಆದರೆ ಇದೀಗ ಗುರುವಾರ ಒಡಿಶಾದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮಥ್ರ್ಯವಿರುವ ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ. ಹೌದು…. ನೆಲದಿಂದ ನೆಲಕ್ಕೆ ದಾಳಿ ಎಸಗಬಲ್ಲ ಅಣು ಸಾಮಥ್ರ್ಯದ ಕ್ಷಿಪಣಿ ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ 9.35ರ ಹೊತ್ತಿಗೆ ಪರೀಕ್ಷೆ ನಡೆಸಲಾಯಿತು. ಐದು ಸಾವಿರ ಕಿ.ಮೀ ದೂರ ವ್ಯಾಪ್ತಿಯ ಈ ಬ್ಯಾಲಿಸ್ಟಿಕ್ ಮಿಸೈಲ್, ಪಕ್ಕದ ದೇಶವಾದ ಚೀನಾ ಹಾಗೂ ಪಾಕಿಸ್ತಾನವನ್ನು ಭಾರತದಿಂದಲೇ ತಲುಪುವ ಸಾಮಥ್ರ್ಯವನ್ನು ಹೊಂದಿದೆ.

ಈಗಾಗಲೇ 2017ರ ಮೇ ತಿಂಗಳಿನಲ್ಲಿ, ಅಗ್ನಿ-2 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ವೀಲರ್ಸ್ ದ್ವೀಪ ಎಂದು ಕರೆಯಲಾಗುತ್ತಿದ್ದ ಈಗಿನ ಒಡಿಶಾದ ಧಮರದ ಎ.ಪಿ.ಜೆ.ಅಬ್ದುಲ್ ಕಲಾಂ ದ್ವೀಪದಲ್ಲಿ ಯಶಸ್ವಿ ಪರೀಕ್ಷಾರ್ಥ ಉಡಾವಣೆ ನಡೆಸಲಾಗಿತ್ತು. ಈ ಪರಮಾಣು ಶಸ್ತ್ರಾಸ್ತ್ರ 2,000 ಕಿಲೋ ಮೀಟರ್ ವ್ಯಾಪ್ತಿ ಶ್ರೇಣಿಯನ್ನು ಹೊಂದಿದೆಯಲ್ಲದೇ 20 ಮೀಟರ್ ಉದ್ದದ ಅಗ್ನಿ-2 ಕ್ಷಿಪಣಿ ಎರಡು ಹಂತದ ಘನ ಬ್ಯಾಲಿಸ್ಟಿಕ್ ಕ್ಷಿಪಣಿ ಚಾಲಿತವನ್ನು ಒಳಗೊಂಡಿದೆ.

ಇನ್ನು ಈ ಅಗ್ನಿ-2 ಬ್ಯಾಲಿಸ್ಟಿಕ್ ಕ್ಷಿಪಣಿಯ ಉಡಾವಣೆ ಸಂದರ್ಭದಲ್ಲಿ 17 ಟನ್ ತೂಕವನ್ನು ಹೊಂದಿದ್ದು 1000 ಕೆಜಿ ಭಾರವನ್ನು 2,000 ಕಿಲೋ ಮೀಟರ್ ವರೆಗೆ ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲದೇ, ಅಗ್ನಿ ಸರಣಿ ಕ್ಷಿಪಣಿಗಳನ್ನು ಡಿಆರ್ ಡಿಒ ಅಭಿವೃದ್ಧಿಪಡಿಸಿದ್ದು ಪರಮಾಣು ಶಸ್ತ್ರಸಜ್ಜಿತ ನೆರೆ ರಾಷ್ಟ್ರಗಳ ವಿರುದ್ಧ ಭಾರತದ ಅತ್ಯಂತ ಅತ್ಯಾಧುನಿಕ ಶಸ್ತ್ರಾಸ್ತ್ರವಾಗಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಪರಮಾಣು ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮಥ್ರ್ಯವಿರುವ ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿರುವುದು ಹೆಮ್ಮೆಯ ವಿಚಾರವಾಗಿದೆ.

ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿಯು ಒಂದು ಸಾವಿರ ಕೆಜಿ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಸಾಮಥ್ರ್ಯವೂ ಈ ಪ್ರಬಲವಾದ ಕ್ಷಿಪಣಿಗಿದ್ದು, ಸಂಚಾರಿ ಸಾಮಥ್ರ್ಯ ಇರುವ ಡಬ್ಬಿಯಾಕಾರದ ಕ್ಯಾನಿಸ್ಟರ್ ನಲ್ಲಿಟ್ಟು ಉಡಾಯಿಸುವಂಥ ಮಾದರಿಯ ಕ್ಷಿಪಣಿಯಾಗಿದೆ. ಅಷ್ಟೇ ಅಲ್ಲದೇ ಈ ಉಡಾವಣೆಗೆ ಸ್ಥಿರ ವೇದಿಕೆಯೇ ಬೇಕೆಂದೇನೂ ಇಲ್ಲ. ಬದಲಾಗಿ, ಮೊಬೈಲ್ ಲಾಂಚರ್ ವಾಹನ ಬಳಕೆ ಮಾಡಿ ಈ ಕ್ಷಿಪಣಿಯನ್ನು ದೇಶದ ಯಾವುದೇ ಮೂಲೆಯಿಂದಾದರೂ ತ್ವರಿತವಾಗಿ ಉಡಾಯಿಸಬಹುದಾಗಿದೆ.

ಇನ್ನು ಕ್ಷಿಪಣಿಯ ಕ್ಯಾನಿಸ್ಟರ್ ವ್ಯವಸ್ಥೆಯೂ ವೈರಿಗಳ ಕಣ್ತಪ್ಪಿಸಲು ಸಹಾಕಾರಿಯಾಗುತ್ತದೆ. ಇದೇ ಕಾರಣಕ್ಕಾಗಿ ಭಾರತದ ಈ ಪ್ರಬಲ ಕ್ಷಿಪಣಿಯೂ ಇದೀಗ ಚೀನಾ ಮತ್ತು ಪಾಕಿಸ್ತಾನ ದೇಶಗಳ ತಲೆನೋವಿಗೆ ಕಾರಣವಾಗಿರುವುದಂತೂ ಅಕ್ಷರಶಃ ನಿಜ!!

“ಒಡಿಶಾದ ಬೆಂಗಾಳಕೊಲ್ಲಿ ಭಾಗದಿಂದ ಭಾರತವು ತನ್ನ ಪರಮಾಣು ಸಾಮರ್ಥ್ಯದ ಖಂಡಾಂತರ ಅಗ್ನಿ -5 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಕ್ಷಿಪಣಿ 5,000 ಕಿ.ಮೀ.ಗಳ ವರೆಗೂ ತಲುಪಿ ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ” ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಈ ಅಗ್ನಿ-5 ಕ್ಷಿಪಣಿಯ ಐದನೇ ಪರೀಕ್ಷೆ ಇದಾಗಿದ್ದು, ನಾಲ್ಕನೇ ಪರೀಕ್ಷೆಯನ್ನು 2016ರ ಡಿಸೆಂಬರ್ 26ರಂದು ನಡೆಸಲಾಗಿತ್ತು. ಈ ಎಲ್ಲಾ ನಾಲ್ಕು ಪರೀಕ್ಷೆಗಳು ಯಶಸ್ವಿಯಾಗಿವೆಯಲ್ಲದೇ, ಈ ಹಿಂದೆ 2012, 2013, 2015 ಮತ್ತು 2016ರಲ್ಲಿ ಒಟ್ಟು ನಾಲ್ಕು ಬಾರಿ ಅಗ್ನಿ-5 ಕ್ಷಿಪಣಿಯ ಮೂಲ ಆವೃತ್ತಿಯ ಪರೀಕ್ಷಾರ್ಥ ಉಡಾವಣೆ ಮಾಡಲಾಗಿತ್ತು. ಈ ನಾಲ್ಕು ಪರೀಕ್ಷೆಯೂ ಅಭೂತಪೂರ್ವ ಯಶಸ್ಸನ್ನು ಸಾಧಿಸಿತ್ತು.

ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿ ಆರ್ ಡಿ ಒ) ಈ ಪ್ರಬಲ ಅಣ್ವಸ್ತ್ರ ಕ್ಷಿಪಣಿಯನ್ನು ಸಿದ್ದಪಡಿಸಿದ್ದು, ಪಾಕಿಸ್ತಾನದ ಬಹುತೇಕ ಪ್ರದೇಶಗಳು ಒಳಗೊಂಡಂತೆ ಉತ್ತರ ಚೀನಾದ ಯಾವುದೇ ಭಾಗ ಮತ್ತು ಪಶ್ಚಿಮದಲ್ಲಿ ಯುರೋಪ್‍ನ ಕೊನೆಯ ಅಂಚಿನವರೆಗೂ ಕ್ಷಿಪಣಿಯು ತಲುಪುವ ಸಾಮಥ್ರ್ಯ ಹೊಂದಿದೆ.

ಅಗ್ನಿ-5 ಮೂರು ಸ್ತರದ ಕ್ಷಿಪಣಿಯಾಗಿದ್ದು, 17 ಮೀ. ಉದ್ದ ಮತ್ತು 1.5 ಟನ್ ಭಾರ ಹೊಂದಿದೆ. ಮೊದಲನೇ ಸ್ತರದ ರಾಕೆಟ್ ಎಂಜಿನ್, ಕ್ಷಿಪಣಿಯನ್ನು 40 ಕಿ.ಮೀ ಎತ್ತರಕ್ಕೆ ಒಯ್ದರೆ, ಎರಡನೇ ಸ್ತರವು ಕ್ಷಿಪಣಿಯನ್ನು 150 ಕಿ.ಮೀ ಎತ್ತರಕ್ಕೆ ನೂಕುತ್ತದೆ. 3ನೇ ಸ್ತರವು ಭೂಮಿಗಿಂತ 300 ಕಿ.ಮೀ ಎತ್ತರಕ್ಕೆ ಕೊಂಡೊಯ್ಯುತ್ತದೆ. ಅಂತಿಮವಾಗಿ ಸುಮಾರು 800 ಕಿ.ಮೀ ಎತ್ತರಕ್ಕೆ ಕ್ಷಿಪಣಿ ತಲುಪುತ್ತದೆ.

ಮೂರು ಹಂತದ, 17 ಮೀಟರ್ ಎತ್ತರದ, ಎರಡು ಮೀಟರ್ ವಿಶಾಲವಾದ ಸುಮಾರು 1.5 ಟನ್ ಪರಮಾಣು ಸಿಡಿತಲೆ ಸಾಗಿಸುವ ಸಾಮರ್ಥ್ಯವನ್ನು ಹೊಂದಿರುವ ಈ ಕ್ಷಿಪಣಿಯೂ ಭಾರತದ ಪ್ರಬಲ ಕ್ಷಿಪಣಿಗಳಲ್ಲಿ ಒಂದಾಗಿದೆ. ಇದನ್ನು ಒಡಿಶಾದ ಕರಾವಳಿಯ ಅಬ್ದುಲ್ ಕಲಾಮ್ ದ್ವೀಪದಿಂದ ಕ್ಷಿಪಣಿಯನ್ನು ಪರೀಕ್ಷಿಸಲಾಗಿದ್ದು, ಈ ಹಿಂದೆ ಅಗ್ನಿ -5 ಕ್ಷಿಪಣಿಯನ್ನು ಡಿಸೆಂಬರ್ 26, 2016 ರಂದು ಪರೀಕ್ಷಿಸಲಾಗಿತ್ತು ಎಂದು ಹೇಳಲಾಗಿದೆ. ಈ ಮೂಲಕ ಭಾರತ ದೇಶವು ಯುಎಸ್, ಬ್ರಿಟನ್, ರಷ್ಯಾ, ಚೀನಾ ಮತ್ತು ಫ್ರಾನ್ಸ್ ದಂತಹ ರಾಷ್ಟ್ರಗಳ ಸೂಪರ್-ಎಕ್ಸಕ್ಲೂಸಿವ್ ಕ್ಲಬ್ ನ್ನು ಸೇರಿಕೊಂಡಿರುವುದು ಹೆಮ್ಮೆಯ ವಿಚಾರ..

– ಅಲೋಖಾ

Tags

Related Articles

Close