ಪ್ರಚಲಿತ

ಭಾರತದ ಮುಸ್ಲಿಮರಿಗೆ ಅಭದ್ರತೆ ಕಾಡುತ್ತಿದೆ ಎಂದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮಾಡಿರುವ ಘನಾಂದಾರಿ ಕೆಲಸವೇನು ಗೊತ್ತಾ?

ಭಾರತದಲ್ಲಿನ ಮುಸ್ಲಿಮರಿಗೆ ಅಭದ್ರತೆಯ ಭಾವನೆ ಕಾಡುತ್ತಿದೆ ಎಂದು ಹೇಳಿಕೆ ನೀಡಿದ್ದ ಉಪರಾಷ್ಟ್ರಪತಿಯಾಗಿದ್ದ ಹಮೀದ್ ಅನ್ಸಾರಿ ತಾನೆಂಥವನು ಎಂಬುವುದನ್ನು ಕೊನೆಗೂ ತೋರಿಸಿಕೊಟ್ಟಿದ್ದಾರೆ. ಘನವೆತ್ತ ಉಪರಾಷ್ಟ್ರಪತಿ ಹುದ್ದೆಯನ್ನು ನಿಭಾಯಿಸಿದ್ದ ಹಮೀದ್ ಅನ್ಸಾರಿ ಮಾಡಿರುವ ಘನಾಂದಾರಿ ಕೆಲಸದಿಂದಾಗಿ ತನ್ನ ಮತಾಂಧ ಮುಖವಾಡವನ್ನು ಸಮಾಜದ ಮುಂದೆ ಕಳಚಿಕೊಂಡಿದ್ದಾರೆ.

ಅಷ್ಟಕ್ಕೂ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮಾಡಿರುವ ಘನಾಂದಾರಿ ಕೆಲಸವಾದ್ರೂ ಏನು ಗೊತ್ತಾ…?

ಕೇರಳದ ಕೋಝಿಕ್ಕೊಡೆಯಲ್ಲಿ ತೀವ್ರವಾದಿ ಸಂಘಟನೆಯಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹಮೀದ್ ಅನ್ಸಾರಿ ಸ್ವತಃ ಪಾಲ್ಗೊಂಡಿದ್ದರು ಎಂದು ವರದಿಗಳು ತಿಳಿಸುತ್ತವೆ.

ಕಳೆದ ಶನಿವಾರ ಕೇರಳದ ಕೋಝಿಕ್ಕೊಡೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಹಿಳಾ ವಿಭಾಗವಾಗಿರುವ ನ್ಯಾಷನಲ್ ವುಮೆನ್ಸ್ ಫ್ರಂಟ್(ಎನ್‍ಡಬ್ಲ್ಯುಎಫ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನ್ಸಾರಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಕೇರಳದ ಪಿಎಫ್‍ಐ ರಾಜ್ಯ ಅಧ್ಯಕ್ಷ ಇ. ಅಬೂಬಕ್ಕರ್, ಎನ್‍ಡಬ್ಲ್ಯೂಎಫ್ ಅಧ್ಯಕ್ಷೆ ಜೈನಾಬಾ ಕೂಡಾ ಭಾಗವಹಿಸಿದ್ದರು ಎಂದು ಕೇರಳದ ಬಿಜೆಪಿ ಯುವಮೋರ್ಛಾ ರಾಜ್ಯಾಧ್ಯಕ್ಷ ಕೆ.ಪಿ. ಪ್ರಕಾಶ್ ಆರೋಪಿಸಿದ್ದು, ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಉಗ್ರ ಸಂಘಟನೆಯ ಜೊತೆ ನಂಟು ಹೊಂದಿರುವ ಪಿಎಫ್‍ಐ ಕಾರ್ಯಕ್ರಮದಲ್ಲಿ ಅನ್ಸಾರಿ ಭಾಗವಹಿಸಿದ್ದು ಯಾಕೆ ಅಥವಾ ಕಾರ್ಯಕ್ರಮದಲ್ಲಿ ಪಿಎಫ್‍ಐ ಸಂಘಟನೆಯನ್ನು ಪಾಲುದಾರನನ್ನಾಗಿ ಆಯ್ಕೆ ಮಾಡಿದ್ದು ಯಾಕೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಮತಾಂಧ ಉಗ್ರ ಸಂಘಟನೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹಮೀದ್ ಅನ್ಸಾರಿ ತಾನೊಬ್ಬ ಮತೀಯ ಭಾವನೆಯನ್ನು ಹೊಂದಿರುವ ವ್ಯಕ್ತಿ ಎಂದು ತೋರಿಸಿಕೊಟ್ಟಿದ್ದಾರೆ. ಉಪರಾಷ್ಟ್ರಪತಿ ಹುದ್ದೆಯನ್ನು ತ್ಯಜಿಸಿ ಮಾತಾಡಿದ ಅನ್ಸಾರಿ ದೇಶದಲ್ಲಿ ಮುಸ್ಲಿಮರಿಗೆ ಅಭದ್ರತಾ ಭಾವನೆ ಕಾಡುತ್ತಿದೆ ಎಂದು ಹೇಳಿದ್ದರು. ಆದರೆ ಇಸ್ಲಾಂ ರಾಷ್ಟ್ರಗಳಲ್ಲಿ ಮುಸ್ಲಿಮರ ಸ್ಥಿತಿ ಏನಾಗಿದೆ, ಭಾರತದಲ್ಲಿ ಮುಸ್ಲಿಮರು ಎಷ್ಟು ಸುರಕ್ಷತೆಯಲ್ಲಿ ಇದ್ದಾರೆ ಎಂದು ತಿಳಿಯಲು ಹೋಗದ ಅನ್ಸಾರಿ ಮುಸ್ಲಿಮರನ್ನು ಎತ್ತಿಕಟ್ಟುವ ಕೆಲಸದಲ್ಲಿ ತೊಡಗಿದ್ದರು. ಜೊತೆಗೆ ಭಾರತದ ಮುಸ್ಲಿಮರು ಅಭದ್ರತೆಯಲ್ಲಿದ್ದಾರೆಂದು ಇಡೀ ಜಗತ್ತಿಗೆ ತಪ್ಪು ಮಾಹಿತಿಯನ್ನು ರವಾನಿಸಿದ್ದರು.

ಅಷ್ಟಕ್ಕೂ ಹಮೀದ್ ಅನ್ಸಾರಿಗೆ ಪಿಎಫ್‍ಐ ಬಗ್ಗೆ ಗೊತ್ತಿಲ್ಲವೇ? ಅಥವಾ ಗೊತ್ತಿದ್ದೂ ಗೊತ್ತಿದ್ದು ಆ ಸಂಘಟನೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರೆ ಅನ್ಸಾರಿಯವರ ಮೆಂಟಾಲಿಟಿ ಹೇಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಪಿಎಫ್‍ಐ ಅಜೆಂಡಾದ ಏನಿದೆ ಎಂದು ತಿಳಿದರೆ ಅನ್ಸಾರಿಯಂಥಾ ವ್ಯಕ್ತಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಎಷ್ಟು ದೊಡ್ಡ ಅಕ್ಷಮ್ಯ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎನ್ನುವ ಭಯೋತ್ಪಾದಕ ಸಂಘಟನೆ ಭಾರತದಲ್ಲಿ ಇಸ್ಲಾಂ ಅಜೆಂಡಾವನ್ನು ಇಟ್ಟುಕೊಂಡು ಜಿಹಾದ್ ಸಾರಿದೆ. ಈಗಾಗಲೇ
ನೂರಾರು ಮಂದಿ ಹಿಂದೂಗಳ ರಕ್ತ ಕುಡಿದ ಈ ಸಂಘಟನೆಯ ಮೇಲೆ ಕೊನೆಗೂ ನಿಷೇಧದ ತೂಗುಗತ್ತಿ ನೇತಾಡುತ್ತಿದೆ. ನೂರಾರು ಹಿಂದೂ ಕಾರ್ಯಕರ್ತರನ್ನು
ಕೊಂದು, ದೇಶದಲ್ಲಿ ದೊಂಬಿ ಎಬ್ಬಿಸುವ ಪಿಎಫ್‍ಐ ಭಯೋತ್ಪಾದಕ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಮಾಹಿತಿ ಇರುವುದರಿಂದ ಗೃಹಸಚಿವಾಲಯ ಕೊನೆಗೂ ಈ ನಿರ್ಧಾರಕ್ಕೆ ಬಂದಿದೆ. ಪಿಎಫ್‍ಐ ಸಂಘಟನೆ ಭಾರತದಲ್ಲಿ ಭಯೋತ್ಪಾದನೆ ಮಾಡಲು ಬಾಂಬ್‍ಗಳ ತಯಾರಿ, ಟೆರರ್ ಕ್ಯಾಂಪ್‍ಗಳ ನಿರ್ವಹಣೆ ಮುಂತಾದ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಬಗ್ಗೆ ಎನ್‍ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ. ಅಲ್ಲದೆ ಲವ್ ಜಿಹಾದ್ ಮುಖಾಂತರ ಹಿಂದೂ ಯುವತಿಯರನ್ನು ಮತಾಂತರ ನಡೆಸಿದ್ದಲ್ಲದೆ, ಮತಾಂತರಗೊಂಡ ಯುವತಿಯರನ್ನು ಆತ್ಮಹತ್ಯಾದಳಕ್ಕೆ ನೂಕಿದ ಮಾಹಿತಿಯನ್ನು ಐಎನ್‍ಎ ಸಂಗ್ರಹಿಸಿದೆ.

`ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ’ಯಡಿಯಲ್ಲಿ ಈ ಸಂಘಟನೆ ನಿಷೇಧಕ್ಕೆ ಅರ್ಹವೆಂದು ಎನ್‍ಐಎ ವರದಿಯಲ್ಲಿ ಶಿಫಾರಸು ಮಾಡಿರುವುದಾಗಿ
ಗೃಹಸಚಿವಾಲಯ ತಿಳಿಸಿದೆ. ಪಿಎಫ್‍ಐ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದಕ್ಕೆ ಬೆಂಗಳೂರಿನಲ್ಲಿ ನಡೆದ ಆರೆಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ, ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಪೆÇ್ರಫೆಸರ್ ಕೈ ಕಡಿದಿರುವುದು, ಕಣ್ಣೂರಿನಲ್ಲಿ ಸ್ಫೋಟಕ ತಯಾರಿ ತರಬೇತಿ ಶಿಬಿರಗಳಲ್ಲಿ ಭಾಗಿಯಾಗಿರುವ ಪ್ರಕರಣಗಳನ್ನು ಎನ್‍ಐಎ ಪ್ರಧಾನವಾಗಿ ಪರಿಗಣಿಸಿದೆ. ಯಾಕೆಂದರೆ ಕಣ್ಣೂರಿನಲ್ಲಿ ಕಚ್ಚಾ ಬಾಂಬ್ ಹಾಗೂ ಐಇಡಿ ತಯಾರಿಕೆಗೆ ಬಳಸುವ ವಸ್ತುಗಳನ್ನು ವಶ ಪಡೆದುಕೊಂಡಿದ್ದರು. ಜೊತೆಗೆ `ಇಸ್ಲಾಮಿಕ್ ಸ್ಟೇಟ್ ಅಲ್‍ಹಿಂದ್’ ಎಂಬ ಮತ್ತೊಂದು ಸಂಘಟನೆಯ ಜೊತೆಗೂಡಿ ದಕ್ಷಿಣ ಭಾರತದಲ್ಲಿ ಉಗ್ರ ಕೃತ್ಯಗಳನ್ನು ನಡೆಸಲು ಪಿಎಫ್‍ಐ ಸಂಚು ರೂಪಿಸಿದ್ದನ್ನು ಎನ್‍ಐಎ ಉಗ್ರ ಕೃತ್ಯ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ದಕ್ಷಿಣ ಭಾರತದಲ್ಲಿ ಪಿಎಫ್‍ಐ ಅನೇಕ ಉಗ್ರ ಕೃತ್ಯಗಳಲ್ಲಿ ಪಾಲ್ಗೊಂಡಿರುವುದಕ್ಕೆ ಗೃಹಸಚಿವಾಲಯವು ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದೆ. ಆದ್ದರಿಂದ ಇಂತಹಾ ಉಗ್ರ ಸಂಘಟನೆಯನ್ನು ನಿಷೇಧಿಸುವ ನಿರ್ಧಾರಕ್ಕೆ ಗೃಹಸಚಿವಾಲಯ ಬಂದಿದೆ.

ಸಿಮಿ ಅಥವಾ ಸ್ಟುಂಡೆಂಟ್ಸ್ ಇಸ್ಲಾಮಿಕ್ ಮೂವ್‍ಮೆಂಟ್ ಆಫ್ ಇಂಡಿಯಾ ದೇಶದಲ್ಲಿ ಹಲವಾರು ಉಗ್ರ ಚಟುವಟಿಕೆಗಳನ್ನು ನಡೆಸಿದ ಬಳಿಕ ಯುಪಿಎ ಸರಕಾರ
ಕೊನೆಗೂ ಅದನ್ನು ಉಗ್ರ ಸಂಘಟನೆಯೆಂದು ನಿಷೇಧಿಸಿತು. ಇದರಿಂದ ವ್ಯಾಕುಲತೆಗೊಳಗಾದ ಸಿಮಿ, ಇದೇ ಅಜೆಂಡಾವನ್ನು ಹೊಂದಿರುವ ಮತ್ತೊಂದು ತೀವ್ರಗಾಮಿ ಸಂಘಟನೆಯನ್ನು ಸ್ಥಾಪಿಸಬೇಕಿತ್ತು. ಅಲ್ಲದೆ ಇಸ್ಲಾಮೀಕರಣ ನಡೆಸಲು ಸಿಮಿಗಿಂತ ವಿಭಿನ್ನವಾದ ಸಂಘಟನೆಯೊಂದನ್ನು ಸ್ಥಾಪಿಸಲು ಉದ್ದೇಶಿಸಲಾಯಿತು. 2006ರ ಡಿಸೆಂಬರ್ 19ರಂದು ಬೆಂಗಳೂರಲ್ಲಿ ನ್ಯಾಷನಲ್ ಡೆಮಾಕ್ರಾಟಿಕ್ ಫ್ರಂಟ್, ಮಣಿತ ನೀತಿ ಪಸರೈ, ಫೆÇರಮ್ ಫಾರ್ ಡಿಗ್ನಿಟಿ ಆಫ್ ಕರ್ನಾಟಕ ಎಂಬ ಮೂರು ಸಂಘಟನೆಗಳು ಸಭೆಯೊಂದನ್ನು ನಡೆಸಿ ಪಿಎಫ್‍ಐ ಸಂಘಟನೆಯನ್ನು ಹುಟ್ಟುಹಾಕಿದವು. ಆರಂಭದಲ್ಲಿ ಕೆಎಫ್‍ಡಿ ಎಂಬ ಹೆಸರಿತ್ತು. ಸಿಮಿಯ ರಾಜ್ಯ ಕಾರ್ಯದರ್ಶಿಯಾಗಿದ್ದ ಅಬ್ದುಲ್ ಹಮೀದ್ ಪಿಎಫ್‍ಐಯ ರಾಜ್ಯ ಕಾರ್ಯದರ್ಶಿಯಾದ. ಸಿಮಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ಅಬ್ದುಲ್ ರೆಹಮಾನ್ ಪಿಎಫ್‍ಐಯ ರಾಷ್ಟ್ರ ಅಧ್ಯಕ್ಷನಾದ.

ಪಿಎಫ್‍ಐ ಆರಂಭಗೊಂಡ ಬಳಿಕ ಅನೇಕ ಕೊಲೆ, ಕೋಮುಗಲಭೆ ನಡೆಯಿತು. ಇದುವರೆಗೆ ಸುಮಾರು 75 ಮಂದಿಯನ್ನು ಪಿಎಫ್‍ಐ ಕಾರ್ಯಕರ್ತರು ಕೊಂದಿದ್ದಾರೆ. ಕೋಮುಗಲಭೆ ಎಬ್ಬಸಿದ 106ಕ್ಕಿಂತಲೂ ಅಧಿಕ ಪ್ರಕರಣಗಳು ದಾಖಲಾಗಿದೆ. ಸ್ವಾತಂತ್ರ್ಯ ದಿನದಂದು ಕೇರಳದಲ್ಲಿ ಪಥಸಂಚಲನ ಮಾಡಬೇಕೆಂದು ಅವಕಾಶ ಕೋರಿದ್ದ ಪಿಎಫ್‍ಐಗೆ ಅಂದಿನ ಕೇರಳ ಸರಕಾರ ಅವಕಾಶ ಕೊಟ್ಟಿರಲಿಲ್ಲ. ಈ ಸಂಘಟನೆಯಿಂದ ಅಶಾಂತಿ ಉಂಟಾಗಬಹುದೆಂದು ಕೋರ್ಟ್ ಇದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಆದರೆ ಕರ್ನಾಟಕದಲ್ಲಿ ಅಲ್ಲಲ್ಲಿ ಏಕತಾ ಯಾತ್ರೆಯನ್ನು ಕೈಗೊಂಡಿತು. ಶಿವಪ್ಪನಾಯಕ ಮಾರುಕಟ್ಟೆ ಮತ್ತು ಗಾಂಧಿಬಜಾರ್ನಲ್ಲಿ ಭಾರೀ ಗಲಾಟೆ ನಡೆಯಿತು. ಘಟನೆಯಲ್ಲಿ ವಿಶ್ವನಾಥ್ ಎಂಬವರು ತೀವ್ರವಾಗಿ ಗಾಯಗೊಂಡು ಮೃತಪಟ್ಟರು. ನೂರಾರು ಮಂದಿ ಮಾರಣಾಂತಿಕವಾಗಿ ಗಾಯಗೊಂಡು ಆಸ್ಪತ್ರೆಪಾಲಾದರು. ಇಷ್ಟೆಲ್ಲಾ ಗಲಾಟೆ ನಡೆದರೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಿಎಫ್‍ಐ
ಮುಖಂಡರ ಮೇಲಿದ್ದ ಕೇಸನ್ನು ವಾಪಸ್ ಪಡೆದು ಬಂಧಮುಕ್ತಗೊಳಿಸಿದ. ಇದರಿಂದ ಮತ್ತಷ್ಟು ಮಂದಿ ಹಿಂದೂಗಳ ಕೊಲೆಗೆ ಪರೋಕ್ಷ ನಾಂದಿ ಹಾಡಿದ ಈ ಸಿದ್ದು!!!

ಮೂಡಬಿದ್ರೆಯಲ್ಲಿ 2015ರ ಅಕ್ಟೋಬರ್ 9ರಂದು ನಡೆದ ಪ್ರಶಾಂತ್ ಪೂಜಾರಿ ಹತ್ಯೆಯಲ್ಲಿ ಪಿಎಫ್‍ಐ ಕಾರ್ಯಕರ್ತರು ನೇರವಾಗಿ ಪಾಲ್ಗೊಂಡಿದ್ದರು. ಮಹಮ್ಮದ್
ಹನೀಫ್ ಅದ್ಯಪಾಡಿ, ಮಹಮ್ಮದ್ ಮುಸ್ತಾಫ ಬಜ್ಪೆ, ಮಹಮ್ಮದ್ ಮುಸ್ತಾಫ ಕಾವೂರು, ಕಬೀರ್ ಕಂದಾವರ, ಮಹಮ್ಮದ್ ಶರೀಫ್ ತೋಡಾರು, ಲಿಯಾಕತ್ ಮತ್ತು ಬದ್ರುದುದ್ದೀನ್ ಗಂಟಾಲ್ಕಟ್ಟೆ ಇವರನ್ನು ಪೆÇಲೀಸರು ಬಂಧಿಸಿದ್ದರು. ಆದರೆ ಆರೋಪಿಗಳ ಪೈಕಿ ಮುಸ್ತಫಾ ಎನ್ನುವಾತ ಮೈಸೂರು ಜೈಲಿನಲ್ಲಿ ಕೊಲೆಯಾಗಿದ್ದ.

ಕಳೆದ ವರ್ಷ ಮಾರ್ಚ್‍ನಲ್ಲಿ ಮೈಸೂರಿನಲ್ಲಿ ಪಿಎಫ್‍ಐಯಿಂದ ಕೋಮುಗಲಭೆ ನಡೆದಿತ್ತು. ಮೈಸೂರಿನ ಕ್ಯಾತಮಾರನಹಳ್ಳಿಯ ಭಜರಂಗದಳದ ಕೆ. ರಾಜು ಎಂಬವರ ಕೊಲೆಯಲ್ಲಿ ಒಟ್ಟು 8 ಪಿಎಫ್‍ಐ ಕಾರ್ಯಕರ್ತರು ಶಾಮೀಲಾಗಿದ್ದರು. ರಾಜು ಕೊಲೆಯಲ್ಲಿ ಅಬಿದ್ ಪಾಶಾ ಎನ್ನುವ ಕಾರ್ಪೆಂಟರ್ ಪಿಎಫ್‍ಐ ಕಾರ್ಯಕರ್ತನಾಗಿದ್ದು ಅನೇಕ ಕೊಲೆಯಲ್ಲಿ ಶಾಮೀಲಾಗಿದ್ದಾನೆ.

ಅಬಿದ್ ಬಾಶಾನ 2011ರಲ್ಲಿ ಮ್ಯಾನೇಜ್‍ಮೆಂಟ್‍ನ ವಿದ್ಯಾರ್ಥಿಗಳಾದ ಅವಳಿ ವಿಘ್ನೇಷ್ ಮತ್ತು ಸುದೀಂದ್ರ ಅಪಹರಿಸಿ ಕೊಲೆ ನಡೆಸಿದ ಆರೋಪವಿದೆ.
ಭಜರಂಗದಳದ ಕಾರ್ಯಕರ್ತ ಸಲೂನ್ ಮಾಲಕ ಶಶಿಕುಮಾರ್ ಕೊಲೆ ಮಾಡಲಾಗಿತ್ತು. ಈತನಿಗೆ ಮುಸ್ಲಿಂ ಹುಡುಗಿ ಜೊತೆ ಸಂಬಂಧ ಇದೆ ಎಂಬ ಆರೋಪದಲ್ಲಿ ಬಲಿ ಪಡೆಯಲಾಗಿದೆ. ಇವರಿದ್ದ ಸಲೂನ್‍ಗೆ ದಾಳಿ ನಡೆಸಿದ ಪಿಎಫ್‍ಐ ಕಾರ್ಯಕರ್ತರ ಹಂತಕ ಪಡೆ ಕೊಲೆ ನಡೆಸಿತ್ತು. ವಿಕ್ರಾಂತ್ ಟೈರ್ ಮಾಲಕ ಅಲ್ಲದೆ ಬಿಜೆಪಿಯ ಆನಂದ್ ಪೈ ಮತ್ತು ಸಹೋದ್ಯೋಗಿ ರಮೇಶ್ ಎಂಬವರ ಮೇಲೆ ದಾಳಿ ನಡೆಸಿದ್ದು, ಈ ಪೈಕಿ ರಮೇಶ್ ಮೃತಪಟ್ಟಿದ್ದಾರೆ. 2009ರಲ್ಲಿ ಪಾಶಾ ಬಿಜೆಪಿ ಯುವಮೋರ್ಛಾದ ಕ್ಯಾತಮಾರನಹಳ್ಳಿ ನಿವಾಸಿ ವಿ. ಗಿರಿಧರ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಹೋದರರ ಮೇಲೆ ದಾಳಿ ನಡೆದಿದ್ದು ಇದರಲ್ಲಿ ಹರೀಶ್ ಎಂ. ಎಂಬಾತ ಕೊಲೆಯಾಗಿದ್ದ. ಮುಸ್ಲಿಂ ಮಹಿಳೆ ಜೊತೆ ಸಂಬಂಧ ಇದೆ ಎಂದು ಹುಣ್ಸೂರಿನ ಹಾಲು ತರುವ ವ್ಯಕ್ತಿಯನ್ನು ಸಿಗಿದುಹಾಕಲಾಗಿತ್ತು. ಅಖಂಡ ಭಾರತ ಸಂಕಲ್ಪ ಯಾತ್ರೆ ಮುಗಿಸಿಬರುತ್ತಿದ್ದ ಪ್ರವೀಣ್ ಪೂಜಾರಿ ಎಂಬವರನ್ನು ಕೊಡಗಿನ ಕುಶಾಲನಗರದಲ್ಲಿ ಕೊಚ್ಚಿ ಕೊಚ್ಚಿ ಕೊಂದಿದ್ದಾರೆ.

2011ರಲ್ಲಿ ನಡೆದ ವಿಘ್ನೇಶ್ ಮತ್ತು ಸುಧೀಂದ್ರ ಕೊಲೆ ತನಿಖೆ ನಡೆಸಿದಾಗ ಪಾಶಾ ಕೆಎಫ್‍ಡಿಯ ಸಕ್ರಿಯ ಕಾರ್ಯಕರ್ತನಾಗಿದ್ದು ಆ ಬಳಿಕ ಪಿಎಫ್‍ಐಯಲ್ಲಿ
ಸಕ್ರಿಯವಾಗಿ ತೊಡಗಿಕೊಂಡವನೆಂದು ಬಯಲಾಗಿತ್ತು. ಹಿಂದೂ ಹುಡುಗನ ಜೊತೆ ಸಂಬಂಧ ಇದೆ ಎಂದು ಮುಸ್ಲಿಂ ಹುಡುಗಿಯನ್ನು ಕೊಲೆ ನಡೆಸಿದ ಘಟನೆಯೂ
ನಡೆದಿದೆ. ಇದರಲ್ಲಿಯೂ ಪಾಶ ಇದ್ದಾನೆ. ಪಾಶಾ ಪಿಎಫ್‍ಐ ಕಾರ್ಯಕರ್ತನಷ್ಟೇ ಅಲ್ಲದೆ ಈತನಿಗೆ ಭೂಗತ ಲೋಕ, ಭಯೋತ್ಪಾದಕ ಸಂಘಟನೆಯ ಜೊತೆಯೂ
ನಂಟಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ನಡೆದ ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿ ಪಿಎಫ್‍ಐ ಮುಖಂಡರಾದ ಅಬ್ದುಲ್ ಶಾಫಿ, ಖಲೀಲುಲ್ಲಾ, ರಿಯಾಝ್ ಪಾರಂಕಿ, ಸಿದ್ದಿಕ್ ನೆಲ್ಯಾಡಿ, ಖಲೀಮ್ ಅಲಿಯಾಸ್ ಖಮೀಲುಲ್ಲಾ, ರಹೀಂ ಅಲಾಡಿ, ಸಿದ್ದಿಕ್ ಪಾಶಾ, ಸಲೇನಾ ಅಲಿಯಾಸ್ ಸ್ವಲೇಹ್ ಮುಂತಾದವರನ್ನು ಬಂಧಿಸಲಾಗಿದೆ. ಜುಲೈ 4ರಂದು ಹಂತಕರ ಪಡೆಯೊಂದು ಶರತ್ ಕೆಲಸ ಮಾಡುತ್ತಿದ್ದ ಅಂಗಡಿಗೆ ಅಟಕಾಯಿಸಿ ಗಂಭೀರವಾಗಿ ಹಲ್ಲೆ ನಡೆಸಿ ಪರಾರಿಯಾಗಿತ್ತು. ಆದರೆ ಎರಡು ದಿನಗಳ ಬಳಿಕ ಶರತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಂಧಿತರೆಲ್ಲರೂ ಪಿಎಫ್‍ಐ ಕಾರ್ಯಕರ್ತರೆಂದು ಬಿಡಿಸಿ ಹೇಳಬೇಕಾಗಿಲ್ಲ.

ಆದರೆ ವಿಪರ್ಯಾಸವೆಂದರೆ ಅನ್ಸಾರಿಯವರು ಇದೇ ಸಂಘಟನೆ ವಹಿಸಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ….!!!

-ಚೇಕಿತಾನ

source: The Hindu – Attending PFI Prog

Hamid Ansari – PFI Prog

Tags

Related Articles

Close