ಅಂಕಣಇತಿಹಾಸದೇಶಪ್ರಚಲಿತ

ಭಾರತ ಅಖಂಡವಾಗಿಯೇ ಉಳಿಯಲಿ ಜಿನ್ನಾ ಸಾಹೇಬರೇ! ನೀವೇ ಪ್ರಥಮ ಪ್ರಧಾನಿಯಾಗಿ ಬಿಡಿ – ಪಿತಾಮಹನ ರಾಷ್ಟ್ರಪ್ರೇಮವಿದು !!!

ಈ ಗ್ರಂಥವನ್ನೆದಷ್ಟು ಮಂದಿ ಓದಿದ್ದೀರೋ ಅರಿಯದು. ಆದರೆ ನೆನಪಿರಲಿ ಈ ಪುಸ್ತಕ ಅನೇಕ ಅರಬ್ಬೀ ಮುಸ್ಲಿಂ ದೇಶಗಳಲ್ಲಿ ನಿಷೇಧವೆನ್ನುತ್ತಾರೆ. 21 ಸುಂದರ, ಭಯಾನಕ ಅಧ್ಯಾಯಗಳ, 4 ಅನುಬಂಧಗಳ, ಗ್ರಂಥಸೂಚಿಯನ್ನು ಒಳಗೊಂಡ ಸಂಶೋಧನಾತ್ಮಕ ಗ್ರಂಥವಿದು. ಆ ಪುಸ್ತಕ‌ ಯಾವುದು ಗೊತ್ತೇ?? “The Koran and the Kafir” – ಬರೆದವರು ಎ ಘೋಷ್. ಅಂತರ್ಜಾಲದಲ್ಲಿಯೂ ಇದು ಲಭ್ಯವಿದೆ. ಭಾರತದಲ್ಲಿ ಈ ಪುಸ್ತಕದ ಪ್ರತಿಗಳು ದೊರೆಯುವುದು ಅಪರೂಪ. ಅಷ್ಟಕ್ಕೂ ಆ ಪುಸ್ತಕದ‌ ಕುರಿತಾಗಿ ಯಾಕೆ ಇಷ್ಟೆಲ್ಲಾ ಪೀಠಿಕೆ ಹಾಕುತ್ತಿದ್ದೇನೆಂದು ಪ್ರಶ್ನೆ ಕಾಡಬಹುದು. ಆ ಪುಸ್ತಕದಲ್ಲಿರುವ ಅಂಶಗಳನ್ನು ನೋಡಿದರೆ ನೀವೇ ಗಾಬರಿಯಾಗುತ್ತೀರಿ!!!!

ಅದರಲ್ಲಿನ ಒಂದು ಚಿಕ್ಕ‌ ಟಿಪ್ಪಣಿಯನ್ನು‌ ಇಲ್ಲಿ ಇಡುತ್ತೇನೆ. ” ಕೆಲವರು ಹೇಳುತ್ತಾರೆ, ಗಾಂಧಿ, ತನ್ನ ತಂದೆಯ‌ ಉದ್ಯೋಗವಿತ್ತ ಯಜಮಾನ ಮುಸ್ಲಿಂ ಒಡೆಯನಿಗೆ ಹುಟ್ಟಿದರೆಂದು.‌ ಗಾಂಧಿಯ ತಂದೆ (ಕರಮಚಂದ್)ಒಬ್ಬ ಮುಸ್ಲಿಂ ಜಮೀನುದಾರರ ಬಳಿ ಕೆಲಸದಲ್ಲಿದ್ದು, ಒಮ್ಮೆ ಹಣ ಕದ್ದು ಪರಾರಿಯಾದರು. ಆ ಮುಸ್ಲಿಂ ಜಮೀನುದಾರ, ಕರಮಚಂದರ ನಾಲ್ಕನೆಯ ಪತ್ನಿ ಪುಥಳೀಬಾಯಿಯನ್ನು ತನ್ನ ಅಂತ:ಪುರಕ್ಕೆ ಕರೆದೊಯ್ದು ಸ್ವೀಕರಸಿದ. ಗಾಂಧಿಯ‌ ತಂದೆ ತಲೆ ತಪ್ಪಿಸಿಕೊಂಡು ಎಲ್ಲೋ ಅಲೆದಾಡತ್ತಿದ್ದಾಗ ಈ ಮುಸ್ಲಿಂ ಜಮೀನುದಾರನಿಗೆ, ಗಾಂಧಿ ಹುಟ್ಟಿದರು. ಇದು ಹಾಗಲ್ಲವೆಂದೂ, ಓಡಿ ಹೋಗಿದ್ದ ಕರಮಚಂದ್ ಆಗಾಗ ಕಳ್ಳನಂತೆ ಕದ್ದು ರಹಸ್ಯದಲ್ಲಿ ಬಂದು ಪತ್ನಿಯೊಡನೆ ಸಂಭೋಗಿಸಿ ಹೋಗುತ್ತಿದ್ದನೆಂದೂ ಕೆಲವರು ಹೇಳುತ್ತಾರೆ. ಕರಮಚಂದರೇ ಗಾಂಧಿಯ‌ ತಂದೆ ಎಂದು ಸ್ಥಾಪಿಸಲು ಈ ಯತ್ನವಿದ್ದರೂ, ಇದು ತೀರಾ ಅಸಂಭಾವಿತವೆಂದೂ ತೋರುತ್ತದೆ. ಗಾಂಧಿಯ ‌ತನ್ನ ತಾಯಿಗೆ ತಾನು ಸುತರಾಂ ಸಸ್ಯಾಹಾರಿಯಾಗಿರಲು ಮಾತು ಕೊಟ್ಟಿದ್ದೂ ಉಂಟು. ಈ ಮಾತನ್ನು ಜೀವನದುದ್ದಕ್ಕೂ ನಡೆಸಿ ಪರಿಪಾಲಿಸಿದ್ದೂ ಇದೆ. ಇದು ಬಿಟ್ಟರೆ, ಗಾಂಧಿಯು, ರಾಜಕೀಯ ವಿಷಯ, ವಿಚಾರಗಳಲ್ಲಿ ಇಸ್ಲಾಂನ ಸೇವಕನಾಗಿ ನಡೆದುಕೊಂಡದ್ದು ಇದೆ.” (ಪುಟ – 115)

ನಿಮ್ಮ ಹುಬ್ಬೇರಿಸುವಂತೆ ಮಾಡುವ ಆ ಪುಸ್ತಕದಲ್ಲಿನ ಇನ್ನೊಂದು ಪ್ರಮುಖ ವಿಚಾರವನ್ನು ಹಂಚಬೇಕು. ಮೇಲಿನ ವಿಚಾರಕ್ಕೂ ಇದಕ್ಕೂ ತುಲನೆ ಮಾಡಿ. “ಮಹಾತ್ಮ ಗಾಂಧಿ ಹುಟ್ಟಿ ಬೆಳೆದಿದ್ದು ಗುಜ್ರಾಥೀ ಮುಸ್ಲಿಂರಲ್ಲಿ. ಸ್ಕೂಲು ವಿದ್ಯಾಭ್ಯಾಸ ಮಟ್ಟದಿಂದ ಲಂಡನ್ನಿನ ಲಾ ಕಾಲೇಜಿನಲ್ಲಿ ಓದಿನವರೆಗೆ ಎಲ್ಲಾ ಖರ್ಚನ್ನು ವಹಿಸಿದವರು ಅವರ ಮುಸ್ಲಿಂ ಪಾಲಕರು. ದಕ್ಷಿಣ ಆಫ್ರಿಕೆಯಲ್ಲಿ ಇವರ ವಹಿವಾಟನ್ನು (ವಕೀಲಿಕೆಯ ಆಶ್ರಯವನ್ನು) ನಡೆಸಿ ನೆಲೆ ನಿಲ್ಲಿಸಿದವರೂ ಮುಸ್ಲಿಮರು. ಈತನ ಪೂರ್ಣ ವಿದ್ಯಾಭ್ಯಾಸ ಜೀವನ ಕಾಲವೆಲ್ಲಾ ಮುಸ್ಲಿಂ ಒಡನಾಟದಲ್ಲಿಯೇ ಇದ್ದು ಪೂರೈಸಿತು.‌ಲಂಡನ್ನಿನಲ್ಲಿ ಗಾಂಧಿ ಅಂಜುಮಾನ್-ಎ-ಇಸ್ಲಾಮಿಯಾ ಸಂಘಟನೆಯ ಪಾಲುದಾರರಾಗಿದ್ದುಂಟು. ಇದೇ ಸಂಸ್ಥೆ ಆಮೇಲೆ ಮುಸ್ಲಿಂ ಲೀಗಾಗಿ ಬೆಳೆಯಿತು. ಹಿಂದೂ ಶಾಸ್ತ್ರಗಳ ಜ್ಞಾನ, ಗಾಂಧಿಗೆ ಇದ್ದುದು ‘ಮೇಲೆ ಮೇಲೆ” ಎಂಬ ತೆಳು ಪದರದಲ್ಲು, ಬಹಳವೆಂದರೆ ಅಷ್ಟೇ.” (ಪುಟ – 106).

ಇದು ನನ್ನ ಮಾತಂತೂ ಖಂಡಿತಾ‌ ಅಲ್ಲ.ಘೋಷ್ ಅವರು ಪ್ರಸ್ತುತಪಡಿಸಿದ ವಿಚಾರವನ್ನು ಹಾಗೆಯೇ‌ ನಿಮ್ಮ ಮುಂದಿಟ್ಟೇನೆ. ಈ ವಿಚಾರಗಳನ್ನು ಇದುವರೆಗೆ‌ ಯಾರೂ ಅಲ್ಲಗಳೆದಿಲ್ಲ ಅನ್ನುವುದೂ ಅಷ್ಟೇ ಸತ್ಯ. ನಿಮಗೆ ಅರಿವಿರಲಿ. ಗಾಂಧಿ ತಮ್ಮ ಆತ್ಯಕಥೆಗೆ ಸತ್ಯಶೋಧನೆ ಎಂದರು. ಆದರೆ ಗಾಂಧಿ ತನ್ನ ಬಗೆಗೆ ಈ ಮುಸ್ಲಿಂ ಎಳೆಗಳನ್ನು ಗುರುತಿಸಿ ಬರೆಯಲಿಲ್ಲವಾದುದು ಲೋಪವೋ, ದೋಷವೋ ಮರೆವೋ ಅರಿಯದ‌ ಬಾಲಿಶತನವೋ ನೀವೇ ನಿರ್ಧಾರ ಮಾಡಿ. ಆ ಸಂದರ್ಭದಲ್ಲಿ ಪೋರ್ ಬಂದರಿನಲ್ಲಿ ಹಿಂಸಾಚಾರ ಬುಗಿಲಿದ್ದ‌ ಸಮಯಗಳಾಗಿದ್ದವು. ರಾಜ್ ಕೋಟ್ ಗೆ ಆಶ್ರಯಕ್ಕೆ ಬರುವ ಮುನ್ನ ಯಾರ ಯಾನ ಮುಸ್ಲಿಂ ಜಮೀನುದಾರರಲ್ಲಿ ಆಶ್ರಯ ಪಡೆದರೋ? ಎಲ್ಲಿ ಅಡಗಿದ್ದರೋ? ಕರಮಚಂದರಿಗೆ ಪೋರ್ ಬಂದರಿನಲ್ಲಿ ಎಲ್ಲಿ ಹಣ ಲಪಟಾವಣೆ ಆಯಿತೋ? ಇವರೇ ಮಾಡಿದರೋ, ಬೇರೆಯವರು ಮಾಡಿ ಇವರು ಸಿಕ್ಕಿಬಿದ್ದರೋ? ಪುಥಳೀಬಾಯಿ ಯಾವ ಮುಸ್ಲಿಂ ಜಮೀನುದಾರನ ಅಂತ:ಪುರ ಸೇರಿದಳೋ? ಗಾಂಧಿ ನಿಜವಾಗಿ ಯಾರಿಗೆ ಜನಿಸಿದರೋ? ಇದೆಲ್ಲಾ ಶೋಧಸಬೇಕಾದ ವಿಚಾರಗಳು. ಮಹಾತ್ಮ ತನ್ನ ಪೂರ್ವಜರ ಕುರಿತಾಗಿ ಅರಿಯದೇ ಆತ್ಮಚರಿತ್ರೆಯನ್ನು ಹೇಗೆ ಬರೆದರೆಂಬುದೇ ಈಗ ಯಕ್ಷಪ್ರಶ್ನೆಯಾಗಿದೆ.

ಇದೆಲ್ಲಾ ಸಾಬೀತಾಗುವವರೆಗೆ ಘೋಷ್ ಬರೆದ ಸಂಗತಿಗಳ ಕಡೆಗೆ ಗಮನಹರಿಸುವುದೇ ಸೂಕ್ತ. ನೀವೇ ಗಮನಿಸಿ.
* ಗಾಂಧಿ ಮುಸ್ಲಿಂ ಲೀಗಿನ ಪೂರ್ವಾವತಾರ ಸಂಸ್ಥೆಯ ಸದಸ್ಯ! ನಂಬುತ್ತೀರಾ?
* ಗಾಂಧಿ ವಿದ್ಯಾಭ್ಯಾಸ ಖರ್ಚೆಲ್ಲಾ ‌ಮುಸಲ್ಮಾನರದ್ದು – ಇಲ್ಲವೆನ್ನುತ್ತೀರಾ?
* ಗಾಂಧಿ ಚರ್ಯೆ ಚಹರೆ, ಪಕ್ಷಪಾತಗಳ ಇಣುಕು ನೋಟ, ಮಾತುಗಳ ಸಾಕ್ಷ್ಯ‌ ಸಾಕಲ್ಲ ?
* ಹಿಂದೂ ಚಿಂತನೆಯಲ್ಲಿ ಮುಸಲ್ಮಾನರ ಚಿಂತನೆಗಳನ್ನು ಸೇರಿಸಿಯೆಂದ‌‌ ಮಹಾತ್ಮ, ಮುಸ್ಲಿಂರ ಚಿಂತನೆಗಳಲ್ಲಿ ಹಿಂದುತ್ವವನ್ನು ಅಳವಡಿಸಿಯೆಂದು ಹೇಳೇ ಇಲ್ಲ. ಇದು ಗಾಂಧಿಯ ಸಾಮರಸ್ಯವೇ??

ಗಾಂಧಿಯ ಭೀಕರ ಮಾತನ್ನು ಕೇಳಿ. 1947, ಎಪ್ರಿಲ್ 6ರಂದು, ಸ್ವಾತಂತ್ರ್ಯ ಪ್ರಾಪ್ತಿಗೆ ಕೆಲವೇ ತಿಂಗಳುಗಳ ಮುಂಚೆ ಗಾಂಧಿ ಹೇಳಿದ್ದು –

” ಹಿಂದೂಗಳನ್ನು ಸಾಮೂಹಿಕವಾಗಿ ‘ಇಲ್ಲ’ ಮಾಡಲು, ನಾಶ ಮಾಡಲು ಮುಸ್ಲಿಮರು ಸಂಕಲ್ಪಿಸಿ ಯತ್ನಿಸಿದರೂ, ಹಿಂದೂಗಳು ಮುಸ್ಲಿಮರ ವಿರುದ್ಧ ಕೋಪಗೊಳ್ಳಬಾರದು. ನಮ್ಮೆಲ್ಲರನ್ನೂ ಅವರು ಕತ್ತಿಯ‌ ಬಾಯಿಗೆ ಒಡ್ಡಿ ಕೊಂದರೂ ನಾವು ವೀರರಾಗಿ ಮರಣವನ್ನಪ್ಪಬೇಕು. ಸಾವಿಗೆ ಹೆದರಬಾರದು. ಹೇಗೂ ನಾವು ಪುವರ್ಜನ್ಮ ಪಡೆದು ಹುಟ್ಟಿ ಬರುವುದು ನಿಶ್ಚಿತ ವಿಧಿ. ಹುಟ್ಟು ಸಾವು ಎಂಬುದು ವಿಧಿ ನಿಯಮ ಇದಕ್ಕೇಕೆ ದು:ಖ ಪಡಬೇಕು? ಸಾಯುವಾಗಲೂ ನಾವು ನಗುನಗುತ್ತಲೇ ಸತ್ತರೆ, ನಮಗೆ ನವ ಜೀವನಕ್ಕೆ ಪ್ರವೇಶ ಸಿಗುತ್ತದೆ. ಹೊಸ ಹಿಂದೂಸ್ಥಾನವನ್ನು ಹೀಗೆ ಹುಟ್ಟಿಹಾಕೋಣ.”

ಬಹಳ ಸಾದು ಸ್ವಭಾವದ‌ ಗಾಂಧಿಯ ಮಾತುಗಳಿವು!! ರಕ್ತದ ಭಾವನೆಯಲ್ಲಿ ಮಾತನಾಡುತ್ತಿರುವವರು ನಮ್ಮ ಪಾಲಿನ ಮಹಾತ್ಮನಾಗಿಬಿಟ್ಟ!! ಈತ ಒಬ್ಬ ಹಿಂದೂ ಸಾಧುವೋ?ರಕ್ಷಕನೋ? ಒಬ್ಬ ನಿಜ ಮುಸ್ಲಿಂನೋ?ಯಾರ ಪಕ್ಷ ವಹಿಸುತ್ತಿದ್ದನೋ? ಆದರೂ ಎಂಥ ನಯವಂಚಕ ಮಾತುಗಳವು??

ಪಾಕಿಸ್ತಾನ – ಭಾರತ ವಿಭಜನೆಗಿಂತ ಕೆಲವೇ ದಿವಸಗಳ ಮುಂಚೆ ಆಡಿದ‌ ಮಾತುಗಳಿವು. ಅಂದರೆ ಮುಂದೆ‌ ಆಗಬಹುದಾದ‌ ದುರಂತದ ಪರಿಕಲ್ಪನೆ ಮೊದಲೇ ಇದ್ದರೂ ಅದನ್ನು ತಡೆಯಲಿಲ್ಲ ಈ ದೇಶದ ಪಿತಾಮಹ. ” ಮುಸ್ಲಿಂ ಸಮಸ್ತ ಹಿಂದೂಗಳನ್ನು ಹತ್ಯೆಗೈಯಲ್ಲಿ” ಎನ್ನುವುದು ಭಯೋತ್ಪಾದಕರ ಮಾತು. ಹಾಗಾದರೆ ಗಾಂಧಿ ಯಾರನ್ನು, ಯಾವುದನ್ನು ಪ್ರೋತ್ಸಾಹಿಸುತ್ತಿದ್ದಾರೆ ? ಮುಸಲ್ಮಾನರು ಹಿಂದೂಗಳನ್ನು ಹತ್ಯೆಗೈಯಲ್ಲಿ. ಆದರೆ ಹಿಂದೂಗಳು ಪ್ರತೀಕಾರ‌‌ ಮಾಡಬಾರದು – ಇದು ಮಹಾತ್ಮನ ಪಾಲಿನ ಸೆಕ್ಯುಲರಿಸಮ್. ವೀರಮರಣದ ಉಪದೇಶ ಅವರಿಗೇಕೆ ಇಲ್ಲ? ಹಿಂದೂಗಳ ಕೈಯಲ್ಲಿ ಅವರೇಕೆ ಹಾಗೆ ಸಾಯಬಾರದು? ಭಾರತವನ್ನು ಇಸ್ಲಾಮೀಕರಣ ಮಾಡುವ ಕುತಂತ್ರವನ್ನು ಮಾಡಿದರೇ ಮಹಾತ್ಮ.!!

ಭಾರತವವನ್ನು ವಿಭಜಿಸಲು‌ ಮುನ್ನುಡಿಯಿಟ್ಟಿದ್ದೇ ಗಾಂಧಿ. ತನ್ನ ಇಬ್ಬರು ಆತ್ಮೀಯ ಗೆಳೆಯರು. ಜಿನ್ನಾ ಹಾಗೂ ನೆಹರೂ. ಇಬ್ಬರದೂ ಬೇರೆ ಬೇರೆ ಪಕ್ಷ. ಈರ್ವರಿಗೂ ಅಧಿಕಾರ ಬೇಕು. ಏನು ಮಾಡೋಣ?? ಭಾರತವನ್ನು ತುಂಡರಿಸಿ. ನಾವು ಪ್ರತೀ ಭಾಷಣದಲ್ಲಿ ಕೇಳುವ, ಹೇಳುವ ಗಾಂಧೀಜಿಯ‌ ರಾಮರಾಜ್ಯದ ಕನಸು ಇದೇ‌ ಆಗಿತ್ತು ಅಲ್ಲವೇ??

ನವ ಹಿಂದೂಸ್ಥಾನಕ್ಕೆ ಗಾಂಧಿ ಕೊಟ್ಟ ‘ಬ್ಲೂ ಪ್ರಿಂಟ್’ ಇದೇ ಆಗಿತ್ತಲ್ಲವೇ? ಸೋನಿಯಾ, ರಾಹುಲ, ನೆಹರೂ ರವರು ಪಾಲಿಸುತ್ತಿರುವುದು ಇದೇ ಗಾಂಧಿ ಚಿಂತನೆಯ ಹಿಂದೂಸ್ಥಾನವಲ್ಲವೇ?? ಪ್ರಶ್ನೆ ನಮ್ಮಲ್ಲಿ ಉಂಟಾದರೆ ನಮಗೆ ಉತ್ತರವೂ ಸಿಗುತ್ತವೆ. ಹಿಂದೂ ಅಪ್ಪಟ ರಕ್ತದ ಒಬ್ಬ ‘ದೇಶಭಕ್ತ’ ಹೀಗೆ ಆಡಲು ಸಾಧ್ಯವೇ? ರಾಷ್ಟ್ರಕ್ಕಾಗಿ ಪ್ರಾಣವನ್ನರ್ಪಿಸಿದ ಭಗತ್ ಸಿಂಗರನ್ನು ಉಳಿಸಬಹುದಿತ್ತು ಗಾಂಧಿಗೆ. ಉಳಿಸಲಿಲ್ಲ. ಜಲಿಯನ್ ವಾಲಾಭಾಗ್ ದುರಂತದ ಕರ್ತೃ ಆಗಿದ್ದ ಡಯರ್ ನನ್ನು‌ ಯಮನ ಆಸ್ಥಾನಕ್ಕೆ ಕಳುಹಿಸಿದ ಉಧಮ್ ಸಿಂಗ್ ಮಹಾತ್ಮನಿಗೆ ನಗಣ್ಯ.!! ಮತ್ತು ಈತ ನಮ್ಮ ದೇಶದ ಪಿತಾಮಹ.. ನಮ್ಮ ನಾಡಿನ ಮಹಾತ್ಮ.!!

ಅಂತಹ ಮಹಾತ್ಮನನ್ನು ಈಗ ಹೇಗೆ ಅರ್ಥ‌ ಮಾಡುತ್ತೀರಿ?? ಕಾಶ್ಮೀರ, ಬಂಗಾಳ, ಪಾಕಿಸ್ತಾನಗಲ್ಲಿ ಅಮಾಯಕ ಹಿಂದೂಗಳನ್ನು‌ ಮತಾಂಧ ‌ಮುಸಲ್ಮಾನರು ನಿರ್ದಯವಾಗಿ ಹತ್ಯೆಗೈಯ್ಯುತ್ತಿದ್ದರು. ಆದರೆ ಅವೆರೆಲ್ಲಾ ಗಾಂಧಿಗೆ ‘ವೀರಮುಸಲ್ಮಾನರು’ , ದೈವ ಭಕ್ತರು’. ಆದರೆ ದೇಶಕ್ಕೋಸ್ಕರ ಪ್ರಾಣ ಅರ್ಪಿಸಿದ ಹುತಾತ್ಮರು ಅವರ ಪಾಲಿನ ಭಯೋತ್ಪಾದಕರಾದರು. ಈಗ ಹೇಳಿ ಗಾಂಧಿಯ ಮತ‌ ಯಾವುದು? ಭಾರತೀಯನ ಮಾತಲ್ಲ ಓರ್ವ ಆಂಗ್ಲ ಅಧಿಕಾರಿ ಗಾಂಧಿಯ ಕುರಿತಾಗಿ ಹೇಳಿದ್ದಾನೆ. ಕೇಳಿ.

” ಅವರ ಮತೀಯ ಧಾರ್ಮಿಕ ವಿಚಾರಗಳು ಢೋಂಗಿಯಲ್ಲ. ಸ್ವಾಭಾವಿಕವಾಗಿಯೇ ಅವು ಅಂಟಿಕೊಂಡವು. ಅವರ ನಂಬುಗೆಗಳು ಹೆಚ್ಚುಕಜಿಮೆ ಮತಾಂಧತೆಯ ಮಟ್ಟದವು ಎನ್ನಬಹುದು. ಅವರ ಅಹಿಂಸಾ-ಪ್ರೇಮಗಳ ಮೂಲಕ ಬ್ರಿಟಿಷರಿಂದ ಸ್ವರಾಜ್ಯ ಪಡೆಯಬಹುದೆಂಬ ಆಶಯವು ಈ ಮತಾಂಧತೆಯ‌ ಮಟ್ಟದ್ದೇ. ಇವರ ಮತೀಯ, ನೈತಿಕ ವಿಚಾರಗಳು ಮೆಚ್ಚತಕ್ಕವೂ, ವಿಶಿಷ್ಟವೂ, ಉನ್ನತಮಟ್ಟದವೂ ಆದವೆಂದು ಹೇಳಬಹುದಾದರೂ, ಅವ್ಯವಹಾರಿಕವೆಂದೂ, ರಾಜಕಾರಣದಲ್ಲಿ ಅನುಷ್ಠಾನಯೋಗ್ಯವಲ್ಲವೆಂದೂ ನಾನು ಹೇಳಲೇಬೇಕಾಗಿದೆ.”

ಈ‌ ಮಾತನ್ನು ಮೌಂಟ್ ಬ್ಯಾಟನ್ ದೃಢಪಡಿಸುತ್ತಾನೆ. “ಈತ‌ ವ್ಯಾವಹಾರಿಕ ಬುದ್ಧಿ, ನಡವಳಿಕೆಯವನಲ್ಲ. ಇಡೀ ಭಾರತವನ್ನೇ ಜಿನ್ನಾ ಸಾಹೇಬರಿಗೆ ಒಪ್ಪಿಸಲು ಇವನು ಸಿದ್ಧಪಡಿಸಿದ ಯೋಜನೆಯನ್ನು ನೋಡಿ!”

ಅಖಂಡ‌ ಭಾರತ ನಿರ್ಮಾಣ ಮಾಡಬೇಕೆಂಬುದಾಗಿ ಖಾನ್ ಅಬ್ದುಲ್ ಗಫರ್ ಖಾನ್ ಮುಂತಾದ ಅನೇಕ‌ ಮುಸಲ್ಮಾನರು ಬಯಸಿದ್ದರು. ಆದರೆ ವಿಭಜನೆಯ ತೀರಾ ಹಠದಲ್ಲಿದ್ದವ ಜಿನ್ನಾ!! ಅಂತಿಮ ಯತ್ನವಾಗಿ ಗಾಂಧಿಯವರು ಏನು ಮಾಡಿದರು ಗೊತ್ತಾ?? “ಭಾರತ ಅಖಂಡವಾಗಿಯೇ ಉಳಿಯಲಿ ಜಿನ್ನಾ ಸಾಹೇಬರೇ! ನೀವೇ ಪ್ರಥಮ ಪ್ರಧಾನಿಯಾಗಿ ಬಿಡಿ” ಎಂದುಬಿಟ್ಟರು. ಹಾಗಾದರೆ ಇದು ಮರ್ಮವೇನು?? ಭಾರತ‌ ಮುಸಲ್ಮಾನ ರಾಷ್ಟ್ರವಾಗಲಿಯೆಂದೇ?? ಒಂದು ಕಾಲದಲ್ಲಿ‌ ಮತಾಂಧರ ಆಕ್ರಮಣದಿಂದ ತತ್ತರಿಸಿಹೋಗಿದ್ದ‌ ಭಾರತವನ್ನು ಪುನ: ಅವರಿಗೇ ಹಿಂತಿರುಗಿಸಲು ತಯಾರಾಗಿದ್ದರೇ ಮಹಾತ್ಮ?? ಕೋಟ್ಯಾಂತರ ರಾಷ್ಟ್ರಪ್ರೇಮಿಗಳು ಸ್ವಭೂಮಿಗೆ ಸ್ವಾತಂತ್ರ್ಯ ಪಡೆಯಲೋಸುಗ ಹುತಾತ್ಮರಾದರಲ್ಲವೇ.. ಅವರ ಎಲ್ಲರ ಜೀವ ಅಷ್ಟೂ‌ ನಗಣ್ಯವಾಯಿತೇ ಗಾಂಧಿಗೆ? ಇತ್ತ ನೆಹರೂ ಅವರ ಅಭಿಪ್ರಾಯ ಕೇಳಲು ಸೂಚಿಸಿದರು. ಅಲ್ಲಿಗೆ ನೆಹರೂ-ಜಿನ್ನಾ ಇಬ್ಬರಿಗೂ ಅಧಿಕಾರ ಬೇಕಿರುವುದು ಸ್ಪಷ್ಟವಾಗಿತ್ತು. ಭಾರತದ ದುರಂತಕ್ಕೆ ಮುನ್ನುಡಿಯಿಟ್ಟರು ಅದೇ ಮಹಾತ್ಮ!! ಪಾಕಿಸ್ತಾನವನ್ನು ನೀನು ತೆಗೆದುಕೋ ಎಂಬಂತೆ‌ ಜಿನ್ನಾಗೆ ಹೇಳಿದಂತೆ ಇತ್ತು ಗಾಂಧಿಯ‌ ನಡವಳಿಕೆ..

‌ ನೀವೇ ಯೋಚಿಸಿ. ಒಬ್ಬ ಯಜಮಾನ ಪರಕೀಯನಿಗೆ, “ನನ್ನ ಹೆಂಡತಿಯನ್ನು ನೀನೇ ಇಟ್ಟುಕೋ. ಗೃಹಕೃತ್ಯ‌ನಡೆಸು. ಆದರೆ ನನ್ನನ್ನು ದೂಷಿಸಬೇಡ.” ಹೇಳಿದರೆ ಹೇಗಾಗಬಹುದು?? ಇದನ್ನು‌ ಯಾವುದಕ್ಕೋ ಹೋಲಿಸಿದೆನೆಂದು ನೀವು ತಿಳಿದರೆ ಅದು ನನ್ನ ತಪ್ಪಲ್ಲ.

ಗಾಂಧಿ ಜತೆಗೆ ನಿರ್ಮಲ ಬೋಸ್ ಎಂಬ ಬಂಗಾಳೀ ಕಾರ್ಯದರ್ಶಿಯಿದ್ದರು. ನವಕಾಲಿಯಲ್ಲಿ ನರಮೇಧ ‌ನಡೆದಿತ್ತು. ಒಬ್ಬ ಮಹಿಳೆ ತನ್ನ ಪುತ್ರನ ಹೆಣವನ್ನು ತಬ್ಬಿ, ಗಾಂಧಿಯನ್ನು ನೋಡುತ್ತಾ, ಅಳುತ್ತಿದ್ದಳು – ‘ನೀನೇ ಕಾರಣ’ ಎಂಬಂತೆ. ಗಾಂಧಿಗೆ ಆಘಾತವಾಯಿತು. ಅವರೇನಂದರು ಗೊತ್ತಾ?? ” ಅವಳಿಗೆ ಹೇಳು, ಹೋಗು. ದೇವರು ತನಗೆ ಖುಷಿಯಾದಾಗ ಒಬ್ಬ ಮಗನನ್ನು ಕೊಟ್ಟ. ಅದೇ ತನಗೆ ಬೇರೆ ಖುಷಿಯಾದಾಗ ಅವನನ್ನು ಕಿತ್ತುಕೊಂಡ” ಎಂದರು.

ಪ್ರಸ್ತುತ ಇಡೀ‌ ಭಾರತ ದೇಶವೇ ಮಹಾತ್ಮನೆಂದು ಕರೆಯಲ್ಪಡುವ ದೇಶದ ಪಿತಾಮಹನ ಕರಾಳ‌ ಮುಖವಿದು. ಈ ಬಗೆಯ‌ ಸಮಾಧಾನದ ಮಾತುಗಳು ಯಾರಿಗೆ ಸಮಾಧಾನ ತಂದೀತು?? ನೀವೇ ಹೇಳಿ.

ಶಾಂತಿ ನೆಲೆಸುವವರೆಗೆ ಕಾಯೋಣ. ಇಲ್ಲವೇ ಎಲ್ಲರೂ ಸಾಯೋಣ ಎಂಬ ಸಿದ್ಧಾಂತವನ್ನು ತಮ್ಮ ಜೀವನದಿಡೀ ಪಾಲಿಸುತ್ತಿದ್ದವರು ಗಾಂಧಿ. ಇದೆಲ್ಲಾ ವಿಚಾರವೂ ಅಪ್ಪಟ ದೇಶಭಕ್ತನಾಗಿದ್ದ ಗೋಡ್ಸೆಯನ್ನು ಕೆರಳಿಸಿತ್ತು. ಸ್ವಾತಂತ್ರ್ಯ ಬಂದ‌ ನಂತರ ಭಾರತದಲ್ಲಿ ಆದ‌ ನರಹತ್ಯೆಯಿಂದಂತೂ ಆತನನ್ನು‌ ವಿಚಲಿತನಾಗುವಂತೆ‌ ಮಾಡಿತು. ಒಂದು ದಿನ ಪ್ರಾರ್ಥನಾ ಮಂದಿರದಲ್ಲಿ ಮಹಾತ್ಮ ನನ್ನು‌ ಹುತಾತ್ಮನನ್ನಾಗಿಸಿಬಿಟ್ಟ ಗೋಡ್ಸೆ !!!

ಗಾಂಧಿ ಮಾಡಿದ ಅಂತಿಮ ರಾಷ್ಟ್ರದ್ರೋಹ ಕಾರ್ಯ ನೆಹರೂವನ್ನು ಪ್ರಧಾನಿಯನ್ನಾಗಿ ಘೋಷಿಸಿದ್ದು. ಪಟೇಲರು ಆಗಲೇ ಹೇಳಿದ್ದರ, ” ಇದುವರೆಗೆ ಮಾಡಿರದ ತಪ್ಪನ್ನು‌ ಮಾಡುತ್ತಿರುವಿರಿ” ಅದು ಸತ್ಯವೇ ಆಯಿತು. ದೇಶ ಹಿಂದೆಂದೂ ಕಾಣದ ಪರಿಸ್ಥಿತಿಗಳನ್ನೆದುರಿಸಬೇಕಾಯಿತು.

ಒಂದಂತೂ ಸತ್ಯ. ಮಹಾತ್ಮನ ಜಿನ್ನಾ ಹಾಗೂ ನೆಹರೂ ಪ್ರೇಮ ದೇಶವು ಭಾರತವನ್ನು‌ ಶತಮಾನಗಳ ಕಾಲ ಹಿಂದೆ ಸರಿಯುವಂತೆ‌ ಮಾಡಿತು.. ಇನ್ನೂ ಕಾಲ ಮಿಂಚಿಲ್ಲ. ಗಾಂಧಿ ಗುಂಗಿನಿಂದ ಹೊರಬರಬಹುದು.. ಅದೂ ನಿಮ್ಮ ಮೇಲಿದೆ..!!!

ಆಧಾರ :
1. The Koran and the Khafir by A Ghosh
2. ಗಾಂಧಿಯನ್ನು ನಿಜವಾಗಿಯೂ ಕೊಂದವರು ಯಾರು ?? – ಡಾ. ಕೆ.ಎಸ್. ನಾರಾಯಣಾಚಾರ್ಯ.
3. Hindu society under seige – Sitaram Goel (Voice Of India Pub.)

– ವಸಿಷ್ಠ

Tags

Related Articles

Close