ಪ್ರಚಲಿತ

ಭುವನೇಶ್ವರಿ ತಾಯಿಯನ್ನು ಕಸ ವಿಲೇವಾರಿ ಮಾಡುವ ವಾಹನದಲ್ಲಿ ಮೆರಗಣಿಗೆ ಮಾಡಿಸಿ ಅವಮಾನಿಸಿದ ಸಚಿವ!!!

ಯು. ಟಿ. ಖಾದರ್…!!

ಇವರು ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ. ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವ ದಿನದಂದು ಇವರ ಕಣ್ಣ ಮುಂದೆಯೇ ಕನ್ನಡಕ್ಕೆ ಭಾರೀ ಅವಮಾನವಾಗಿದೆ. ಇದರ ಜೊತೆಗೆ ಕನ್ನಡಾಂಬೆ, ವೀರರಾಣಿ ಅಬ್ಬಕ್ಕ, ಒನಕೆ ಓಬವ್ವ ಹಾಗೂ ವಿದ್ಯಾರ್ಥಿನಿಯರಿಗೂ ಅವಮಾನವಾದಂತಾಗಿದೆ. ಇಷ್ಟೆಲ್ಲಾ ಅವಮಾನ ಆಗಲು ಕಾರಣವೇನು ಗೊತ್ತೇ? ಅದೇ ಉಳ್ಳಾಲ ನಗರಸಭೆ ಕನ್ನಡ ರಾಜ್ಯೋತ್ಸವದಂದು ನಡೆಸಿದ ಎಡವಟ್ಟು. ಸ್ವತಃ ಉಳ್ಳಾಲ ಶಾಸಕ, ರಾಜ್ಯ ಸಚಿವರಾಗಿರುವ ಯು.ಟಿ ಖಾದರ್, ಪುರಸಭೆ ಆಯುಕ್ತರು, ಸದಸ್ಯರ ಮುಂದೆಯೇ ಇಂಥದೊಂದು ಪ್ರಮಾದ ನಡೆದಿರುವುದು ಭಾರೀ ವಿವಾದಕ್ಕೆ ಕಾರಣವಾದಂತಾಗಿದೆ.

ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವ ದಿನದಂದು ಕನ್ನಡಾಂಬೆ, ವೀರರಾಣಿ ಅಬ್ಬಕ್ಕ, ಹಾಗೂ ಒನಕೆ ಓಬವ್ವ ಅವರ ವೇಷಾಧಾರಿ ಮಕ್ಕಳನ್ನು ತ್ಯಾಜ್ಯ ವಿಲೇವಾರಿ ಮಾಡುವ ವಾಹನದ ಮೂಲಕ ಮೆರವಣಿಗೆ ಮಾಡಿಸಿದ್ದಾರೆ. ಇಂಥದೊಂದು ಘಟನೆ ರಾಜ್ಯ ಸಚಿವ ಯು.ಟಿ. ಖಾದರ್ ಮುಂದುಗಡೆಯೇ ನಡೆದಿದೆ ಎನ್ನುವುದೇ ಇದರ ಹಿಂದಿರುವ ಟ್ವಿಸ್ಟ್..

ಇಲ್ಲಿರುವ ಪ್ರಶ್ನೆ ಏನೆಂದರೆ ವೇಷಾಧಾರಿ ಮಕ್ಕಳನ್ನು ಕಸ ವಿಲೇವಾರಿ ಮಾಡುವ ವಾಹನದಲ್ಲಿ ಮೆರವಣಿಗೆ ಕರೆದುಕೊಂಡು ಹೋಗುವ ಅವಶ್ಯಕತೆ ಏನಿತ್ತು? ಬೇರೆ ವಾಹನಗಳೇ ಇರಲಿಲ್ಲವೇ? ಸಚಿವರ ಕಣ್ಣ ಮುಂದೆಯೇ ಇಂಥದೊಂದು ಘಟನೆ ನಡೆದಿದ್ದರೂ ಅವರ್ಯಾಕೆ ಮಾತಾಡಲಿಲ್ಲ? ಈ ಘಟನೆಯಿಂದ ಕನ್ನಡಕ್ಕೆ ಅವಮಾನವಾಗುವುದರ ಜೊತೆಗೆ ಕನ್ನಡಾಂಬೆ, ವೀರರಾಣಿ ಅಬ್ಬಕ್ಕ, ಒನಕೆ ಓಬವ್ವ ಮಾತ್ರವಲ್ಲದೆ ಮಕ್ಕಳಿಗೂ ಅವಮಾನವಾದಂತಾಗಿದೆ. ಮೆರವಣಿಗೆಯಲ್ಲಿ ಕಸ ವಿಲೇವಾರಿಯ ವಾಹನವನ್ನೇ ಬಳಸುವುದು ತಪ್ಪು.. ಇದರ ಜೊತೆಗೆ ವೇಷಧಾರಿ ಮಕ್ಕಳನ್ನು ಅದರಲ್ಲೇ ಸಾಗಿಸಿ ಅವಮಾನ ಮಾಡಿದಲ್ಲದೆ ಕನ್ನಡಕ್ಕೂ ಭಾರೀ ಅವಮಾನವಾದಂತಾಗಿದೆ.

ವೇಷಧಾರಿ ಮಕ್ಕಳನ್ನು ಮೆರವಣಿಗೆಯಲ್ಲಿ ಸಾಗಿಸಲು ಬೇರೆ ವಾಹನಗಳೇ ಸಿಗಲಿಲ್ಲವೇ ಎಂಬ ಗಂಭೀರವಾದ ಪ್ರಶ್ನೆಯೊಂದು ಕೇಳಿಬಂದಿದೆ. ಉಳ್ಳಾಲದ ಹಲವಾರು ಪ್ರದೇಶಗಳಲ್ಲಿ ಕಸ ವಿಲೇವಾರಿ ಮಾಡುತ್ತಾ ಸಾರ್ವಜನಿಕ ಸೇವೆಯಲ್ಲಿ ಬಳಸುತ್ತಿರುವ ವಾಹನದಲ್ಲಿ ಮನುಷ್ಯರನ್ನು ಸಾಗಿಸಲೇಬಾರದು ಎಂಬ ನಿಯಮವಿದೆ. ಆದರೆ ಈ ನಿಯಮವನ್ನೇ ನಗರಸಭೆ ಆಯುಕ್ತರು ಗಾಳಿಗೆ ತೂರಿದ್ದಾರೆ. ರಾಜ್ಯದ ಘನವೆತ್ತ ಸಚಿವರೂ ಆಗಿರುವ ಯು.ಟಿ ಖಾದರ್ ಅವರು ಕೂಡಾ ಈ ಘಟನೆಯ ಬಗ್ಗೆ ನಿರ್ಲಕ್ಷ್ಯವಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕಸವಿಲೇವಾರಿ ವಾಹನವನ್ನು ಮೆರವಣಿಗೆಗೆ ಬಳಸಿರುವುದು ಇದೇ ಮೊದಲು ಎನ್ನಬಹುದು. ಕನ್ನಡ ರಾಜ್ಯೋತ್ಸವ ಇರಲಿ, ಬೇರೆ ಯಾವುದೇ ಮೆರವಣಿಗೆಯಿರಲಿ. ಅದಕ್ಕೆಂದೇ ಆದ ಸೂಕ್ತ ವಾಹನದ ವ್ಯವಸ್ಥೆಯನ್ನು ಮಾಡಬೇಕು. ಕಸ ವಿಲೇವಾರಿ ವಾಹನವನ್ನು ಕಸವಿಲೇವಾರಿ ಹೊರತುಪಡಿಸಿ ಬೇರೆ ಯಾವುದಕ್ಕೂ ಬಳಸಕೂಡದು. ಯಾಕೆಂದರೆ ರೋಗಕಾರಕ ತ್ಯಾಜ್ಯವಸ್ತುಗಳನ್ನು ಅದರ ಸಾಗಿಸುವುದರಿಂದ ತ್ಯಾಜ್ಯ ಹೊರತುಪಡಿಸಿ ಅದಲ್ಲಿ ಜನರನ್ನಾಗಲೀ ಅಥವಾ ಪ್ರಾಣಿಗಳನ್ನಾಗಲೀ ಸಾಗಿಸುವಂತಿಲ್ಲ. ಅಲ್ಲದೆ ಕಸದ ಹೊರತುಪಡಿಸಿ ಬೇರೆ ಯಾವುದಕ್ಕೂ ಇದನ್ನು ಬಳಕೆ ಮಾಡಕೂಡದೆಂಬ ನಿಯಮವಿದೆ. ಅಲ್ಲದೆ ಜನತೆ ಗೌರವ ನೀಡುವಂತಹಾ ಯಾವುದೇ ವಸ್ತುಗಳನ್ನು ಅದರಲ್ಲಿ ಮೆರವಣುಗೆಯಲ್ಲಿ ಸಾಗಿಸುವುದೂ ಕೂಡಾ ಅಕ್ಷಮ್ಯ. ಆದರೂ ನಿಯಮವನ್ನು ಉಲ್ಲಂಘಿಸಿರುವುದು ಅಪರಾಧವಾಗಿದ್ದು, ಇದರಿಂದ ಭಾರೀ ವಿವಾದ ಸೃಷ್ಟಿಯಾದಂತಾಗಿದೆ. ಸದ್ಯದಲ್ಲಿ ಈ ವಿಷಯ ಜಾಲತಾಣಗಳಲ್ಲೂ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ ಸಚಿವರ ಕಾರ್ಯವೈಖರಿಯನ್ನು ಖಂಡಿಸುತ್ತಿದ್ದಾರೆ.

ಕನ್ನಡಾಂಬೆ, ವೀರರಾಣಿ ಅಬ್ಬಕ್ಕ, ಒನಕೆ ಓಬವ್ವರ ವೇಷಾಧಾರಿ ವಿದ್ಯಾರ್ಥಿನಿಯರನ್ನು ತ್ಯಾಜ್ಯ ಸಾಗಿಸುವ ವಾಹನದಲ್ಲಿ ಮೆರವಣಿಗೆ ಕರೆದೊಯ್ಯುವುದು ಸರಿಯಲ್ಲ. ಅದರ ಜೊತೆಗೆ ಕನ್ನಡಾಂಬೆ, ವೀರರಾಣಿ ಅಬ್ಬಕ್ಕ, ಒನಕೆ ಓಬವ್ವನವರನ್ನೂ ಅವಮಾನಿಸಿದಂತಾಗಿದೆ. ಯಾಕೆಂದರೆ ಕನ್ನಡಾಂಬೆಯನ್ನು ಕನ್ನಡಿಗರು ತಾಯಿಯಂತೆ ಪೂಜಿಸುವುದರಿಂದ ಆಕೆಯನ್ನು ಒಂದು ಕಸ ಸಾಗಿಸುವ ವಾಹನದಲ್ಲಿ ಸಾಗಿಸುತ್ತಾರೆಂದರೆ ಅದನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ. ವೀರಾರಾಣಿ ಅಬ್ಬಕ್ಕ, ಒನಕೆ ಓಬವ್ವ ಇವರೆಲ್ಲಾ ಕನ್ನಡ ವೀರವನಿತೆಯರಾಗಿದ್ದು, ಶತ್ರುಗಳನ್ನು ಮೆಟ್ಟಿನಿಂತಿದ್ದಾರೆ. ಆದ್ದರಿಂದ ಇವರನ್ನು ಸಮಸ್ತ ಕನ್ನಡಿಗರು ಭಕ್ತಿಯಿಂದ ಗೌರವಿಸುತ್ತಾರೆ. ಇಂಥವರ ವೇಷಾಧಾರಿಗಳನ್ನು ತ್ಯಾಜ್ಯ ವಿಲೇವಾರಿ ಮಾಡುವ ವಾಹನದ ಮೂಲಕ ಸಾಗಿಸಿ ಅವಮಾನ ಮಾಡಿದಂತಾಗಿದೆ.

ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದುದು ಯು.ಟಿ. ಖಾದರ್ ಮುಂಭಾಗದಲ್ಲೇ ಅಂದರೆ ಈ ಸಮಸ್ತ ಘಟನೆಗೆ ಅವರೇ ಪ್ರಮುಖ ಜವಾಬ್ದಾರರಾಗುತ್ತಾರೆ. ತನ್ನ ಮುಂದೆ ಇಷ್ಟೆಲ್ಲಾ ಘಟನೆ ನಡೆದಿರುವುದು ಅವರ ಅರಿವಿಗೆ ಬಂದಿಲ್ಲವೇ ಅಥವಾ ಬೇಕೆಂದೇ ನಿರ್ಲಕ್ಷ್ಯವಹಿಸಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ನಗರ ಸಭೆಯ ಆಯುಕ್ತರು ನಾಡುನುಡಿಯ ಹಬ್ಬವಾಗಿರುವ ರಾಜ್ಯೋತ್ಸವಕ್ಕೆ ತ್ಯಾಜ್ಯ ವಿಲೇವಾರಿ ಮಾಡುವ ವಾಹನವನ್ನು ಬಳಕೆ ಮಾಡಿರುವುದು ಎಷ್ಟರಮಟ್ಟಿಗೆ ಸರಿ? ತ್ಯಾಜ್ಯವಿಲೇವಾರಿ ಮಾಡುವ ವಾಹನಗಳ ನಿಯಮಗಳು ಅವರಿಗೆ ಗೊತ್ತಿಲ್ಲವೇ ಎಂಬ ಪ್ರಶ್ನೆಯೂ ಕೇಳಿಬಂದಿದೆ.

ಈ ಘಟನೆ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಮುಂದಿಟ್ಟುಕೊಂಡು ಸಚಿವರ ವಿರುದ್ಧ ಉಗ್ರ ಹೋರಾಟ ನಡೆಸಿ ಪ್ರತಿಭಟಿಸಬೇಕಾಗಿದೆ. ಯಾಕೆಂದರೆ ಒಬ್ಬ ಜವಾಬ್ದಾರಿಯುತ ಸಚಿವರ ಮುಂದೆಯೇ ಇಂತಹಾ ಘಟನೆ ನಡೆದಿರುವುದರಿಂದ ಅವರೇ ಈ ಘಟನೆಗೆ ಸಂಪೂರ್ಣ ಜವಾಬ್ದಾರರಾಗುತ್ತಾರೆ. ಅಲ್ಲದೆ ನಗರಸಭೆ ಆಯುಕ್ತರು, ಸದಸ್ಯರೂ ಕೂಡಾ ಘಟನೆಗೆ ನೇರ ಹೊಣೆಯಾಗಿರುತ್ತಾರೆ. ಈ ಘಟನೆಯ ಬಗ್ಗೆ ಸರಕಾರ ಕೂಡಲೇ ತನಿಖೆಗೆ ಆದೇಶಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ.

ಚೇಕಿತಾನ

 

Tags

Related Articles

Close