ಪ್ರಚಲಿತ

ಮನಮೋಹನ್ ಸಿಂಗ್ ಟೀಕೆಗೆ ಬಿಜೆಪಿ ಚಾಣಾಕ್ಯ ಅಮಿತ್ ಶಾ ಕೊಟ್ಟರು ಟಾಂಗ್… ಶಾ ಉತ್ತರಕ್ಕೆ ಮತ್ತೆ ಸೈಲೆಂಟ್ ಮೋಡ್‍ಗೆ ಮರಳಿದ ಮನಮೋಹನ್ ಸಿಂಗ್!!

ಗುಜರಾತ್ ಚುನಾವಣೆ ನಡೆಯುತ್ತಿರುವಾಗಲೇ ಆರೋಪ ಪ್ರತ್ಯಾರೋಪದ ಭರಾಟೆ ಭರ್ಜರಿಯಾಗಿ ಸಾಗಿದೆ. ಇದರ ಮಧ್ಯೆ ತಮ್ಮ ಆಡಳಿತಾವಧಿಯಲ್ಲಿ ಸಹಿತ ಮೊನ್ನೆ ಮೊನ್ನೆವರೆಗೂ ಸುಮ್ಮನಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ರವರು ಈಗ ತುಟಿ ಬಿಚ್ಚಿದ್ದಾರೆ. ಬಹುಷಃ ಸೋನಿಯಾ ಗಾಂಧಿ ಕೈಯ್ಯಲ್ಲಿದ್ದ ರಿಮೋಟ್ ನಿಂದ ಚಾನೆಲ್ ಚೇಂಜ್ ಮಾಡಿಕೊಂಡಿರಬೇಕು. ಹೀಗಾಗಿಯೇ ಮೌನ ಮೋಹನ ಸಿಂಗ್‍ರವರು ಚುನಾವಣೆ ಸಂದರ್ಭದಲ್ಲಿ ಮೌನ ಮುರಿದಿದ್ದಾರೆ.

ಮೋದಿ ಮಾಡಿದ ಮೋಡಿಗಳಲ್ಲಿ ಇದೂ ಒಂದು..!

ಮೋದಿ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ನಂತರ ಹಲವಾರು ಮಹತ್ವದ ಸಾಧನೆಗಳನ್ನು ಮಾಡಿ ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತವು ಇಂದು ಅತ್ಯಂತ ಎತ್ತರದ ಸ್ಥಾನದಲ್ಲಿ ಹೋಗಿ ನಿಂತಿದೆ. ಇದಕ್ಕೆ 56 ಇಂಚಿನ ಎದೆಯುಳ್ಳ ಪ್ರಧಾನಿ ಮೋದಿಯವರ ಅಭಿವೃದ್ಧಿಯ ಕ್ರಾಂತಿಯಲ್ಲದೆ ಮತ್ತಿನ್ನೇನೂ ಅಲ್ಲ.

ಈ ಮಧ್ಯೆ ಮೋದೀಜಿ ಮಾಡಿದ ಮತ್ತೊಂದು ಮಹತ್ವದ ಮೋಡಿ ಎಂದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ರವರ ಬಾಯಿಗೆ ಹಾಕಿದ್ದ ಬೀಗವನ್ನು ತೆರೆದಿದ್ದು. ತಾನು 10 ವರ್ಷಗಳ ಕಾಲ ಈ ದೇಶದಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿ ಆಡಳಿತ ನಡೆಸಿದ್ದರೂ ಬಾಯಿಗೆ ಮಾತ್ರ ಬೀಗ ಹಾಕಿಕೊಂಡು ತಿರುಗುತ್ತಿದ್ದರು. ಯಾವುದೇ ವಿಚಾರಗಳ ಬಗ್ಗೆ ಅವರು ಮಾತನಾಡುತ್ತಲೇ ಇಲ್ಲ. ಸರ್ಕಾರದ ಸಚಿವರು ಹಾಗೂ ಸಂಸದರೂ ಇವರ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ. ಯಾವಾಗಾದರೂ ಮಾತನಾಡಲೇ ಬೇಕು ಎಂದಿದ್ದರೆ ಆವಾಗ ಮಾತ್ರ ಚೀಟಿಯನ್ನು ಹಿಡಿದುಕೊಂಡು ಮೈಕ್ ಡೆಸ್ಕ್‍ನ ಎದುರು ಬಂದು ನಿಲ್ಲುತ್ತಾರೆ.

ಯಾವಾಗ ಕೇಂದ್ರದಲ್ಲಿ ಮನಮೋಹನ್ ಸಿಂಗ್‍ರ ಅಧಿಕಾರಕ್ಕೆ ನಮೋ ಇತಿಶ್ರೀ ಹಾಡಿದರೋ ಅಂದಿನಿಂದ ಮನಮೋಹನ್ ಸಿಂಗ್ ಕಾಣಲೇ ಇಲ್ಲ. ತಾನು ಅಧಿಕಾರದಲ್ಲಿರುವಾಗಲೇ ಕೆಲಸ ಮಾಡದ ಈ ಮನಮೋಹನ್ ಸಿಂಗ್‍ರು ಇನ್ನು ಅಧಿಕಾರ ಇಲ್ಲದಾದಾಗ ಅದೆಷ್ಟು ಕೆಲಸ ಮಾಡಬಹುದು? ಹೀಗಾಗಿಯೇ ನನಗೆ ಯಾರ ಉಸಾಬರಿಯೂ ಬೇಡಪ್ಪಾ ಎಂದು ತೆಪ್ಪಗೆ ಕುಳಿತಿದ್ದರು.

ಆದರೆ ಈಗ ಗುಜರಾತ್ ಚುನಾವಣೆ. 22 ವರ್ಷಗಳ ಕಾಲ ಆಡಳಿತ ಮಾಡಿದ ಭಾರತೀಯ ಜನತಾ ಪಕ್ಷ ಈ ಬಾರಿ ಮತ್ತೆ ಅಧಿಕಾರ ಹಿಡಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ತನ್ನೆಲ್ಲಾ ಕಾಂಗ್ರೆಸ್ ಮುಖಂಡರನ್ನು ಗುಜರಾತ್‍ಗೆ ಕಳುಹಿಸಿದೆ. ಮಾತ್ರವಲ್ಲದೆ ಅಧಿಕಾರ ಕಳೆದು ತೆಪ್ಪಗೆ ಮನೆಯಲ್ಲಿ ನಿದ್ರೆ ಮಾಡುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ರ ಮೇಲೂ ಸೋನಿಯಾ ಹಾಗೂ ರಾಹುಲ್ ಗಾಂಧಿಯ ರಿಮೋಟ್ ವರ್ಕ್ ಮಾಡಿದೆ. ತನ್ನ ರಿಮೋಟ್‍ನ್ನು ಒತ್ತುವ ಮೂಲಕ ಮನಮೋಹನ್ ಸಿಂಗ್ ಬಾಯಿಗೆ ಹಾಕಿದ್ದ ಬೀಗವನ್ನು ತೆರೆಯಲಾಗಿದೆ.

ಮೋದಿ ಪ್ರಧಾನಿ ಪಟ್ಟಕ್ಕೆ ಅರ್ಹರಲ್ಲ-ಮಾಜಿ ಪ್ರಧಾನಿ ಸಿಂಗ್…

“ನಾವು (ಕಾಂಗ್ರೆಸ್) ಪಾಕಿಸ್ಥಾನಕ್ಕೆ ತೆರಳಿ ಅಲ್ಲಿ ಮೋದಿಯನ್ನು ಸೋಲಿಸಲು ಪ್ಲಾನ್ ಹಾಕಿಕೊಂಡಿದ್ದೇವೆ ಎಂದಿರುವ ಮೋದಿಗೆ ಪ್ರಧಾನಿ ಎಂಬ ಪಟ್ಟ ಶೋಭೆ ತರುವುದಿಲ್ಲ. ಪ್ರಧಾನಿಯಾಗಿ ಈ ರೀತಿ ಆರೋಪಿಸುವುದು ಸರಿಯಲ್ಲ” ಎಂದು ಬಾಯಿ ಬಿಟ್ಟಿದ್ದಾರೆ. ಹಾಗಾದರೆ ಮಾಜಿ ಪ್ರಧಾನಿಗಳಾದವರು, ಭಾರತದ ಬದ್ಧ ಶತ್ರುವಾದ ಪಾಕಿಸ್ಥಾನಕ್ಕೆ ತೆರಳಿ ಅಲ್ಲಿನ ಸೇನಾ ನಾಯಕರೊಂದಿಗೆ ಮಾತುಕತೆ ನಡೆಸಿರುವುದು ಎಷ್ಟು ಸರಿ.? ದೇಶದ ಪ್ರಧಾನಿಯಾಗಿ ಅದನ್ನು ಪ್ರಶ್ನಿಸೋದು ತಪ್ಪಾ..?

ಮನಮೋಹನ್ ಸಿಂಗ್‍ಗೆ ಅಮಿತ್ ಶಾ ನೀಡಿದರು ಟಾಂಗ್…

ಮನಮೋಹನ್ ಸಿಂಗ್ ಟೀಕೆಗೆ ಬಿಜೆಪಿ ಚಾಣಾಕ್ಯ ಅಮಿತ್ ಶಾ ಕೊಟ್ಟರು ಟಾಂಗ್… ಶಾ ಉತ್ತರಕ್ಕೆ ಮತ್ತೆ ಸೈಲೆಂಟ್ ಮೋಡ್‍ಗೆ ಮರಳಿದ ಮನಮೋಹನ್ ಸಿಂಗ್!

ಕೇವಲ ಮನಮೋಹನ್ ಸಿಂಗ್‍ರನ್ನು ಪ್ರಶ್ನೆ ಮಾಡಿದ್ದಕ್ಕೆ ಈ ರೀತಿಯ ಟೀಕೆ ಮಾಡುವ ಮಾಜಿಪ್ರಧಾನಿಗಳಿಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಖತ್ ಟಾಂಗ್ ಕೊಟ್ಟಿದ್ದಾರೆ. “ಮನಮೋಹನ್ ಸಿಂಗ್‍ರವರೇ… ಮೊದಲು ನಿಮ್ಮ ಸರ್ಕಾರದ ಅವಧಿಯಲ್ಲಿ ಅದೆಷ್ಟು ಹಗರಣಗಳು ನಡೆದಿದೆ ಎಂಬುವುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಅಷ್ಟೊಂದು ಹಗರಣಗಳು ನಡೆದಾಗಲೂ ಬಾಯಿ ಮುಚ್ಚಿ ಏನೂ ಆಗಿಲ್ಲವೆಂಬಂತೆ ಕುಳಿತಿದ್ದಿರಲ್ಲಾ, ನಿಮಗೆ ಮೋದಿಯವರನ್ನು ಪ್ರಶ್ನೆ ಮಾಡುವ ನೈತಿಕತೆ ಇದಿಯಾ” ಎಂದು ಪ್ರಶ್ನಿಸಿದ್ದಾರೆ.

ಇನ್ನಿಂಗ್ಸ್ ಮುಗಿಸಿದ ಮನಮೋಹನ್ ಸಿಂಗ್…!

ಅಮಿತ್ ಶಾ ಮನಮೋಹನ್ ಸಿಂಗ್ ಗೆ ಅದ್ಯಾವಾಗ ಚಾಟಿ ಬೀಸಿದರೋ ಅಂದಿನಿಂದ ಮನಮೋಹನ್ ಸಿಂಗ್ ಮೌನಕ್ಕೆ ಜಾರಿದ್ದಾರೆ. ಕಾಂಗ್ರೆಸ್ ನಾಯಕರು ಗುಜರಾತ್ ಚುನಾವಣೆ ಸಂದರ್ಭದಲ್ಲಿ ಎಷ್ಟು ಕೆಲಸವನ್ನು ಮಾಡಬೇಕೋ, ಎಷ್ಟು ಮಾತನಾಡಬೇಕೋ ಎಂಬುವುದನ್ನು ಈ ಮೊದಲೇ ಹೇಳಿದ್ದರಿಂದ ಅದನ್ನು ಪಾಲಿಸಿದ್ದಾರಷ್ಟೆ. ಅದನ್ನು ಹೊರತುಪಡಿಸಿ ಬೇರೇನೂ ಮಾತನಾಡೋದಿಲ್ಲ ಎಂಬುವುದನ್ನು ಸಾಭೀತು ಪಡಿಸಿದ್ದಾರೆ.

ತನ್ನ ಕಾಂಗ್ರೆಸ್ ಹೈಕಮಾಂಡ್ ಕೊಟ್ಟ ಇನ್ನಿಂಗ್ಸ್‍ನ್ನು ಈಗಾಗಲೇ ಮುಗಿಸಿದ್ದಾರೆ. ಆದರೆ ಅವರೋರ್ವ ನಾಟಕ ತಂಡದಲ್ಲಿದ್ದ ಒಬ್ಬ ನಟರಂತೆ ವರ್ತಿಸಿದ್ದಾರೆಯೇ ವಿನಹ ಯಾವುದೇ ಕಾರಣಕ್ಕೂ ಮಾಜಿ ಪ್ರಧಾನಿಯಂತೆ ಕಾಣಲೇ ಇಲ್ಲ. ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್‍ರಿಗೆ ಕನಿಷ್ಟ ಪಕ್ಷ ಭಾಷಣ ಮಾಡಲೂ ಬರೋದಿಲ್ಲ ಎಂಬುವುದೇ ಒಂದು ದೊಡ್ಡ ವಿಪರ್ಯಾಸ. ಆರ್ಥಿಕ ತಜ್ನರಾಗಿದ್ದು, ಎರಡು ಬಾರಿ ಪ್ರಧಾನಿಯಾದ ಮನಮೋಹನ್ ಸಿಂಗ್‍ರು, ಇಟಲಿಯ ರಾಣಿ ಹೇಳಿದಂತೆ ಕೆಳಿದ್ದಾರೆ ವಿನಹ ಎಂದಿಗೂ ಪ್ರಧಾನಿಯಂತೆ ಕಾಣಲಿಲ್ಲ. ತಾನು ಪ್ರಧಾನಿಯಾಗಿದ್ದಾಗಲೂ ಸರಿಯಾಗಿ ಮಾತನಾಡಲು ಅಸಾಧ್ಯವಾಗಿದ್ದ ಮನಮೋಹನ್ ಸಿಂಗ್‍ರು ಈಗಲೂ ಓದಿಯೇ ಭಾಷಣ ಮಾಡುತ್ತಾರೆ. ಇತ್ತೀಚೆಗೆ ಮೋದಿ ಬಗ್ಗೆ ಟೀಕೆ ಮಾಡಲು ಮೈಕ್ ಮುಂಭಾಗ ಬಂದು ನಿಂತಾಗಲೂ ಅವರಿಗೆ ತಾನು ಆಗಾಗಲೇ ಬರೆದುಕೊಂಡಿದ್ದ ಪತ್ರಿಕೆಯ ಅವಶ್ಯಕತೆಯಿತ್ತು. ಪತ್ರಿಕಾ ಗೋಷ್ಟಿಗೂ ಚೀಟಿ ಓದಿ ಮಾತನಾಡುವ ಮನಮೋಹನ್ ಸಿಂಗ್‍ರು ಈ ದೇಶವನ್ನು 10 ವರ್ಷಗಳ ಕಾಲ ಅದೇನು ಆಳಿದ್ದಾರೋ ಕಾಂಗ್ರೆಸ್ ನಾಯಕನೇ ಬಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಸಿಂಗ್ ವಿರುದ್ಧ ತೀವ್ರ ಟೀಕೆ…

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. “ತಾವು ಪ್ರಧಾನಿಯಾಗಿದ್ದಾಗ ಯಾಕೆ ಮೌನವಾಗಿದ್ರಿ ನಿಮ್ಮ ಕಣ್ಣ ಮುಂದೆಯೇ ನಿಮ್ಮ ಸಂಪುಟದ ಸಚಿವರುಗಳು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾಗ ನಿಮ್ಮ ಮಾತುಗಳು ಯಾಕೆ ಹೊರಬರಲೇ ಇಲ್ಲ” ಎಂದು ಪ್ರಶ್ನಿಸಿದ್ದಾರೆ.

ಒಟ್ಟಾರೆಯಾಗಿ ದೇಶದ ಮಾಜಿ ಪ್ರಧಾನಿಯೆನಿಸಿಕೊಂಡವರು ಮತ್ತು ಅವರ ಪಕ್ಷ ಕಾಂಗ್ರೆಸ್ ಮಾಡಬಾರದ ದೇಶದ್ರೋಹದ ಕೆಲಸಗಳನ್ನು ಮಾಡಿದ್ದಲ್ಲದೆ ಈಗ ಮೋದಿ ಮೇಲೆ ತಮ್ಮ ಟೀಕಾ ಪ್ರಹಾರವನ್ನೇ ಮಾಡಿ ತಮ್ಮದೇನೂ ತಪ್ಪಿಲ್ಲ ಎಂದು ಬಿಂಬಿಸಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ಅದೆಷ್ಟೇ ಶತ ಪ್ರಯತ್ನ ಪಟ್ಟರೂ ಕಾಂಗ್ರೆಸ್ ಪಕ್ಷ ವಿಫಲವಾಗುವುದೂ ಅಷ್ಟೇ ಸತ್ಯ…

-ಸುನಿಲ್ ಪಣಪಿಲ

Tags

Related Articles

Close