ಪ್ರಚಲಿತ

ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕರು ಪಾಕಿಸ್ಥಾನದ ರಾಯಭಾರಿಗಳನ್ನು ರಹಸ್ಯವಾಗಿ ಭೇಟಿಯಾಗಿ‌ದ್ದರ ಹಿಂದಿನ ಮರ್ಮವೇನು?! ನಿಮ್ಮ ತಲೆಯಲ್ಲಿ ಓಡುತ್ತಿರುವ ಕುತಂತ್ರವೇನು ರಾಹುಲ್ ಗಾಂಧಿ?!!

ಎರಡನೇ ಹಂತದ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇನ್ನೊಂದು ಎಡವಟ್ಟಾ?!

ಈ ಕಾಂಗ್ರೆಸ್ ಪಕ್ಷ ಒಂದಲ್ಲ ಒಂದು ರೀತಿ ಗುರುತಿಸಲ್ಲಲ್ಪಡುತ್ತನೇ ಇರುತ್ತದೆ. ಯಾವಾಗಲೂ ಒಂದೊಂದು ನಾಟಕೀಯ ದೃಶ್ಯಗಳನ್ನು ಸೃಷ್ಟಿಸುವಲ್ಲಿ ಮತ್ತು ಹಗರಣಗಳನ್ನು ಮಾಡುವಲ್ಲಿ ಇವರು ಈಗಾಗಲೇ ದಾಖಲೆಯನ್ನು ಸೃಷ್ಟಿಸಿದ್ದಾರೆ. ಹಗರಣಗಳಲ್ಲಿ ಎಕ್ಸ್‍ಪರ್ಟ್ ಬಿಡಿ!! ಎರಡನೇ ಹಂತದ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇನ್ನೊಂದು ಎಡವಟ್ಟನ್ನು ಮಾಡಿದ್ದಾರೆ ಈ ಕಾಂಗ್ರೆಸ್ಸಿಗರು!

ದೇಶದ ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಮತ್ತು ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಇಬ್ಬರೂ ಪಾಕಿಸ್ತಾನಿ ಪದವಿಯಲ್ಲಿರುವ ವ್ಯಕ್ತಿಗಳೊಂದಿಗೆ ನಡೆಸಿದ ಗುಪ್ತ ಮಾತುಕತೆ ಏನು? ಪ್ರಧಾನಿ ಮೋದಿಯವರು ಈ ವಿಷಯವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದಾಗ ಈ ವಿಷಯ ಹಸಿ ಸುಳ್ಳು ಎಂದು ಬೊಬ್ಬಿರಿಸಿದ ಕಾಂಗಿಗಳು ನಂತರ ಸಾಕ್ಷ್ಯಾಧಾರದೊಂದಿಗೆ ಭಾಜಪ ಮಂಡಿಸಿದಾಗ ಖಿನ್ನರಾಗಿ ಹೌದು ಹೌದು ಆದರೆ ಇದು ವೈಯಕ್ತಿಕ ಕೂಟ ಎಂದು ಸಂಭಾಳಿಸಲು ಪ್ರಯತ್ನಿಸಿದರು.

ದೇಶದ ಪ್ರಧಾನಿ ಮನ ಮೋಹನ್ ಸಿಂಗ್ ಮತ್ತು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಯಾವುದೇ ವಿದೇಶಿ ಅಧಿಕಾರಿಗಳನ್ನು ಭೇಟಿ ಮಾಡುವ ಮೊದಲು ವಿದೇಶಾಂಗ ಸಚಿವಾಲಯದಿಂದ ಅನುಮತಿ ಪಡೆಯ ಬೇಕು ಏಕೆಂದರೆ ಇವರ ಬಳಿ ದೇಶದ ಅನೇಕ ಸೂಕ್ಷ್ಮ ಹಾಗೂ ರಹಸ್ಯ ಮಾಹಿತಿಗಳು ಇವರಲ್ಲಿರುತ್ತದೆ. ಈ ಕಾರಣದಿಂದ ಕಾಂಗಿಗಳು ಈ ಭೇಟಿಯನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮನೆಯಲ್ಲಿ ಮಾಡಲಾಗದು ಆದ್ದರಿಂದ ಇದನ್ನು ಮಣಿಶಂಕರ್ ಅಯ್ಯರ್ ನಡೆಸಿದ್ದರು. ಯಾಕೆ ಹೀಗೆ ನಮ್ಮ ದೇಶದ ಶತ್ರು ರಾಷ್ಟ್ರದ ಜೊತೆ ದೇಶದ ಪದವಿಯಲ್ಲಿರುವ ಅಧಿಕಾರಿಗಳೊಂದಿಗೆ ಏನು ರಹಸ್ಯ ಮಾತುಕತೆ ಇರಬಹುದು ಎಂಬುವುದು ನಿಮ್ಮ ತಿಳುವಳಿಕೆಗೆ ಬಿಟ್ಟಿದ್ದು.. ಅಧಿಕಾರಕ್ಕಾಗಿ ಏನೂ ಮಾಡಲೂ ಸೈ ಎಂಬುವುದಕ್ಕೆ ಇದೊಂದು ಜ್ವಲಂತ ಉದಾಹರಣೆ:

ನವದೆಹಲಿಯ ಜಂಗ್‍ಪುರ ಬಡಾವಣೆಯಲ್ಲಿರುವ ಮಣಿಶಂಕರ್ ಅಯ್ಯರ್ ನಿವಾಸದಲ್ಲಿ ಡಿಸೆಂಬರ್.6ರಂದು ಸಭೆ ಆಯೋಜನೆಗೊಂಡಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸಭೆಯಲ್ಲಿ ಭಾಗಿಯಾಗಿದ್ದರು. ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಶೀದ್ ಕಸೂರಿ ಒಳಗೊಂಡ ಪಾಕ್ ತಂಡದಲ್ಲಿ ಅಲ್ಲಿನ ಸರ್ಕಾರಿ ಅಧಿಕಾರಿಗಳಿದ್ದರು. ಗುಜರಾತ್ ಮೊದಲ ಹಂತದ ಮತದಾನಕ್ಕೆ ಮೂರು ದಿನ ಮುನ್ನ ಈ ಸಭೆ ನಡೆದಿರುವುದನ್ನು ಪಾಕ್‍ನ ವಿದೇಶಾಂಗ ಸಚಿವಾಲಯದ ಮೂಲಗಳು ಖಚಿತಪಡಿಸಿವೆ.

ಈ ಮಾಹಿತಿಯನ್ನು ಬಹಿರಂಗಪಡಿಸಿದ್ದ ಬಿಜೆಪಿ ಮುಖಂಡ ಹಾಗೂ ಬೋಫೆÇರ್ಸ್ ಪ್ರಕರಣದ ಮುಖ್ಯ ಫಿರ್ಯಾದುದಾರ ಅಜಯ್ ಅಗರ್ವಾಲ್, ಬೇಹುಗಾರಿಕಾ ಸಂಸ್ಥೆ ಮೂಲಗಳು ಕೂಡ ಈ ವಿಚಾರವನ್ನು ಖಚಿತಪಡಿಸಿತ್ತು. ಹಾಗಾದರೆ ಕಾಂಗ್ರೆಸ್‍ಗೆ ಮತ್ತು ಪಾಕ್‍ಗೆ ಈ ಚುನಾವಣೆಯ ಅಥವಾ ಬೇರೆ ಯಾವುದೇ ವಿಚಾರವಾದರೂ ಅವರಲ್ಲಿ ಯಾವ ವಿಚಾರದ ಬಗ್ಗೆಯೂ ಚರ್ಚಿಸುವ ಅಗತ್ಯವೇನು ಇದೆಯೇ?… ಪಾಕ್ ಭಯೋತ್ಪಾದಕರನ್ನು ಭಾರತಕ್ಕೆ ಸ್ವಾಗತಿಸುವ ತಯಾರಿ ಈಗಾಗಲೇ ನಡೆಸುತ್ತಿರುವುದು ಎಲ್ಲರಿಗೂ ಸ್ಪಷ್ಟವಾಗಿ ಗಮನಿಸಬಹುದು.

ಮಣಿಶಂಕರ್ ಅಯ್ಯರ್ ಮನೆಯಲ್ಲಿ ನಡೆದ ಸಭೆಯ ಬಳಿಕ ಗುಜರಾತ್‍ನ ಹಿಂದುಳಿದ ವರ್ಗಗಳು, ಬಡವರನ್ನು ಅವಮಾನಿಸಲಾಗುತ್ತಿದೆ. ಇದೆಲ್ಲವನ್ನು ಗಮನಿಸಿದಾಗ ದೇಶದ ಹಿತಕಾಯುವ ವಿಷಯದಲ್ಲಿ ಕಾಂಗ್ರೆಸ್ ಬದ್ಧತೆ ಬಗ್ಗೆ ಅನುಮಾನ ಮೂಡುತ್ತದೆ. ಆದ್ದರಿಂದ, ಕಾಂಗ್ರೆಸ್ ದೇಶದ ಜನತೆಗೆ ಸ್ಪಷ್ಟನೆ ನೀಡಬೇಕಾಗಿದೆ.”ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪಾಕಿಸ್ಥಾನ ಕಾಂಗ್ರೆಸ್ ಯಾಕಾದರೂ ಹಸ್ತಕ್ಷೇಪ ಮಾಡುತ್ತಿದೆ ಎಂಬುವುದು ಎಲ್ಲರ ಪ್ರಶ್ನೆಯಾಗಿದೆ. ಗುಜರಾತ್ ಮತದಾನಕ್ಕೆ ನೇರವಾಗಿ ಪಾಕಿಸ್ಥಾನದ ಸಂಬಂಧವಿರುವುದು ಕಾಂಗ್ರೆಸ್ ಪಕ್ಷದ ಪ್ರಮುಖರು ಇತ್ತೀಚೆಗಷ್ಟೇ ಪಾಕ್‍ನ ನಾಯಕರನ್ನು ರಹಸ್ಯವಾಗಿ ಭೇಟಿಯಾಗಿರುವ ವಿಚಾರವನ್ನು ಅವರು ಬಹಿರಂಗ ಪಡಿಸಿದ್ದಾರೆ.

ಅದರಲ್ಲಿ ಭಾರತದಲ್ಲಿರುವ ಪಾಕ್ ಹೈಕಮಿಷನರ್ ಮತ್ತು ಪಾಕಿಸ್ಥಾನದ ಮಾಜಿ ವಿದೇಶಾಂಗ ಸಚಿವರು ಭಾಗಿಯಾಗಿದ್ದರು. ಅಷ್ಟೇ ಅಲ್ಲ, ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಹಾಗೂ ಮಾಜಿ ಉಪರಾಷ್ಟ್ರಪತಿಯೊಬ್ಬರು ಅಲ್ಲಿದ್ದು, 3 ಗಂಟೆಗಳ ಕಾಲ ನೆರೆರಾಷ್ಟ್ರದ ರಾಯಭಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಇದನ್ನೆಲ್ಲ ನೋಡುವಾಗ ಯಾರಿಗಾದರೂ ಅನುಮಾನ ಬರುವುದಿಲ್ಲವೇ’ ಅಲ್ಲದೆ, ಈ ಸಭೆ ನಡೆದ ಮಾರನೇ ದಿನವೇ ಅಯ್ಯರ್ ನನ್ನನ್ನು ನೀಚ ಎಂದು ಕರೆದರು. ಗುಜರಾತ್‍ನ ಜನತೆಯನ್ನು, ಇಲ್ಲಿನ ಹಿಂದುಳಿದ ವರ್ಗಗಳನ್ನು, ಬಡವರನ್ನು ಮತ್ತು ಮೋದಿಯನ್ನು ಅವಮಾನಿಸಿದರು. ಈ ಕುರಿತು ಕಾಂಗ್ರೆಸ್ ದೇಶದ ಜನರಿಗೆ ವಿವರಣೆ ನೀಡಬೇಕಾಗಿದೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಂದು ಚೀನಾ ರಾಯಭಾರಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ ಹೆಚ್ಚಿನವರು ಕೇಳುತ್ತಿರುವುದು ಅದೇಕೆ ಕಾಂಗ್ರೆಸ್ ಈ ಭೇಟಿಯನ್ನು ಕದ್ದುಮುಚ್ಚಿ ಮಾಡುವುದಕ್ಕೆ ನೋಡಿ ನಂತರ ಸಮರ್ಥನೆಗಿಳಿದಿರುವುದು ಎಲ್ಲರ ಪ್ರಶ್ನೆಯಾಗಿದೆ.

ಅದಲ್ಲದೆ  ಅಂದು ಚೀನಾ ರಾಯಭಾರ ಕಚೇರಿಗೆ ರಾಹುಲ್ ತೆರಳಿರುವ ವಾರ್ತೆಯನ್ನು ಸುದ್ದಿವಾಹಿನಿಗಳು ಬಿತ್ತರಿಸಿದಾಗ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವಿಟ್ಟರಿನಲ್ಲಿ ಅದನ್ನು ಅಲ್ಲಗಳೆಯುತ್ತ, `ಭಕ್ತ’ ವಾಹಿನಿಗಳು ಸುಳ್ಳು ಸುದ್ದಿ ಹರಡುತ್ತಿವೆ ಎಂದು ಕಿಡಿಕಾರಿದ್ದರು. ಅವರೇ ಪತ್ರಿಕಾಗೋಷ್ಟಿ ನಡೆಸಿ- `ರಾಹುಲ್ ಗಾಂಧಿ ಚೀನಾ ರಾಯಭಾರಿ ಹಾಗೂ ಭೂತಾನ್ ರಾಯಭಾರಿಯನ್ನೂ ಭೇಟಿ ಮಾಡಿದ್ದರು. ಆದರೆ ಮಾಧ್ಯಮದ ಮೂಲಕ ವಿದೇಶಾಂಗ ಸಚಿವಾಲಯವು ಸೃಷ್ಟಿಸುತ್ತಿರುವ ರೀತಿಯಲ್ಲಿ ಅಲ್ಲ’ ಎಂದು ಸಮಜಾಯಿಷಿ ನೀಡಿದ್ದರು. ಇದಕ್ಕೂ ಮೊದಲು, ರಾಹುಲ್ ಗಾಂಧಿ ಭೇಟಿಯ ಬಗ್ಗೆ ಮಾಹಿತಿ ಪ್ರಕಟಿಸಿದ್ದ ಚೀನಾ ರಾಯಭಾರಿ ಕಚೇರಿ ವೆಬ್ಸೈಟು, ಕಾಂಗ್ರೆಸ್ಸಿನ ನಿರಾಕರಣೆ ಬರುತ್ತಲೇ ಅದನ್ನು ತೆಗೆದುಹಾಕಿದ್ದು ಎಲ್ಲರಲ್ಲಿ ಶಂಕೆಯ ಭಾವನೆಯನ್ನು ಬಿತ್ತಿತ್ತು.

ಅಲ್ಲದೇ ನಿರ್ಧಾರ ಜಾರಿಯ ಅಧಿಕಾರ ಇರುವ ಪ್ರಧಾನಿ ಅಥವಾ ಸರ್ಕಾರದ ಹುದ್ದೆಗಳಲ್ಲಿರುವವರು ಚೀನಾ ಸರ್ಕಾರದ ಪ್ರತಿನಿಧಿಗಳನ್ನು ಭೇಟಿ ಮಾಡುವುದಕ್ಕೂ ರಾಹುಲ್ ಭೇಟಿಗೂ ವ್ಯತ್ಯಾಸವಿದೆ. ಪ್ರತಿಪಕ್ಷ ಮುಖಂಡರು ರಾಯಭಾರಿಗಳನ್ನು ಭೇಟಿ ಮಾಡಿರುವುದು ತಪ್ಪು ಕ್ರಮವೂ ಅಲ್ಲ, ಇದೇ ಮೊದಲು ಅಲ್ಲ. ಆದರೆ ಗಡಿಯಲ್ಲಿ ವಿಷಮ ಸ್ಥಿತಿ ಇರುವಾಗ ನಡೆದ ಈ ಭೇಟಿಯನ್ನು ಕಾಂಗ್ರೆಸ್ ಪ್ರಾರಂಭದಲ್ಲಿ ನಿರಾಕರಿಸಿದ್ದೇಕೆ ಹಾಗೂ ಅದು ಈ ವಿದ್ಯಮಾನಕ್ಕೆ ನೀಡುತ್ತಿರುವ ಪರಿಹಾರ ಸೂತ್ರವೇನು ಎಂಬುದು ಇಲ್ಲಿನ ಪ್ರಶ್ನೆ.

ಇಲ್ಲಿರುವುದು ನಿಯಮಾವಳಿಯ ಪ್ರಶ್ನೆಯಲ್ಲ. ಆದರೆ ಗಡಿಯಲ್ಲಿ ಚೀನಾದ ಜತೆ ವೈಷಮ್ಯ ಕದಡಿರುವಾಗ ಇಡೀ ದೇಶ ಒಂದು ಧ್ವನಿಯಲ್ಲಿ ಮಾತನಾಡಬೇಕಿರುವುದು ಅವಶ್ಯ. ಇಂಥ ಸಂದರ್ಭದಲ್ಲಿ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯೊಂದಿಗೆ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದಿರಬಹುದಾದರೂ, ಈ ವಿಷಯದಲ್ಲಿ ಸರಕಾರ ಸ್ಪಷ್ಟ ವ್ಯಾಖ್ಯಾನ ಏನೆಂಬುದನ್ನು ಆಂತರಿಕ ಮಾತುಕತೆ ಮೂಲಕ ವಿಚಾರಿಸಿಕೊಳ್ಳುವುದಕ್ಕೂ ಮುಂಚೆಯೇ, ಹಳೇ ಸ್ನೇಹ ಮತ್ತು ರಿವಾಜುಗಳ ಹೆಸರಲ್ಲಿ ಚೀನಾ ರಾಯಭಾರಿಯನ್ನು ಭೇಟಿಯಾಗಿರುವುದು ರಾಜಕೀಯ ಅಪ್ರಬುದ್ಧತೆಯ ಉದಾಹರಣೆಯಷ್ಟೆ.

ಯಾಕೆ ಈ ರೀತಿಯಾಗಿ ಶತ್ರು ರಾಷ್ಟ್ರದೊಂದಿಗೆ ಮಿತ್ರರಾಗಲು ಕಾಂಗ್ರೆಸ್ ಪಕ್ಷ ಹೊರಟಿದೆ ಎಂದರೆ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕು.. ಯಾಕೆಂದರೆ ಗುಜರಾತ್ ಗಡಿಭಾಗದಿಂದಲೇ ಪಾಕಿಸ್ಥಾನದ ಭಯೋತ್ಪಾದಕರಿಗೆ ಒಳ ನುಸುಳಲು ಸಾಧ್ಯವಾಗುವುದು… ಈ ಹಿಂದೆ ಅನೇಕ ದಂಧೆಗಳನ್ನು ಅಂದರೆ ಡ್ರಗ್ಸ್, ಹೆರಾಯಿನ್ ಇಂತಹ ಕಾರ್ಯ ಚಟುವಟಿಕೆಗಳು ಭಾರತಕ್ಕೆ ಬರುತ್ತಿದ್ದಿದ್ದು ಗುಜರಾತ್ ಗಡಿಭಾಗದಿಂದಲೇ…

ಇಲ್ಲಿಯೇ ತಮ್ಮ ವ್ಯಾಪಾರವನ್ನು ಆರಂಭಿಸಿದ್ದರು….ಆದರೆ ಯಾವಾಗ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಚುಕ್ಕಾಣಿ ಹಿಡಿದರೋ ಆವಾಗ ಶುರುವಾಗಿತ್ತು ಕಾಂಗ್ರೆಸ್‍ಗೆ ಭಯ!.. ಯಾಕೆಂದರೆ ಇನ್ಮುಂದೆ ನಕಲಿ ನೋಟು, ಡ್ರಗ್ಸ್, ಹೆರಾಯಿನ್ ಮುಂತಾದ ಕಾರ್ಯ ಚಟುವಟಿಕೆಗಳನ್ನು ಮಾಡಲು ಸಾಧ್ಯವಿಲ್ಲ ಎಂಬುವುದು ಮನದಟ್ಟಾಯಿತು. ಯಾವಾಗ ನರೇಂದ್ರ ಮೋದಿಯವರು ಅಧಿಕಾರದ ಚುಕ್ಕಾಣಿಯನ್ನು ಹಿಡಿದರೋ ಅಂದಿನಿಂದ ಇಂದಿನವರೆಗೆ ಒಬ್ಬ ಪಾಕ್ ಭಯೋತ್ಪಾಕನಿಗೆ ಭಾರತಕ್ಕೆ ನುಸುಳಲು ಸಾಧ್ಯವಾಗಲಿಲ್ಲ… ಗಡಿಭಾಗದಲ್ಲಿ ಅಷ್ಟೊಂದು ಸೊಕ್ಷ್ಮತೆಯನ್ನು ಕಾಪಾಡಿದ್ದರು.

ಹೀಗೆ ಇನ್ನು ಮುಂದೆಯೂ ಗುಜರಾತ್‍ನಲ್ಲಿ ಏನಾದರೂ ಮೋದಿ ಸರಕಾರ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೆ ಪಾಕ್‍ನೊದಿಗೆ ಮೃದು ಧೋರಣೆಯನ್ನು ತೋರಿಸಿರುವ ಕಾಂಗ್ರೆಸ್ ಪಾಕ್‍ನೊಂದಿಗೆ ಸೇರಿ ಯಾವುದೇ ಕಾರ್ಯಚಟುವಟಿಕೆಯನ್ನು ಮಾಡಲಾಗುವುದಿಲ್ಲ ಎಂದು ಪಾಕ್ ಅಧಿಕಾರಿಗಳ ಜೊತೆ ಸೇರಿ ಚುನಾವಣೆಯಲ್ಲಿ ಯಾವ ರೀತಿ ಬಿಜೆಪಿಯನ್ನು ಸೋಲಿಸಬಹುದು ಎನ್ನುವುದಕ್ಕೆ ಚರ್ಚೆ ನಡೆದ್ದಿರಬಹುದು. ಬೇರೆ ಯಾವುದೇ ದೇಶದಲ್ಲಿ ಅಲ್ಲಿನ ರಾಜಕಾರಣಿಗಳು ಅಧಿಕಾರದಲ್ಲಿ ಇಲ್ಲದಿದ್ದಾಗ ತಮ್ಮ ದೇಶದ ಶತ್ರುಗಳೊಂದಿಗೆ ರಹಸ್ಯವಾಗಿ ಭೇಟಿಯಾಗಿ ಹೀಗೆಲ್ಲಾ ಮಾಡಿರುವ ಅಥವಾ ಮಾಡುವುದರ ಬಗ್ಗೆ ಎಲ್ಲಿಯಾದರೂ ಕಂಡಿದ್ದೀರಾ ಅಥವಾ ಓದಿದ್ದೀರಾ?

-ಪವಿತ್ರ

Tags

Related Articles

Close