ಪ್ರಚಲಿತ

ಮುಂದಿನ ಬಾರಿಯೂ ಸಿದ್ಧರಾಮಯ್ಯನವರೇ ಮುಖ್ಯಮಂತ್ರಿಯಾಗಬೇಕಾ?!! ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಓದಲೇಬೇಕಾದ ಸಿದ್ದರಾಮಯ್ಯನ ಕರಾಳ ಕಥೆ!!

ಬರವಣಿಗೆಗೆ ಕೂತಾಗ ಬಹಳ ಆಕ್ರೋಶಬರಿತವಾಗಿ ಬರೆಯಬೇಕೆಂದು ಅನ್ನಿಸಿತ್ತು. ಆದರೆ ಓದುವವರಲ್ಲಿ ಮಕ್ಕಳು ಮಹಿಳೆಯರು ಇರುವುದರಿಂದ ನನ್ನ ಆಕ್ರೋಶಕ್ಕೆ ನಾನೇ ಕಡಿವಾಣ ಹಾಕಿ ಈ ರೀತಿ ಬರೆಯುತ್ತಾ ಇದ್ದೇನೆ.

ಕರ್ನಾಟಕದ ಬಗ್ಗೆ ಅದೆಷ್ಟು ಗೌರವ ಹೆಮ್ಮೆ ಇತ್ತೆಂದರೆ ದೇಶಕ್ಕಿಂತ ಹೆಚ್ಚಾಗಿ ರಾಜ್ಯದ ಬಗ್ಗೆ ಪ್ರೀತಿ ಹೊಂದಿದ್ದವನು ನಾನು.
ಹಾಗಂತ ದೇಶದ ಬಗ್ಗೆ ಪ್ರೀತಿ ಗೌರವ ಇಲ್ಲ ಎಂದರ್ಥವಲ್ಲ. ಆದರೂ ಕರ್ನಾಟಕದ ಬಗ್ಗೆ ಅದೇನೋ ಒಂದು ರೀತಿಯ ವಿಶೇಷ ಭಾವನೆ. ಆದರೆ ಅದೆಲ್ಲದಕ್ಕೂ ಎಳ್ಳು ನೀರು ಬಿಟ್ಟ ಕೀರ್ತಿ ಮಾತ್ರ ಸಿದ್ದರಾಮಯ್ಯನಿಗೆ ಸಲ್ಲಬೇಕು.

ಯಾಕೆಂದರೆ ಕರ್ನಾಟಕದ ಮೇಲಿದ್ದ ಪ್ರೀತಿ ಗೌರವ ಎಲ್ಲವೂ ಸಿದ್ದರಾಮಯ್ಯನ ಆಡಳಿತ ಪ್ರಾರಂಭವಾದ ದಿನದಿಂದಲೇ ದೂರವಾಗತೊಡಗಿತು. ಬಿಜೆಪಿ ಅಧಿಕಾರದಲ್ಲಿ ಇರುವ ಸಂದರ್ಭವದು. ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯನವರು ಬಿಜೆಪಿಯ ವಿರುದ್ದ ಕೆಲವೊಂದು ಬಾರಿ ತೊಡೆತಟ್ಟಿ ಮಾತನಾಡುವುದನ್ನು ಕಂಡಾಗ ಆಶ್ಚರ್ಯವಾಗುತ್ತಿತ್ತು. ಈ ಮನುಷ್ಯ ವಿರೋಧ ಪಕ್ಷದಲ್ಲೇ ಹೀಗೆ ,ಇನ್ನು ಅಧಿಕಾರಕ್ಕೆ ಬಂದರೆ ಇನ್ನೇನೋ? ಎಂದು ಮನಸ್ಸಿನಲ್ಲೇ ಅದೆಷ್ಟೋ ಬಾರಿ ಅನಿಸಿದ್ದು ಮಾತ್ರ ಸುಳ್ಳಲ್ಲ.

ವಿರೋಧ ಪಕ್ಷದಲ್ಲಿದ್ದಾಗ ಅಷ್ಟೊಂದು ಪೌರುಷ ಮೆರೆದ ವ್ಯಕ್ತಿ ಇಂದು ಅಧಿಕಾರ ಕೈಯಲ್ಲಿರುವಾಗ ಇಡೀ ರಾಜ್ಯವನ್ನೇ ಬಲಿಕೊಡಲುಮನುಷ್ಯನ ನ್ನು ಹೊರಟಿರುವುದು ವಿಪರ್ಯಾಸವೇ ಸರಿ. ಕಾಲ ಯಾವ ರೀತಿಯಲ್ಲಿ ಮನುಷ್ಯನನ್ನು ಬದಲಾಯಿಸುತ್ತದೆ ಎಂಬೂದಕ್ಕೆ ಸಿದ್ದರಾಮಯ್ಯನೇ ಸಾಕ್ಷಿ.

ಅಧಿಕಾರಕ್ಕೆ‌ ಬಂದ ದಿನದಿಂದಲೇ ತಾನೊಬ್ಬ ಹಿಂದುವಾಗಿ ರಾಜ್ಯದ ಹಿಂದುಗಳ ಆಚರಣೆಗಳಿಗೆ ಭಾವನೆಗಳಿಗೆ ನಂಬಿಕೆಗಳಿಗೆ ಬೆಲೆಯೇ ಕೊಡದೆ ಕೇವಲ ‘ವೋಟ್ ಬ್ಯಾಂಕ್’ ಗಾಗಿ ಅಲ್ಪಸಂಖ್ಯಾತರು ಎಂದು ಕರೆಯಲ್ಪಡುವ ಮುಸ್ಲಿಮರ ಓಲೈಕೆಯಲ್ಲಿ‌ ತನ್ನನ್ನು ತಾನು ತೊಡಗಿಸಿಕೊಂಡು ಬಂದಿರುವುದು ನಿಜಕ್ಕೂ ಕಾಂಗ್ರೆಸ್ ಗೆ ಮತ ನೀಡಿದ ಹಿಂದೂಗಳಿಗೆ ಆಗಬೇಕಾದದ್ದೇ…!

ಕಾಂಗ್ರೆಸ್ ಎಂದರೆ ಸಾಕು ಸಣ್ಣ ವಯಸ್ಸಿನಿಂದಲೂ ದೂರ ಸರಿಯುತ್ತಿದ್ದ ನಾನು ಕಾಂಗ್ರೆಸ್ ಗಿಂತ ಹೆಚ್ಚಾಗಿ ಸಿದ್ದರಾಮಯ್ಯನನ್ನು ದ್ವೇಷಿಸಲು ಪ್ರಾರಂಭಿಸಿದೆ. ಮನೆಯಲ್ಲಿ ಸದಾ ‘ಸಂಘದ ಮತ್ತು ಬಿಜೆಪಿಯ’ ಬಗ್ಗೆ ಹೆಚ್ಚಾಗಿ ಮಾತನಾಡುವುದರಿಂದ ನಾನು ಕಾಂಗ್ರೆಸ್ ನಿಂದ ದೂರನೇ ಇದ್ದೆ.

ಕಾಂಗ್ರೆಸ್ ಹಿಂದು ವಿರೋಧಿ ಎಂದು ಬೇರೆಯವರು ಮಾತನಾಡುತ್ತಿದ್ದನ್ನು ಕೇಳುತ್ತಿದ್ದ ನಾನು ಕ್ರಮೇಣ ಕಣ್ಣಾರೆ ಕಾಣಲು ಶುರುಮಾಡಿದೆ. ಕಾಂಗ್ರೆಸ್ ನಲ್ಲಿಯೂ ಹಿಂದೂಗಳು ಇದ್ದಾರೆ.ಆದರೂ ಈ‌ ಪಕ್ಷ ಏಕೆ ಹಿಂದೂ ವಿರೋಧಿ? ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡುತ್ತಿತ್ತು. ಆದರೆ ಅದೆಲ್ಲದಕ್ಕೂ ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ದಿನದಿಂದಲೇ ನೋಡುವ ‘ಭಾಗ್ಯ’ ಸಿಕ್ಕಿತು.

ರಾಜ್ಯದ ಹಿಂದೂಗಳ ಆಚಾರ ವಿಚಾರಗಳಿಗೆ ಬೆಲೆ ಕೊಡದೆ ಮುಸ್ಲೀಮರ ಓಲೈಕೆಗಾಗಿ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿರುವ ‘ಪಿ ಎಫ್ ಐ'(ಪಾಪ್ಯುಲರ್ ಫ್ರಂಟ್‌ ಆಫ್ ಇಂಡಿಯಾ) ಸಂಘಟನೆಯ ಕಾರ್ಯಕರ್ತರ ಮೇಲಿದ್ದ ನೂರಾರು ಕೇಸ್ ಗಳನ್ನು ವಾಪಾಸು ಪಡೆಯುವ ಮೂಲಕ ತಾನೊಬ್ಬ ಹಿಂದು ವಿರೋಧಿ ಎಂಬೂದನ್ನು ನೇರವಾಗಿ ರಾಜ್ಯದ ಜನರ ಮುಂದೆ ಸಾರಿದರು. ಅಪರಾಧಿಗಳ ಪರ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದ ಸಿದ್ದರಾಮಯ್ಯ “ಸಂಘಪರಿವಾರದವರ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು” ಎನ್ನುವ ಮೂಲಕ ಹಿಂದೂಗಳ ನಾಶಕ್ಕೆ ಹೆಜ್ಜೆ ಇಟ್ಟರು.

ಅದೆಷ್ಟೋ ದೊಡ್ಡ ದೊಡ್ಡ ತಲೆಗಳು ಇದೇ ರೀತಿ ಬೊಬ್ಬೆ ಹಾಕಿದ್ದರು ಎಂಬುದು ಇತಿಹಾಸದ ಪುಟ ತೆರೆದರೆ ಗೊತ್ತಾಗಬಹುದು. ಯಾಕೆಂದರೆ “ಸನಾತನ ಧರ್ಮ” ಎಂಬೂದು ಒಂದಿದ್ದರೆ ಅದು ‘ಹಿಂದು ಧರ್ಮ’ ಮಾತ್ರ.

ತನ್ನ ರಾಜಕೀಯ ಲಾಭಕ್ಕೋಸ್ಕರ ಯಾವ ಕೀಳು ಮಟ್ಟಕ್ಕೂ ಇಳಿಯಲು ತಯಾರಿರುವ ಸಿದ್ದರಾಮಯ್ಯ ರಾಜ್ಯದಲ್ಲಿ ಸಾಲು ಸಾಲು ಹಿಂದು ಕಾರ್ಯಕರ್ತರ ಕೊಲೆ‌ ನಡೆಸಿದರು.ಕೆಲವೊಂದು ಪ್ರಕರಣಗಳಲ್ಲಿ ಕಾಂಗ್ರೆಸ್ ನ‌ ಸಚಿವರ ಕೈವಾಡ ಬಯಲಾಗಿದ್ದರೂ ಸಹ ಮುಖ್ಯಮಂತ್ರಿಗಳು ಸಚಿವರ ಪರ ಬ್ಯಾಟಿಂಗ್ ಮಾಡಿದ್ದರಿಂದಲೇ ಎಲ್ಲವನ್ನೂ ಮುಚ್ಚಿಹಾಕುವಲ್ಲಿ ಯಶಸ್ಸು ಕಂಡಿತ್ತು ಸಿದ್ದರಾಮಯ್ಯ ಸರಕಾರ.

ರಾಜ್ಯದ ಅಲ್ಲಲ್ಲಿ ಹೆಣ್ಣುಮಕ್ಕಳ‌ ಅತ್ಯಾಚಾರ ಕೊಲೆಗಳಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಾ ಹೋದರು ರಾಜ್ಯ ಸರ್ಕಾರವಂತೂ ನಿದ್ದೆಯಿಂದ ಏಳುವುದು ಕಾಣುತ್ತಿಲ್ಲ.

ಗಣರಾಜ್ಯ ದಿನದಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯವನ್ನು ರಾಜ್ಯದ ಪರಂಪರೆಯನ್ನು ಪ್ರತಿನಿಧಿಸುವ ಸ್ತಬ್ದಚಿತ್ರ ಪ್ರದರ್ಶಿಸುವ ಅವಧಿಯಲ್ಲಿ‌ ರಾಜ್ಯಕ್ಕೆ ರಾಜ್ಯವೇ ದ್ವೇಷಿಸುವಂತಹ ‘ಟಿಪ್ಪು ಸುಲ್ತಾನನ’ ಪ್ರತಿಕ್ರತಿಯೊಂದನ್ನು ಪ್ರದರ್ಶಿಸಿ ದೇಶದೆದುರು ರಾಜ್ಯದ ಮರ್ಯಾದೆಯನ್ನು ಹರಾಜು ಮಾಡಿದವರು ಇದೇ ನಮ್ಮ ಸಿದ್ದರಾಮಯ್ಯ.

ರಾಜ್ಯದ ರಾಜಧಾನಿಯಾದ ಬೆಂಗಳೂರನ್ನು ಕಟ್ಟಿ ಬೆಳೆಸಿದ ‘ಕೆಂಪೇಗೌಡ’ , ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕ ,ಕಿತ್ತೂರು ರಾಣಿ ಚೆನ್ನಮ್ಮ ನಂತಹ ಅದೆಷ್ಟೋ ಹೋರಾಟಗಾರರು ನಮ್ಮ ರಾಜ್ಯದ ಇತಿಹಾಸದಲ್ಲಿ ಇರುವಾಗ ಒಂದು ಧರ್ಮದ ಏಳಿಗೆಗಾಗಿ ಅನ್ಯಧರ್ಮವನ್ನೇ ನಾಶ ಮಾಡಲು ಹೊರಟಂತಹ ಟಿಪ್ಪುಸುಲ್ತಾನನ ಸ್ತಬ್ಧ ಚಿತ್ರ ಪ್ರದರ್ಶಿಸಿದ್ದು ಇಡೀ ರಾಜ್ಯವೇ ತಲೆತಗ್ಗಿಸುವಂತಹ ಕೆಲಸ ಮಾಡಿದ್ದು ಇದೇ ಸಿದ್ದರಾಮಯ್ಯ.

ಧರ್ಮ ಧರ್ಮಗಳ ಮಧ್ಯೆ ಕೋಮುಗಲಭೆ ಸ್ರಷ್ಠಿಸಿದರೆ ಮಾತ್ರ ತನ್ನ ರಾಜಕೀಯ ಬೆಳವಣಿಗೆ ಸಾಧ್ಯ ಎಂದು ಮನಸ್ಸಿನಲ್ಲಿ ನೀಚ ಭಾವನೆ ಇಟ್ಟುಕೊಂಡಿರುವ ಸಿದ್ದರಾಮಯ್ಯ ‘ಟಿಪ್ಪುಜಯಂತಿ’ ಹೆಸರಿನಲ್ಲಿ ರಾಜ್ಯದಾದ್ಯಂತ ಗಲಭೆ ಸ್ರಷ್ಠಿಸಿ ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿಸಿ ಇಡೀ ರಾಜ್ಯದಲ್ಲಿ ಅಶಾಂತಿ ಸ್ರಷ್ಠಿಸಿ ತಾನೊಬ್ಬ ಸೆಕ್ಯುಲರ್ ಎಂಬೂದನ್ನು ಮತ್ತೇ ಸಾಬೀತುಪಡಿಸಿದರು.

ಎಲುಬಿಲ್ಲದ ನಾಲಗೆಯಲ್ಲಿ ಏನು ಬೇಕಾದರೂ ಬೊಗಳಬಹುದು ಎಂದು ಸಂಘಪರಿವಾರದವರನ್ನು ‘ಉಗ್ರಗಾಮಿಗಳು’ ಎಂದು ಕರೆಯುವ ಸಿದ್ದರಾಮಯ್ಯ ತಾನಿರುವ ಸ್ಥಾನಕ್ಕೂ ಮರ್ಯಾದೆ ಇಲ್ಲದಂತೆ ಮಾಡಿಬಟ್ಟರು.
ಹಿಂದು ಧರ್ಮದಲ್ಲಿ ಸಾಧು ಸಂತರಿಗೆ ಶ್ರೇಷ್ಠ ಸ್ಥಾನವನ್ನು ನೀಡಿದ್ದೇವೆ‌. ಆದರೆ ಈ ಸಿದ್ದರಾಮಯ್ಯ ತಾನೊಬ್ಬ ಹಿಂದುವಾಗಿ ಖಾವಿ ತೊಟ್ಟ ಸಂತರನ್ನೇ ಹೀಯಾಳಿಸುತ್ತಾನೆ ಎಂದರೆ ಈತನ ಅಲ್ಪಸಂಖ್ಯಾತರ ಓಲೈಕೆಯ ಪ್ರಮಾಣ ಎಷ್ಟರ ಮಟ್ಟಿಗೆ ಇದೇ ಎಂಬೂದನ್ನು ರಾಜ್ಯದ ಜನತೆ ಅಳೆಯಬಹುದು.

“ವಿನಾಶಕಾಲೇ ವಿಪರೀತ ಬುದ್ದಿ” ಎಂಬಂತೆ ಸಿದ್ದರಾಮಯ್ಯನ ಅಧಿಕಾರದ ಅವನತಿ ಸಮೀಪಿಸುತ್ತಿದ್ದಂತೆ ಜೋರಾಗಿ ಬೊಗಳೆ ಬಿಡಲು ಆರಂಭಿಸಿದ್ದಾರೆ. ಕಾಂಗ್ರೆಸ್ ನೀಚನೆಂದರೆ ಈ ಸಿದ್ದರಾಮಯ್ಯ ಅದಕ್ಕಿಂತಾ ಕಡೇ ಆಗಿಬಿಟ್ಟರು ರಾಜ್ಯದ ಜನತೆಯ ಮುಂದೆ…!

–ಅರ್ಜುನ್

Tags

Related Articles

Close