ಪ್ರಚಲಿತ

ಮುಸ್ಲಿಂ ವಿರೋಧಿ ಎಂದು ಪಟ್ಟಕಟ್ಟುತ್ತಿದ್ದ ವಿರೋಧಿಗಳು ನೋಡಲೇಬೇಕಾದ ಸ್ಟೋರಿ.!! ಮುಸ್ಲಿಮರಿಗೆ ಯೋಗಿ ನೀಡಿದ ಗಿಫ್ಟ್ ಏನು ಗೊತ್ತಾ.!!

ಭಾರತ ಪ್ರಜಾಪ್ರಭುತ್ವ ದೇಶ.ಇಲ್ಲಿ ಸರ್ವಧರ್ಮದ ಜನರಿಗೂ ಬದುಕುವ ಅವಕಾಶ ಇದೆ.ಅಧಿಕಾರ ಯಾರೇ ಹಿಡಿದರು ಭಾರತದಲ್ಲಿ ಸರ್ವಧರ್ಮದ ಜನರಿಗೂ ಬೇಕಾಗುವ ಸೌಲಭ್ಯಗಳನ್ನು ನೀಡುವಂತಹ ಜವಾಬ್ದಾರಿ ಸರಕಾರದ ಮೇಲೆ ಇರುತ್ತದೆ.

ಆದರೆ ರಾಜಕೀಯದ ಲಾಭಕ್ಕಾಗಿ ಒಂದೊಂದು ಪಕ್ಷವನ್ನು ಒಂದೊಂದು ಧರ್ಮಕ್ಕೆ ಸೀಮಿತಾ ಎಂಬಂತೆ ಬಿಂಬಿಸುತ್ತಾ ಬಂದಿದ್ದಾರೆ ಕೆಲವರು. ಶ್ರೀ ನರೇಂದ್ರ ಮೋದಿಯವರು ಚುನಾವಣೆಯಲ್ಲಿ ಬಹುಮತದಿಂದ ಗೆದ್ದಾಗಲು ಇದೇ ರೀತಿ ಬಿಂಬಿಸಲಾಗಿತ್ತು. ಮೋದಿ ಮುಸ್ಲಿಂ ವಿರೋಧಿ, ಮೋದಿ ಪ್ರಧಾನಿಯಾದರೆ ಭಾರತದಲ್ಲಿ ಮುಸ್ಲೀಮರಿಗೆ ಜೀವಿಸಲು ಅವಕಾಶವೇ ಇಲ್ಲ ಎಂಬಂತೆ ಬಿಂಬಿಸಿದ್ದರು ವಿರೋಧಿ ಪಡೆಗಳು…!

ಆದರೆ ಮೋದಿ ಅಧಿಕಾರ ವಹಿಸಿಕೊಂಡ ನಂತರ ವಿರೋಧಿಗಳ ಲೆಕ್ಕಾಚಾರ ತಲೆಕೆಳಗಾಗಿತ್ತು. ಯಾಕೆಂದರೆ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುತ್ತಲೇ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎಂದು ಹೇಳುವ ಮೂಲಕ ಇಡೀ ಭಾರತೀಯರ ಮನ ಗೆದ್ದಿದ್ದರು.

ಮೋದಿ ಅಧಿಕಾರಕ್ಕೆ ಬಂದ ನಂತರ ನಡೆದ ಪ್ರತೀ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಲೇ ಬಂದಿದೆ.ಇದಕ್ಕೆ ಕಾರಣ ಮೋದಿಯವರ ಆಡಳಿತ ವೈಖರಿ. ಬಿಜೆಪಿ ಗೆದ್ದ ಎಲ್ಲಾ ರಾಜ್ಯಗಳಲ್ಲೂ ಸಮರ್ಥ ಮುಖ್ಯಮಂತ್ರಿಯನ್ನು ಕೂರಿಸುವ ಮೂಲಕ ನರೇಂದ್ರ ಮೋದಿಯವರು ತಮ್ಮ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎಂಬ ತತ್ವವನ್ನು ಪಾಲಿಸುತ್ತಾ ಇದ್ದಾರೆ…

ಇದೇ ರೀತಿ ಅತ್ಯಂತ ದೊಡ್ಡ ಬಹುಮತದಿಂದ ಗೆದ್ದ ಉತ್ತರ ಪ್ರದೇಶದಲ್ಲಿ “ಯೋಗಿ” ಯನ್ನು ಮುಖ್ಯಮಂತ್ರಿ ಮಾಡುವ ಮೂಲಕ ಇಡೀ ದೇಶವನ್ನೇ ನಿಬ್ಬೆರಗಾಗಿಸುವಂತೆ ಮಾಡಿದ್ದರು. ಯಾಕೆಂದರೆ “ಯೋಗಿ” ಎಂದರೆ ಹಿಂದುತ್ವವನ್ನೇ ಪ್ರತಿಪಾದಿಸುವವರು. ಆದರೆ ಇಂತವರನ್ನೇ ಮುಖ್ಯಮಂತ್ರಿ ಮಾಡುವ ಮೂಲಕ ವಿರೋಧಿಗಳು ಮತ್ತೊಮ್ಮೆ‌ ಬಾಯಿಬಡಿದುಕೊಳ್ಳುವಂತೆ ಮಾಡಿದ್ದಾರೆ…!

ಯಾಕೆಂದರೆ “ಯೋಗಿ ಆದಿತ್ಯನಾಥ್” ಹಿಂದೂ ಫೈರ್ ಬ್ರಾಂಡ್ ಎಂದೇ ಕರೆಯಲ್ಪಡುತ್ತಿದ್ದರು.
ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುತ್ತಿದ್ದ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಂತ್ರಿ ಆಗುತ್ತಲೇ ಇನ್ನು ಉತ್ತರ ಪ್ರದೇಶದಲ್ಲಿ ಮುಸ್ಲೀಮರಿಗೆ ಜೀವಿಸಲು ಅವಕಾಶವೇ ಇಲ್ಲ ಎಂದು ಬೊಬ್ಬೆ ಇಟ್ಟರು ಕೆಲವರು‌…! ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗಿನಿಂದ ಉತ್ತರ ಪ್ರದೇಶದಲ್ಲಿ ಮುಸ್ಲೀಮರನ್ನು ಓಡಿಸುತ್ತಾರೆ ಎಂಬ ಮಟ್ಟಕ್ಕೆ ಅಪಪ್ರಚಾರ ಮಾಡಲಾಗಿತ್ತು.

ಆದರೆ ಯೋಗಿ ಆದಿತ್ಯನಾಥ್ “ತಾನೊಬ್ಬ ಹಿಂದೂ ಧರ್ಮದ ರಕ್ಷಕ,ಮುಸ್ಲಿಂ ಧರ್ಮದ ವಿರೋಧಿಯಲ್ಲ” ಎಂದು ಹೇಳುತ್ತಲೇ ಬಂದಿದ್ದರು. ಆದರೆ ಇದೀಗ ಕೇವಲ ತಮ್ಮ ಮಾತಿನಲ್ಲಷ್ಟೇ ಅಲ್ಲ ಕಾರ್ಯರೂಪಕ್ಕೂ ತಂದಿದ್ದಾರೆ…!
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಸ್ಲಿಮರ ಧಾರ್ಮಿಕ ಶಿಕ್ಷಣ ನೀಡುವ ಕೇಂದ್ರಗಳಾದ ಮದರಸಾಗಳ ಅಭಿವೃದ್ಧಿಗೆ ಮತ್ತೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಹೌದು, ಲಖನೌ ನಲ್ಲಿ ನಡೆದ ಒಂಬತ್ತು ರಾಜ್ಯಗಳ ಅಲ್ಪಸಂಖ್ಯಾತ ಕಲ್ಯಾಣ ಸಚಿವರ ಸಭೆಯಲ್ಲಿ ಮಾತನಾಡಿದ ಯೋಗಿ , ಮದರಾಸಗಳನ್ನು ಮುಚ್ಚುವುದರಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ.
ಇಸ್ಲಾಂ ಶಿಕ್ಷಣ ಸಂಸ್ಥೆಗಳ ಜೊತೆಗೆ ಸಂಸ್ಕೃತ ಪಾಠಶಾಲೆಗಳು ಆಧುನಿಕ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕು,ಆಗ ಮಾತ್ರ ಸೂಕ್ತ ಸ್ಪರ್ಧೆ ಎದುರಿಸಲು ಸಾಧ್ಯ ಎಂದು ಹೇಳಿದ್ದಾರೆ…!

ಕಾಲಕ್ಕೆ ತಕ್ಕಂತೆ ಮದರಾಸ ಮತ್ತು ಸಂಸ್ಕೃತ ಪಾಠಶಾಲೆಗಳನ್ನು ಬದಲಾಯಿಸಬೇಕು.
ಸಾಂಪ್ರದಾಯಿಕ ಶಿಕ್ಷಣದೊಂದಿಗೆ ಕಂಪ್ಯೂಟರ್, ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ಶಿಕ್ಷಣವನ್ನು ನೀಡಿ ಮಕ್ಕಳ ಜ್ಞಾನಾಭಿವ್ರದ್ಧಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

ಇತ್ತೀಚೆಗೆ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ವಾಸಿಂ ರಿಜ್ವಿ ‘ಮದರಾಸಗಳಲ್ಲಿ ಉಗ್ರ ತರಬೇತಿ ನೀಡಲಾಗುತ್ತದೆ.ಮದರಾಸಗಳಲ್ಲಿ ಸಿಬಿಎಸ್ ಸಿ ಶಿಕ್ಷಣವನ್ನು ಅಳವಡಿಸುವ ಮೂಲಕ ಸರ್ಕಾರವು ಮದರಾಸಗಳ ಮೇಲೆ ಗಮನಹರಿಸಬೇಕು’ ಎಂದು ಉತ್ತರ ಪ್ರದೇಶ ಮತ್ತು ಪ್ರಧಾನಿ ಮೋದಿಯವರಿಗೆ ಮನವಿ ಪತ್ರ ಬರೆದಿದ್ದರು.

ಮೂಲಭೂತವಾದಿಗಳ ಸೆಳೆತಕ್ಕೆ ಸಿಲುಕಿ ದಾರಿ ತಪ್ಪಿರುವ ಯುವಕರಿಗೆ ಆಧುನಿಕ ಶಿಕ್ಷಣ ನೀಡಿ, ಯುವಕರನ್ನು ಸಮಾಜದ ಉನ್ನತಿಗೆ ಶ್ರಮಿಸುವಂತೆ ಮಾಡಬೇಕು ಮತ್ತು ಎಲ್ಲರಿಗೂ ಉತ್ತಮ ಶಿಕ್ಷಣ ನೀಡಬೇಕು ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಭಾರತ ಬಲಿಷ್ಠ ರಾಷ್ಟ್ರವಾಗಬೇಕಾದರೆ ಇಲ್ಲಿನ ಯುವಕರು ಉತ್ತಮ ಶಿಕ್ಷಣ ಹೊಂದಿ ಜಾಗ್ರತಿಯಾಗಬೇಕು ಎಂದು ಹೇಳಿದರು. ತನ್ನ ಧರ್ಮದ ರಕ್ಷಣೆ ಮಾಡುವವರನ್ನು ಅನ್ಯ ಧರ್ಮದ ವಿರೋಧಿ ಎಂದು ಬಿಂಬಿಸಿಕೊಂಡು ಬಂದಿರುವ ಎಲ್ಲಾ ವಿರೋಧಿಗಳಿಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಕ್ಕ ಉತ್ತರ ನೀಡಿದ್ದಾರೆ…!

–ಅರ್ಜುನ್

 

Tags

Related Articles

Close