ಅಂಕಣದೇಶಪ್ರಚಲಿತ

“ಮೋದಿ ಒಬ್ಬ ಹಿಂದೂ, ಅವರೊಂದಿಗೆ ವ್ಯವಹರಿಸುವುದು ಅಷ್ಟು ಸುಲಭವಲ್ಲ” ರಷ್ಯಾ ಅಧ್ಯಕ್ಷ ಹಿಂದೂಗಳನ್ನು ಹೊಗಳಿದ್ದು ಹೇಗೆ?

ಹಿಂದೂಗಳೆಂದರೆ ಏನೆಂದು ಇಡೀ ಜಗತ್ತಿಗೆ ಅರ್ಥವಾಗುವ ಕಾಲ ಬಂದಿದೆ. ಇಡೀ ಜಗತ್ತಿನ ವಿದ್ವಾಂಸರೆಲ್ಲಾ ಹಿಂದೂ ತತ್ವಜ್ಞಾನವನ್ನು ಕಂಡು ಬೆರಗಾಗುವುದಷ್ಟೇ
ಅಲ್ಲದೆ, ಹಿಂದೂ ತತ್ವಜ್ಞಾನವನ್ನು ಎರಡು ಮಾತಿಲ್ಲದೆ ಒಪ್ಪಿಕೊಳ್ಳುತ್ತಿದ್ದಾರೆ. ವಿಶ್ವವು ಭಾರತೀಯ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲಾರಂಭಿಸಿದ್ದು, ಇದರಿಂದ ಹಿಂದೂ ಧರ್ಮದ ಮೇಲೆ ವಿದೇಶಿಗರ ಒಲವು ಕೂಡಾ ಹೆಚ್ಚುತ್ತಿದೆ.

ಆದರೆ ಒಬ್ಬ ಭಾರತೀಯರ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ ಯೋಚಿಸಿ. ಭಾರತದಲ್ಲಿ ಹಿಂದೂ ಧರ್ಮದ ಬಗ್ಗೆ ಮಾತಾಡುವುದು ಕೋಮುವಾದ ಎಂದು
ಹೀಯಾಳಿಸಲಾಗುತ್ತದೆ. ಆದರೆ ವಿದೇಶಿಯರಿಗೆ ಹಿಂದೂ ಧರ್ಮದ ಬಗ್ಗೆ ವಿಶೇಷ ಆಸಕ್ತಿ ಹೆಚ್ಚಿದೆ. ಅವರೂ ಕೂಡಾ ಹಿಂದೂ ಧರ್ಮವೆಂದರೆ ಬರೇ ಗೋಮಾತೆಯನ್ನು ಪೂಜಿಸುವುದು, ಜೈಶ್ರೀರಾಮ್ ಅನ್ನುವುದಷ್ಟೇ ಅಲ್ಲ, ಅದೊಂದು ಸಂತೋಷದಿಂದ ಬದುಕುವುದು ಹೇಗೆ ಎಂದು ಕಲಿಸುತ್ತದೆ ಎಂದು ಅರ್ಥೈಸಿದ್ದಾರೆ. ಇದರ ಕ್ರೆಡಿಟ್ ಶ್ರೀಯುತ ನರೇಂದ್ರ ಮೋದಿಯವರಿಗೆ ಸಲ್ಲಬಹುದು.

ಯಾಕೆಂದರೆ ಭಾರತೀಯರೆಲ್ಲಾ ವಿದೇಶಿ ಸಂಸ್ಕøತಿಯತ್ತ ಮಾರು ಹೋಗಿ ಬಾಯಿಬಾಯಿ ಬಿಡುತ್ತಿರುವಾಗ, ಮೋದಿಯವರು ಹಿಂದೂ ಧರ್ಮವನ್ನು ಅನುಸರಣೆ
ಮಾಡಲಾರಂಭಿಸಿದರು. ಅದನ್ನೇ ಅನುಸರಿಸಿ ಚುನಾವಣೆಯನ್ನೂ ಗೆದ್ದರು. ಮೋದಿ ಭಾರತೀಯರ ಮನವನ್ನು ಹೇಗೆ ಗೆದ್ದರೋ ಅದಕ್ಕಿಂತಲೂ ಜಾಸ್ತಿ ವಿದೇಶಿಗರ
ಮನವನ್ನೂ ಗೆದ್ದರು. ಜಗತ್ತು ಹಿಂದೂಸ್ಥಾನವನ್ನು ಗೌರವಿಸಿತಲ್ಲದೆ, ಭಾರತದ ಸಂಸ್ಕøತಿಯನ್ನು ಅನುಸರಣೆ ಮಾಡಲಾರಂಭಿಸಿದರು. ಜೊತೆಗೆ ಸರಳವಾಗಿ
ಬದುಕಿದರಷ್ಟೇ ಅಲ್ಲದೆ ಇತರ ಧರ್ಮಗಳತ್ತ ಗೌರವನ್ನೂ ನೀಡಿದರು.

ಇತ್ತೀಚೆಗೆ ಪತ್ರಕರ್ತರು ಮೋದಿಯವರಲ್ಲಿ ಕೇಳಿದರು, ರಷ್ಯಾದ ಅಧ್ಯಕ್ಷರಾದ ಪುಟಿನ್ ಅವರು ರಷ್ಯಾ ಬೇರೆ ದೇಶದ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳುತ್ತಾರೆ. ನೀವಿದನ್ನು ನಿಜವಾಗಿಯೂ ನಂಬ್ತೀರಾ?’

ಮೋದಿ ಅದಕ್ಕೆ ಉತ್ತರಿಸಿದ್ದು ಹೀಗೆ…

`ನೀವು ಅಮೆರಿಕಾ, ರಷ್ಯಾ, ಜರ್ಮನಿ, ರಷ್ಯಾ,, ಟ್ರಂಪ್, ಹಿಲರಿ, ಛಾನ್ಸೆಲರ್ ಆಂಜೆಲಾ ಮಾರ್ಕೆಲ್ ಮತ್ತು ಪುಟಿನ್ ಬಗ್ಗೆ ಯೋಚಿಸುತ್ತೀರಿ, ನೀವೆಲ್ಲಾ ದೊಡ್ಡ ದೊಡ್ಡ ವ್ಯಕ್ತಿಗಳ ಬಗ್ಗೆ ಮಾತಾಡುತ್ತೀರಿ. ಇವರೆಲ್ಲರ ಮಧ್ಯೆ ನಾನು ವಕೀಲನಾಗಬೇಕಾ?’

ಇದಕ್ಕೆ ರಷ್ಯಾ ಅಧ್ಯಕ್ಷ ನಗುತ್ತಾ ಮಾರ್ಮಿಕವಾಗಿ ಹೇಳಿದ್ದು ಹೀಗೆ, ‘ಮೋದಿ ಒಬ್ಬ ಹಿಂದೂ. ಹಿಂದೂಗಳೊಂದಿಗೆ ವ್ಯವಹರಿಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಅವರ ತತ್ವಜ್ಞಾನ ತುಂಬಾ ಪ್ರಾಚೀನಕಾಲದ್ದು. ನಾವೆಲ್ಲಾ ಅವರ ಮುಂದೆ ಸಾಮಾನ್ಯ ಜನರು. ಆದ್ದರಿಂದ ಅವರ ಜೊತೆ ಮಾತಾಡುವಾಗ ತುಂಬಾ ಆಲೋಚಿಸಿ ಮಾತಾಡಬೇಕು…’ ಎಂದು ಹೇಳಿದ್ದಾರೆ.

ದೃಶ್ಯಮಾಧ್ಯಮಗಳು ಮುಖ್ಯವಾಗಿ ಎನ್‍ಡಿಟಿವಿ ಉದಾರವಾದಿಗಳು, ಜಾತ್ಯತೀತವಾದಿಗಳನ್ನು ಕರೆಸಿ ಹಿಂದೂಗಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿಸುತ್ತಾರೆ. ಇದೇ ರೀತಿ ಕೋಟ್ಯಂತರ ಹಿಂದೂಗಳನ್ನು ಮೋಸಗೊಳಿಸಲಾಗಿತ್ತು. ಆದರೆ ಈಗ ಪ್ರತಿಯೊಬ್ಬರಿಗೂ ಹಿಂದೂ ಧರ್ಮವೆಂದರೇನು? ಹಿಂದೂಧರ್ಮದ ತತ್ವಜ್ಞಾನವೆಂದರೇನು? ಈ ಧರ್ಮ ಹಲವಾರು ಪ್ರಾಚೀನ ತತ್ವಶಾಸ್ತ್ರಗಳಿಂದ ಕೂಡಿದೆ ಎಂದೆಲ್ಲಾ ಅರ್ಥವಾಗತೊಡಗಿದೆ. ಇದೆಲ್ಲಾ ಹಿಂದೂ ಧರ್ಮಕ್ಕೆ ಜಗತ್ತಲ್ಲಿ ಘನತೆ ಸಿಗಲು ಕಾರಣವಾಗಿದೆ. ಪ್ರಪಂಚದ ಹಲವಾರು ರಾಷ್ಟ್ರಗಳು ಹಿಂದೂ ಧರ್ಮವನ್ನು ಗೌರವಿಸಲು ಮತ್ತು ಪ್ರೀತಿಸಲು ಕಲಿತಿದ್ದಾರೆ.

-ಚೇಕಿತಾನ
source: thelotpot.com

 

Tags

Related Articles

Close