ಪ್ರಚಲಿತ

 ಮೋದಿ ರ್ಯಾಲಿಗೆ ಬರಪೂರ ಕಾರ್ಯಕರ್ತರ ನಿರೀಕ್ಷೆ!! ಗುಪ್ತಚರ ಇಲಾಖೆಯ ವರದಿಗೆ ಬೆಚ್ಚಿಬಿದ್ದ ಸಿದ್ದರಾಮಯ್ಯ.!!

ನರೇಂದ್ರ ಮೋದಿ ಎಂದರೆ ಸಾಕು ವಿರೋಧಿ ಬಣಗಳು ಎಲ್ಲಾ ಒಟ್ಟಾಗಿ ಸೇರಿ ಮೋದಿ ಎಂಬ ಶಕ್ತಿಯನ್ನು ಮಣಿಸಲು ತಯಾರಾಗುತ್ತವೆ. ಈಗಾಗಲೇ ನರೇಂದ್ರ ಮೋದಿಯವರ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದ್ದು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಮೋದಿ ಜಪ‌ ನಡೆಯುತ್ತಿದೆ…!!

ನರೇಂದ್ರ ಮೋದಿಯವರ ಆಡಳಿತಕ್ಕೆ ಇಡೀ ದೇಶವೇ ಬಿಜೆಪಿಯತ್ತ ಮುಖ ಮಾಡಿರುವುದರಿಂದಲೇ ಇಂದು ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷ ತನ್ನ ನೆಲೆ ಕಂಡುಕೊಳ್ಳಲು ಪರದಾಡುತ್ತಿದೆ. ದೇಶದಲ್ಲಿ ನಡೆದ ಎಲ್ಲಾ ರಾಜ್ಯ ಚುನಾವಣೆಯಲ್ಲೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಜಯಗಳಿಸಿ ಕೇಸರಿ ಪತಾಕೆಯನ್ನು ಹಾರಿಸುತ್ತಿದೆ…!

ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದೆ.
ರಾಜ್ಯದಲ್ಲಿ ಚುನಾವಣಾ ಕಾವು ದಿನೇ ದಿನೇ ಹೆಚ್ಚುತ್ತಿದೆ.

ರಾಜ್ಯದಲ್ಲಿ ಮತ್ತೆ ಗದ್ದುಗೆ ಏರಲು ತಯಾರಾಗಿರುವ ಬಿಜೆಪಿ, ರಾಜ್ಯಾಧ್ಯಕ್ಷ ಯಡಿಯೂರಪ್ಪ ನವರ ನೇತ್ರತ್ವದಲ್ಲಿ ಕರ್ನಾಟಕದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ‘ಪರಿವರ್ತನಾ ಯಾತ್ರೆ’ ನಡೆಸುವ ಮೂಲಕ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ…! ಯಡಿಯೂರಪ್ಪನವರ ನೇತ್ರತ್ವದಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ರಾಜ್ಯಾದ್ಯಂತ ಉತ್ತಮ‌ ಪ್ರತಿಕ್ರಿಯೆ ವ್ಯಕ್ತವಾಗುತ್ತಲೇ ರಾಜ್ಯ ಕಾಂಗ್ರೆಸ್ ಗೆ ನಡುಕ ಶುರುವಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೋದಲ್ಲೆಲ್ಲಾ ಬಿಜೆಪಿ ಯನ್ನು ಅಧಿಕಾರಕ್ಕೆ ತರುತ್ತಲೇ ಬಂದಿದ್ದಾರೆ…!!
ಇದೇ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ತತ್ತರಿಸಿದೆ.ಈಗಾಗಲೇ ಅಮಿತ್ ಷಾ ಕರ್ನಾಟಕದಲ್ಲಿ ಮುಂದಿನ ಚುನಾವಣಾ ದ್ರಷ್ಠಿಯಿಂದ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಎಲ್ಲಾ ರೀತಿಯ ಕ್ರಮ‌ಕೈಗೊಂಡಿದ್ದು ರಾಜ್ಯ ಬಿಜೆಪಿ ನಾಯಕರು ಕೂಡ ಬಿಜೆಪಿ ಚಾಣಕ್ಯನ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ…!

ದೇಶದಲ್ಲೇ ನೆಲಕಚ್ಚಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ತನ್ನ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ.
ಇದಕ್ಕಾಗಿಯೇ ಬಿಜೆಪಿ ಯ ಎಲ್ಲಾ ಕಾರ್ಯಕ್ರಮಗಳಿಗೂ ಅಡ್ಎಇಪಡಿಸಲು ಪ್ರಯತ್ನಿಸುತ್ತಿದೆ…!!

ಈಗಾಗಲೇ ರಾಜ್ಯದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ‌ ಕಾರ್ಯಕ್ರಮ ಫೆಬ್ರವರಿ ೪ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ‌ ಕಾರ್ಯಕ್ರಮಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಬರಲಿದ್ದು ರಾಜ್ಯ ಬಿಜೆಪಿಯಲ್ಲಿ ಹೊಸ ಸಂಚಲನ ಮೂಡಿಸಿದೆ. ಕಳೆದ ಲೋಕಸಭಾ ಚುನಾವಣೆಯ ವೇಳೆ ಕರ್ನಾಟಕದಲ್ಲಿ ಸಮಾವೇಶ ನಡೆಸಿದ್ದ ನರೇಂದ್ರ ಮೋದಿ, ಇಡೀ ಕರ್ನಾಟಕದ ರಾಜಕೀಯ ಚಿತ್ರಣವನ್ನೇ ಬದಲಿಸಿದ್ದರು.!!

ಇದೀಗ ಮತ್ತೆ ಕರ್ನಾಟಕದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವ ಶ್ರೀ ನರೇಂದ್ರ ಮೋದಿಯವರ ಈ‌ ಕಾರ್ಯಕ್ರಮ ಮುಂದಿನ ವಿಧಾನಸಭೆ ಚುನಾವಣೆಗೆ ಮುಖ್ಯ ಬಾಣವಾಗಲಿದೆ ಎಂಬುದು ಎಲ್ಲಾ ಪಕ್ಷ ಗಳಿಗೂ ತಿಳಿದಿದೆ…!!!

ಆದರೆ, ನರೇಂದ್ರ ಮೋದಿಯವರ ಆಗಮನದ ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್ ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ…!! ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮನದಿಂದಲೇ ಕಂಗಾಲಾಗಿದ್ದ ಕಾಂಗ್ರೆಸ್ ಇದೀಗ ಮತ್ತೆ ಒದ್ದಾಡುವಂತಾಗಿದೆ…!!

ಹೇಗಾದರೂ ಬಿಜೆಪಿಯ ಈ ಕಾರ್ಯಕ್ರಮವನ್ನು ವಿಫಲಗೊಳಿಸಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ರಾಜ್ಯದಲ್ಲಿ ಏನಾದರೊಂದು ಅವಾಂತರ ಸ್ರಷ್ಟಿಸಲು ಪ್ರಯತ್ನಿಸುತ್ತಿದೆ…!

ಮೊನ್ನೆಯಷ್ಟೇ ಮೈಸೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಅಮಿತ್ ಷಾ ಭಾಗವಹಿಸಲಿದ್ದಾರೆ ಎಂಬ ಕಾರಣಕ್ಕೆ ಕರ್ನಾಟಕ ಬಂದ್ ನೆಪದಲ್ಲಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿತ್ತು.
ಆದರೆ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ರಾಜ್ಯಕ್ಕೆ ಆಗಮಿಸಿದ ಅಮಿತ್ ಷಾ ಯಶಸ್ವಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು…!!

ಇದರಿಂದಾಗಿಯೇ ಕಂಗಾಲಾದ ಕಾಂಗ್ರೆಸ್ ಫೆಬ್ರವರಿ ೪ರಂದು ನಡೆಯುವ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮತ್ತೆ ಬೆಂಗಳೂರು ಬಂದ್ ನೆಪದಲ್ಲಿ ಅಡ್ಡಿ ಮಾಡಲು ತಂತ್ರ ರೂಪಿಸಿದೆ…!!

ನರೇಂದ್ರ ಮೋದಿಯವರ ಆಗಮನಕ್ಕೆ ಈಗಾಗಲೇ ಬಿಜೆಪಿ ಎಲ್ಲಾ ಸಿದ್ಧತೆ ನಡೆಸಿದ್ದು ರಾಜ್ಯ ಸರಕಾರದ ಎಲ್ಲಾ ತಂತ್ರವನ್ನು ವಿಫಲ ಮಾಡುವ ಮೂಲಕ ಕಾಂಗ್ರೆಸ್ ಗೆ ಸೆಡ್ಡುಹೊಡೆಯಲು ತಯಾರಾಗಿದೆ…!!

‘ರಾಜ್ಯಕ್ಕೆ ಮೋದಿ ಆಗಮನ, ಗುಪ್ತಚರ ಇಲಾಖೆಯ ವರದಿಯಿಂದ ಬೆಚ್ಚಿಬಿದ್ದ ಕಾಂಗ್ರೆಸ್’

ಫೆಬ್ರವರಿ ೪ರಂದು ಮೈಸೂರಿಗೆ ಪರಿವರ್ತನಾ ಯಾತ್ರೆಯ ಸಮಾರೋಪ‌ ಸಮಾರಂಭಕ್ಕೆ ಆಗಮಿಸುತ್ತಿರುವ ನರೇಂದ್ರ ಮೋದಿಯವರ ಸಮಾವೇಶಕ್ಕೆ ರಾಜ್ಯದ ಎಲ್ಲಾ ಮೂಲೆಗಳಿಂದಲೂ ಕಾರ್ಯಕರ್ತರು ಬರಲು ತಯಾರಾಗಿದ್ದು 17 ಕೆ ಎಸ್ ಆರ್ ಟಿ‌ ಸಿ ಡಿಪ್ಪೋಗಳಿಂದ 3400 ಬಸ್ಸು ಬುಕ್ಕಿಂಗ್ ಮಾಡಲಾಗಿದೆ.


40 ಡಿಪ್ಪೋಗಳಿಂದಲೂ ತಲಾ 200 ರಂತೆ ಬಸ್ಸು ಬುಕ್ಕಿಂಗ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಕಾರ್ಯಕರ್ತರಿಗೆ ಸುಮಾರು 2 ಲಕ್ಷ ಆಸನದ ವ್ಯವಸ್ಥೆ ಮಾಡಲಾಗಿದ್ದು ರಾಜ್ಯದ 30 ಜಿಲ್ಲೆಗಳಿಂದಲೂ ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗಿದ್ದು ಸುಮಾರು 4 ಲಕ್ಷ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಯು ಸರಕಾರಕ್ಕೆ ವರದಿ ಕಳುಹಿಸಿದೆ…!!!

ರಾಜ್ಯ ಗುಪ್ತಚರ ಇಲಾಖೆಯೇ ಈ ರೀತಿಯ ವರದಿ ನೀಡಿರುವುದರಿಂದ ಸಿದ್ದರಾಮಯ್ಯ ಸರಕಾರ ಕಂಗಾಲಾಗಿದೆ.
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದ್ದು ಸರಕಾರ ತನ್ನ ಎಲ್ಲಾ ವೈಫಲ್ಯವನ್ನು ಮುಚ್ಚಿಹಾಕಲು ಕೆಲ‌ ಸೋಕಾಲ್ಡ್ ಸಂಘಟನೆಗಳ ಜೊತೆ ಸೇರಿ ಕರ್ನಾಟಕ ಬಂದ್ ಮಾಡುವ ಮೂಲಕ ಬಿಜೆಪಿಯ ಕಾರ್ಯಕ್ರಮವನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದೆ…!!!

ಸರಕಾರದ ಎಲ್ಲಾ ತಂತ್ರವನ್ನು ಬೇಧಿಸಿ ರಾಜ್ಯ ಬಿಜೆಪಿ ನರೇಂದ್ರ ಮೋದಿಯವರನ್ನು ಈ ಸಮಾವೇಶದಲ್ಲಿ ಭಾಗವಹಿಸಲು ಯೋಜನೆ ರೂಪಿಸಿದೆ…!!!

  • ಅರ್ಜುನ್
Tags

Related Articles

Close