ಪ್ರಚಲಿತ

ಯಶಸ್ವಿ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ: ಭಾರತಕ್ಕೆ ದೊರಕಿತು ಮತ್ತೊಂದು ಪ್ರಬಲ ಅಸ್ತ್ರ!

ವಿಶ್ವದ ಅತೀ ವೇಗದ ಸೂಪರ್‍ಸಾನಿಕ್ ಕ್ರೂಯಿಸ್ ಮಿಸೈಲ್ ಬ್ರಹ್ಮೋಸ್ ಇಂದು ಪ್ರಪ್ರಥಮ ಬಾರಿಗೆ ಭಾರತೀಯ ವಾಯು ಪಡೆಯ ಸುಖೋಯ್-30 ಎಂಕೆಐ ಫೈಟರ್ ಜೆಟ್ ಮೂಲಕ ಯಶಸ್ವೀ ಪರೀಕ್ಷಾರ್ಥ ಉಡ್ಡಯನದೊಂದಿಗೆ ಹೊಸ ಇತಿಹಾಸವನ್ನು ಸೃಷ್ಟಿಸಿತು.

ಎಸ್‍ಯು-30 ಫ್ಯೂಸ್‍ಲೇಜ್‍ನಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಗುರುತ್ವಾಕರ್ಷ ಪತನ ಪ್ರಯೋಗ ನಡೆಸಲಾಯಿತು. ಎರಡು ಹಂತಗಳ ಈ ಕ್ಷಿಪಣಿಯ ಇಂಜಿನ್ ಬಂಗಾಲ ಕೊಲ್ಲಿಯಲ್ಲಿನ ತನ್ನ ಉದ್ದೇಶಿತ ಗುರಿಯತ್ತ ಧಾವಿಸಿತು. ಸುಖೋಯಿ ಫೈಟರ್ ಜೆಟ್ ಮೂಲಕ ಆಗಸಕ್ಕೆ ಒಯ್ಯಲ್ಪಡುವ ಸೂಪರ್‍ಸಾನಿಕ್ ಕ್ರೂಯಿಸ್ ಬ್ರಹ್ಮೋಸ್ ಮಿಸೈಲ್ ನ ಇಂದಿನ ಯಶಸ್ವೀ ಪ್ರಾಯೋಗಿಕ ಚೊಚ್ಚಲ ಪರೀಕ್ಷೆಯಿಂದಾಗಿ ಭಾರತೀಯ ವಾಯು ಪಡೆಯ ಯುದ್ಧ ಸಾಮರ್ಥಯಕ್ಕೆ ಹೊಸ ಆಯಾಮ ಲಭಿಸಿತು.

2.5 ಟನ್ ತೂಕ ಹೊಂದಿರುವ ಬ್ರಹ್ಮೋಸ್ ಎಎಲ್‍ಸಿಎಂ ಕ್ಷಿಪಣಿಯು ಭಾರತದ ಎಸ್‍ಯು3- ಫೈಟರ್ ಜೆಟ್ ಮೂಲಕ ನಿಯೋಜಿಸಲ್ಪಡುವ ಅತ್ಯಂತ ಭಾರದ ಶಸ್ತ್ರವಾಗಿದೆ. ಘನ ಶಸ್ತ್ರಾಸ್ತ್ರ ಗಳನ್ನು ಒಯ್ಯುವುದಕ್ಕೆ ಅನುಕೂಲವಾಗುವಂತೆ ಎಚ್‍ಎಎಲ್ ಇದನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.

*ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ವಿಶ್ವದ ಅತ್ಯಂತ ವೇಗದ ‘ಕ್ಷಿಪಣಿ.
*ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಜೊತೆಗೆ 3,200 ಕಿ.ಮೀ.ಗಳಷ್ಟು ಪ್ರಯಾಣದ ಶ್ರೇಣಿಯನ್ನು ಹೊಂದಿದೆ.
*ಇದು ಮ್ಯಾಕ್ 2.8 ನಲ್ಲಿ ಶಬ್ದದ ವೇಗವನ್ನು ಮೂರು ಪಟ್ಟು ಹೆಚ್ಚಿಸುತ್ತದೆ.
*ಪ್ರಪಂಚದಾದ್ಯಂತ ಪ್ರಮುಖ ಯುದ್ಧನೌಕೆಗಳನ್ನು ನಿಯೋಜಿಸಿರುವ ವಾಯು ಕ್ಷಿಪಣಿಗಳಿಗೆ ಮೇಲ್ಮೈಯಿಂದ ಬ್ರಹ್ಮೋಸ್ ಅನ್ನು ತಡೆಗಟ್ಟುವುದು ಬಹಳ ಕಷ್ಟ.
*ಬ್ರಹ್ಮೋಸ್ ಭಾರತದ ಡಿಆರ್‍ಡಿಓ ಮತ್ತು ರಶ್ಯಾದ ಎನ್‍ಪಿಓಎಂ ನಡುವೆ ಜಂಟಿ ಉದ್ಯಮವಾಗಿದೆ.
*ಪರೀಕ್ಷೆಯು ಯಶಸ್ವಿಯಾದಂತೆ, ಬ್ರಹ್ಮೋಸ್ ಅನ್ನು ಸರ್ಜಿಕಲ್ ಸ್ಟ್ರೈಕ್‍ಗೆ ಅಳವಡಿಸಲಾಗುತ್ತದೆ.

ಭಾರತದ ಡಿಆರ್‍ಡಿಓ ಮತ್ತು ರಶ್ಯದ ಎನ್‍ಪಿಓಎಂ ನ ಜಂಟಿ ಸಾಹಸದಲ್ಲಿ ಬ್ರಹ್ಮೋಸ್ ಹೊಸ ರೂಪ ಮತ್ತು ಭೀಮಬಲವನ್ನು ತಳೆದಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಎರಡೂ ಸಂಸ್ಥೆಗಳನ್ನು ಅಭಿನಂದಿಸಿದ್ದಾರೆ.

ಸುಖೋಯ್-30 ಎಂಕೆಐ ಮೂಲಕ 2.5 ಟನ್ ತೂಕದ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ ಯಶಸ್ವಿಯಾಗಿರುವುದು ವಾಯುಪಡೆ ಸಾಮಥ್ರ್ಯ ಹೆಚ್ಚಿಸಿದಂತಾಗಿದೆ ಎಂದು ರಕ್ಷಣಾ ಸಚಿವಾಲಯ ಪ್ರತಿಕ್ರಿಯಿಸಿದೆ.

ಯುದ್ಧ ವಿಮಾನಕ್ಕೆ ಅಳವಡಿಕೆ

ಭೂಮಿಯಿಂದ ಭೂಮಿಗೆ ನೆಗೆಯಬಲ್ಲ ಬ್ರಹ್ಮೋಸ್ ಕ್ಷಿಪಣಿಯನ್ನು ಮೊಬೈಲ್ ಆಟೋನಾಮಸ್ ಲಾಂಚರ್ ಮೂಲಕ ಹಾಗೂ ಯುದ್ಧನೌಕೆಗಳಿಗೆ ಜೋಡಿಸಿ ಉಡಾವಣೆ ಮಾಡಬಹುದಾಗಿದೆ. ಜಲಾಂತರ್ಗಾಮಿಗಳಿಗೆ ಅಳವಡಿಸಿ, 40-50 ಮೀಟರ್ ಆಳಸಮುದ್ರದಿಂದಲೂ ಸಿಡಿಸಬಹುದಾಗಿದೆ. ಅಂದಾಜು 2.9 ಟನ್ ತೂಕವಿರುವ ಸೂಪರ್?ಸಾನಿಕ್ ಕ್ಷಿಪಣಿಗಳನ್ನುಪದಾತಿ ದಳ ಮತ್ತು ನೌಕಾಪಡೆ ಈಗಾಗಲೆ ಸೇವೆಗೆ ಸೇರ್ಪಡೆಗೊಳಿಸಿಕೊಂಡಿವೆ.

ಆದರೆ, 2.9 ಟನ್ ತೂಕದ ಕ್ಷಿಪಣಿಗಳನ್ನು ಯುದ್ಧವಿಮಾನಗಳಿಗೆ ಅಳವಡಿಸುವುದು ಅಸಾಧ್ಯವಾಗಿತ್ತು. ಆದ್ದರಿಂದ, ತೆಳುವಾದ 2.4 ಟನ್ ತೂಕದ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವನ್ನು ಅಳವಡಿಸಲು ಅನುಕೂಲವಾಗುವಂತೆ ಎಚ್?ಎಎಲ್ ಸಂಸ್ಥೆ ಸುಖೋಯ್ ಯುದ್ಧವಿಮಾನಗಳ ಹೊರಕವಚದಲ್ಲಿ ಅಲ್ಪಪ್ರಮಾಣದ ಮಾರ್ಪಾಡು ಮಾಡಿದೆ. ಹೀಗೆ ಮಾರ್ಪಾಡುಗೊಂಡಿರುವ ಸುಖೋಯ್ ಯುದ್ಧವಿಮಾನ ಬುಧವಾರ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಿತು.

ಈ ಕ್ಷಿಪಣಿಗಳನ್ನು ಇನ್ನಷ್ಟು ತಾಂತ್ರಿಕ ಪರೀಕ್ಷೆಗಳಿಗೆ ಒಳಪಡಿಸುವುದು ಬಾಕಿ ಇದೆ. ಅವು ಮುಗಿದ ಬಳಿಕ ವಾಯುಪಡೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಸೇರ್ಪಡೆಗೊಳಿಸಿಕೊಳ್ಳಲಿದೆ. ಹಾಗೂ ಸದ್ಯ 42 ಸುಖೋಯ್ ಯುದ್ಧವಿಮಾನಗಳಿಗೆ ಇವನ್ನು ಜೋಡಣೆ ಮಾಡಲು ಉದ್ದೇಶಿಸಲಾಗಿದೆ.

ಸರ್ಜಿಕಲ್ ದಾಳಿಗೂ ಸೈ

ಭಾರತದ ಗಡಿ ಭದ್ರತಾ ಪಡೆ ಯೋಧರು ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದರು. ಗಡಿಯುದ್ದಕ್ಕೂ ಕಡಿದಾದ ಪ್ರದೇಶಗಳಲ್ಲಿ ಇಂತಹ ಇನ್ನೂ ಹಲವು ಉಗ್ರರ ಶಿಬಿರಗಳಿದ್ದು, ಅಲ್ಲಿಗೆ ಹೋಗಿ ಸರ್ಜಿಕಲ್ ದಾಳಿ ನಡೆಸಲು ಸಾಧ್ಯವಾಗಿರಲಿಲ್ಲ. ಸುಖೋಯ್ ಯುದ್ಧವಿಮಾನಗಳ ಮೂಲಕ ಇಂತಹ ಸ್ಥಳಗಳಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪ್ರಯೋಗಿಸಬಹುದಾಗಿದೆ.

ಯುದ್ಧದ ಸಂದರ್ಭದಲ್ಲಿ ಅಗತ್ಯವೆನಿಸಿದಾಗ ಸಮುದ್ರದ ಮೇಲೆ ಗಂಟೆಗೆ 1,500 ಕಿ.ಮೀ ವೇಗದಲ್ಲಿ ಸಾಗುವ ಸುಖೋಯ್ ಯುದ್ಧವಿಮಾನಗಳು ಸಮುದ್ರ ಮಾರ್ಗದಲ್ಲಿ ಚಲಿಸುತ್ತಿರುವ ಶತ್ರು ಯುದ್ಧನೌಕೆಗಳನ್ನೂ ಧ್ವಂಸಗೊಳಿಸಬಲ್ಲದಾಗಿದೆ. ಇದರಿಂದಾಗಿ ಭಾರತೀಯ ವಾಯುಪಡೆಗೆ ಮತ್ತಷ್ಟು ಬಲ ಬಂದಂತಾಗಿದೆ.

ಯಶಸ್ವಿಯಾಗಿ ಉಡಾವಣೆಯಾಗಿದ್ದಕ್ಕಾಗಿ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಕ್ಷಿಪಣಿ ಹೊತ್ತೊಯ್ಯಲು ಸಹಕಾರಿಯಾಗುವಂತೆ ಎಚ್‌ಎಎಲ್‌ ಸುಖೋಯ್‌–30ಎಂಕೆಐ ಯುದ್ಧವಿಮಾನದಲ್ಲಿ ಕೆಲ ಮಾರ್ಪಾಡು ಮಾಡಿತ್ತು. ಗಂಟೆಗೆ 3,400–3,700 ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್‌ ಜಗತ್ತಿನ ಅತಿ ವೇಗದ ಕ್ಷಿಪಣಿಯಾಗಿದೆ.ಇಂತಹ ಒಂದು ಕಾರ್ಯ ಇಡೀ ಭಾರತವೇ ಹೆಮ್ಮೆ ಪಡುವಂತಾಗಿದೆ.

ವಿಶ್ವದಾಖಲೆ

ರಷ್ಯಾದ ಸಹಭಾಗಿತ್ವದಲ್ಲಿ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಬ್ರಹ್ಮೋಸ್ ಕ್ಷಿಪಣಿಯನ್ನು ತಯಾರಿಸಿದೆ. ಈ ಕ್ಷಿಪಣಿಯು ಭೂಮಿಯಿಂದ ಭೂಮಿಗೆ, ಜಲದಿಂದ ಭೂಮಿಗೆ ಅಪ್ಪಳಿಸುವ ಸಾಮಥ್ರ್ಯ ಹೊಂದಿದ್ದು, ಇದೀಗ ಗಾಳಿಯಿಂದ ಭೂಮಿಗೆ ಅಪ್ಪಳಿಸುವ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಪ್ರಯೋಗ ಯಶಸ್ವಿಯಾಗಿರುವುದು ವಿಶ್ವದಾಖಲೆಯಾಗಿದೆ. ಅಲ್ಲದೆ, ತ್ರಿಲಯ ಸೂಪರ್?ಸಾನಿಕ್ ಕ್ಷಿಪಣಿಯನ್ನು ಹೊಂದಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಯೂ ಭಾರತದ ಪಾಲಾಗಿದೆ.

 

 

-ಪವಿತ್ರ

Tags

Related Articles

Close