ಅಂಕಣದೇಶಪ್ರಚಲಿತ

ಯಾಕೆ ನರೇಂದ್ರ ಮೋದಿಯವರ ಆಡಳಿತದಲ್ಲಿ ಹಮೀದ್ ಅನ್ಸಾರಿಗೆ ಅಭದ್ರತೆ ಕಾಡಿತ್ತು ಗೊತ್ತೇ?! ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿ ನೀಡಿತ್ತು ಸ್ಫೋಟಕ ಮಾಹಿತಿ!

ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ 2014ರವರೆಗೆ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತಗಳಿಸುವವರೆಗೆ ಸುಮ್ಮನಿದ್ದ ಮಾಜಿ ಉಪರಾಷ್ಟ್ರಪತಿ ಹಮೀದ್
ಅನ್ಸಾರಿ ಅವರು ತನ್ನ ಹುದ್ದೆಯ ಅವಧಿ ಮುಗಿಯುತ್ತಿದ್ದಂತೆ ತಮ್ಮ ಮೌನ ಮುರಿದು ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಹಮೀದ್ ಅನ್ಸಾರಿ ಅವರು ಭಾರತದ ಉಪರಾಷ್ಟ್ರಪತಿಯಾಗಿ 10 ವರ್ಷ ಸೇವೆ ಸಲ್ಲಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಯುಪಿಎ ಸರಕಾರದ ಅವಧಿಯಲ್ಲಿ
ಸುಮ್ಮನಿದ್ದ ಅನ್ಸಾರಿ 2014ರ ನಂತರ ಎನ್‍ಡಿಎ ಅಧಿಕಾರಕ್ಕೇರುತ್ತಿದ್ದಂತೆ ವಿವಾದಾತ್ಮಕವಾಗಿ ವರ್ತಿಸಿ ತಾನೊಬ್ಬ ಘನವೆತ್ತ ವ್ಯಕ್ತಿ ಎಂಬುವುದನ್ನೂ ಮರೆತಂತೆ
ವರ್ತಿಸಿದರು. ಕಳೆದ ಮೂರು ವರ್ಷಗಳಲ್ಲಿ ನಡೆದ ಯೋಗ ದಿನಾಚರಣೆಗೆ ಅನ್ಸಾರಿ ಪಾಲ್ಗೊಳ್ಳದೇ ಸುದ್ದಿಯಾಗಿದ್ದಲ್ಲದೇ, ಗಣರಾಜ್ಯದ ಸಂದರ್ಭದಲ್ಲಿ ಭಾರತದ ಧ್ವಜಕ್ಕೆ ಧ್ವಜವಂದನೆ ಸಲ್ಲಿಸದೆ ಮತ್ತೊಮ್ಮೆ ವಿವಾದವನ್ನು ತನ್ನ ಮೈಮೇಲೆಳೆದುಕೊಂಡರು. ಅದಲ್ಲದೇ ಇತ್ತೀಚೆಗೆ ದೇಶದಲ್ಲಿ ಅಸಹಿಷ್ಣುತೆ, ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ ಮುಸ್ಲಿಮರಲ್ಲಿ ಅಭದ್ರತೆಯ ಭಾವ ಮೂಡಿಸಿದೆ ಎಂದು ಹೇಳಿದ್ದಲ್ಲದೇ ಭಾರತೀಯ ಮೌಲ್ಯಗಳು ಕುಸಿಯುತ್ತಿದ್ದು, ಕಾನೂನಾತ್ಮಕವಾಗಿ ಅಧಿಕಾರಿಗಳು ಏನನ್ನು ಮಾಡಬೇಕೋ ಅದನ್ನು ಮಾಡಲು ಸಾಧ್ಯವಾಗದ ರೀತಿಯಲ್ಲಿ ಅಧಿಕಾರಿಗಳ ಸಾಮರ್ಥ್ಯವೂ ಕೂಡ ಕುಸಿಯುತ್ತಿದೆ ಎಂದು ಅನ್ಸಾರಿ ಹೇಳಿದ್ದಾರೆ.

ತಮ್ಮ ಸ್ಥಾನದಿಂದ ನಿರ್ಗಮಿಸುವ ಹೊತ್ತಿನಲ್ಲಿ ಅಸಹಿಷ್ಣುತೆಯ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿಕೊಂಡಿರುವ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮಾತಿನಲ್ಲೇ ಚಾಟಿ ಬೀಸಿದ್ದಾರೆ. ಇತ್ತೀಚೆಗೆ, ಹೇಳಿಕೆಯೊಂದನ್ನು ನೀಡಿದ್ದ ಹಮೀದ್ ಅನ್ಸಾರಿ, ”ಭಾರತದಲ್ಲಿ ಅಸಹಿಷ್ಣುತೆ (ಧಾರ್ಮಿಕ ವಿಚಾರದಲ್ಲಿ) ಹೆಚ್ಚಾಗಿದೆ. ಅಲ್ಪ ಸಂಖ್ಯಾತರು ಅಭದ್ರತೆಯ ಪರಿಸ್ಥಿತಿ ಎದುರಿಸುತ್ತಿದ್ದಾರೆ” ಎಂದು ಹೇಳುವ ಮೂಲಕ ವಿವಾದ ಮೈಮೇಲೆಳೆದುಕೊಂಡಿದ್ದರು. ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರಧಾನಿ ಮೋದಿ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ”ನೀವಿನ್ನು ನಿಮ್ಮ ಮೂಲ ಸ್ವಭಾವ, ಮೂಲ ಸಿದ್ಧಾಂತದಂತೆಯೇ ನಡೆದುಕೊಳ್ಳಬಹುದು” ಎಂದು ಹೇಳಿ ಅನ್ಸಾರಿಯವರಿಗೆ ಮಾತಿನಲ್ಲೇ ಹೊಡೆತ ಕೊಟ್ಟಿದ್ದರು.
ರಾಜ್ಯಸಭೆಯಲ್ಲಿ ನಡೆದ ಹಮೀದ್ ಅನ್ಸಾರಿಯವರ ಬೀಳ್ಕೊಡುಗೆ ಸಮಾರಂಭದಲ್ಲಿ ಅನ್ಸಾರಿಯವರ ರಾಜಕೀಯ ಜೀವನ ಹಾಗೂ ಅವರ ಸಾಧನೆಗಳನ್ನು ಕೊಂಡಾಡಿದ್ದು ಮಾತ್ರವಲ್ಲದೇ ಪರೋಕ್ಷವಾಗಿ ಅನ್ಸಾರಿಯವರಿಗೆ ಹೇಳಿಕೆಯನ್ನು ನೀಡಿದ್ದಾರೆ. ಅನ್ಸಾರಿ ಹೇಳಿಕೆಯನ್ನು ಟ್ವಿಟ್ಟಿಗರು ಕೂಡಾ ತರಾಟೆಗೆ ತೆಗೆದುಕೊಂಡಿದ್ದರು. ಹಮೀದ್ ಅವರ ಈ ಹೇಳಿಕೆಗೆ ಈಗಾಗಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಿಯೋಜಿತ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ”ಇದೊಂದು ರಾಜಕೀಯ ಪ್ರೇರಿತ ಹೇಳಿಕೆ. ಭಾರತದಲ್ಲಿ ಅಲ್ಪಸಂಖ್ಯಾತರು ಸುಭದ್ರವಾಗಿದ್ದಾರೆ, ಅವರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳೂ ಸಿಗುತ್ತಿವೆ” ಎಂದಿದ್ದಾರೆ.

ಹಮೀದ್ ಅನ್ಸಾರಿ ತನ್ನನ್ನು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿದ್ದಲ್ಲದೇ ರಾಜ್ಯಸಭಾ ಟಿವಿಯ ಮುಖ್ಯಸ್ಥರಾಗಿದ್ದರು ಕೂಡ. ಆರ್‍ಎಸ್ ಟಿವಿಯ ಆಗಮನದ ಮೊದಲು
ಲೋಕಸಭಾ ಟಿವಿ ಮೇಲ್ಮನೆಯ ಬಗ್ಗೆ ಸುದ್ದಿ ಬಿತ್ತರಿಸಿತ್ತು. ಆದರೆ 2011ರಲ್ಲಿ ರಾಜ್ಯಸಭಾ ಬೇರೊಂದು ಚಾನೆಲ್ ಮಾಡಬೇಕು ಅದಕ್ಕಾಗಿ 1.5 ಕೋಟಿ
ವ್ಯಯವಾಗುತ್ತೆ ಅಷ್ಟು ಮೊತ್ತಬೇಕು ಎಂದು ಹೇಳಿತ್ತು. ತದನಂತರದಲ್ಲಿ ಆರ್‍ಎಸ್ ಟಿವಿಯ ಆರಂಭವಾಯಿತು. ಆದರೆ ಡಿಎನ್‍ಎ(ಪತ್ರಿಕೆ) ತನಿಖೆ ಮಾಡಿದ ಪ್ರಕಾರ ಇದೆಲ್ಲಾ ಹಮೀದ್ ಅನ್ಸಾರಿಯವರ ಪಿತೂರಿ ಎಂದು ಗೊತ್ತಾಯಿತು. ಆದರೆ ಆರ್‍ಎಸ್ ಟಿವಿ ಪ್ರಸಾರಗೊಂಡರೂ ಕೂಡ ಅದರಿಂದ ಯಾವುದೇ ರೀತಿಯ ಲಾಭ ಬರಲಿಲ್ಲ. ಯಾಕೆಂದರೆ ಇದರಲ್ಲಿ ಯಾವುದೇ ರೀತಿಯ ಜಾಹೀರಾತುಗಳನ್ನು ಹಾಕಲಾಗುತ್ತಿರಲಿಲ್ಲ. ಅದಲ್ಲದೇ ಯಾವುದೇ ರೀತಿಯ ಪೈಪೋಟಿಯನ್ನು ನೀಡುವಲ್ಲಿ ಆರ್‍ಎಸ್ ಟಿವಿ ಮುಂದಾಗಲಿಲ್ಲ. ಕೇವಲ ಲೊಕಸಭಾ ಟಿವಿ ಒಳ್ಳೆಯ ಲಾಭಗಳಿಸಿದ್ದಲ್ಲದೇ 2015ರ ವೇಳೆಗೆ ಆರ್‍ಎಸ್ ಟಿವಿ ಸುಮಾರು 1,700 ಕೋಟಿ ರೂಪಾಯಿಗಳ ನಷ್ಟವನ್ನು ಉಂಟು ಮಾಡಿತ್ತು. ಇದಕ್ಕೆಲ್ಲ ಹಣ ವ್ಯಯಿಸುರುವುದು ಕೇಂದ್ರ ಸರಕಾರದ ಬೊಕ್ಕಸದಿಂದ ಆದರೆ ಇದರಿಂದ ಲಾಭ ಪಡೆದೆರುವುದು ಮಾತ್ರ ಅನ್ಸಾರಿ ಏನು ವಿಚಿತ್ರ ನೋಡಿ ಕತ್ತಲೆಯಲ್ಲಿ ಚದುರಂಗವನ್ನು ಆಡಿದಂತಾಗಿತ್ತು.

ಆರ್‍ಎಸ್ ಟಿವಿಯ ಸಿಇಓ ಆಗಿದ್ದವರು ಗುರ್‍ದೀಪ್ ಸಪ್ಪಲ್. ಇವರು ಅನ್ಸಾರಿಯ ಪರಿಚಯಿಸ್ಥನೇ ಆಗಿದ್ದಲ್ಲದೇ ಹಮೀದ್ ಅನ್ಸಾರಿ ಪದವಿಯಿಂದ ಹೊರಬಂದಾಗ ಸಪ್ಪಾಲ್ ಕೂಡ ತನ್ನ ಪದವಿಗೆ ರಾಜೀನಾಮೆಯನ್ನು ನೀಡಿದ್ದರು ಎನ್ನುವುದು ಹಲವು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ. ರಾಜ್ಯಸಭಾ ಟಿ.ವಿ ಜಾಹೀರಾತುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುತ್ತಿದ್ದು ಆರ್‍ಎಸ್ ಟಿವಿಗೆ ಹೆಚ್ಚಿನ ಗಮನ ಕೊಡದೇ ಯಾವುದೇ ರೀತಿಯ ಪೈಪೋಟಿಯನ್ನು ನೀಡಲಿಲ್ಲ. ಅದಲ್ಲದೇ ಸಪ್ಪಲ್‍ಗೆ ಯಾವುದೇ ರೀತಿಯ ಪ್ರತಿಕೋದ್ಯಮದ ಬಗ್ಗೆ ಅನುಭವವೇ ಇರಲಿಲ್ಲ. ಇವರು ಹೇಗೆ ಆರ್‍ಎಸ್ ಟಿವಿ ಸಿಇಓ ಆದರು ಎಂಬುವುದೇ ಪ್ರಶ್ನೆ. ಸಪ್ಪಲ್ ಒಬ್ಬ ವಿಜ್ಞಾನಿಯಾಗಿದ್ದು ತದ ನಂತರದಲ್ಲಿ ಯುಪಿಎ ಮಂತ್ರಿ ಸುರೇಶ್ ಪಚೋರಿಯ ಹೆಚ್ಚುವರಿ ಖಾಸಗಿ ಕಾರ್ಯದರ್ಶಿಯಾಗಿ 2004 ರಿಂದ 2007ರವರೆಗೆ ಕೆಲಸ ನಿರ್ವಹಿಸಿದ್ದರು. ಆದರೆ ಪ್ರತಿಕೋದ್ಯಮದಲ್ಲಿ ಅನುಭವ ಇದೆ ಎಂದು ಸುಳ್ಳು ಹೇಳಿ ಆರ್‍ಎಸ್ ಟಿವಿಯ ಸಿಇಓ ಆಗಿದ್ದೇ ವಿಚಿತ್ರ.

ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್‍ನ ಹೆಂಡತಿ ಅಮೃತ ರೈ ಆರ್‍ಎಸ್ ಟಿವಿಯನ್ನು ಮುನ್ನಡೆಸುವಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದರು ಮಾತ್ರವಲ್ಲದೇ ಹಣ
ಕಬಳಿಸುವ ಪ್ರಯತ್ನದಲ್ಲಿ ಇವರ ಪಾಲು ಕೂಡಾ ಇರುವುದು ಕಂಡುಬಂದಿದೆ. ಇತ್ತೀಚೆಗೆ ‘ರಾಗ್ ದೇಶ್’ ಎನ್ನುವ ಸುಭಾಷ್‍ಚಂದ್ರ ಬೋಸ್ ಅವರ ಐಎನ್‍ಎ ಆಧಾರಿತ ಚಲನಚಿತ್ರವಾಗಿದೆ. ಇದಕ್ಕೆ ಆರ್‍ಎಸ್ ಟಿವಿ ಮತ್ತು ಗುರ್‍ದೀಪ್ ಸಪ್ಪಲ್ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಈ ಚಲನಚಿತ್ರಕ್ಕೆ 10 ಕೋಟಿಗಳಷ್ಟು ಹಣವನ್ನು ಬಿಡುಗಡೆ ಮಾಡಿತ್ತು! ಆದರೆ ಈ ಚಿತ್ರವನ್ನು ರಾಷ್ಟ್ರವ್ಯಾಪಿಯಾಗಿ ಪ್ರಚಾರ ಮಾಡಲು ಒಂದು ಕೋಟಿ ಹಣವನ್ನು ಕೊಳ್ಳೆ ಹೊಡೆಯಲಾಗಿತ್ತು.

ಆರ್‍ಎಸ್ ಟಿವಿಯಲ್ಲಿ ಕೇವಲ ಎಡಪಂಥೀಯ ಚಿಂತನೆಗಳೇ ತುಂಬಿ ತುಳುಕಾಡುತ್ತಿದ್ದು, ಅಥಿತಿ ನಿರೂಪಕರಿಗೆ ಹೆಚ್ಚಿನ ಹಣವನ್ನು ನೀಡಲಾಗುತ್ತಿತ್ತು. ಇದರಲ್ಲಿ
ಕ್ಯಾಚ್‍ನ್ಯೂಸ್‍ನ ಸಂಪಾದಕ ಭಾರತ್ ಭೂಷಣ್ ಹಾಗೂ ಸಹಾಯಕ ಸಂಪಾದಕ ಅದಿತ್ಯ ಮೆನನ್ ಇತ್ತೀಚೆಗೆ ನಕಲಿ ಸುದ್ದಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಕಾಶ್ಮೀರದಲ್ಲಿ ಉದ್ವಿಗ್ನದ ಪರಿಸ್ಥಿತಿ ಉಂಟಾಗಿದೆ ಹಾಗೂ ಕಾಶ್ಮೀರದ ಮೇಲೆ ಭಾರತೀಯ ಸೈನ್ಯ ತೋರುವ ಕ್ರೂರತೆಯ ಬಗ್ಗೆಯೂ ತೋರಿಸಿದ್ದಾರೆ.
‘ದ ವೈರ್’ ನ ಸಂಪಾದಕರಾದ ಸಿದ್ದಾರ್ಥ ವರದರಾಜನ್ ಮತ್ತು ಎಮ್‍ಕೆ ವಿನು ಎಡ ಪಂಥೀಯರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸಿದ್ದಾರ್ಥ್
ವರದರಾಜನ್‍ನ ಹೆಂಡತಿ ನಂದಿನಿ ಸುಂದರ್ ಬುಡಗಟ್ಟು ಜನಾಂಗದವರನ್ನು ನಕ್ಸಲರು ಎಂದು ಕರೆಯುವ ಮೂಲಕ ಅವರ ಕೊಲೆಗೆ ಕಾರಣರಾದರು.

ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ವೆಂಕಯ್ಯ ನಾಯ್ಡು ಆರೋಪ ಹೊತ್ತಿರುವ ಎಲ್ಲಾ ಅತಿಥಿ ನಿರೂಪಕರನ್ನು ತೆಗೆದುಹಾಕಲು ನಿರ್ಧರಿಸಿದ್ದರಲ್ಲದೇ ರಾಜ್ಯಾಸಭಾ ಟಿವಿಯಲ್ಲಿ ತುಂಬಿರುವ ಅರಾಜಕತೆಯನ್ನು ತೆಗೆದುಹಾಕಲು ಪ್ರಸಾರ ಭಾರತಿಗೆ ಅಧಿಕಾರ ನೀಡಿದ್ದಾರೆ. ಅತಿರೇಕವಾಗಿ ಹಣವನ್ನು ಲೂಟಿ ಮಾಡಿದ್ದರ ವಿರುದ್ಧ ಮತ್ತು ಆರ್‍ಎಸ್ ಟಿವಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಸಿಬಿಐ ಶೀಘ್ರದಲ್ಲಿ ತನಿಖೆ ಆರಂಭಿಸಲಿದೆ ಎಂದು ಹೇಳಿದ್ದಾರೆ.. ಇದರೊಂದಿಗೆ ಹಮೀದ್ ಅನ್ಸಾರಿ ಭಾರತದಲ್ಲಿ ಎಷ್ಟು ಅಸುರಕ್ಷಿತರಾಗಿದ್ದಾರೆ ಎಂಬುವುದು ತಿಳಿದು ಬರುತ್ತದೆ.

-ಸರಿತಾ

Tags

Related Articles

Close