ಪ್ರಚಲಿತ

ರಣರಂಗವಾದ ಸಾಧನಾ ಸಮಾವೇಶ: ಪೊಲೀಸರತ್ತ ಸಿಕ್ಕಿದ್ದನ್ನು ಬಿಸಾಡಿದ ಕಾಂಗಿಗಳು: ರಾಹುಲ್ ಗಾಂಧಿ ಹತ್ಯೆಯಾಗದಿದ್ರೆ ನಾನು ಕೊಪ್ಪಳದಲ್ಲಿ ಗೆಲ್ತಿದ್ದೆ ಎಂದ ಸಿದ್ದು!!!

ಸಿದ್ದರಾಮಯ್ಯನವರ ಸಾಧನಾ ಸಮಾವೇಶ ಅಕ್ಷರಶಃ ರಣರಂಗವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ರೌಡಿಗಳಂತೆ ವರ್ತಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಕೈಗೆ ಸಿಕ್ಕಿದ್ದನ್ನು ಎಸೆದಿದ್ದಲ್ಲದೆ, ಖುರ್ಚಿಗಳನ್ನು ಪುಡಿಗಟ್ಟಿ ಅಟ್ಟಹಾಸ ಮೆರೆದಿದ್ದಾರೆ. ಗೂಂಡಾಗಳಂತೆ ಆರ್ಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದರಿಂದ ಸಾಧನಾ ಸಮಾವೇಶ ರೌಡಿಗಳ ಸಮಾವೇಶದಂತಾಗಿದೆ.

ಒಟ್ಟಾರೆ ಕುಷ್ಠಗಿಯಲ್ಲಿ ನಡೆದ ಸಾಧನಾ ಸಮಾವೇಶ ಗೊಂದಲದ ಗೂಡಾಗಿ ಪರಿಣಮಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ತನ್ನ ಸಂಸ್ಕøತಿ ಏನು ಎಂಬುವುದನ್ನು ಜಹಗ್ಗೀರುಗೊಳಿಸಿದ್ದಾರೆ. ಕುಷ್ಠಗಿಯಲ್ಲಿ ಸಿಎಂ ಅವರದ್ದು ಸಾಧನಾ ಸಮಾವೇಶವಾಗಿರದೆ ಗೂಂಡಾಗಳ ಸಮಾವೇಶದಂತೆ ಕಂಡಿತ್ತು.

ಕಾಂಗಿಗಳಿಗೆ ಪೊಲೀಸರನ್ನು ಕಂಡರೆ ಅದ್ಯಾಕೆ ಸಿಟ್ಟುಬಂದಿದೆಯೋ ಗೊತ್ತಿಲ್ಲ. ತಲೆಗೆ ನಶೆ ಏರಿದಂತೆ ಪೊಲೀಸರನ್ನು ಕಂಡು ಹುಚ್ಚುನಾಯಿಗೆ ಕಲ್ಲುಬಿಸಾಡಿದಂತೆ ಬಿಸಾಡಿ ತನ್ನ ಸಂಸ್ಕøತಿಯನ್ನು ಅನಾವರಣಗೊಳಿಸಿದ್ದಾರೆ. ಸ್ವತಃ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಇಂಥದೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಸಿಎಂ ಏನನ್ನೂ ಮಾತಾಡದೆ ಸುಮ್ಮನಿದ್ದರು ಎಂದು ಹೇಳಲಾಗಿದೆ. ಘಟನೆಯಿಂದ ಪೊಲೀಸರಿಗೆ ಕಲ್ಲೇಟು ತಗುಲಿ ಗಾಯವಾಗಿದೆ ಎಂದು ತಿಳಿದುಬಂದಿದೆ.

ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಗಲಭೆಯಲ್ಲಿ ತೊಡಗಿದ ಕಾಂಗಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ. ಆದರೆ ಎದುರಲ್ಲೇ ಮುಖ್ಯಮಂತ್ರಿ ಇದ್ದುದರಿಂದ ಏನನ್ನೂ ಮಾಡದ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಪೊಲೀಸರದ್ದಾಗಿತ್ತು. ಕಾಂಗ್ರೆಸ್ ಗೂಂಡಾಗಳ ಅಟ್ಟಹಾಸಕ್ಕೆ ಪೊಲೀಸರು ನಲುಗಿ ಹೋಗಿದ್ದು, ಪೊಲೀಸರು ಅಲ್ಲಿಂದ ಕಂಬಿಕಿತ್ತಿದ್ದಾರೆ. ಸಮಾವೇಶದಲ್ಲಿ ಹಾಕಲಾಗಿದ್ದ ಖುರ್ಚಿ ಧ್ವಂಸಗೊಂಡಿದೆ.

ಹಣಕ್ಕಾಗಿ ನಡೆದ ಗಲಾಟೆಯೇ? ಕಾರ್ಯಕರ್ತರಿಗೆ ಗರಿಗರಿ ನೋಟು!!

ಬಿಜೆಪಿಯ ಪರಿವರ್ತನಾ ಯಾತ್ರೆಗೆ ಪರ್ಯಾವಾಗಿ ಸಿದ್ದರಾಮಯ್ಯ ಅವರು ಸಾಧನಾ ಯಾತ್ರೆ ನಡೆಸಿದ್ದು, ಇದೊಂದು ಪ್ರತಿಷ್ಠೆಯ ವಿವಾರವಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಹೆಚ್ಚಿನ ಜನರನ್ನು ಸೇರಿಸಿದ್ದು ಸಮಾವೇಶದಲ್ಲಿ ಪಾಲ್ಗೊಂಡ ಕಾರ್ಯಕರ್ತರಿಗೆ ಗರಿಗರಿ ನೋಟುಗಳ ಬಟಾವಾಡೆ ನಡೆದಿದೆ. ಸಮಾವೇಶದಲ್ಲಿ ಪಾಲ್ಗೊಂಡವರಿಗೆ ಶಿವರಾಜ ತಂಗಡಿಗಿ ಇರುವ ಭಾವಚಿತ್ರ ಇರುವ ಟೋಕನ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಸಮಾವೇಶದಲ್ಲಿ ಭಾಗವಹಿಸಿದ ಪುರುಷರಿಗೆ 400 ರೂ. ಹಾಗೂ ಹೆಂಗಸರಿಗೆ 200 ರೂ ಬಟಾವಾಡೆ ಮಾಡಿ ಜನಸೇರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೂ ನಿರೀಕ್ಷೆಯಷ್ಟು ಜನರು ಸೇರದೆ ಮುಖ್ಯಮಂತ್ರಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಒಟ್ಟಿನಲ್ಲಿ ಹಣಕ್ಕಾಗಿ ಕಿತ್ತಾಟ ನಡೆದ ಪರಿಣಾಮ ಈ ಗಲಾಟೆ ನಡೆದಿದೆ ಎಂಬ ಮಾಹಿತಿ ಮೂಲಗಳಿಂದ ವ್ಯಕ್ತವಾಗಿದೆ.

 

ರಾಹುಲ್ ಗಾಂಧಿ ಹತ್ಯೆಯಾಗದಿದ್ರೆ ನಾನು ಕೊಪ್ಪಳದಲ್ಲಿ ಗೆಲ್ತಿದ್ದೆ.

ಸಿದ್ದರಾಮಯ್ಯ ತನ್ನ ಎಂದಿನ ಶೈಲಿಯಲ್ಲಿ ಎಡವಟ್ಟು ಭಾಷಣ ಮಾಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಯಾಕೆಂದರೆ ಭಾಷಣದ ವೇಳೆ ನಿದ್ದೆಗಣ್ಣಲ್ಲಿದ್ದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಹತ್ಯೆಯಾಗದಿದ್ರೆ ನಾನು ಕೊಪ್ಪಳದಲ್ಲಿ ಗೆಲ್ತಿದ್ದೆ ಎಂಬ ವಿವಾದಾತ್ಮಕವಾಗಿ ಮಾತಾಡಿದ್ದಾರೆ. ಇದನ್ನೇ ಸಾರಿ ಹೇಳಿದ ಸಿದ್ದರಾಮಯ್ಯ ಕೊನೆಗೆ ತಾನು ಭಾಷಣ ಮಾಡುವುದರಲ್ಲಿ ಅಚಾತುರ್ಯ ನಡೆದಿರುವುದನ್ನು ಮನಗಂಡು ರಾಜೀವ್ ಗಾಂಧಿ ಹತ್ಯೆಯಾಗದಿದ್ರೆ ನಾನು ಕೊಪ್ಪಳದಲ್ಲಿ ಗೆಲ್ತಿದ್ದೆ ಎಂದು ಹೇಳಿದ್ದು ಎಂದು ಸಮಜಾಯಿಷಿ ನೀಡಿದ್ದಾರೆ. ರಾಹುಲ್ ಗಾಂಧಿಯ ಬಗ್ಗೆ ವಿವಾದಾತ್ಮಕವಾಗಿ ಮಾತಾಡಿದ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಸ್ವತಃ ಕಾಂಗ್ರೆಸಿಗರದ್ದೇ ಕೋಪಕ್ಕೆ ತುತ್ತಾಗಿದ್ದಾರೆ.

ಒಟ್ಟಿನ್ನಲ್ಲಿ ಯಡಿಯೂರಪ್ಪನವರಿಗೆ ಟಾಂಗ್ ನೀಡಲು ಮಾಡಿದ್ದ ಸಿದ್ದರಾಮಯ್ಯನ ಸಾಧನಾ ಯಾತ್ರೆ ಗೂಂಡಾಗಳ ಯಾತ್ರೆಯಂತಾಗಿದ್ದು, ಕಾಂಗ್ರೆಸಿಗರ ಮರ್ಯಾದೆ ಮೂರಾಬಟ್ಟೆಯಾಗಿದೆ.

-ಚೇಕಿತಾನ

Tags

Related Articles

Close