ಪ್ರಚಲಿತ

ರಾಜಧಾನಿಯ ರಾಜಪಥದಲ್ಲಿ ಹಾರಾಡಿದ ಕೇಸರೀ ಧ್ವಜ.!! ಆಸಿಯಾನ್ ನಾಯಕರ ಎದುರು ಹಿಂದೂ ಶಕ್ತಿ ಪ್ರದರ್ಶನ ಮಾಡಿದರೇ ಮೋದಿ?!

ಈ ಬಾರಿಯ 69ನೇ ಗಣರಾಜ್ಯೋತ್ಸವ ಇಡೀ ದೇಶವೇ ಸಂಭ್ರಮಾಚರಣೆಯಿಂದ ಆಚರಿಸಿದವು. ಭಾರತದ ಸಂವಿಧಾನ 1950 ರ ಜನವರಿ 26ರಂದು ಜಾರಿಗೆ ಬಂದ ದಿನವನ್ನು ಗೌರವಿಸುವ ಅಂಗವಾಗಿ ಪ್ರತಿವರ್ಷ ಆಚರಿಸಲಾಗುವ ಗಣರಾಜ್ಯೋತ್ಸವವನ್ನು ಎಂದಿನಂತೆ ಹಲವು ವಿಶೇಷಗಳಿಂದ ಈ ಭಾರಿಯೂ ಆಚರಿಸಿ ಸಂವಿಧಾನಕ್ಕೆ ಗೌರವ ಸಲ್ಲಿಸಲಾಯಿತು..

ರಾಷ್ಟ್ರ ರಾಜಧಾನಿಯ ಇಂಡಿಯಾ ಗೇಟ್ ಬಳಿಯಲ್ಲಿ ಪ್ರಮುಖವಾಗಿ ಆಚರಿಸಲಾಗುತ್ತಿದ್ದು, ಆಕರ್ಷಕ ಪಥ ಸಂಚಲನ ಬಹಳ ವಿಶೇಷವಾಗಿತ್ತು.. ಈ ವರ್ಷದ ಗಣರಾಜ್ಯೋತ್ವದ ಅತಿಥಿಗಳಾಗಿ ವಿವಿಧ ರಾಷ್ಟ್ರಗಳ 10 ಮಂದಿ ನಾಯಕರು ಪಾಲ್ಗೊಂಡಿದ್ದರು.. ಪ್ರತಿ ವರ್ಷವೂ ಯಾವುದಾದರೂ ಒಂದು ಮಿತ್ರ ರಾಷ್ಟ್ರದ ನಾಯಕರು ಪಾಲ್ಗೊಳ್ಳುವುದು ವಾಡಿಕೆಯಿತ್ತು.. ಆದರೆ ಈ ಬಾರಿ ವಿಶೇಷ ಎಂಬಂತೆ ವಿವಿಧ ರಾಷ್ಟ್ರದ ನಾಯಕರುಗಳು ಗಣರಾಜ್ಯೋತ್ಸವವನ್ನು ಆಚರಿಸಿರುವುದು ನಿಜವಾಘಿಯೂ ನಮಗೆ ಹೆಮ್ಮೆಯ ವಿಷಯ!! ಆದರೆ, ಈ ಬಾರಿ ಥಾಯ್ಲೆಂಡ್, ವಿಯೆಟ್ನಾಂ, ಇಂಡೋನೇಷಿಯಾ, ಮಲೇಷಿಯಾ, ಫಿಲಿಫೈನ್ಸ್, ಸಿಂಗಾಪೂರ, ಮಯನ್ಮಾರ್, ಕಾಂಬೋಡಿಯಾ, ಲಾವೋಸ್ ಮತ್ತು ಬ್ರೂನಿ ದೇಶಗಳ ನಾಯಕರು ಭಾಗವಹಿಸಿದ್ದರು…

ರಾಷ್ಟ್ರ ರಾಜ್ಯಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಕೋವಿಂದ್ ಹಾಗೂ ಆಸಿಯಾನ್ ರಾಷ್ಟ್ರದ ನಾಯಕರು ಪಾಲ್ಗೊಂಡಿದ್ದ 69ನೇ ಗಣರಾಜ್ಯೋತ್ಸವ ಕಳೆಗಟ್ಟಿತು. ವಿವಿಧ ರಾಜ್ಯಗಳ ಸಂಸ್ಕೃತಿ, ಕಲೆ, ಸೇನೆಯ ವಿವಿಧ ದಳಗಳ ಪಥಸಂಚಲನ ನೋಡುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿತ್ತು. ಗಣರಾಜ್ಯೋತ್ಸವ ಎಂದರೆ ಇಡೀ ಭಾರತವೇ ಸಂಭ್ರಮಿಸೋ ದಿನ. ವಿಶ್ವದೆದುರು ಭಾರತದ ಸಾಂಸ್ಕೃತಿಕ ವೈಭವ ಹಾಗು ಸೇನಾ ಶಕ್ತಿಯನ್ನು ತೆರೆದಿಡುವ ದಿನ. ರಾಷ್ಟ್ರ ರಾಜಧಾನಿ ನವದೆಹಲಿಯ ರಾಜಪಥದಲ್ಲಿ ನಡೆಯುವ ಪಥಸಂಚಲನ ಇಡೀ ವಿಶ್ವದ ಕಣ್ಣುಕುಕ್ಕುತ್ತದೆ. ಭಾರತೀಯ ಸೇನಾಪಡೆಗಳು ರಾಷ್ಟ್ರಪತಿಗಳಿಗೆ ನೀಡುವ ಗೌರವ ವಂದನೆಯಿಂದ ಹಿಡಿದು ಪಥಸಂಚಲನದಲ್ಲಿ ಸಾಗುವ ಟ್ಯಾಬ್ಲೋಗಳು ಜನರನ್ನ ಮತ್ತಷ್ಟು ಸೆಳೆಯುತ್ತದೆ. ರಾಜಪಥದ ಇಕ್ಕೆಲಗಳಲ್ಲಿ ನಿಂತು ಸಾವಿರಾರು ಜನರು ಈ ಅವಿಸ್ಮರಣೀಯ ಕ್ಷಣವನ್ನ ಕಣ್ತುಂಬಿಕೊಳ್ಳುತ್ತಾರೆ.

ಇಂದು ದೆಹಲಿಯ ರಾಜ್ ಪಥ್ ನಲ್ಲಿ 69 ನೆಯ ಗಣರಾಜ್ಯೋತ್ಸವದ ಸಂಭ್ರಮವು ಅತೀ ವಿಜೃಂಭಣೆಯಿಂದ ನಡೆಯಿತು. ಎಲ್ಲಾ ರಾಜ್ಯಗಳನ್ನು ಪ್ರತಿನಿಧಿಸುವ ಒಂದೊಂದು ಟ್ಯಾಬ್ಲೋ ಗಳಿದ್ದವು. ಅದಲ್ಲದೆ ಇಡೀ ಗಣರಾಜ್ಯೋತ್ಸವ ಕೇಸರಿ£ಮಯವಾಗಿತ್ತು….

ಹಿಂದೂಗಳ ಹೃದಯ ಗೆದ್ದ ಶಿವಾಜಿ ಟ್ಯಾಬ್ಲೋ!

ಪ್ರಜಾಹಿತ ರಕ್ಷಕ , ಹಿಂದುತ್ವ ರಕ್ಷಕ , ರಾಷ್ಟ್ರಪ್ರೇಮಿ ಎಂದೆಲ್ಲಾ ಹೆಸರುವಾಸಿಯಾಗಿರುವ, ಹಿಂದವೀ ಸ್ವರಾಜ್ಯದ ಸ್ಥಾಪನೆಗಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಕೇಳಿದರೆ ಸಾಕು ಮೈಮನ ಒಂದು ಕ್ಷಣ ಜುಮ್ ಎನ್ನುತ್ತೆ!! ಹಿಂದೂ ರಾಷ್ಟ್ರವನ್ನು ಕಟ್ಟಿ ಬೆಳೆಸಿರುವ ವೀರ ಶಿವಾಜಿ ಕತ್ತಿಗೆ ಕತ್ತಿ ಎನ್ನುವ ಸೂತ್ರ ಹೊತ್ತುಕೊಂಡಿದ್ದ ಶಿವಾಜಿ ಮಹಾರಾಜ್ ಇಂದಿನ ಗಣರಾಜ್ಯೋತ್ಸವಕ್ಕೆ ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ವಿಶೇಷ ಸ್ಥಬ್ಧಚಿತ್ರ ಎಲ್ಲರನ್ನೂ ಪುಳಕಿತಗೊಳಿಸುವಂತೆ ಮಾಡಿತು.. ಛತ್ರಪತಿ ಶಿವಾಜಿ ಮಹಾರಾಜರ ಅದ್ಭುತವಾದ ಸ್ಥಬ್ಧ ಚಿತ್ರವನ್ನು ಮಹಾರಾಷ್ಟ್ರ ಕಲಾವಿದರು ಪ್ರಸ್ತುತ ಪಡಿಸಿದ ಪರಿ ನಿಜವಾಗಿಯೂ ಎಲ್ಲರನ್ನು ಒಂದು ಬಾರಿ ಮೈಮನ ಪುಳಕಗೊಳಿಸುವಂತೆ ಮಾಡಿತ್ತು..

ಜೈ ಶಿವಾಜಿ, ಜೈ ಭವಾನಿ ಜಯಘೋಷಗಳು ರಾಜಪಥದಲ್ಲಿ ಮುಗಿಲುಮುಟ್ಟಿದ್ದವು. ಇಡೀ ಸಭೆಯಲ್ಲಿ ನೆರೆದ ಜನರು ಶಿವಾಜಿಯ ಘೋಷಣೆಯನ್ನು ಕೂಗುವ ಮೂಲಕ ಮತ್ತೊಮ್ಮೆ ಶಿವಾಜಿಯನ್ನು ನೆನೆದರು.. ದೇಶದ ಚರಿತ್ರೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಒಂದು ಪ್ರತ್ಯೇಕವಾದ ಗೌರವ ಸ್ಥಾನವಿದೆ. ಇಂದಿಗೂ ಇಡೀ ಹಿಂದೂ ಸಮುದಾಯ ಶಿವಾಜಿ ಹೆಸರು ಹೇಳಿದಾಕ್ಷಣ ಅವರಿಗೆ ವಿಶೇಷ ಗೌರವವನ್ನು ಕೊಡುವ ಮೂಲಕ ಶಿವಾಜಿಯನ್ನು ಹಿಂದೂ ಸಮುದಾಯದಲ್ಲಿ ಎತ್ತಿ ಹಿಡಿದಿದ್ದಾರೆ… ಅದನ್ನ ಅಚ್ಚುಕಟ್ಟಾಗಿ ವಿಶ್ವದೆದುರು ಇಂದು ಮಹಾರಾಷ್ಟ್ರ ಸರ್ಕಾರ ಅನಾವರಣಗೊಳಿಸಿತು.

ಸಂಪೂರ್ಣ ಕೇಸರಿಮಯ..

ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ಸ್ಥಬ್ಧಚಿತ್ರದ ಜೊತೆಗೆ ಶಿವಾಜಿಯ ಅದ್ಭುತವಾದ ಹಿನ್ನೆಲೆ ಗಾಯನ ಇತ್ತು. ಹತ್ತು ನಿಮಿಷಗಳ ಕಾಲ ರಾಜಪಥ ಶಿವಾಜಿಯ ಆಗಮನದಿಂದ ರೋಮಾಂಚನಗೊಂಡಿತ್ತು. ಪಟ್ಟಾಭಿಷೇಕದ ರಥದಲ್ಲಿ ಕೇಸರೀ ಧ್ವಜ ಎಲ್ಲರ ಕಣ್ಣು ಕುಕ್ಕುತ್ತಿತ್ತು. ಅಲ್ಪ ಸಂಖ್ಯಾತರ ಓಲೈಕೆಗಾಗಿ ಟಿಪ್ಪುವಿನ ಟ್ಯಾಬ್ಲೋವನ್ನ ನಮ್ಮ ರಾಜ್ಯ ಸರ್ಕಾರ ಗಣರಾಜ್ಯೋತ್ಸವಕ್ಕಾಗಿ ಹಿಂದೊಮ್ಮೆ ಸಿದ್ಧ ಪಡಿಸಿತ್ತು. ಇಂದು ಅದೇ ರಾಜಪಥದಲ್ಲಿ ಹಿಂದೂಗಳ ಸಾಮ್ರಾಟನನ್ನು ನೋಡಿ ಹಿಂದೂ ಮನಸ್ಸುಗಳು ಸಂತಸಗೊಂಡವು. ಅದಲ್ಲದೆ  ನೆರೆದಿದ್ದವರ ಮನಗೆದ್ದವು ಕರ್ನಾಟಕದ ಸ್ಥಬ್ಧ ಚಿತ್ರ!!

ರಾಜಪಥದಲ್ಲಿ ಕರ್ನಾಟಕದ ಸ್ಥಬ್ಧಚಿತ್ರವೂ ಎಲ್ಲರ ಗಮನ ಸೆಳೆಯಿತು. ಗೊರಿಲ್ಲಾ, ಹುಲಿ, ಕಾಡುಕೋಣ, ಆನೆ ಮತ್ತು ವಿವಿಧ ಪ್ರಾಣಿಗಳ ಗೊಂಬೆಗಳಿಂದ ರಚಿಸಲಾಗಿದ್ದ ಸ್ಥಬ್ದಚಿತ್ರ ರಾಜಪಥ ಮಾರ್ಗದಲ್ಲಿ ಮೆರವಣಿಗೆ ಬರುತ್ತಿದ್ದಂತೆ ಹಲವರು ಎದ್ದು ನಿಂತು ಮೆಚ್ಚುಗೆ ವ್ಯಕ್ತಪಡಿಸಿದರು..

ಸಮಾರಂಭದ ಪೆರೇಡ್ ನಲ್ಲಿ ದೇಶದ ಸಂಸ್ಕೃತಿ ಹಾಗೂ ಮಿಲಿಟರಿ ಸಾಮಥ್ರ್ಯವನ್ನು ಪ್ರದರ್ಶಿಸಲಾಯಿತು. ಈ ಬಾರಿಯ ಪರೇಡ್ ನಲ್ಲಿ ಪ್ರಮುಖವಾಗಿ ಇದೇ ಮೊದಲ ಬಾರಿಗೆ ಬಿಎಎಸ್‍ಎಫ್ ನ ಮಹಿಳಾ ತಂಡ ರೋಮಾಂಚನಕಾರಿ ಬೈಕ್ ಸ್ಟಂಟ್ ಪ್ರದರ್ಶನವನ್ನು ನೀಡಿತು. ಸಮಾರಂಭದಲ್ಲಿ ಭಾವಹಿಸದ್ದ ಜನರ ಹರ್ಷೋದ್ಗಾರ ಮಹಿಳಾ ಯೋಧರ ಸಾಹಸ ಪ್ರದರ್ಶನಕ್ಕೆ ಮತ್ತಷ್ಟು ಶಕ್ತಿ ನೀಡಿತು. ರಾಯಲ್ ಎನ್‍ಫೀಲ್ಡ್ 350 ಸಿಸಿ ಬೈಕ್ ಏರಿ ಬಂದ `ಸೀಮಾ ಭವಾನಿ’ ಹೆಸರಿನ 113 ಮಂದಿ ಮಹಿಳಾ ಬಿಎಸ್‍ಎಫ್ ತಂಡ ತಮ್ಮ ಕೌಶಲ್ಯ ಹಾಗೂ ಧೈರ್ಯದ ಕೆಚ್ಚೆದೆಯ ಪ್ರದರ್ಶನ ನೀಡಿತು.

ಸಬ್ ಇನ್ಸ್ ಪೆಕ್ಟರ್ ಸ್ಟ್ಯಾನ್ಜಿನ್ ನಿರೊಯಾಂಗ್ (28) ಮುನ್ನಡೆಯಲ್ಲಿ ಪ್ರದರ್ಶನ ನೀಡಿದ ತಂಡ ತಾವು ಯಾವುದೇ ಪುರುಷರಿಗೆ ಕಮ್ಮಿ ಇಲ್ಲ ಎಂಬುವುದನ್ನು ಸಾಬೀತು ಪಡಿಸಿತು. ಬಿಎಸ್‍ಎಫ್ ನ ವಿವಿಧ ರ್ಯಾಂಕ್ ಗಳಿಂದ ಆಯ್ಕೆ ಮಾಡಲಾಗಿದ್ದ 25 ರಿಂದ 30 ವರ್ಷದೊಳಗಿನ 113 ಮಹಿಳೆಯರಿಗೆ ತರಬೇತಿಯನ್ನು ನೀಡಲಾಗಿತ್ತು. ಮಹಿಳಾ ಯೋಧರ ಪ್ರದರ್ಶನ ಕಂಡ ಅತಿಥಿಗಳು ಅವರ ಧೈರ್ಯವನ್ನು ಪ್ರಶಂಸಿದರು.

ಪವಿತ್ರ

Tags

Related Articles

Close