ಪ್ರಚಲಿತ

ರಾಜ್ಯ ಸರಕಾರದ ಬಗ್ಗೆ ನ್ಯಾಯಾಲಯ ಹೇಳಿದ್ದೇನು ಗೊತ್ತಾ? ಇತಿಹಾಸ ಸೃಷ್ಠಿಸಿದ ಹೈಕೋರ್ಟ್ ಹೇಳಿಕೆ!!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನ ಆಡಳಿತದಲ್ಲಿ ಅದ್ಯಾವ ರೀತಿಯ ಅನಾಚಾರ, ಭ್ರಷ್ಟಾಚಾರಗಳು ನಡೆದರು ಅದನ್ನು ಸಮರ್ಥಿಸಿಕೊಂಡು ಬರುತ್ತಿರುವ ಕಾರಣದಿಂದಲೇ ‘ಕೆಲವೊಂದು ಸಚಿವರ’ ಕುಮ್ಮಕ್ಕಿನಿಂದ ಸಾಲು ಸಾಲು ಕೊಲೆಗಳು ನಡೆಯುತ್ತಾ ಬಂದಿದೆ.

ಪ್ರಾಮಾಣಿಕ ಸರಕಾರಿ ಅಧಿಕಾರಿಗಳ ಕೊಲೆ ನಡೆಸಿ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಿ ರಾಜ್ಯದ ಜನತೆಯ ಕಣ್ಣಿಗೆ ಮಣ್ಣೆರೆಚುತ್ತಾ ಬಂದಿದೆ. ಕೆಲವೊಂದು ಘಟನೆಗಳಲ್ಲಿ ಸಚಿವರು ನೇರವಾಗಿ ಸಿಕ್ಕಿಬಿದ್ದಿದ್ದರು ಸಿದ್ದರಾಮಯ್ಯನವರು ಸಚಿವರ ಪರವಾಗಿ ನಿಂತಿರುವುದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯನವರು ನಾಲಾಯಕ್ಕು ಎಂದು ಈಗಾಗಲೇ ರಾಜ್ಯದ ಜನತೆ ಆಡಿಕೊಳ್ಳುತ್ತಿದೆ.

ಕರ್ನಾಟಕದಲ್ಲಿ ನರಕದ ವಾತಾವರಣ ನಿರ್ಮಿಸಿದ ‘ಕೀರ್ತಿ’ ನೇರವಾಗಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಸ್ವತಃ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಇಷ್ಟೊಂದು ಕಳಪೆ ಮಟ್ಟದ ರಾಜಕೀಯ ನಡೆಸುವ ಮೂಲಕ ಇಡೀ ರಾಜ್ಯವನ್ನು ಬಲಿಕೊಡಲು ಹೊರಟಿರುವ ಸಿದ್ದರಾಮಯ್ಯನವರ ವಿರುದ್ದ ಹೈಕೋರ್ಟ್ ಕಿಡಿಕಾರಿದೆ.

ಸಿದ್ದರಾಮಯ್ಯನವರ ಆಡಳಿತವನ್ನು ಕಂಡು ಸ್ವತಃ ಕಾಂಗ್ರೆಸ್ ನಲ್ಲೇ ಅಸಮಾಧಾನಗೊಂಡು ಪಕ್ಷತೊರೆದ ನಾಯಕರಿದ್ದಾರೆ.
ರಾಜ್ಯದೆಲ್ಲೆಡೆ ಆಡಳಿತ ವಿರೋಧಿ ಅಲೆ ನಿರ್ಮಾಣಗೊಂಡಿದೆ. ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷದ ಆಡಳಿತವನ್ನು ಕಂಡು ಇಡೀ ರಾಜ್ಯವೇ ಸಿದ್ದರಾಮಯ್ಯನ ವಿರುದ್ಧ ಹಿಡಿಶಾಪ ಹಾಕುತ್ತಿದೆ.


ವಿಪಕ್ಷಗಳು ಸರಕಾರದ ಆಡಳಿತವನ್ನು ಟೀಕಿಸುತ್ತಾ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಾ ಬಂದಿದೆ.
ಆದರೆ ಇದೀಗ ಸ್ವತಃ ರಾಜ್ಯ ಹೈಕೋರ್ಟ್ ರಾಜ್ಯ ಸರ್ಕಾರದ ಆಡಳಿತದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರ ಪ್ರತೀ ಎರಡು ತಿಂಗಳಿಗೊಮ್ಮೆ ಅಧಿಕಾರಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡುತ್ತದೆ. ನಂತರದಲ್ಲಿ ಅವರಿಗೆ ಯಾವುದೇ ಹುದ್ದೆ ನೀಡದೆ ಅಧಿಕಾರಿಗಳಿಗೆ ಸುಮ್ಮನೆ ಸಂಬಳ ನೀಡಿ ತನ್ನ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದೆ.ಇಂತಹ ಕೀಳುಮಟ್ಟದ ಆಡಳಿತವನ್ನು ಏಕೆ ನಡೆಸಬೇಕು? ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

‘ವಿಧಾನಸೌಧದಲ್ಲಿ ಆಡಳಿತ ಕೆಟ್ಟು ನಿಂತಿದೆ. ಇಂತಹ ಆಡಳಿತವನ್ನು ನಾವು ಎಂದೂ ನೋಡಿರಲಿಲ್ಲ,ಎಂದು ರಾಜ್ಯ ಹೈಕೋರ್ಟ್ ಹೇಳಿದೆ. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಒಬ್ಬರನ್ನು ಒಂದು ತಿಂಗಳ ಅವಧಿಯಲ್ಲಿ ಮೂರು ಬಾರಿ ವರ್ಗಾವಣೆ ಮಾಡಿ,ನಂತರ ಅವರಿಗೆ ಯಾವುದೇ ಹುದ್ದೆ ನೀಡದ ಪ್ರಕರಣದ ಕುರಿತು ತನಿಖೆ ನಡೆಸಿದ ವಿಭಾಗೀಯ ಪೀಠವು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಈ ರೀತಿ ಕೆಂಡಕಾರಿದೆ.

ರಾಜ್ಯದಲ್ಲಿ ಅಭಿವೃದ್ಧಿ ಎಷ್ಟರ ಮಟ್ಟಿಗೆ ಕೆಟ್ಟಿದೆ ಎಂದರೆ ‘ಸಿದ್ದರಾಮಯ್ಯನ ಯಾವುದೇ ಭಾಗ್ಯ’ವೂ ಜನರಿಗೆ ಸಿಗುತ್ತಿಲ್ಲ. ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರಕಾರವು ಬಿಡುಗಡೆಗೊಳಿಸಿದ ಎಲ್ಲಾ ಹಣವನ್ನೂ ರಾಜ್ಯ ಸರಕಾರವು ತನ್ನ‌ ಭ್ರಷ್ಟಚಾರಕ್ಕೆ ಬಳಸಿಕೊಳ್ಳುತ್ತಿರುವುದು ಈಗಾಗಲೇ ಬಯಲಾದ ಸತ್ಯ.

ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಹಣವನ್ನು ಗುಳುಂ ಮಾಡಿರುವ ರಾಜ್ಯ ಸರ್ಕಾರ ‘ಭಾಗ್ಯ’ಗಳ ಹೆಸರಿನಲ್ಲಿ ರಾಜ್ಯದ ಜನರನ್ನು ಮೋಸಗೊಳಿಸುತ್ತಿದೆ.

ಕೇವಲ ಒಂದು ವರ್ಗದ(ಮುಸ್ಲಿಂ) ಅಲ್ಪಸಂಖ್ಯಾತರನ್ನು ಓಲೈಸುವ ನೆಪದಲ್ಲಿ ಟಿಪ್ಪುಜಯಂತಿ ಆಚರಣೆಗೆ ಮುಂದಾದ ರಾಜ್ಯ ಸರ್ಕಾರ ಮತ್ತೊಂದು ವರ್ಗದ (ಕ್ರೈಸ್ತ) ರನ್ನು ಕಡೆಗಣಿಸಲಾಯಿತು.
ಹಿಂದೂ ವಿರೋಧಿ,ದಲಿತ ವಿರೋಧಿ, ಹೀಗೆ ಮುಸ್ಲಿಮರ ಓಲೈಕೆಗಾಗಿ ಇಡೀ ರಾಜ್ಯದ ಜನತೆಯನ್ನು ಕಡೆಗಣಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ.

ವಿಪಕ್ಷಗಳು ಅಥವಾ ಇನ್ಯಾರೋ ಸರಕಾರವನ್ನು ಹೀಯಾಳಿಸುತ್ತಿದ್ದರೆ ಅದನ್ನು ‘ಆಡಳಿತ ವಿರೋಧಿ ಧೋರಣೆ’ ಎನ್ನಬಹುದಿತ್ತು.ಆದರೆ ನ್ಯಾಯ ಒದಗಿಸುವ ನ್ಯಾಯಾಲಯವೇ ಸರಕಾರದ ವಿರುದ್ಧ ಈ ರೀತಿ ಅಸಮಧಾನ ವ್ಯಕ್ತಪಡಿಸಿದ್ದು ರಾಜ್ಯ ಸರಕಾರದ ದುರಾಡಳಿತವನ್ನು ಎತ್ತಿಹಿಡಿದಿದೆ.

‘ಸದಾ ಸಿದ್ಧ ಸರಕಾರ’ ಎಂದು ಹೋದಲ್ಲೆಲ್ಲಾ ಬೊಗಳೆ ಬಿಡುವ ಮುಖ್ಯಮಂತ್ರಿಗಳು ವೇದಿಕೆಯಲ್ಲೇ ನಿದ್ದೆಗೆ ಜಾರಿ ತಾನೊಬ್ಬ ರಾಜ್ಯದ ಮುಖ್ಯಮಂತ್ರಿ ಎಂಬೂದನ್ನೂ ಮರೆತಿರುವುದು ಕಾಂಗ್ರೆಸ್ ನ ಅವನತಿಯೇ ಸಮೀಪಿಸುತ್ತಿದೆ ಎಂಬೂದರಲ್ಲಿ ಸಂಶಯವಿಲ್ಲ.

ಇಷ್ಟು ದಿನ ವಿಪಕ್ಷಗಳಿಂದ ಮತ್ತು ರಾಜ್ಯದ ಜನರಿಂದ ಉಗಿಸಿಕೊಳ್ಳುತ್ತಿದ್ದ ರಾಜ್ಯ ಸರಕಾರ ಇದೀಗ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದೆ.!!!

— ಅರ್ಜುನ್

Tags

Related Articles

Close