ಪ್ರಚಲಿತ

ರಾಹುಲ್ ಗಾಂಧಿಗೆ ಎಐಸಿಸಿ ಪಟ್ಟಾಭಿಷೇಕವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಸಂಭ್ರಮಿಸಿದ್ದು ಯಾಕೆ ಗೊತ್ತಾ..?!

ಅದೊಂದು ಕಾಲವಿತ್ತು. ಕಾಂಗ್ರೆಸ್ ಪಕ್ಷದಿಂದ ಒಂದು ವಿದ್ಯುತ್ ಕಂಬ ನಿಂತರೂ ಗೆಲುವು ಸಾಧಿಸುತ್ತೆ. ಅದು ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎಂದು. ಆದರೆ ಈವಾಗ ಪರಿಸ್ಥಿತಿ ಹಾಗಿಲ್ಲ. ಕಾಂಗ್ರೆಸ್ ಪಕ್ಷ ಈವರೆಗೆ ಮಾಡಿದ್ದ ದ್ರೋಹಗಳು ದೇಶವಾಸಿಗಳಿಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ. ನೆಹರೂ ಕಾಲದಿಂದ ಹಿಡಿದು ಸೋನಿಯಾ ಗಾಂಧಿ ಕಾಲದವರೆಗೂ ಕಾಂಗ್ರೆಸ್ ಮಾಡಿದ ದ್ರೋಹವೆಲ್ಲಾ ಈಗ ದೇಶದ ಜನತೆಗೆ ಮನವರಿಕೆಯಾಗಿದೆ. ಇಂದಿರಾ ಗಾಂಧಿಯ ಹೆಸರು ಹೇಳಿ ಸುಳ್ಳು ಹೇಳಿ ಮತ ಪಡೆಯುವ ಚಾಲಾಕಿತನ ಈಗ ನಡೆಯಲ್ಲ ಅನ್ನೋದೂ ಸ್ವತಃ ಕಾಂಗ್ರೆಸ್‍ಗೂ ಮನವರಿಕೆಯಾಗಿದೆ.

ಕುಟುಂಬ ರಾಜಕಾರಣದಿಂದ ದೂರ ಉಳಿದ ಮತದಾರರು…

ಹೌದು… ಭಾರತದಲ್ಲಿ ಕುಟುಂಬ ರಾಜಕಾರಣ ಅನ್ನೋದು ತಾಂಡವವಾಡುತ್ತಿತ್ತು ಎಂಬ ವಿಷಯ ಗೌಪ್ಯವಾಗಿಯೇನೂ ಉಳಿದಿಲ್ಲ. ನೆಹರೂ ಸಹಿತ ನಂತರ ಬಂದ ನಕಲಿ ಗಾಂಧಿ ಕುಟುಂಬಗಳು ಈ ದೇಶವನ್ನು ಅದ್ಯಾವ ರೀತಿಯಲ್ಲಿ ಕೊಳ್ಳೆ ಹೊಡೆದವು ಎಂಬುವುದು ದೇಶದ ಎಲ್ಲಾ ಜನತೆಗೂ ಗೊತ್ತಿರುವ ಸಂಗತಿಯಾಗಿದೆ. ಹೀಗಾಗಿಯೇ ಕಳೆದ ಬಾರಿಯ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ವಂಶ ಪಾರಂಪರ್ಯ ರಾಜಕಾರಣ ಬಿಟ್ಟು, ದೇಶಕ್ಕಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡಿದ ನರೇಂದ್ರ ಮೋದಿಯವರನ್ನು ಮತದಾರರು ಕೈ ಹಿಡಿದಿದ್ದಾರೆ. ಇದು ಕಾಂಗ್ರೆಸ್ ಸಹಿತ ಕುಟುಂಬ ರಾಜಕಾರಣ ಮಾಡುತ್ತಿರುವ ಪಕ್ಷಗಳಿಗೆ ಮತದಾರರು ಕೊಟ್ಟಂತಹ ತಕ್ಕ ಉತ್ತರವಾಗಿತ್ತು.

ರಾಹುಲ್ ಬಂದ ನಂತರ ರಾಹು ದೆಸೆ ಆರಂಭವಾಯಿತಾ..?

ಸೋನಿಯಾ ಗಾಂಧಿ ತನ್ನ ಕ್ಷೇತ್ರವಾಗಿ ಉತ್ತರ ಪ್ರದೇಶದ ಅಮೇಥಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಅದು ಕೇವಲ ಒಂದು ಸಾಮಾನ್ಯ ಕ್ಷೇತ್ರವಲ್ಲ. ಅದು ನೆಹರೂ ಪರಿವಾರದ ಸಂಪ್ರದಾಯಿಕ ಕ್ಷೇತ್ರ. ಆ ಕ್ಷೇತ್ರದಲ್ಲಿ ಆ ಪರಿವಾರದ ಯಾರೇ ನಿಂತರೂ ಅಲ್ಲಿನ ಮತದಾರರು ಗೆಲ್ಲಿಸಿಕೊಡುತ್ತಾರೆ. ಹೀಗಾಗಿಯೇ 2004ರಲ್ಲಿ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ರಾಹುಲ್ ಗಾಂಧಿಗೆ ಸೋನಿಯಾ ಗಾಂಧಿ ಆ ಕ್ಷೇತ್ರವನ್ನು ಬಿಟ್ಟುಕೊಟ್ಟು ಗೆಲ್ಲಿಸಿದ್ದರು. ಉಳಿದ ಯಾವ ಕಡೆಯೂ ತನ್ನ ಸ್ವಸಾಮಥ್ರ್ಯದಿಂದ ಗೆಲ್ಲಲಾಗದ ರಾಹುಲ್ ಗಾಂಧಿ ಆ ಕ್ಷೇತ್ರದಲ್ಲಿ ತನ್ನ ಕುಟುಂಬದ ಶಕ್ತಿಯಿಂದ ಗೆದ್ದುಬಿಡುತ್ತಾರೆ.

ಆದರೆ ಕಳೆದ ಬಾರಿಯ, ಅಂದರೆ 2014ರ ಲೋಕಸಭಾ ಚುನಾವಣೆ ಸುಲಭದ ತುತ್ತಾಗಿರಲಿಲ್ಲ. ಮೋದಿ ಅಲೆಯಿಂದ ಕಾಂಗ್ರೆಸ್ ತತ್ತರಿಸಿ ಹೋಗಿತ್ತು. ಆದರೂ ಬಿಜೆಪಿ ಅಭ್ಯರ್ಥಿ ಸ್ಮøತಿ ಇರಾನಿಯ ಎದುರು ರಾಹುಲ್ ಗಾಂಧಿ ಅದೇಗೋ ಗೆಲುವು ಕಾಣುತ್ತಾರೆ. ಅಮೇಥಿ ಹೊರತಾಗಿ ಯಾವುದೇ ಕ್ಷೇತ್ರದಲ್ಲಿಯೂ ರಾಹುಲ್ ಗೆಲ್ಲೋದಿಲ್ಲ ಅನ್ನೋದು ಸ್ವತಃ ರಾಹುಲ್ ಗಾಂಧಿಗೂ ಗೊತ್ತಿರುವ ವಿಷಯ.

ರಾಹುಲ್ ಗಾಂಧಿ ಹೋದಲೆಲ್ಲಾ ಕಾಂಗ್ರೆಸ್ ಸೋಲುತ್ತೆ ಅನ್ನೋದೆಷ್ಟು ಸತ್ಯ..?

ಈ ಮಾತನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಯಾಕೆಂದರೆ ರಾಹುಲ್ ಗಾಂಧಿ ಯಾವ ಚುನಾವಣೆಯ ನೇತೃತ್ವವನ್ನು ವಹಿಸಿದರೂ ಅಲ್ಲಿ ಸೋಲು ಅನ್ನುವ ಮುಖಭಂಗ ಕಾಂಗ್ರೆಸ್‍ಗೆ ಅದಾಗಲೇ ಎದುರಾಗಿತ್ತು. ರಾಹುಲ್ ಗಾಂಧಿ ಯಾವ ರಾಜ್ಯದ ಚುನಾವಣಾ ನಾಯಕತ್ವವನ್ನು ವಹಿಸಿದರೂ ಅಲ್ಲಿ ಸೋಲು ಕಟ್ಟಿಟ್ಟ ಬುತ್ತಿ.

ರಾಹುಲ್ ಗಾಂಧಿ ನಾಯಕತ್ವ ವಹಿಸಿದರೆ ಅಲ್ಲಿ ನಿಜವಾಗಿಯೂ ಲಾಭವಾಗೋದು ಭಾರತೀಯ ಜನತಾ ಪಕ್ಷಕ್ಕೆ. ಕಳೆದ ಲೋಕಸಭಾ ಚುನಾವಣೆಯ ನಂತರ ರಾಹುಲ್ ಗಾಂಧಿ ವಹಿಸಿಕೊಂಡ ಸುಮಾರು 27ಕ್ಕೂ ಅಧಿಕ ವಿಧಾನ ಸಭಾ ಚುನಾವಣೆಗಳಲ್ಲೂ ಕಾಂಗ್ರೆಸ್ ಸೋಲು ಕಂಡಿದೆ. ಅತ್ಯಂತ ವಿವಾದ ಗ್ರಸ್ತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲೂ ಕೇಸರೀ ಡಿಂಡಿಮವನ್ನು ಭಾರಿಸಿದೆ. ಹೀಗಾಗಿಯೇ ರಾಹುಲ್ ಗಾಂಧಿ ನೇತೃತ್ವ ವಹಿಸಿದರೆ ಬಿಜೆಪಿಗೆ ಸಹಜವಾಗಿಯೇ ಸಂತಸವನ್ನು ತರುತ್ತದೆ.

ರಾಹುಲ್ ಗಾಂಧಿ ಈವರೆಗೆ ನಿರ್ವಹಿಸಿದ ಎಲ್ಲಾ ಚುನಾವಣೆಗಳಲ್ಲೂ ಹೀನಾಯ ಸೋಲುಣ್ಣಿದ್ದು ಮಾತ್ರವಲ್ಲದೆ ಗೆಲ್ಲಬಹುದಾಗಿದ್ದ ಕೆಲವು ಪ್ರಾದೇಶಿಕ ನಾಯಕರ ಗೆಲುವನ್ನೂ ಕಸಿದುಕೊಂಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್ ಸಹಿತ ಅನೇಕ ಯುವಕರನ್ನೂ ಸೋಲಿಸಿದ ಕೀರ್ತಿ ಇದ್ದರೆ ಅದು ಬಿಜೆಪಿಗೆ ಅಂತು ಖಂಡಿತಾ ಅಲ್ಲ. ಅದರ ಕೀರ್ತಿಯೇನಿದ್ದರೂ ರಾಹುಲ್ ಗಾಂಧಿಗೆ. ಈಗ ಗುಜರಾತ್‍ನ ಪಾಟೀದಾರ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಸರದಿ. ಚುನಾವಣೆ ಫಲಿತಾಂಶ ಬಂದ ಮೇಲೆ ಈ ನಾಯಕನೂ ಮೂಲೆ ಸೇರುವುದರಲ್ಲಿ ಅನುಮಾನವೇ ಇಲ್ಲ.

ಯುವರಾಜನಾಗಿದ್ದ ರಾಹುಲ್ ಗಾಂಧಿ ಮಹರಾಜನಾದ ಕಥೆ…

ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಎಷ್ಟು ಚುನಾವಣಾ ನೇತೃತ್ವವನ್ನು ವಹಿಸಿಕೊಳ್ಳುತ್ತಾರೋ ಅಷ್ಟು ಕಾಂಗ್ರೆಸ್‍ಗೆ ಸೋಲಾಗುತ್ತದೆ ಅನ್ನೋದು ಈಗ ವಾಸ್ತವ. ಕಾಂಗ್ರೆಸ್ ಸೋಲುಂಡರೆ ಅಲ್ಲಿ ನೇರವಾಗಿ ಗೆಲುವು ಕಾಣೋದು ಭಾರತೀಯ ಜನತಾ ಪಕ್ಷ. ಸದ್ಯ ನರೇಂದ್ರ ಮೋದಿಯ ದಕ್ಷ ಆಡಳಿತ ಮತ್ತು ಬಿಜೆಪಿ ಚಾಣಾಕ್ಯ ಅಮಿತ್ ಶಾ ರ ಚುನಾವಣಾ ನೀತಿಗಳು ಕಾಂಗ್ರೆಸ್ ಎಂಬ 132 ವರ್ಷಗಳ ಇತಿಹಾಸವುಳ್ಳ ರಾಷ್ಟ್ರೀಯ ಪಕ್ಷವನ್ನು ಹೀನಾಯ ಸೋಲುಣ್ಣುವಂತೆ ಮಾಡಿದೆ.

ಈಗ ನೆಹರೂ ಪರಿವಾರದ ಕನಸಿನಂತೆ ಮತ್ತೆ ಆ ಪರಿವಾರದ ಕುಡಿ ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷನ ಪಟ್ಟ ಕಟ್ಟಲು ಕಾಂಗ್ರೆಸ್ ಪಕ್ಷ ಸಜ್ಜಾಗಿ ನಿಂತಿದೆ. ಈಗಾಗಲೇ ನಾಟಕೀಯ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಗಳು ಮುಗಿದಿದ್ದು ಆ ಪಟ್ಟದಲ್ಲಿ ಕೂರುವುದೊಂದೇ ಬಾಕಿ ಇದೆ ಅಷ್ಟೆ. ಕಾಂಗ್ರೆಸ್ ಇರೋವರೆಗೂ ಅದರ ನೇತೃತ್ವವನ್ನು ನೆಹರೂ ಪರಿವಾರದವರೇ ಸ್ವೀಕರಿಸಬೇಕೆಂಬ ಬಯಕೆಯೂ ಹಾಗೂ ರಾಹುಲ್ ಗಾಂಧಿಯಿಂದಲೇ ಕಾಂಗ್ರೆಸ್ ಪಕ್ಷ ಕೊನೆಗೊಳ್ಳಬೇಕೆಂಬ ವಾಸ್ತವವೋ ಎಂಬಂತೆ ರಾಹುಲ್ ಗಾಂಧಿಗೆ ಪಟ್ಟಾಭಿಶೇಕ ನಡೆಯುತ್ತಿದೆ. ಅದೆಷ್ಟೇ ಬಾರಿ ಸೋಲುಂಡರೂ ಈ ನಾಯಕನಿಗೆ ಅಧ್ಯಕ್ಷ ಪಟ್ಟ ಕಟ್ಟೋದು ಸೋಜಿಗವೇ ಸರಿ.

ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಕಾಂಗ್ರೆಸ್ ನಾಯಕರು..!!!

ಅತ್ತ ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷನ ಪಟ್ಟ ಕಟ್ಟುವುದು ಸ್ವತಃ ಕಾಂಗ್ರೆಸ್‍ನ ಹಲವಾರು ಕಾರ್ಯಕರ್ತರಿಗೇ ಇಷ್ಟವಿಲ್ಲ. ಈಗಾಗಲೇ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ತಮ್ಮ ಅಸಮದಾನವನ್ನು ವ್ಯಕ್ತಪಡಿಸಿದ್ದಾರೆ. ಹಲವಾರು ಕಾಂಗ್ರೆಸ್ ನಾಯಕರು ಅಧ್ಯಕ್ಷ ಪಟ್ಟಕ್ಕೆ ಅರ್ಹತೆಯನ್ನು ಪಡೆದಿದ್ದಾರೆ. ಆದರೆ ರಾಜಕೀಯದ ತೀರಾ ಅನುಭವವೇ ಇಲ್ಲದ ರಾಹುಲ್ ಗಾಂಧಿಗೆ ಪಟ್ಟಾಭಿಶೇಕ ನಡೆಸುವುದು ಎಷ್ಟು ಸರಿ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ಆರೋಪ.

“ಈಗಾಗಲೇ ಕಾಂಗ್ರೆಸ್ ಉಪಾಧ್ಯಕ್ಷನಾಗಿದ್ದ ರಾಹುಲ್ ಗಾಂಧಿಯನ್ನು ಕಂಡರೆ ಇಡೀ ದೇಶವೇ ನಕ್ಕು ಬಿಡುತ್ತದೆ. ಅವರು ಮಾಡಿದ ಭಾಷಣ ಇಡೀ ದೇಶದಲ್ಲೇ ಟ್ರೋಲ್ ಆಗುತ್ತಿವೆ. ಅವರಿಗೆ ತಮ್ಮ ಮಾತಿನ ಮೇಲೆ ಹಿಡಿತವಿಲ್ಲ. ಹೋದಲ್ಲೆಲ್ಲಾ ಅವಮಾನ, ಮುಜುಗರವನ್ನೇ ಅನುಭವಿಸುತ್ತಾರೆ. ಹೀಗಾಗಿ ಅವರು ನಮ್ಮ ನಾಯಕರು ಅಥವಾ ಶತಕ ದಾಟಿದ ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಎಂದು ಹೇಗೆ ಒಪ್ಪಿಕೊಳ್ಳೋಕೆ ಸಾಧ್ಯ” ಎಂದು ಕಾಂಗ್ರೆಸ್ ಪಕ್ಷದ ನಾಯಕರನ್ನು ಪ್ರಶ್ನಿಸಿದ್ದಾರೆ. ಆದರೆ ನೆಹರೂ ಪರಿವಾರದ ನಿಷ್ಟರು ಮಾತ್ರ ಒಲ್ಲದ ಮನಸ್ಸಿನಲ್ಲಿಯೂ ರಾಹುಲ್ ಗಾಂಧಿ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ.

ರಾಹುಲ್ ಗಾಂಧಿಗೆ ಪಟ್ಟಾಭಿಶೇಕ : ಬಿಜೆಪಿಯಲ್ಲಿ ಭಾರೀ ಪುಳಕ..!!!

ಇನ್ನು ರಾಹುಲ್ ಗಾಂಧಿಗೆ ಅಧ್ಯಕ್ಷನ ಪಟ್ಟ ಕಟ್ಟುವುದು ಖಚಿತವಾಗುತ್ತಿದ್ದಂತೆ ಭಾರತೀಯ ಜನತಾ ಪಕ್ಷದಲ್ಲಿ ಭಾರೀ ಹರ್ಷ ವ್ಯಕ್ತವಾಗುತ್ತಿದೆ. “ರಾಹುಲ್ ಗಾಂಧಿಗೆ ಪಟ್ಟ ಕಟ್ಟಿದರೆ ಬಿಜೆಪಿ ಗೆಲ್ಲುವುದು ಖಚಿತ. ಈಗಾಗಲೇ ಹಲವಾರು ಕಡೆಗಳಲ್ಲಿ ರಾಹುಲ್ ಗಾಂಧಿ ನಮಗೆ ಜಯವನ್ನು ಧಕ್ಕಿಸಿಕೊಟ್ಟಿದ್ದಾರೆ. ಇದಕ್ಕೆ ಅವರು ಅಭಿನಂದನಾರ್ಹರು. ಮುಂದೆ ಅಧ್ಯಕ್ಷರಾಗಿಯೂ ಬಿಜೆಪಿಗೆ ಅವರು ಮಾಡುವ ಸಹಾಯವನ್ನು ಇನ್ನಷ್ಟು ಹೆಚ್ಚಿಸಲಿದ್ದಾರೆ” ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ರಾಹುಲ್ ಗಾಂಧಿಯವರ ಕೆಲಸಗಳು ನೇರವಾಗಿ ವರವಾಗುವುದು ಬಿಜೆಪಿ ಗೆ ಮಾತ್ರ. ಹಿಂದಿನಿಂದಲೂ ರಾಹುಲ್ ಗಾಂಧಿ ಹೋದಲ್ಲೆಲ್ಲಾ ಬಿಜೆಪಿ ಭರ್ಜರಿ ಜಯವನ್ನು ದಾಖಲಿಸಿಕೊಳ್ಳುತ್ತಾ ಬಂದಿದೆ. ಮುಂದೆ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿಯೂ ರಾಹುಲ್ ನೇತೃತ್ವ ಅಧಿಕೃತವಾಗಿ ಇರಲಿದ್ದು, ಭಾರತೀಯ ಜನತಾ ಪಕ್ಷಕ್ಕೆ ಭಾರೀ ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದು ಕೇವಲ ಭಾರತೀಯ ಜನತಾ ಪಕ್ಷದ ನಾಯರು ಮಾತ್ರವಲ್ಲದೆ ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಹೇಳುತ್ತಿರುವುದು ಅಚ್ಚರಿಯನ್ನುಂಟುಮಾಡಿದೆ…

-ಸುನಿಲ್ ಪಣಪಿಲ

Tags

Related Articles

Close