ಪ್ರಚಲಿತ

ರಾಹುಲ್ ಗಾಂಧಿ ಮತ್ತೆ ಸೋಮನಾಥ ದೇಗುಲಕ್ಕೆ ತೆರಳಿದ್ದೇಕೆ? ಇದನ್ನು ಕಂಡು ಕೆಂಡಾಮಂಡಲನಾದ ಓವೈಸಿ ಹಾಕಿದ ಬಹಿರಂಗ ಸವಾಲೇನು ಗೊತ್ತೇ?!

ಕಾಂಗ್ರೆಸಿಗರ ಹಿಂದೂ ಪ್ರೇಮದ ನಾಟಕದ ವಿರುದ್ಧ ಮುಸ್ಲಿಮರು ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸಿಗರು ಹಿಂದೂ ಧರ್ಮದ ಮೇಲೆ ಮಮತೆ ತೋರಿ ತಮ್ಮನ್ನು ಕೈಬಿಡುತ್ತಾರೆ ಎಂಬ ಚಿಂತನೆ ಮುಸ್ಲಿಮರ ಮನದಲ್ಲಿ ಮೂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಇದುವರೆಗೆ ಮುಸ್ಲಿಂ ಓಟುಬ್ಯಾಂಕ್‍ನಲ್ಲಿ ತೊಡಗಿದ್ದ ಹಿಂದೂವಿರೋಧಿ ಕಾಂಗ್ರೆಸಿಗರು ಇದೀಗ ಹಿಂದೂ ಪ್ರೇಮದ ನಾಟಕದಲ್ಲಿ ತೊಡಗಿದ್ದು, ಕಾಂಗ್ರೆಸ್‍ನ ದೊಡ್ಡದೊಂದು ಷಡ್ಯಂತ್ರ ಬಯಲಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ಮುಸ್ಲಿಮರು ಇನ್ನು ಮುಂದೆ ಕಾಂಗ್ರೆಸ್‍ಗೆ ಬೆಂಬಲ ನೀಡದಿರಲು ನಿರ್ಧರಿಸಿದ್ದಾರೆ. ಇದು ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತಕ್ಕೆ ಮತ್ತೊಂದು ಪ್ರಮುಖ ಹೆಜ್ಜೆ ಎಂದೇ ಬಿಂಬಿತವಾಗಿದೆ.

ಇದುವರೆಗೆ ಕಾಂಗ್ರೆಸಿಗರು ಮಸೀದಿಗಳಿಗೆ ತೆರಳಿ ಮುಸ್ಲಿಂ ಟೋಪಿ ಧರಿಸಿ ಪೋಸ್ ನೀಡುತ್ತಿದ್ದರು. ಕಾಂಗ್ರೆಸ್ ಎಂದರೆ ಮುಸ್ಲಿಂ, ಮುಸ್ಲಿಂ ಎಂದರೆ ಕಾಂಗ್ರೆಸ್ ಎನ್ನುವ ಕಾಲವೊಂದಿತ್ತು. ಕಾಂಗ್ರೆಸಿಗರು ಮುಸ್ಲಿಮರಿಗೆ ಮಾಡಿದ ಸಹಾಯದಿಂದಾಗಿ ಕಾಂಗ್ರೆಸ್‍ಗೆ ತರಗೆಲೆಯಂತೆ ಓಟುಬೀಳುತ್ತಿತ್ತು.

ಮುಸ್ಲಿಮರ ಓಟಿಗಾಗಿ ಭಯೋತ್ಪಾದಕರಿಗೂ ಸಹಾಯ ಮಾಡುವಂಥ ಮನಸ್ಥಿತಿಯನ್ನು ಹೊಂದಿರುವ ಕಾಂಗ್ರೆಸಿಗರು ಹಿಂದೂ ಭಯೋತ್ಪಾದನೆಯನ್ನು ಸೃಷ್ಟಿಸಿ ಹಿಂದೂಗಳಿಂದ ಶಾಶ್ವತವಾಗಿ ದೂರವಾಗಿದ್ದರು. ಆದರೆ ಬರೇ ಮುಸ್ಲಿಮರನ್ನೇ ನಂಬಿ ಏನೂ ಗಿಟ್ಟುತ್ತಿಲ್ಲ ಎಂದು ಅರ್ಥ ಮಾಡಿಕೊಂಡಿರುವ ಕಾಂಗ್ರೆಸಿಗರು ಹಿಂದೂಗಳೆಲ್ಲಾ ದೂರವಾಗುವುದನ್ನು ಅರ್ಥ ಮಾಡಿಕೊಂಡು ಇದೀಗ ದೇಗುಲಕ್ಕೆ ಭೇಟಿ ನೀಡಿ ಹಿಂದೂಗಳ ಮನವೊಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಇದಕ್ಕೆ ಸಾಕ್ಷಿ ರಾಹುಲ್ ಗಾಂಧಿ….

ಅಪ್ಪಟ ಕ್ರೈಸ್ತನಾಗಿರುವ ರಾಹುಲ್ ಗಾಂಧಿಯ ಜನಪಥ್-10 ಮನೆಯಲ್ಲಿ ದೊಡ್ಡದೊಂದು ಚರ್ಚ್ ಇದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಗಂಭೀರವಾಗಿ ಆರೋಪಿಸಿದ್ದರು. ನೆಹರೂ ಕಾಲದಿಂದ ಹಿಂದೂ ವಿರೋಧಿಯಾಗಿರುವ ಕಾಂಗ್ರೆಸ್ ಹಿಂದೂಗಳೆಂದರೆ ಅಲರ್ಜಿ ಪಟ್ಟುಕೊಂಡಿದ್ದಾರೆ. ಗುಜರಾತ್‍ನ ಸೋಮನಾಥ ದೇಗುಲ ಮುಸ್ಲಿಮರಿಂದ ಧ್ವಂಸಗೊಂಡಿತ್ತು.

ಇದನ್ನು ನಿರ್ಮಿಸಬೇಕೆಂದು ಸರ್ದಾರ್ ವಲ್ಲಭಾ ಭಾಯ್ ಪಟೇಲ್ ಅಂದಿನ ಪ್ರಧಾನಿ ನೆಹರೂ ಅವರಲ್ಲಿ ಸರಕಾರದ ಸಹಾಯಧನ ಕೇಳಿದಾಗ ನಯಾಪೈಸೆಯೂ ಕೊಡುವುದಿಲ್ಲ, ದೇವಸ್ಥಾನ ನಿರ್ಮಿಸುವುದಕ್ಕೆ ನನ್ನ ವಿರೋಧವಿದೆ ಎಂದು ಕಡ್ಡಿಮುರಿದಂತೆ ಹೇಳಿ ಹಿಂದೂಗಳ ವಿರೋಧ ಕಟ್ಟಿಕೊಂಡಿದ್ದರು. ಆದರೂ ಹಿಂದೂಗಳ ಸಹಾಯಧನದಿಂದ ದೇಗುಲ ಕಟ್ಟಲು ಮುಂದಾದ ಪಟೇಲರು ಕೊನೆಗೂ ಸೋಮನಾಥನ ದಿವ್ಯ ದೇಗುಲ ನಿರ್ಮಿಸಿದ್ದರು. ಇದರ ಬ್ರಹ್ಮಕಲಶೋತ್ಸವಕ್ಕೂ ಆಗಮಿಸದ ನೆಹರೂ ನೀವು ಇದೆಲ್ಲಾ ಮಾಡುವುದಕ್ಕೆ ನನ್ನ ವಿರೋಧವಿದೆ ಎಂದು ಅಬ್ಬರಿಸಿದ್ದರು.

ಇದಾದ ಬಳಿಕ ನೆಹರೂ ಫ್ಯಾಮಿಲಿಯ ಯಾರೊಬ್ಬನೂ ದೇಗುಲಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಗುಜರಾತ್‍ನಲ್ಲಿ ಕಳೆದ 22 ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದ್ದು, ಹಿಂದೂಗಳ ಓಟು ಪಡೆಯಲು ರಾಹುಲ್ ಸೋಮನಾಥ ದೇಗುಲ ಸೇರಿ ಹಲವು ದೇಗುಲಕ್ಕೆ ಭೇಟಿ ನೀಡಿ ನಾಟಕ ಮಾಡಿದ್ದರು. ಇದೀಗ ಗುಜರಾತ್‍ನಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದ್ದರೂ ಸಹ, 79 ಸ್ಥಾನ ಗಳಿಸಿರುವ ಖುಷಿಯಲ್ಲಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ರಾಹುಲ್ ಮತ್ತೆ ಸೋಮನಾಥನ ದೇಗುಲಕ್ಕೆ ಪ್ರವೇಶಿಸಿ ಹರಕೆ ಸಲ್ಲಿಸಿದ್ದಾರೆ. ಸೋಮನಾಥನಿಗೆ ಅಭಿಷೇಕವನ್ನೂ ಮಾಡಿದ್ದಾರೆ. ಇದನ್ನೆಲ್ಲಾ ಕಂಡು ಮುಸ್ಲಿಮರು ಬೆಚ್ಚಿಬಿದ್ದಿದ್ದು, ಕಾಂಗ್ರೆಸ್‍ನ ಮಹಾನಾಟಕ ಬಯಲಾಯಿತು ಎಂದು ಖುಷಿಪಟ್ಟಿದ್ದಾರೆ.

ಉರಿ ತಾಳಲಾರದ ಓವೈಸಿ!

ಇತ್ತ ರಾಹುಲ್ ಗಾಂಧಿ ದೇಗುಲ ಪ್ರವೇಶಿಸಿರುವುದನ್ನು ಕಂಡು ಕೆಂಡಾಮಂಡಲನಾದ ಅಕ್ಬರುದ್ದೀನ್ ಓವೈಸಿ ಕಾಂಗ್ರೆಸ್ಸನ್ನು ಸರಿಯಾಗಿ ನಿಂದಿಸಿದ್ದಾನೆ. ಓವೈಸಿ ಎಂದರೆ ಕಾಂಗ್ರೆಸ್‍ನ ಮಿತ್ರಪಕ್ಷವಾಗಿದ್ದು, ಇದೀಗ ರಾಹುಲನ ಹಿಂದೂ ಪ್ರೇಮದಿಂದ ಕಾಂಗ್ರೆಸ್‍ಗೆ ಬೆಂಬಲ ಸೂಚಿಸುವುದಕ್ಕೆ ವಿರೋಧಿಸಿದ್ದಾನೆ. ಈ ಬಗ್ಗೆ ಬಹಿರಂಗವಾಗಿ ಸವಾಲು ಹಾಕುವ ಮೂಲಕ ಕಾಂಗ್ರೆಸ್‍ಗೆ ಪಾಠ ಕಲಿಸಿದ್ದಾನೆ. ಕಾಂಗ್ರೆಸ್‍ಗೆ ಬಯ್ಯುವ ನೆಪದಲ್ಲಿ ಮಧ್ಯದಲ್ಲಿ ಮೋದಿಯವರನ್ನೂ ಎಳೆದು ತಂದಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಸಿದ ಎಐಎಂಐಎಂ ಅಧ್ಯಕ್ಷ ಅಸಾಸುದ್ದೀನ್ ಓವೈಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುಜರಾತ್ ದೇವಾಲಯಕ್ಕೆ ಭೇಟಿ ನೀಡುತ್ತಿರುವುದು ಕೇವಲ ವೋಟ್‍ಬ್ಯಾಂಕ್ ಎಂದು ಆರೋಪಿಸಿದ್ದಾನೆ.

ಬಹಿರಂಗವಾಗಿ ಪ್ರತಿಜ್ಞೆ ಹಾಕಿದ ಓವೈಸಿ

‘ಗುಜರಾತ್ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಚುನಾವಣಾ ಪ್ರಚಾರ ಮಾಡಿದಂತೆ ಕಾಣುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ಭೇಟಿ ನೀಡುವ ಕೆಲಸ ಮಾಡಿದ್ದಾರೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಪ್ರಾರಂಭವಾಗಲಿ ಯಾತ್ರೆಯೆಂದರೇನೆಂದು ತೋರಿಸುತ್ತೇನೆ. ಚುನಾವಣಾ ಪ್ರಚಾರದ ಸಮಯದಲ್ಲಿ ಹಸಿರು ಧ್ವಜ ಹಿಡಿದು ಮಸೀದಿ, ದರ್ಗಾಗಳಿಗೆ ಭೇಟಿ ನೀಡುತ್ತೇನೆ. ಬಿಜೆಪಿ ನಾಯಕರು ಕೇಸರಿ ಶಾಲು ಧರಿಸಿದ್ದಾರೋ, ಇಲ್ಲವೋ ಎಂದು ಆಲೋಚಿಸುವುದಿಲ್ಲ’ ಎಂದು ಅಸಾಸುದ್ದೀನ್ ತನ್ನ ಬೆಂಬಲಿಗರಿಗೆ ತಿಳಿಸಿದ್ದಾನೆ.

ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಸಬರ್ಮತಿ ನದಿ ಬಳಿ ನಡೆಸಿದ ಸೀ ಪ್ಲೇನ್ ಬಗ್ಗೆಯೂ ಓವೈಸಿ ಕಿಡಿಕಾರಿದ್ದಾನೆ.

ಎರಡು ರಾಷ್ಟ್ರೀಯ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದ ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿಯವರು ಗುಜರಾತ್‍ನ ಬಹುತೇಕ ದೇವಾಲಯಗಳಿಗೆ ಭೇಟಿ ನೀಡಿದ್ದರು. ಇಂದು ರಾಹುಲ್ ಗಾಂಧಿಯವರು ಮತ್ತೆ ಗುಜರಾತ್‍ನ ಸೋಮನಾಥ್ ದೇವಾಲಯಕ್ಕೆ ಭೇಟಿ ನೀಡಿದರು. ಬಿಜೆಪಿ ಹೇಗಿದ್ದರೂ ರಾಷ್ಟ್ರೀಯವಾದ ಹಾಗೂ ಹಿಂದುತ್ವದ ಮೂಲಕ ಚುನಾವಣೆ ಧುಮುಕತ್ತದೆ. ಆದರೆ ಕಾಂಗ್ರೆಸ್ ಜಾತ್ಯತೀತ ತತ್ವದ ಮೂಲಕ ಚುನಾವಣೆಗೆ ಹೋಗಿ ಕೊನೆಗೆ ಹಿಂದೂದೇವರ ಜಪ ಮಾಡುವುದು ಓವೈಸಿಗೆ ಸಹಿಸಲಾಗುತ್ತಿಲ್ಲ. ಅದಕ್ಕಾಗಿ ಓವೈಸಿ ಹಸಿರು ಧ್ವಜ ಹಾಗೂ ಹಸಿರು ಶಾಲು ಧರಿಸಿ ಚುನಾವಣೆ ಪ್ರಚಾರ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾನೆ.

ಓವೈಸಿಯ ಈ ಅಬ್ಬರದ ಪ್ರತಿಜ್ಞೆ ಬಿಜೆಪಿಗೆ ಯಾವುದೇ ಪರಿಣಾಮ ಬೀಳದಿದ್ದರೂ ಕಾಂಗ್ರೆಸ್‍ಗಂತೂ ದೊಡ್ಡ ಹೊಡೆತ ಬೀಳಲಿದೆ. ಕಾಂಗ್ರೆಸ್ ಮುಕ್ತ ಭಾರತಕ್ಕೆ ಓವೈಸಿಯೂ ಕೈಜೋಡಿಸಿದ್ದಾನೆ.

ಸಿದ್ದರಾಮಯ್ಯನಿಗೂ ಹೊಡೆತ!!!

ಕರ್ನಾಟಕದಲ್ಲಿ ಬಿಜೆಪಿ ಬಾರದಂತೆ ಶತಾಯಗತಾಯ ಪ್ರಯತ್ನಿಸುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಈ ಬಾರಿ ಎಂಐಎಂ ಹಾಗೂ ಎಸ್‍ಡಿಪಿಐ ಜೊತೆ ಚುನಾವಣಾ ಹೊಂದಾಣಿಕೆಗೆ ಮುಂದಾಗಿದ್ದಾರೆ ಎಂದು ವಾಹಿನಿಯೊಂದು ವರದಿ ಮಾಡಿತ್ತು. ಆದರೆ ಇದೀಗ ಓವೈಸಿ ಬಹಿರಂಗವಾಗಿ ಸವಾಲು ಹಾಕಿರುವುದರಿಂದ ಸಿದ್ದರಾಮಯ್ಯನಿಗೆ ದೊಡ್ಡದೊಂದು ಹೊಡೆತ ಬಿದ್ದಂತಾಗಿದೆ.
ಈ ಬಾರಿ ಮುಸ್ಲಿಂ ಮತವಿಭಜನೆ ತಪ್ಪಿಸಲು ಸಿದ್ದರಾಮಯ್ಯ ಎಂಐಎಂ ಹಾಗೂ ಎಸ್‍ಡಿಪಿಐ ಜೊತೆ ಚರ್ಚೆ ನಡೆಸಿದ್ದಾರೆಂದು ಸುದ್ದಿವಾಹಿನಿಯೊಂದು ವರದಿ ಮಾಡಿತ್ತು. ಮುಸ್ಲಿಮರು ಕಾಂಗ್ರೆಸ್‍ಗೆ ಬೆಂಬಲ ಕೊಡುವ ಸಲುವಾಗಿ ಎಂಐಎಂ ಹಾಗೂ ಎಸ್‍ಡಿಪಿಐ ಪಕ್ಷದ ಮುಖಂಡರ ಜೊತೆ ಚುನಾವಣಾ ಕಣಕ್ಕಿಳಿಯದಂತೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆಂಬ ಸ್ಫೋಟಕ ಮಾಹಿತಿಯೊಂದು ಬಹಿರಂಗಗೊಂಡಿತ್ತು. ಎಸ್‍ಡಿಪಿಐ ಮುಖಂಡರ ಜೊತೆ ಎರಡು ಬಾರಿ ಚರ್ಚೆ ನಡೆಸಿರುವ ಸಿದ್ದರಾಮಯ್ಯ ಆ ಪಕ್ಷದಿಂದ ಯಾರೂ ಕಣಕ್ಕಿಳಿಯದಂತೆ ಮನವಿ ಮಾಡಿದ್ದರೆನ್ನಲಾಗಿತ್ತು.

ಅದೇ ರೀತಿ ಎಂಐಎಂ ಜೊತೆ ಮಾತುಕತೆ ನಡೆಸಲು ಶಾಸಕ ಜಮೀರ್ ಅಹ್ಮದ್ ಖಾನ್‍ಗೆ ಮಾತುಕತೆಯ ಜವಾಬ್ದಾರಿ ವಹಿಸಲಾಗಿದೆ. ಕಾಂಗ್ರೆಸ್‍ನ ಜಾತ್ಯತೀತ ನಿಲುವಿಗಾಗಿ ಜನರಲ್ಲಿ ಮತೀಯ ಭಾವನೆಗಳನ್ನು ಕೆರಳಿಸುವ ಪಕ್ಷಗಳ ಜೊತೆಗೆ ಹೊಂದಾಣಿಕೆ ನಡೆಸಲು ಮುಂದಾಗಿರುವ ಕಾಂಗ್ರೆಸ್‍ನ ಅಸಲಿ ಜಾತ್ಯತೀತ ತತ್ವ ಕೊನೆಗೂ ಬಯಲಾಗಿತ್ತು.

ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡಿಕೊಂಡು ಅಲ್ಪಸಂಖ್ಯಾತರನ್ನೇ ಬಗುಲಲ್ಲಿ ಹಾಕಿಕೊಂಡು ಮೆರೆಯುತ್ತಿರುವ ಪಕ್ಷ ಕಾಂಗ್ರೆಸ್. ಮುಸ್ಲಿಮರಿಗಾಗಿ ಹಲವಾರು ಭಾಗ್ಯಗಳನ್ನು ಪ್ರಕಟಿಸಿ, ಅವರದ್ದೇ ಪರ ನಿಂತಿರುವ ಸಿದ್ದರಾಮಯ್ಯ ಮುಸ್ಲಿಮರ ಮುಖ್ಯಮಂತ್ರಿ ಎಂಬುವುದಾಗಿ ಎಂದೋ ಬಿಂಬಿತವಾಗಿದೆ. ಆದರೆ ಇದೀಗ ರಾಹುಲ್ ದೇವಸ್ಥಾನ ಪ್ರವೇಶದಿಂದ ಅದಕ್ಕೆ ಎಳ್ಳುನೀರು ಬಿಟ್ಟಂತಾಗಿದೆ.

ಆದರೆ ಇದೇ ಮುಸ್ಲಿಮರು ಇಂದು ಕಾಂಗ್ರೆಸ್‍ನ ಹಣೆಬರಹವನ್ನು ಅರ್ಥ ಮಾಡಿಕೊಂಡಿದ್ದು, ತನಗೆಸಗಿದ ಒಂದೊಂದೇ ಅನರ್ಥಗಳನ್ನು ಅರ್ಥಮಾಡಲಾರಂಭಿಸಿದ್ದಾರೆ. ಅದಕ್ಕಾಗಿಯೇ ಹಲವಾರು ಮುಸ್ಲಿಮರು ಕಾಂಗ್ರೆಸ್‍ಗೆ ಮುಂದೆ ಕಾಂಗ್ರೆಸ್‍ಗೆ ಓಟು ಹಾಕುವ ಸ್ಥಿತಿಯಲ್ಲಿಲ್ಲ. ಮುಸ್ಲಿಮರ ಓಟುಗಳು ನಿಧಾನವಾಗಿ ಕೈತಪ್ಪುತ್ತಿರುವುದನ್ನು ಮನಗಂಡ ಕಾಂಗ್ರೆಸಿಗರು ಇದೀಗ ಕೋಮುವಾದಿ ಮುಸ್ಲಿಮರ ಪಕ್ಷಗಳ ಜೊತೆಗೇ ಕೈಜೋಡಿಸಲು ಮುಂದಾಗಿದ್ದರು. ಸಿದ್ದರಾಮಯ್ಯನ ಈ ನಡೆಯಿಂದ ಕಾಂಗ್ರೆಸ್ ಹಿಂದೂಗಳ ಓಟುಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದು ಒಂದಾದರೆ ಓವೈಸಿ ಪ್ರತಿಜ್ಞೆಯಿಂದ ಮುಂದಿನ ದಿನಗಳಲ್ಲಿ ಮುಸ್ಲಿಂ ಓಟುಗಳೂ ದಕ್ಕುವುದು ಕೂಡಾ ಅನುಮಾನ ಮೂಡಿಸಿದೆ.

ಎಂಐಎಂ ಎನ್ನುವುದು ಅಸಾಸುದ್ದೀನ್ ಓವೈಸಿ ಹಾಗೂ ಅಕ್ಬರುದ್ದೀನ್ ಓವೈಸಿ ಎಂಬ ಮತಾಂಧ ಮುಸ್ಲಿಮರು ಪ್ರತಿನಿಧಿಸುವ ಪಕ್ಷ. ಆಲ್ ಇಂಡಿಯಾ ಮಜ್ ಇಸ್ ಇ ಇಟಿಯಾಕ್ ಅಲ್ ಮುಸ್ಲಿಂ(ಎಂಐಎಂ) ಪಕ್ಷ ಈಗಾಗಲೇ ದೇಶದ ಹಲವಾರು ಕಡೆಗಳಲ್ಲಿ ಸ್ಪರ್ಧಿಸಿ ಒಂದೆರಡು ಕ್ಷೇತ್ರಗಳಲ್ಲಿ ಗೆದ್ದುಕೊಂಡಿದೆ. ಕಟ್ಟರ್ ಮುಸ್ಲಿಂವಾದಿಗಳಾಗಿರುವ ಅಕ್ಬರುದ್ದೀನ್ ಓವೈಸ್ ಹಾಗೂ ಅಸಾಸುದ್ದೀನ್ ಓವೈಸಿ ಸಹೋದರರು ಈ ಪಕ್ಷವನ್ನು ಮುನ್ನಡೆಸುತ್ತಿದ್ದು, ಈ ಇಬ್ಬರಿಗೂ ಪಾಕಿಸ್ತಾನವೆಂದರೆ ಅದೇನೋ ಮಮಕಾರ.

ಹಿಂದೂಗಳ ಜೊತೆ ಧ್ವೇಷ ಸಾಧಿಸುತ್ತಾ ಹಿಂದೂಗಳ ವಿರುದ್ಧ ದೋಷಪೂರಿತ ಹೇಳಿಕೆಗಳನ್ನು ನೀಡುತ್ತಾ ಇರುವ ಒವೈಸಿ, ಒಮ್ಮೆ ಪೆÇಲೀಸರು ಹತ್ತು ನಿಮಿಷ ಸುಮ್ಮನಿದ್ದರೆ ಹಿಂದೂಗಳನ್ನು ನಿರ್ಣಾಮ ಮಾಡಿಬಿಡುತ್ತೇನೆ ಎಂದು ಹೇಳಿಕೆ ನೀಡಿದ್ದ. ಮುಸ್ಲಿಮರನ್ನು ಮತೀಯವಾಗಿ ಕೆರಳಿಸಿ ಅವರನ್ನು ಕೋಮುಗಲಭೆಗೆ ಪ್ರೇರೇಪಿಸುವುದು ಈತನ ಕೆಲಸವಾಗಿತ್ತು. ಇಂಥಾ ಪಕ್ಷದ ಜೊತೆ ಕಾಂಗ್ರೆಸ್ ಕೈಜೋಡಿಸಿದೆ.

ಆದರೆ ರಾಹುಲನ ನಡೆ ಹಾಗೂ ಓವೈಸಿಯ ಹೇಳಿಕೆಯಿಂದ ಮುಸ್ಲಿಮರು ಕಾಂಗ್ರೆಸ್‍ಗೆ ಗುಡ್‍ಬೈ ಹೇಳುವ ಕಾಲ ಬಂದಿದೆ.

ಚೇಕಿತಾನ

Tags

Related Articles

Close